
ಖ್ಯಾತ ಗಾಯಕ ಅರಿಜಿತ್ ಸಿಂಗ್ ತಮ್ಮ ಜೀವನದಲ್ಲಿ ನಡೆದ ಘಟನೆಯೊಂದನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಘಟನೆ ಎಂದರೆ ಯಾವುದೋ ಚಿಕ್ಕ ಘಟನೆಯಲ್ಲ, ಅವರ ಶೈಕ್ಷಣಿಕ ಜೀವನಕ್ಕೆ ಸಂಬಂಧಿಸಿದ್ದು. ಅರಿಜಿತ್ ಸಿಂಗ್ '10 ನೇ ಕ್ಲಾಸ್ ಎಕ್ಸಾಂ ಆಯ್ತು. ಎಲ್ರೂ ಸೈನ್ಸ್ ತಂಗೊಂಡ್ರು, ನಾನೂ ಕೂಡ ತಗೊಂಡೆ. ನನಗೆ ಬಹಳ ಮಜಾ ಅಗ್ತಿತ್ತು, ತುಂಬಾ ಖುಷಿಯಲ್ಲಿ ಇದ್ದೆ. ಖುಷಿಗೆ ಮುಖ್ಯ ಕಾರಣ, ಹಿಸ್ಟ್ರಿ ಓದೋ ಅಗತ್ಯ ಇಲ್ಲ ಅಂತ. ನಂಗೆ ಇತಿಹಾಸ ಓದೋದು ಅಂದ್ರೆ ಆಗಿ ಬರಲ್ಲ.
ಒಂದು ತಿಂಗಳು ಸೈನ್ಸ್ ಸ್ಟಡಿ ಮಾಡುತ್ತ ಕಳೆದೆ. ಅದೊಂದು ದಿನ ನನ್ನ ಗುರೂಜಿ ಕರೆದರು. ಹೋದಾಗ, 'ನೀನು ಸೈಂಟಿಸ್ಟ್ ಆಗ್ಬೇಕಾ? ಏನು ಡಿಸ್ಕವರ್ ಮಾಡ್ತೀಯಾ ನೀನು ಅಂತ ಕೇಳಿದ್ರು. ಹೇಳು ಅರಿಜಿತ್, ನೀನು ಅದೇನು ಸಂಶೋಧನೆ ಮಾಡ್ಬೇಕು ಅಂತಿದೀಯ?' ಅಂತ ಪದೇ ಪದೇ ಕೇಳಿದ್ರು. ನಿಜವಾಗಿಯೂ ನಂಗೆ ನಾನು ಏನು ಡಿಸ್ಕವರ್ ಮಾಡ್ಬೇಕು ಅಂತ ಗೊತ್ತಿರಲಿಲ್ಲ. ನಾನು ಆ ಬಗ್ಗೆ ಯೋಚನೆ ಕೂಡ ಮಾಡಿರ್ಲಿಲ್ಲ. ನಾನು ಏನೂ ಉತ್ತರ ಹೇಳದಿದ್ದಾಗ ಅವರೇ ಮಾತು ಮುಂದುವರೆಸಿದರು.
ಶಾಹಿದ್ ಕಪೂರ್ 'ಅಶ್ವತ್ಥಾಮ'ನಿಗೆ 'ಅವನೇ ಶ್ರೀಮನ್ನಾರಾಯಣ' ಸಚಿನ್ ರವಿ ಸೂತ್ರಧಾರ!
'ನೀನು ಸೈಂಟಿಸ್ಟ್ ಆಗಲ್ಲ ಅಂದ್ರೆ, ಏನೂ ಡಿಸ್ಕವರಿ ಮಾಡಲ್ಲ ಅಂದ್ರೆ ಸೈನ್ಸ್ ಸ್ಟಡಿ ಮಾಡಿ ಏನ್ ಮಾಡ್ತೀಯ? ಎಂಟ್ರೇನ್ಸ್ ಎಕ್ಸಾಂ ತಗೊಂಡು ಏನ್ ಮಾಡ್ತೀಯ? ಬಿಟ್ಟು ಬಿಡು ಸೈನ್ಸ್ ಸಹವಾಸ' ಅಂದ್ರು. ನಂಗೆ ತುಂಬಾ ಕೋಪ ಬಂತು. ಆದ್ರೆ ಗುರೂಜಿ ಮಾತು ಮೀರೋ ಹಾಗೆ ಇರ್ಲಿಲ್ಲ. ನಾನು ಸೈನ್ಸ್ ಸ್ಟಡಿಮಾಡೋದು ಬಿಟ್ಬಿಟ್ಟೆ. ಬಳಿಕ ನಾನು ಆರ್ಟ್ಸ್ ತಗೊಂಡು ಓದನ್ನು ಮುಂದುವರೆಸಿದೆ' ಎಂದಿದ್ದಾರೆ ಗಾಯಕ ಅರಿಜಿತ್ ಸಿಂಗ್. ಆದರೆ, ಆಗ ಸೈನ್ಸ್ ಬಿಟ್ಟಿದ್ದಕ್ಕೆ ಈಗ ಮನಸ್ಸಿನಲ್ಲಿ ಬೇಸರ ಇದೆಯೋ ಇಲ್ಲವೋ ಎಂಬುದನ್ನು ಅವರು ಹೇಳಿಲ್ಲ.
ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ 'ವೆಂಕ್ಯಾ', ನಿರ್ದೇಶನದ ಜೊತೆಗೆ ನಟನೆಗೆ ಇಳಿದ ಸಾಗರ್ ಪುರಾಣಿಕ್
ಗಾಯಕ ಅರಿಜಿತ್ ಸಿಂಗ್ ಮುಖ್ಯವಾಗಿ ಹಿಂದಿ ಹಾಡುಗಳನ್ನು ಹಾಡಿರುವ ಗಾಯಕರಾದರೂ ಅವರ ಮಾತೃಭಾಷೆ ಪಂಜಾಬಿ ಸೇರಿದಂತೆ, ಭಾರತದ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಏಳು (7) ನ್ಯಾಷನಲ್ ಅವಾರ್ಡ್ ಸೇರಿದಂತೆ, ಹಲವು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವ ಗಾಯಕ ಅರಿಜಿತ್, ಭಾರತದ ಸೇರಿದಂತೆ ಹಲವು ವಿದೇಶಿ ವೇದಿಕೆಗಳಲ್ಲಿ ಕೂಡ ತಮ್ಮ ಗಾನಸುಧೆ ಹರಿಸಿದ್ದಾರೆ. ಅರಿಜತ್ ಹಲವು ರಿಯಾಲಿಟಿ ಶೋಗಳ ಜಡ್ಡ್ ಆಗಿ ಸಹ ಕ್ರಿಯಾಶೀಲರಾಗಿದ್ದಾರೆ. ಗಾಯನದ ಜತೆಗೆ ಅರಿಜಿತ್ ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ.
ಎಲ್ಲೋ ಜೋಗಪ್ಪ ನಿನ್ನರಮನೆ ಎಂದ 'ಜವಾನ್' ಗಾಯಕಿ, ಕನ್ನಡದ ಹಾಡಿಗೆ ಧ್ವನಿಯಾದ ರಕ್ಷಿತಾ ಸುರೇಶ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.