ಈಗ ಇನ್ನೊಂದು ವಿಷಯ ನಾನು ಹೇಳಲೇಬೇಕು. ಯಾರೇ ಆಗಲೀ ನಿನ್ನ ಬಗ್ಗೆ ವಿಭಿನ್ನ ಒಪಿನಿಯನ್ ನೀಡಿದರೆ ನೀನು ಕೋಪ ಅಥವಾ ಬೇಸರ ಮಾಡಿಕೊಳ್ಳಬೇಕಿಲ್ಲ. ಏಕೆಂದರೆ, ಅದು ಅವರು ನಿನ್ನ ಬಗ್ಗೆ ಇಟ್ಟುಕೊಂಡಿರುವ ಅನಿಸಿಕೆಯೇ ಹೊರತೂ ಅದು ನೀನಲ್ಲ...
ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ. 'ನನ್ನ ಡ್ಯಾಡಿ ಒಮ್ಮೆ ನನಗೆ ಬಂದ್ರೆಲಾ ಎಂದು ಕರೆದರು. ಹಿಂದಿಯಲ್ಲಿ 'ಬಂದರ್ ' ಎಂದರೆ ಮಂಗ. ಈ ಮಂಗ, ಕೋತಿಗೆ ಇಂಗ್ಲಿಷ್‌ನಲ್ಲಿ 'ಮಂಕಿ' ಎನ್ನುತ್ತಾರೆ. ನನಗೆ ನನ್ನ ಅಪ್ಪ ಮಂಕಿ ಎಂದಾಗ ಸಹಜವಾಗಿಯೇ ಕೋಪ ಉಕ್ಕಿ ಬಂತು. ನಾನು ಸಿಂಡ್ರೆಲಾ, ನೀವು ಯಾಕೆ ನನ್ನನ್ನು ಬಂದ್ರೆಲಾ ಎಂದು ಕರೆಯುತ್ತೀರಿ' ನಾನು ನನ್ನ ಅಪ್ಪಾಜಿಗೆ ಕೋಪದಿಂದ ಕೇಳಿದೆ. ಅವರು ತುಂಬಾ ಕೂಲಾಗಿ ಆ ಬಗ್ಗೆ ಉತ್ತರಿಸಿದರು.
'ನೀನು ನನ್ನ ಜತೆ ದಾರಿಯಲ್ಲಿ ಬರುವಾಗ ಎಲ್ಲಾ ಕಡೆ ಎಂಜಲು ಉಗಿಯುತ್ತೀಯಾ. ನಿನ್ನ ಹಿಂದೆ ಯಾರೋ ನಡೆದುಕೊಂಡು ಬರುತ್ತಾ ಇರುತ್ತಾರೆ. ನಿನ್ನ ಉಗುಳನ್ನು ಅವರು ತುಳಿದುಕೊಂಡು ಬರಬೇಕಾಗುತ್ತೆ. ಹಾಗೆ ಗಲೀಜು (Shit)ಮಾಡುವವರನ್ನು ಮನುಷ್ಯರು ಅನ್ನೋದು ಹೇಗೆ ಅಲ್ವಾ? ಆದರೆ, ನಾನು ನಿನಗೆ ತಮಾಷೆಗೆ ಹಾಗೆ ಹೇಳಿದ್ದು, ಏಕೆಂದರೆ, ಈ ಮೂಲಕ ನೀನು ಮಾಡುತ್ತಿರುವ ತಪ್ಪನ್ನು ನಾನು ನಿನಗೆ ತಿಳಿಸಬೇಕಿತ್ತು. ಆದರೆ, ನೀನು ನನ್ನ ಮಾತಿಗೆ ಕೋಪ ಮಾಡಿಕೊಂಡುಬಿಟ್ಟೆ.
ಸೈನ್ಸ್ ಬಿಟ್ಟು ಆರ್ಟ್ಸ್ ಓದಿದ್ಯಾಕೆ ಖ್ಯಾತ ಗಾಯಕ; ಮುಖ್ಯವಾದ ಘಟನೆ ಹಂಚಿಕೊಂಡ್ರು ಅರಿಜಿತ್ ಸಿಂಗ್!
