Sobhita Dhulipala: ತಂದೆಯಾಗಲಿದ್ದಾರೆ ನಾಗ ಚೈತನ್ಯ, ಏನಿದು ಸುದ್ದಿಯ ಸತ್ಯಾಸತ್ಯತೆ?

Published : Dec 15, 2025, 01:11 AM ISTUpdated : Dec 15, 2025, 02:03 PM IST
Nag Chaitanya and sobhita dhulipala expecting first child ready for good news

ಸಾರಾಂಶ

Sobhita Dhulipala: ನಾಗ ಚೈತನ್ಯ ಮತ್ತು ಸೋಭಿತಾ ಧೂಳಿಪಾಲ ಮದುವೆಯಾಗಿ ಒಂದು ವರ್ಷವಾಗಿದೆ. ಮೊದಲ ಮದುವೆ ವಾರ್ಷಿಕೋತ್ಸವದ ವೇಳೆಯೇ ಚೈತನ್ಯ ಮೊದಲ ಪತ್ನಿ ಸಮಂತಾ ಸಹ ಮತ್ತೊಮ್ಮೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇದೇ ವೇಳೆ ಚೈತನ್ಯ ಅಪ್ಪನಾಗ್ತಾ ಇರೋದು ಹೌದಾ?  

ನಾಗ ಚೈತನ್ಯ... ಕಿಂಗ್ ನಾಗಾರ್ಜುನ ಉತ್ತರಾಧಿಕಾರಿಯಾಗಿ ಟಾಲಿವುಡ್‌ಗೆ ಪ್ರವೇಶಿಸಿದ್ದು ಗೊತ್ತು. `ಜೋಶ್` ಚಿತ್ರದ ಮೂಲಕ ಅವರನ್ನು ನಾಯಕನಾಗಿ ಪರಿಚಯಿಸಲಾಯಿತು. ಅದಾದ ನಂತರ, `ಎಮ್ ಮಾಯಾ ಚೆಸಾವೆ` ಚಿತ್ರದ ಮೂಲಕ ಅವರೊಬ್ಬ ಸ್ಟಾರ್ ನಟನಾಗಿ ಹೊರಹೊಮ್ಮಿದರು. ಈ ಚಿತ್ರದಲ್ಲಿ ಅವರು ಸ್ಯಾಮ್ ಅವರನ್ನು ಪ್ರೀತಿಸಲು ಶುರು ಮಾಡಿದ್ದು. 2017ರಲ್ಲಿ ಸಮಂತಾ ಅವರನ್ನೇ ವರಿಸಿದರು. ಅವರ ಮದುವೆ ತುಂಬಾ ಅದ್ಧೂರಿಯಾಗಿಯೂ ಆಗಿತ್ತು. ದಾಂಪತ್ಯ ಅಂದ್ರೆ ಹೀಗಿರಬೇಕು ಅನ್ನೋ ಸುಮಾರು ನಾಲ್ಕು ವರ್ಷಗಳ ಒಟ್ಟಿಗೂ ಬದುಕಿದರು. ಆದರೆ, ಅದ್ಯಾರ ದೃಷ್ಟಿ ಬಿತ್ತು ಗೊತ್ತಿಲ್ಲ. ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದರು. ಅಂದಿನಿಂದ, ಸಮಂತಾ ಮಾನಸಿಕವಾಗಿ ಜರ್ಜರಿತವಾಗಿದ್ದಲ್ಲದೇ, ದೈಹಿಕವಾಗಿಯೂ ಅನುಭವಿಸಿದರು. ಆದರೆ, ಎಲ್ಲವಕ್ಕೂ ಒಂದು ಫುಲ್ ಸ್ಟಾಪ್ ಇಡಬೇಕು ಎನ್ನುವಂತೆ ಅವರು ಫ್ಯಾಮಿಲ್ ಮ್ಯಾನ್ ಡೈರೆಕ್ಟರ್ ಜೊತೆ ಇದೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷವಾಗಿ ಇಶಾ ಫೌಂಡೇಷನ್‌ನಲ್ಲಿ ರಾಜ್ ನಿಧಿಮೋರು ಜೊತೆ ಸಪ್ತಪದಿ ತುಳಿದರು. ಆ ಮೂಲಕ ಇನ್ನಾದರೂ ಸಮಂತಾ ಅನುಭವಿಸಿದ ನೋವಿನಿಂದ ಹೊರ ಬರಲಿ ಎನ್ನೋದು ಅವರ ಅಭಿಮಾನಿಗಳ ಆಶಯ.

ಶೋಭಿತಾಳನ್ನು ಚೈತು ಎರಡನೇ ಮದುವೆಯಾಗಿದ್ದಾರೆ

ಸಮಂತಾ ಮತ್ತು ನಾಗ ಚೈತನ್ಯ 2021 ರಲ್ಲಿ ವಿಚ್ಛೇದನ ಪಡೆದರು. ಅದಾದ ನಂತರ, ಒಂಟಿಯಾಗಿದ್ದ ಚೈತನ್ಯ ಕಳೆದ ವರ್ಷವೇ ಎರಡನೇ ವಿವಾಹವಾದರು. ಮತ್ತೊಬ್ಬ ನಟಿ ಶೋಭಿತಾ ಅವರನ್ನು ವರಿಸಿದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ವಿವಾಹ ನಡೆದಿದ್ದು, ಇದೀಗ ತಾನೇ  ಈ ಜೋಡಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಜೊತೆಗೆ ಈ ಜೋಡಿಗೆ ಶೀಘ್ರದಲ್ಲಿಯೇ ಪೋಷಕರಾಗುತ್ತಿದ್ದಾರೆಂದು ಒಂದು ಸುದ್ದು ಹರಿದಾಡುತ್ತಿದ್ದು, ಈ ಬಗ್ಗೆಯೂ ಯಾರೂ ಇದುವರೆಗೂ ಖಚಿತಪಡಿಸಿಲ್ಲ. ಅಷ್ಟಕ್ಕೂ ಈ ಸುದ್ದಿ ನಿಜನಾ? 

