
ದೊಡ್ಡ ದೊಡ್ಡ ಜಾಹೀರಾತು ಕಂಪೆನಿಗಳು ತಮ್ಮ ಪದಾರ್ಥಗಳನ್ನು ಸುಲಭದಲ್ಲಿ ಮಾರಾಟ ಮಾಡುವ ಉದ್ದೇಶಕ್ಕೆ ಸ್ಟಾರ್ ನಟರು, ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ರೂಪಾಯಿ ದುಡ್ಡು ಕೊಟ್ಟು ರಾಯಭಾರಿಗಳನ್ನಾಗಿಸುವುದು ಹೊಸ ವಿಷಯವಲ್ಲ. 10 ರೂಪಾಯಿ ಪ್ರಾಡಕ್ಟ್ಗಳಿಂದ ಹಿಡಿದು ಸಾವಿರ, ಲಕ್ಷ ರೂಪಾಯಿ ಪ್ರಾಡಕ್ಟ್ಗಳಿಗೂ ಚಿತ್ರ ತಾರೆಯರು ಇಲ್ಲವೇ ಕ್ರಿಕೆಟಿಗರೇ ಬೇಕು. ಇಂಥವರನ್ನು ಹಾಕಿಕೊಂಡು ಮಾಡುವ ಜಾಹೀರಾತುಗಳ ಪೈಕಿ ಹಲವು ವಿಷಪೂರಿತವಾಗಿರುವುದಾಗಿ ಇದಾಗಲೇ ಸಾಬೀತಾಗಿದೆ. ಕ್ರಿಕೆಟ್ ತಾರೆಯರು, ಸ್ಟಾರ್ ನಟರನ್ನು ರಾಯಭಾರಿಯನ್ನಾಗಿಸಿಕೊಂಡು ಮಾರಾಟ ಮಾಡುವ ಪಾನೀಯಗಳ ಬಗ್ಗೆ ಇದಾಗಲೇ ಎಲ್ಲರಿಗೂ ತಿಳಿದದ್ದೇ. ಇವುಗಳಲ್ಲಿ ವಿಷದ ಅಂಶ ಎಷ್ಟಿದೆ ಎನ್ನುವುದೂ ಸಾಬೀತಾದರೂ ಅವರನ್ನು ನಂಬುವ ಅಭಿಮಾನಿಗಳನ್ನು ಮರಳು ಮಾಡಲು, ಕೋಟಿಕೋಟಿ ಹಣ ಪಡೆದು ಕ್ರಿಕೆಟಿಗರು, ಚಿತ್ರನಟರು ಅದರಲ್ಲಿ ನಟಿಸುತ್ತಾರೆ. ನಿಜ ಜೀವನದಲ್ಲಿ ಅವರು ಆ ಪಾನೀಯ ಅಥವಾ ಪದಾರ್ಥಗಳ ಸೇವನೆ ಮಾಡುತ್ತಾರೋ ಗೊತ್ತಿಲ್ಲ, ಒಟ್ಟಿನಲ್ಲಿ ಜಾಹೀರಾತಿನಲ್ಲಿ ಕಾಣಿಸಿಕೊಂಡು ಬೇರೆಯವರಿಗೆ ವಿಷಯವನ್ನು ಮಾತ್ರ ಧಾರಾಳವಾಗಿ ಉಣಿಸುತ್ತಿದ್ದಾರೆ. ಇಂಥವರನ್ನೇ ತಮ್ಮ ಆದರ್ಶ, ದೇವರು ಎಂದೆಲ್ಲಾ ಅಂದುಕೊಳ್ಳುವ ಅಭಿಮಾನಿಗಳು ಅವರನ್ನು ಅನುಸರಿಸುತ್ತಿರುವುದು ಮಾತ್ರ ಎಂದಿಗೂ ನಡೆದೇ ಇದೆ.
ಇದೀಗ ಅದೇ ರೀತಿಯ ಜಾಹೀರಾತು ಪಾನ್ ಮಸಾಲಾದ್ದು. ಇದರಲ್ಲಿ ಬಾಲಿವುಡ್ ಕಿಂಗ್ ಎಂದೇ ಖ್ಯಾತಿ ಪಡೆದಿರುವ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ತಾವು ಮಾಡುತ್ತಿರುವುದು ತಪ್ಪು ಎನ್ನುವುದು ಅರ್ಥವಾಗುತ್ತಲೇ ಅಕ್ಷಯ್ ಕುಮಾರ್ ಈ ಜಾಹೀರಾತಿನಿಂದ ಹಿಂದಕ್ಕೆ ಸರಿದಿದ್ದಾರೆ. ಇದೀಗ ಅಕ್ಷಯ್ ಜಾಗದಲ್ಲಿ ಜಾಕಿ ಶ್ರಾಫ್ರನ್ನು ಹಾಕಿಕೊಳ್ಳಲಾಗಿದೆ. ಈ ನಟರ ವಿರುದ್ಧ ಇದಾಗಲೇ ಹಲವಾರು ಮಂದಿ ಆಕ್ರೋಶ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಇವರಿಂದ ಪ್ರಭಾವಿತರಾಗಿ ಇದರ ಚಟಕ್ಕೆ ದಾಸರಾಗಿರುವವರೂ ಲೆಕ್ಕವಿಲ್ಲದಷ್ಟು.