ಈಗ ಇನ್ನೊಂದು ವಿಷಯ ನಾನು ಹೇಳಲೇಬೇಕು. ಯಾರೇ ಆಗಲೀ ನಿನ್ನ ಬಗ್ಗೆ ವಿಭಿನ್ನ ಒಪಿನಿಯನ್ ನೀಡಿದರೆ ನೀನು ಕೋಪ ಅಥವಾ ಬೇಸರ ಮಾಡಿಕೊಳ್ಳಬೇಕಿಲ್ಲ. ಏಕೆಂದರೆ, ಅದು ಅವರು ನಿನ್ನ ಬಗ್ಗೆ ಇಟ್ಟುಕೊಂಡಿರುವ ಅನಿಸಿಕೆಯೇ ಹೊರತೂ ಅದು ನೀನಲ್ಲ. ನೀನು ಯಾವತ್ತೂ ಸ್ಪೆಷಲ್ ಆಗಿರುವೆ, ಅದನ್ನು ಬೇರೆ ಯಾರಾದರೂ ನಿಖರವಾಗಿ ಅರಿತಿರಲು ಹೇಗೆ ಸಾಧ್ಯ? ನೀನು ನಿನ್ನ ಬೆಸ್ಟ್ ವರ್ಷನ್ ಆಗಲು ಪ್ರಯತ್ನಿಸುತ್ತಿರು. ಅದನ್ನು ಸದಾ ಮಾಡುತ್ತಲೇ ಇರಬೇಕು. ಏಕೆಂದರೆ, ನಮ್ಮ ಬೆಸ್ಟ್ ವರ್ಷನ್ ಬದಲಾಗುತ್ತಲೇ ಇರಬೇಕು.
ಶಾಹಿದ್ ಕಪೂರ್ 'ಅಶ್ವತ್ಥಾಮ'ನಿಗೆ 'ಅವನೇ ಶ್ರೀಮನ್ನಾರಾಯಣ' ಸಚಿನ್ ರವಿ ಸೂತ್ರಧಾರ!
ನನ್ನ ತಂದೆ ಅಂದು ಹೇಳಿದ ಮಾತು ನನಗೆ ಮುಂದೆ ನನ್ನ ಜೀವನದಲ್ಲಿ ತುಂಬಾ ಉಪಯೋಗ ಆಯ್ತು. ಏಕಂದರೆ, ನನ್ನ ವೃತ್ತಿ ಜೀವನದಲ್ಲಿ ನಾನು ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ. ಸಾಕಷ್ಟು ಬಾರಿ ಬಾಲಿವುಡ್‌ನಲ್ಲಿ ನನ್ನನ್ನು ಮೂಲೆಗುಂಪು ಮಾಡಲು ಪ್ರಯತ್ನ ನಡೆದಿತ್ತು. ಕೆಲವು ಬಾರಿ ಅವರ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು ಇದೆ. ಏಕೆಂದರೆ, ಬಾಲಿವುಡ್ ಚಿತ್ರರಂಗದಲ್ಲಿ ಪಾರ್ಶಿಯಾಲಿಟಿ, ಶೋಷಣೆ ಅವೆಲ್ಲಾ ಕಾಮನ್. ಆದರೆ, ಎಲ್ಲಾ ಟೈಮ್, ಎಲ್ಲರಿಗೂ ಇರುತದೆ ಎಂದಲ್ಲ, ಕೆಲವರು ಕೆಲವು ಬಾರಿ ಅದನ್ನು ಅನುಭವಿಸುತ್ತಾರೆ, ಅನುಭವಿಸಿದ್ದಾರೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.
ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ 'ವೆಂಕ್ಯಾ', ನಿರ್ದೇಶನದ ಜೊತೆಗೆ ನಟನೆಗೆ ಇಳಿದ ಸಾಗರ್ ಪುರಾಣಿಕ್