ನಾಗ ಚೈತನ್ಯ ನಿಶ್ಚಿತಾರ್ಥ ಬೆನ್ನಲೆ ಸಮಂತಾಗೆ ಪ್ರಪೋಸ್ ಮಾಡಿದ ಯೂಟ್ಯೂಬರ್; ಜಿಮ್‌ ಇದೆ ಎಂದು ಒಪ್ಪೆಬಿಟ್ರಾ ನಟಿ?

By Vaishnavi Chandrashekar  |  First Published Aug 12, 2024, 9:02 AM IST

ಮಾಜಿ ಗಂಡನೇ ಮದುವೆ ಆಗುತ್ತಿರುವಾಗ ನಿಮಗೇನು ಸಮಸ್ಯೆ? ಸಮಂತಾ ಪರ ನಿಂತ ನೆಟ್ಟಿಗರು...ವೈರಲ್ ಅಯ್ತು ಪ್ರಪೋಸಲ್ ವಿಡಿಯೋ...... 
 


ಟಾಲಿವುಡ್‌ ಎವರ್‌ಗ್ರೀನ್ ಲವ್ ಸ್ಟೋರಿ, ಬ್ಯೂಟಿಫುಲ್ ಕಪಲ್ಸ್‌ ಎಂದು ಹೆಸರು ಪಡೆದಿದ್ದ ಸಮಂತಾ ರುಥ್ ಪ್ರಭು ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದುಬಿಟ್ಟರು. ಈ ಭೂಮಿ ಮೇಲೆ ನಿಜಕ್ಕೂ ಪ್ರೀತಿ ಅನ್ನೋದು ಇದೆ ಅಂದ್ರೆ ಇವರಿಬ್ಬರು ಮತ್ತೆ ಒಂದಾಗ ಬೇಕು ಅನ್ನೋ ಮಾತುಗಳು ಕೇಳಿ ಬರುತ್ತಿತ್ತು. ಅಷ್ಟರಲ್ಲಿ ನಾಗ ಚೈತನ್ಯ ಮತ್ತೊಬ್ಬ ನಟಿಯನ್ನು ಡೇಟ್ ಮಾಡಲು ಶುರು ಮಾಡಿದ್ದರು. ಕೆಲವು ದಿನಗಳ ಹಿಂದೆ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧುಲಿಪಾಲ್ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಹೀಗಾಗಿ ನೆಟ್ಟಿಗರು ಸಮಂತಾಳಿಗೂ ಮದುವೆ ಮಾಡಿರುವ ಪ್ಲ್ಯಾನ್ ಮಾಡಿದ್ದಾರೆ.

ಹೌದು! ಸಮಂತಾ ವೈಯಕ್ತಿಕ ಜೀವನದಲ್ಲಿ ಖುಷಿಯಾಗಿ ಇರಬೇಕು ಆಕೆ ಒಬ್ಬಂಟಿ ಅಲ್ಲ ಅಂತ ನೆಟ್ಟಿಗರು ಸಾಕಷ್ಟ ನಟರ ಜೊತೆ ಲವ್ ಸೃಷ್ಟಿ ಮಾಡಲು ಪ್ರಯತ್ನ ಮಾಡಿದ್ದರು. ಯಾವುದಕ್ಕೂ ಕೇರ್ ಮಾಡದ ಸಮಂತಾ ಸಿಂಗಲ್ ಆಗಿರಬೇಕು ಎನ್ನುತ್ತಿದ್ದಾರೆ. ಈ ನಡುವೆ ಅಭಿಮಾನಿಯೊಬ್ಬ ಪ್ರಪೋಸ್ ಮಾಡಿರುವ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕಾಮೆಂಟ್‌ನ ನೋಡಿದ ಇನ್ನಿತರ ಅಭಿಮಾನಿಗಳು 'ಹಾಗಿದ್ರೆ ಸಮಂತಾ ಮನಸ್ಸಿನಲ್ಲಿ ಈಗ ನಿಶ್ಚಿರ್ತಾಥ ಯೋಚನೆ ಬಂದಿರಬೇಕು...ಮೊದಲು ಜೋಡಿಯನ್ನು ಹುಡುಕೋಣ' ಎಂದು ಕಾಮೆಂಟ್ ಮಾಡಿದ್ದಾರೆ.