ಬೆಂಗಳೂರಲ್ಲೇ ಡೆಲಿವರಿ ಆದ್ಮೇಲೂ ಬೇಬಿ ಬಂಪ್ನಲ್ಲಿ ಕಾಣಿಸಿಕೊಂಡ ದೀಪಿಕಾ? ತಲೆ ಕೆಡಿಸಿಕೊಂಡ ಫ್ಯಾನ್ಸ್
ಈ ಬಗ್ಗೆ ಇದೀಗ ಶಕ್ತಿಮಾನ್ ಎಂದೇ ಫೇಮಸ್ ಆಗಿರೋ ನಟ ಮುಖೇಶ್ ಖನ್ನಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಮಿಲೇನಿಯರ್ ಆಗಿರುವ ನಿಮಗೆ ದುಡ್ಡು ಸಾಕಾಗಲ್ವಾ? ಯುವಕರ ದಾರಿತಪ್ಪಿಸುವ ಜಾಹೀರಾತಿನಲ್ಲಿ ನಟಿಸುವುದು ನಿಮಗೆ ನಾಚಿಕೆ ಅನ್ನಿಸಲ್ವಾ? ನನ್ನನ್ನು ಕೇಳಿದ್ರೆ... ನಿಮ್ಮಂಥ ನಟರನ್ನು ಹಿಡಿದು ಥಳಿಸಬೇಕು ಎನಿಸುತ್ತದೆ, ಹಣಕ್ಕಾಗಿ ಏನೂ ಅಂತ ಮಾಡುತ್ತೀರಾ ನೀವೆಲ್ಲಾ ಎಂದು ಗುಡುಗಿದ್ದಾರೆ. ಈ ಹಿಂದೆ ಅಕ್ಷಯ್ ಕುಮಾರ್ ಅವರಿಗೆ ಬುದ್ಧಿ ಹೇಳಿದ್ದೆ. ಅಕ್ಷಯ್ಗೆ ಮಾತ್ರವಲ್ಲದೇ ಇಂಥ ಕೆಟ್ಟ ಜಾಹೀರಾತಿನಲ್ಲಿ ನಟಿಸೋ ಎಲ್ಲ ಸ್ಟಾರ್ ನಟರಿಗೂ ಬುದ್ಧಿ ಹೇಳಿದ್ದೆ. ಆದರೆ ಅಕ್ಷಯ್ ಕುಮಾರ್ ತಲೆಗೆ ಅದು ಹೋಯಿತು. ತಾವು ಮಾಡ್ತಿರೋದು ತಪ್ಪು ಎಂದು ಗೊತ್ತಾಯ್ತು. ಎಲ್ಲರ ಕ್ಷಮೆ ಕೋರಿ ಜಾಹೀರಾತಿನಿಂದ ಹಿಂದಕ್ಕೆ ಸರಿದರು. ಉಳಿದ ನಿಮಗೆಲ್ಲಾ ಏನಾಗಿದೆ? ಎಷ್ಟು ಕೀಳು ಮಟ್ಟಕ್ಕೆ ಅಂತ ಇಳೀತೀರಾ ಎಂದು ಶಾರುಖ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ವಿರುದ್ಧ ಮುಖೇಶ್ ಖನ್ನಾ ಕಿಡಿ ಕಾರಿದ್ದಾರೆ.
ಇಂಥ ಜಾಹೀರಾತುಗಳ ಮೇಲೆ ಕೋಟ್ಯಂತರ ರೂಪಾಯಿ ಸುರಿಯಲಾಗುತ್ತದೆ. ಇದರಿಂದ ಜನರಿಗೆ ನೀವು ಏನು ಕಲಿಸುತ್ತಿದ್ದೀರಿ? ತಾವು ಪಾನ್ ಮಸಾಲಾ ಮಾಡುತ್ತಿಲ್ಲ, ಅಡಿಕೆ ಪುಡಿ ಮಾರುತ್ತೇವೆ ಎನ್ನುತ್ತಾರೆ. ಆದರೆ ತಾವು ಮಾಡುತ್ತಿರುವುದು ಏನು ಅಂತ ಅವರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿರುವ ’ ಮುಖೇಶ್ ಖನ್ನಾ ಅವರು ಕಿಂಗ್ಫಿಶರ್ ಜಾಹೀರಾತು ಮಾಡುವ ನಟರ ವಿರುದ್ಧವೂ ಹರಿಹಾಯ್ದಿದ್ದಾರೆ. ಇಂಥ ಕೆಟ್ಟ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಹಿಂದೊಮ್ಮೆ ಅಮಿತಾಭ್ ಬಚ್ಚನ್ ಹೇಳಿ ಅದರಿಂದ ಹಿಂದಕ್ಕೆ ಸರಿದಿದ್ದಾರೆ. ಆದರೆ ನಿಮಗೆ ನಾಚಿಕೆ ಆಗಲ್ವಾ? ಇನ್ನೆಷ್ಟು ಹಣ ಬೇಕು ನಿಮಗೆ? ಎಷ್ಟು ಮಂದಿಯನ್ನು ದಾರಿ ತಪ್ಪಿಸುತ್ತೀರಿ ನೀವು ಎಂದಿದ್ದಾರೆ.
ಅಬ್ಬಬ್ಬಾ! ಇವರೆಲ್ಲಾ ಬೇರೊಬ್ಬರ ಪತಿಯನ್ನೇ ಕದ್ದುಬಿಟ್ಟಿದ್ರಾ? ಬಾಲಿವುಡ್ ಬೆಡಗಿಯರ ರಹಸ್ಯ ಬಯಲಿಗೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.