
ತಮ್ಮ ಪ್ರತಿಭೆಯಿಂದಲೇ ದಕ್ಷಿಣ ಭಾರತ ಚಿತ್ರಗಳ ಜೊತೆ ಬಾಲಿವುಡ್ ಚಿತ್ರಗಳಲ್ಲಿ ಮಿಂಚುತ್ತಿರುವ ನಟಿ ಪ್ರಿಯಮಣಿ ರಾಜಾ (South Indian and Bollywood Actress Priyamani). ಅವಾರ್ಡ್ ವಿನ್ನರ್ ನಟಿಗೆ ಈಗ ಬಾಲಿವುಡ್ ನಲ್ಲಿ ಅವಕಾಶಗಳು ಹುಡುಕಿಕೊಂಡು ಬರ್ತಿವೆ. ಈ ಹಿಂದೆ ಜವಾನ್ ಚಿತ್ರದಲ್ಲಿ ಶಾರುಕ್ ಖಾನ್ ಜೊತೆ ನಟಿಸಿ ಭೇಷ್ ಎನ್ನಿಸಿಕೊಂಡಿದ್ದ ಪ್ರಿಯಾಮಣಿ ರಾಜ್, ಅಜಯ್ ದೇವಗನ್ ಜೊತೆ ಅಭಿನಯಿಸಿ ಗೆದ್ದಿದ್ದಾರೆ. ಪ್ರಿಯಾಮಣಿ ಅಭಿನಯದ ಮೈದಾನ ಕೆಲ ದಿನಗಳ ಹಿಂದಷ್ಟೆ ತೆರೆಗೆ ಬಂದಿದ್ದು, ಪ್ರಿಯಾಮಣಿ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ನಲವತ್ತನೇ ವಯಸ್ಸಿನಲ್ಲೂ ಪ್ರಿಯಾಮಣಿ (Priyamani) ಗ್ಲಾಮರ್ ಕಡಿಮೆ ಆಗಿಲ್ಲ. ಯಾವುದೇ ಡ್ರೆಸ್ ಧರಿಸಿದ್ರೂ ಫಿಟ್ ಆಂಡ್ ಫೈನ್ (Fit and Fine) ಕಾಣುವ ನಟಿಯರಲ್ಲಿ ಪ್ರಿಯಾಮಣಿ ಒಬ್ಬರು. ಅವರ ಸೌಂದರ್ಯ ನೋಡಿದ್ರೆ ಎಂಥವರಾದ್ರೂ ಹೊಟ್ಟೆ ಉರಿದುಕೊಳ್ತಾರೆ. ಈಗ ಪ್ರಿಯಾಮಣಿ ಸೀರೆ ಲುಕ್ ವೈರಲ್ ಆಗಿದೆ. ಭಾರತೀಯ ಸಾಂಪ್ರದಾಯಿಕ ಉಡುಗೆ ಸೀರೆಯಲ್ಲಿ ಪ್ರಿಯಾಮಣಿ ಫೋಟೋಗೆ ಫೋಸ್ ನೀಡಿದ್ದಾರೆ. ತೆರೆಮೇಲೆ ಅಜಯ್ ದೇವಗನ್ ಜೊತೆಗೆ ಹಸೀನಾ ಕೆಮಿಸ್ಟ್ರಿಯನ್ನು ಜನ ಮೆಚ್ಚಿಕೊಂಡಂತೆ ಪ್ರಿಯಾಮಣಿ ಸಿಂಪಲ್ ಸ್ಟೈಲ್ ಫೋಟೋ ಕೂಡ ಜನರ ಮನಸ್ಸು ಗೆದ್ದಿದೆ.
ಯೆಲ್ಲೋ ಸೀರೆಯ ಶಿಲಾಬಾಲಿಕೆಯೇ ಅನುಪಮಾ ಗೌಡ: ಜ್ಯೂನಿಯರ್ ಜೆನಿಲಿಯಾ ಎಂದ ಫ್ಯಾನ್ಸ್!
ಸೀರೆಯಲ್ಲಿ ಕಂಡ ಪ್ರಿಯಾಮಣಿ ಸೌಂದರ್ಯ : ಪ್ರಿಯಾಮಣಿ ಸೌಂದರ್ಯದ ಮುಂದೆ ಕೆಲ ಬಾಲಿವುಡ್ ನಟಿಯರ ಸೌಂದರ್ಯ ಕೂಡ ಸೆಪ್ಪೆಯಾಗಿ ಕಾಣುತ್ತೆ ಅಂದ್ರೆ ಅತಿಶಯೋಕ್ತಿಯಾಗದು. ಸದ್ಯ ಪ್ರಿಯಾಮಣಿ ತಮ್ಮ ಕೊಟೇಶನ್ ಗ್ಯಾಂಗ್ ಚಿತ್ರಕ್ಕಾಗಿ ಸುದ್ದಿಯಲ್ಲಿದ್ದಾರೆ. ಇವರ ಟ್ರೇಲರ್ ಲಾಂಚ್ ಗೆ ಹಸೀನಾ ಸೀರೆ ಉಟ್ಟು ಆಗಮಿಸಿದ್ದರು. ಇಲ್ಲಿ ಅವರು ಪೀಚ್ ಮತ್ತು ಕಿತ್ತಳೆ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಪ್ರಿಯಾಮಣಿ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. # Quotation gang ಟ್ರೈಲರ್ ಲಾಂಚ್ ಅಂತಾ ಪ್ರಿಯಾಮಣಿ ಫೋಟೋಕ್ಕೆ ಶೀರ್ಷಿಕೆ ಹಾಕಿದ್ದಾರೆ.