Tap to resize

Latest Videos

ಆ ಸ್ಟಾರ್ ನಟನ ಜೊತೆ ರೊಮ್ಯಾನ್ಸ್‌ ಮಾಡಿದ್ರೆ ವೈರಲ್ ಆಗುತ್ತೆ ಅಂತ ಗೊತ್ತಿದ್ದೇ ಡಿಲೀಟ್ ಮಾಡಿಸಿದೆ: ಐಶ್ವರ್ಯ ರೈ ಶಾಕಿಂಗ್

ವಿಡಿಯೋದಲ್ಲಿ ಏನಿದೆ?

ಸೋಷಿಯಲ್ ಮೀಡಿಯಾ ಕಂಟೆಂಟ್‌ ಕ್ರಿಯೇಟರ್ ಆಗಿರುವ ಮುಕೇಶ್ ಉರ್ಫ್‌ ಕೃಷ್ಣ ಎಡಿಟ್ಸ್‌ ತೆಲುಗು ಒಂದು ವಿಡಿಯೋ ಮಾಡಿದ್ದಾರೆ. ಮನೆಯಿಂದ ಬ್ಯಾಕ್ ಪ್ಯಾಕ್ ಮಾಡಿಕೊಂಡು ಹೊರಡುತ್ತಿರುವ ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳಬೇಡ ನಿನ್ನೊಟ್ಟಿಗೆ ನಾನು ಇದ್ದೀನಿ ಎಂದು ಸಮಂತಾಳಿಗೆ ಹೇಳಬೇಕು ಎಂದು ವಿಡಿಯೋ ಆರಂಭಿಸಿದ್ದಾನೆ. 'ನೋಡಿ ನಿಮಗೆ ನಾನು ಇದ್ದೀನಿ ನಮ್ಮ ಜೋಡಿ ತುಂಬಾನೇ ಚೆನ್ನಾಗಿದೆ. ನೀವು ಓಕೆ ಅಂದ್ರೆ ನಾನು ಮದುವೆಯಾಗಲು ರೆಡಿಯಾಗಿರುವೆ. ಎರಡು ವರ್ಷ ಟೈಂ ಕೊಡಿ ನಾನು ಚೆನ್ನಾಗಿ ದುಡಿದು ನಿಮ್ಮನ್ನು ನೋಡಿಕೊಳ್ಳುತ್ತೀನಿ' ಎಂದು ಹೇಳುತ್ತಾ ಕೈಯಲ್ಲಿ ಸಣ್ಣ ಹಾರ್ಟ್ ಹಿಡಿದುಕೊಂಡು ಮಂಡಿಯೂರಿ ಪ್ರಪೋಸ್ ಮಾಡುತ್ತಾನೆ.

ಏನ್ ಮೇಡಂ ಎಲ್ ಎಲ್ಲೋ ಚುಚ್ಚಿಸಿಕೊಳ್ಳುತ್ತೀರಾ?; ಶ್ರೀಲೀಲಾ ಹೊಕ್ಕಳು ಮೇಲೆ ಬಿತ್ತು ನೆಟ್ಟಿಗರ ಕಣ್ಣು!

ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದಂತೆ ಸಮಂತಾರ ಕಣ್ಣಿಗೆ ಬಿದ್ದಿದೆ. 'ವಿಡಿಯೋದಲ್ಲಿ ಜಿಮ್ ಬ್ಯಾಗ್ರೌಂಡ್ ಇರುವ ಕಾರಣ ನನಗೆ ಸ್ವಲ್ಪ ಒಪ್ಪಿಗೆ ಇದೆ' ಎಂದು ಸಮಂತಾ ಕಾಮೆಂಟ್ ಮಾಡಿದ್ದಾರೆ. ಶ್ರಮ ಪಟ್ಟ ಮಾಡಿರುವ ವಿಡಿಯೋಗೆ ಸಮಂತಾ ಕಾಮೆಂಟ್ ಮಾಡಿದ್ದಾರೆ ಅನ್ನೋ ಖುಷಿಯಲ್ಲಿ ಮುಕೇಶ್‌ ಇದ್ದರೆ, ಸಮಂತಾಗೆ ಮದುವೆ ಆಗುವ ಮನಸ್ಸಿದೆ ಎಂದು ನೆಟ್ಟಿಗರು ಲೆಕ್ಕಾಚಾರ ಹಾಕುತ್ತಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Mukesh Chintha (@mooookesh)

click me!