ಫ್ಲ್ಯಾಟ್ ಚೆಸ್ಟ್​ ಎನ್ನುವುದನ್ನು ಹೀಗೆ ಬಿಂಬಿಸೋದಾ ಉರ್ಫಿ? ಎದೆಯ ಮೇಲೆಯೇ ಡಿಜಿಟಲ್​ ಬೋರ್ಡ್​!

By Suchethana D  |  First Published Aug 11, 2024, 6:13 PM IST

ಎದೆಯ ಮೇಲೆ ಡಿಜಿಟಲ್​ ಬೋರ್ಡ್​ ಹಾಕಿಕೊಂಡಿರುವ ನಟಿ ಉರ್ಫಿ ಜಾವೇದ್​ ಅದರಲ್ಲಿ ಏನೆಲ್ಲಾ ಹೇಳಿದ್ದಾರೆ ನೋಡಿ. ಉಫ್​ ಎಂದ ಫ್ಯಾನ್ಸ್​.
 


ನನ್ನದು ಫ್ಲ್ಯಾಟ್​ ಚೆಸ್ಟ್​, ವಿಮಾನ ನಿಲ್ದಾಣದಲ್ಲಿ ಓರಿ ನಾಟ್​ ಸಾರಿ... ಎಂದೆಲ್ಲಾ ಚಿತ್ರ-ವಿಚಿತ್ರ ಇರೋ ಡಿಜಿಟಲ್​ ಬೋರ್ಡ್​ ಪ್ರದರ್ಶಿಸುವ ಮೂಲಕ ಮತ್ತೊಮ್ಮೆ ವಿಚಿತ್ರ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ ಸೋಷಿಯಲ್​ ಮೀಡಿಯಾ ಸೆನ್ಸ್​ಸೇಷನ್​ ಉರ್ಫಿ ಜಾವೇದ್​. ಅಷ್ಟಕ್ಕೂ ಉರ್ಫಿ ಜಾವೇದ್​ ಎಂದಾಕ್ಷಣ ಎಲ್ಲರ ಕಣ್ಣೆದುರು ಬರುವುದು ಚಿತ್ರ-ವಿಚಿತ್ರಗಳಿಂದ ಕಂಗೊಳಿಸುವ ನಟಿ. ಬಟ್ಟೆಗಿಂತಲೂ ಹೆಚ್ಚಾಗಿ ಈಕೆ ಮೈಮೇಲೆ ಧರಿಸುವುದು ಭಿನ್ನ -ವಿಭಿನ್ನ ವಸ್ತುಗಳನ್ನೇ. ಕೆಲವೊಮ್ಮೆ ಪ್ಲಾಸ್ಟಿಕ್​, ಮತ್ತೆ ಕೆಲವು ಸಲ ಹೂವು, ಹಣ್ಣು, ತರಕಾರಿ, ಗೋಣಿಚೀಲ... ಹೀಗೆ ಇಂಥವುಗಳಿಂದಲೇ ಖಾಸಗಿ ಅಂಗ ಮುಚ್ಚಿಕೊಂಡು ಪೋಸ್​ ಕೊಡುತ್ತಾರೆ. ಕೆಲ ದಿನಗಳ ಹಿಂದೆ ನಟಿ ಉರ್ಫಿ ಜಾವೇದ್​ ಬಟ್ಟೆಯಲ್ಲಿ ಬ್ರಹ್ಮಾಂಡ ತೋರಿಸಿದ್ದರು. ಬಳಿ ಎದೆ ಭಾಗದಲ್ಲಿ  ಎರಡು ಫ್ಯಾನ್​ ಸಿಕ್ಕಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಬಟ್ಟೆಯಲ್ಲಿನ ಬ್ರಹ್ಮಾಂಡದಲ್ಲಿ ಹಲವು ವಿಷಯಗಳನ್ನು ಅವರು ತೋರಿಸಿದ್ದರೆ, ಎದೆ ಮೇಲೆ ಹಾಕಿಕೊಂಡಿದ್ದ ಫ್ಯಾನ್ಸ್​ ತಿರುಗುತ್ತಿತ್ತು. 