ಪ್ರಿಯಾಮಣಿ ಧರಿಸಿದ್ದ ಸೀರೆ ಬೆಲೆ ಎಷ್ಟು? : ಪ್ರಿಯಾಮಣಿ ಧರಿಸಿದ್ದ ಸೀರೆ ತುಂಬಾ ಸಿಂಪಲ್ ಆಗಿ ಕಾಣ್ತಿದ್ದರೂ, ಸಣ್ಣ ಗುಲಾಬಿ, ನೇರಳೆ ಮತ್ತು ಹಳದಿ ಹೂವುಗಳ ಬಾರ್ಡರ್ ಸೀರೆ ಲುಕ್ ಹೆಚ್ಚಿಸಿತ್ತು. ಇಂಟರ್ನೆಟ್ ನಲ್ಲಿ ನೀಡಿದ ಮಾಹಿತಿ ಪ್ರಕಾರ, ಪ್ರಿಯಾಮಣಿ ಧರಿಸಿದ್ದ ಈ ಸೀರೆ ಬೆಲೆ 46,500 ರೂಪಾಯಿ.
ಅಂದವನ್ನು ಹೆಚ್ಚಿಸಿದ್ದ ಬ್ಲೌಸ್ : ಪ್ರಿಯಾಮಣಿ ಧರಿಸಿದ್ದ ಸೀರೆಯ ಬಾರ್ಡರ್ ಹಗುರವಾಗಿತ್ತು. ಸೀರೆಗೆ ಹೊಂದುವ ಬ್ಲೌಸ್ ಅವರ ಸೌಂದರ್ಯವನ್ನು ಇಮ್ಮಡಿಕೊಳಿಸಿತ್ತು. ಬ್ಲೌಸ್ ಮೇಲೆ ಲಾಬಿ, ಬಿಳಿ ಮತ್ತು ಕಿತ್ತಳೆ ಥ್ರೆಡ್ ವರ್ಕ್‌ನಿಂದ ಮಾಡಿದ್ದ ಹೂವು ಪ್ರಿಯಾಮಣಿ ಸೀರೆಗೆ ಮತ್ತಷ್ಟು ಮೆರಗು ನೀಡಿತ್ತು.
ಸುಂದರ ಸೀರೆ, ಸಿಂಪಲ್ ಆಭರಣ : ಸೀರೆಗೆ ತಕ್ಕಂತೆ ಪ್ರಿಯಾಮಣಿ ರಾಜ್ ಆಭರಣ ಧರಿಸಿದ್ದರು. ಹೆವಿ ಎನ್ನುವಂತ ಯಾವುದೇ ಆಭರಣವನ್ನು ಅವರು ಧರಿಸಿರಲಿಲ್ಲ. ಅಕ್ವಾಮರೀನ್ ಫ್ಲವರ್ ಡ್ರಾಪ್ ಕಿವಿಯೋಲೆ ಧರಿಸಿದ್ದ ಪ್ರಿಯಾಮಣಿ, ಕೈಗೆ ಎರಡು ಸಿಂಪಲ್ ಉಂಗುರ ಹಾಕಿದ್ರು. ಆದ್ರೆ ಈ ಸಿಂಪಲ್ ಲುಕ್ ನಲ್ಲೂ ಪ್ರಿಯಾಮಣಿ ಸಾಕಷ್ಟು ಗ್ಲಾಮರಸ್ ಆಗಿ ಕಾಣಿಸುತ್ತಿದ್ದರು.
ಇಷ್ಟೇ ಅಲ್ಲ ಹೇರ್ ಸ್ಟೈಲಿಸ್ಟ್ ಶೋಭಾ ಹವಾಲಾ, ಹಣೆಯ ಮಧ್ಯ ಭಾಗದಲ್ಲಿ ಬೈತಲೆ ತೆಗೆದು ಕೂದಲಿಗೆ ವೇವಿ ಟಚ್ ನೀಡಿದ್ರು. ಸರಳವಾದ ಬಿಂದಿ ಹಾಗೂ ಉದ್ದದ ಕಿವಿಯೋಲೆ ಅವರ ಮುಖ ಕಾಂತಿಯನ್ನು ಹೆಚ್ಚಿಸಿತ್ತು.
ಎಕ್ಸ್‌ಕ್ಯೂಸ್ ಮೀ ನಟನ ಮನೇಲಿ ಖ್ಯಾತ ಆ್ಯಂಕರ್ ಓಡಾಟ; ಅಲ್ಯಾಕೆ ಹೋಗಿ ನಗು ಚೆಲ್ಲಿದ್ರು ಅನುಶ್ರೀ..?
ಪ್ರಿಯಾಮಣಿ ನಟಿಸ್ತಿರುವ ಮುಂದಿನ ಚಿತ್ರ ಕೊಟೇಶನ್ ಗ್ಯಾಂಗ್ ಆಕ್ಷನ್ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ವಿವೇಕ್ ಕೆ ಕಣ್ಣನ್ ಬರೆದು ನಿರ್ದೇಶಿಸಿದ್ದಾರೆ. ಪ್ರಿಯಾಮಣಿ ಜೊತೆ 0ಜಾಕಿ ಶ್ರಾಫ್, ಸನ್ನಿ ಲಿಯೋನ್, ಸಾರಾ ಅರ್ಜುನ್, ಜಯಪ್ರಕಾಶ್, ಅಶ್ರಫ್ ಮಲ್ಲಿಸ್ಸೆರಿ ಸೇರಿದಂತೆ ಅನೇಕರು ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.