ತಾಯಿಯಾಗಲಿರುವ ಶೋಭಿತಾ?

ಶೋಭಿತಾ ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸುವ ಮೂಲಕ ಹೆಸರು ಮಾಡಿದ್ದಾರೆ. ಇತ್ತೀಚೆಗೆ ಮಣಿರತ್ನಂ ಅವರ "ಪೊನ್ನಿಯಿನ್ ಸೆಲ್ವನ್" ಚಿತ್ರದಲ್ಲಿ ನಟಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಅವರಿಗೆ ಉತ್ತಮ ಮನ್ನಣೆ ತಂದುಕೊಟ್ಟಿತು. ಆದಾಗ್ಯೂ, ನಾಗ ಚೈತನ್ಯ ಮತ್ತು ಸೋಭಿತಾ ಬಹಳ ದಿನಗಳಿಂದ ಪ್ರೀತಿಸಿ, ವಿವಾಹವಾದರು. ಮದುವೆಯ ನಂತರ ಅವರು ಸಂತೋಷದಿಂದ ಬದುಕುತ್ತಿರುವ ಬಗ್ಗೆ ಒಂದು ಕುತೂಹಲಕಾರಿ ಸುದ್ದಿಯೊಂದು ಹೊರ ಬಿದ್ದಿದ್ದು, ಶೋಭಿತಾ ಗರ್ಭಿಣಿಯಾಗಿದ್ದಾರೆ ಎಂಬ ವರದಿಗಳಿವೆ. ಚೈತು ಶೀಘ್ರದಲ್ಲಿಯೇ ತಂದೆಯಾಗಲಿದ್ದಾರೆ. ಈ ಸುದ್ದಿಯನ್ನು ಶೀಘ್ರದಲ್ಲೇ ಪ್ರಕಟಿಸುತ್ತಾರಂತೆ.  ಆದರೆ, ಈ ಬಗ್ಗೆ ಖಚಿತ ಮಾಹಿತಿ ಎಲ್ಲಿಯೂ ಇಲ್ಲ. 

ನಾಗ ಚೈತನ್ಯಗೆ ಶಾಕ್ ನೀಡಿದ ಸಮಂತಾಿ

ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಸಮಂತಾ ಮತ್ತು ರಾಜ್ ನಿಡಿಮೋರು ಇತ್ತೀಚೆಗೆ ವಿವಾಹವಾದರು.ಇದು ರಾಜ್ ನಿಡಿಮೋರು ಅವರ ಎರಡನೇ ಮದುವೆಯೂ ಹೌದು. ಈ ಸುದ್ದಿ ಅಭಿಮಾನಿಗಳಿಗೆ ತುಂಬಾ ಸಂತೋಷ ತಂದಿದೆ. ಅದರಲ್ಲಿಯೂ ಸಮಂತಾ ಒಂದಾದ ಮೇಲೊಂದು ಕಷ್ಟ ಅನುಭವಿಸುತ್ತಿದ್ದನ್ನು ನೋಡುತ್ತಿದ್ದ ಸಮಂತಾ ಅಭಿಮಾನಿಗಳು ನಿರಾಳವಾಗಿದ್ದಾರೆ.

ಇಂಥದ್ದೊಂದು ಸುದ್ದು ಹೊರ ಬಿದ್ದ ಬೆನ್ನಲ್ಲೇ, ಶೋಭಿತಾ ಮತ್ತೊಂದು ಸಿನಿಮಾದ ಶೂಟಿಂಗ್‌ಗೆ ತೆರಳಿದ್ದು, ಈ ಸುದ್ದಿ ಸುಳ್ಳಿರಬಹುದು ಎಂದೇ ಹೇಳಲಾಗುತ್ತಿದೆ. ಆದರೆ, ಮಗು ಮಾಡಿಕೊಳ್ಳುವುದ ಬೇಡ ಎಂದ ಕಾರಣಕ್ಕೇ ಸಮಂತಾರಿಂದ ನಾಗ ಚೈತನ್ಯ ದೂರವಾದರು ಎಂಬೊಂದು ಗಾಳಿ ಸುದ್ದಿಯೂ ಹರಿದಾಡಿತ್ತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮೋದಿ ಜೀವನಾಧರಿತ ‘ಮಾ ವಂದೇ’ ಸಿನಿಮಾ ಚಿತ್ರೀಕರಣ ಆರಂಭ
ಇದೊಂದೇ ಕಾರಣಕ್ಕೆ 800 ಕೋಟಿ ಗಳಿಸಿದ ಧುರಂಧರ್ ಚಿತ್ರದಿಂದ ತಮನ್ನಾ ಔಟ್.. ಯಾವ ಪಾತ್ರ ಗೊತ್ತೇ!