ನೀವು ಇನ್ನೂ ಹಾಕಿಕೊಳ್ಳದೇ  ಇರುವ ಡ್ರೆಸ್​ ಯಾವುದು ಎಂದು ಪ್ರಶ್ನೆಗೆ ಉರ್ಫಿ, ಅಂಥದ್ದೊಂದು ವಸ್ತು ಯಾವುದಾದ್ರೂ ಇದೆಯೇ ಎಂದು ಪ್ರಶ್ನಿಸಿದ್ದರು. ಅಷ್ಟರ ಮಟ್ಟಿಗೆ ಅವರು ಇದ್ದ ಬಿದ್ದ ಎಲ್ಲಾ ವಸ್ತುಗಳಿಂದಲೂ ಉಡುಗೆ-ತೊಡುಗೆ ಮಾಡಿಕೊಂಡಾಗಿದೆ. ಕೆಲ ದಿನಗಳ ಹಿಂದೆ,  ಮೈಮೇಲಿಂದಲೇ ಉದುರುವ ಹೂವು-ಎಲೆ ಹಾರಾಡುವ ಚಿಟ್ಟೆಗಳ ಬಟ್ಟೆ ತೊಟ್ಟು ಅಭಿಮಾನಿಗಳ ಹುಬ್ಬೇರಿಸಿದ್ದರು.  ಇದರ ವಿಡಿಯೋ ಸಕತ್​ ವೈರಲ್​ ಆಗಿದ್ದು,  ಇಂಥ ಐಡಿಯಾ ಬೇರೆ ಯಾರಿಗೂ ಹೊಳೆಯಲು ಸಾಧ್ಯವೇ ಇಲ್ಲ ಬಿಡಿ ಎಂದು ಉರ್ಫಿ ಅಭಿಮಾನಿಗಳು ದೊಡ್ಡ ನಮಸ್ಕಾರ ಹಾಕಿದ್ದರು.  ನಟಿ ಬಟ್ಟೆಯ ಮೇಲೆ ಹೂವು, ಎಲೆಗಳನ್ನು ಇರಿಸಿಕೊಂಡು, ಅದು ಮ್ಯಾಜಿಕ್​ ರೀತಿಯಲ್ಲಿ ಉದುರುವ ಹಾಗೆ ಮಾಡಿದ್ದಂತೂ ನೋಡಿ  ಉರ್ಫಿ ಜಾವೇದ್​ ಫ್ಯಾನ್ಸ್​ ಫಿದಾ ಆಗಿದ್ದು, ನಿಮಗೆ ನೀವೇ ಸಾಟಿ ಎಂದರು.

Tap to resize

Latest Videos

ಒಳಗೆ ಸೇರಿದರೆ ಗುಂಡು... ಮತ್ತಿನಲ್ಲಿದ್ದ ಉರ್ಫಿಯ ಮೈಯೆಲ್ಲಾ ಮುಟ್ಟಿ ಸುಸ್ತು ಮಾಡಿದ್ರು! ವಿಡಿಯೋ ವೈರಲ್​

ಆದರೆ ಈಕೆ ಕೆಲ ದಿನಗಳ ಹಿಂದೆ ಸಕತ್​ ಸದ್ದು ಮಾಡಿದ್ದು, ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಈಗ ಖುದ್ದು ನಶೆ ಏರಿಸಿಕೊಂಡು ತೂರಾಡುತ್ತಾ ಬಂದಾಗ.  ನಟಿ ತೂರಾಡುತ್ತಾ ಬಂದಾಗ ಅವರನ್ನು ಕೆಲವರು ಹಿಡಿದುಕೊಂಡಿದ್ದರು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ, ಇದೇ  ನಶೆಯಲ್ಲಿ ನಟಿ ಕಾರನ್ನೇರಿ ಕುಳಿತಿದ್ದರು. ಅಲ್ಲಿ ಒಂದಿಷ್ಟು ಜನರು ಮುತ್ತಿಗೆ ಹಾಕಿದ್ದರು. ಅವರಿಗೆ  ಕೊಡುವ ಸಲುವಾಗಿ ನಟಿ ಕೈಯಲ್ಲಿ ದುಡ್ಡು ಹಿಡಿದುಕೊಂಡದ್ದೇ ಇದಕ್ಕೆಲ್ಲಾ ಕಾರಣವಾಗಿದೆ.  ಅಲ್ಲಿ ಮುತ್ತಿಗೆ ಹಾಕಿದ ಮಕ್ಕಳು ಸೇರಿದಂತೆ ದೊಡ್ಡವರು ಕೂಡ  ಉರ್ಫಿಯ ಮೈಯೆಲ್ಲಾ ಮುಟ್ಟಿದ್ದಾರೆ. ಮೂಗಿಗೆ ಏಟು ಕೂಡ ಬಿದ್ದದೆ. ಅಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಅಲ್ಲಿಂದ ಓಡಿಸುವಲ್ಲಿ ಸುಸ್ತಾಗಿ ಹೋಗಿದ್ದರು.

ಇದೀಗ ಬಸ್​, ಮಳಿಗೆಗಳಿಗೆ ಅಳವಡಿಸಿ ಡಿಜಿಟಲ್​ ನಾಮಫಲಕವನ್ನು ಎದೆಗೆ ಅಳವಡಿಸಿಕೊಂಡು ಹೋಗಿದ್ದಾರೆ. ಇದನ್ನು ನೋಡಿ, ನಿಮ್ಮದು ನೋಡಿದ್ರೆ ತಿಳಿಯುತ್ತದೆ, ಇನ್ನು ಫ್ಲ್ಯಾಟ್ ಚೆಸ್ಟ್​ ಎಂದು ನೀವು ಹೇಳುವುದು ಏಕೆ ಎಂದು ನಟಿಯ ಕಾಲೆಳೆಯುತ್ತಿದ್ದಾರೆ. 

ಅಬ್ಬಬ್ಬಾ! ಇವರೆಲ್ಲಾ ಬೇರೊಬ್ಬರ ಪತಿಯನ್ನೇ ಕದ್ದುಬಿಟ್ಟಿದ್ರಾ? ಬಾಲಿವುಡ್​ ಬೆಡಗಿಯರ ರಹಸ್ಯ ಬಯಲಿಗೆ!

click me!