ಹಾಲಿವುಡ್‌ ಜೋಡಿ ಖರೀದಿಸಿದ ಮುಖೇಶ್ ಅಂಬಾನಿ ಮಗಳ ಮನೇಲಿ ಏನೇನಿದೆ? 

By Bhavani Bhat  |  First Published Dec 6, 2024, 8:45 PM IST

ಬಿಲಿಯನೇರ್‌ ಮುಖೇಶ್‌ ಅಂಬಾನಿ ಪುತ್ರಿ ಇಶಾ ಅಂಬಾನಿ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಒಂದು ಐಷಾರಾಮಿ ವಿಲ್ಲಾ ಹೊಂದಿದ್ದಳು. ಇದನ್ನು ಹಾಲಿವುಡ್‌ನ ಜೋಡಿಯಂದು ಖರೀದಿಸಿದೆ. ಎಷ್ಟು ಬೆಲೆಗೆ, ಅಲ್ಲಿ ಏನೇನಿದೆ ಅಂತ ಈಗ ನೋಡೋಣ. 
 


ಮುಖೇಶ್‌ ಅಂಬಾನಿಯವರ ಪುತ್ರಿ ಇಶಾ ಅಂಬಾನಿ ಮತ್ತು ಆಕೆಯ ಪತಿ ಆನಂದ್ ಪಿರಾಮಲ್ ಅವರು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಹೊಂದಿದ ಐಷಾರಾಮಿ ವಿಲ್ಲಾ ಸಾಕಷ್ಟು ದೊಡ್ಡದಾಗಿದೆ. 12 ಬೆಡ್‌ರೂಮ್‌ಗಳು, 24 ಬಾತ್‌ರೂಮ್‌ಗಳಿವೆ ಇದರಲ್ಲಿ ಅಂದರೆ ಎಷ್ಟು ದೊಡ್ಡದಾಗಿದೆ ಎಂದು ನೀವೇ ಊಹಿಸಬಹುದು. ಈ ಐಷಾರಾಮಿ ನಿವಾಸದ ವಿಸ್ತಾರ ಸುಮಾರು 38,000 ಚದರ ಅಡಿ. ಇದು ಮುಂಬೈನಲ್ಲಿರುವ ಅಂಬಾನಿ ಕುಟುಂಬದ ಪ್ರಸಿದ್ಧ ಮನೆಯಾದ ಆಂಟಿಲಿಯಾಕ್ಕಿಂತ ಕಡಿಮೆಯೇನೂ ಇಲ್ಲ.

ವಿಶಾಲ ಪ್ರದೇಶದಲ್ಲಿ ಹರಡಿರುವ ಈ ಮಹಲು ಬೆವರ್ಲಿ ಹಿಲ್ಸ್‌ನ ಮಧ್ಯಭಾಗದಲ್ಲಿದೆ. ಹನ್ನೆರಡು ಮಲಗುವ ಕೋಣೆಗಳು, ಇಪ್ಪತ್ನಾಲ್ಕು ಸ್ನಾನಗೃಹಗಳು, ಒಳಾಂಗಣ ಪಿಕಲ್‌ಬಾಲ್ ಕೋರ್ಟ್, ಹೊರಾಂಗಣ ಅಡುಗೆಮನೆ, 155-ಅಡಿ ಒಳಗಿನ ಇನ್ಫಿನಿಟಿ ಪೂಲ್, ಜಿಮ್, ಸಲೂನ್ ಮತ್ತು ಸ್ಪಾಗಳಿವೆ. ಪ್ರತ್ಯೇಕ ಜಿಮ್‌ಗಳು, ಸ್ಪಾಗಳು, ಸಲೂನ್‌ಗಳು ಮತ್ತು ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್‌ಗಳನ್ನು ಸಹ ಒಳಗೊಂಡಿದೆ. ಹಲವಾರು ಹುಲ್ಲುಹಾಸುಗಳು ಮತ್ತು ಬೃಹತ್ ಪಾರ್ಕ್‌ ಅನ್ನು ಹೊಂದಿದೆ. ಒಳಾಂಗಣ ಮತ್ತು ಹೊರಾಂಗಣ ಈಜುಕೊಳಗಳನ್ನು ಸಹ ಹೊಂದಿದೆ.

Tap to resize

Latest Videos

ಈ ಬಂಗಲೆಯನ್ನು ಖರೀದಿಸಿದ ಜೋಡಿ ಯಾರು ಗೊತ್ತೆ? ಅವರು ಹಾಲಿವುಡ್‌ನ ಪ್ರಸಿದ್ಧ ತಾರಾ ಜೋಡಿಯಾದ ಜೆನ್ನಿಫರ್ ಲೋಪೆಜ್ ಮತ್ತು ಬೆನ್‌ ಅಫ್ಲೆಕ್.‌ ವರದಿಗಳ ಪ್ರಕಾರ, ಜೆನ್ನಿಫರ್ ಲೋಪೆಜ್ ಮತ್ತು ಬೆನ್ ಅಫ್ಲೆಕ್ ಅವರು ಇಶಾ ಅಂಬಾನಿಯ ಐಷಾರಾಮಿ ಮನೆಯನ್ನು ಸುಮಾರು 500 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದಾರೆ. 

ಕುತೂಹಲಕಾರಿ ವಿಷಯ ಅಂದರೆ ಈ ಮನೆಯ ಜೊತೆಗೆ ಇಶಾ ಅಂಬಾನಿಗೆ ಭಾವನಾತ್ಮಕ ಸಂಬಂಧ ಇದೆ. ಈಕೆ ತಾನು ಪ್ರೆಗ್ನೆಂಟ್‌ ಆಗಿದ್ದಾಗಿನ ಸಮಯವನ್ನು ಇಲ್ಲಿ ಕಳೆದಿದ್ದರು. ಆ ಅಮೂಲ್ಯ ಕ್ಷಣಗಳನ್ನು ಇಲ್ಲಿ ಆಕೆಯ ತಾಯಿ ನೀತಾ ಅಂಬಾನಿ ಕೂಡ ಇಲ್ಲಿ ಹಂಚಿಕೊಂಡರು. ಇವರ ಕುಟುಂಬದ ಕೂಟಗಳು, ಆಚರಣೆಗಳು ಮತ್ತು ವಿಶ್ರಾಂತ ಕ್ಷಣಗಳಿಗೆ ಈ ಮನೆ ಸಾಕ್ಷಿಯಾಗಿದೆ. 

ಕಳೆದ ಜೂನ್‌ನಲ್ಲಿ ಈ ಮನೆ ಮಾರಾಟ ಒಪ್ಪಂದ ಅಂತಿಮಗೊಂಡಿದೆ. ಜೆನ್ನಿಫರ್ ಮತ್ತು ಬೆನ್ $ 61 ಮಿಲಿಯನ್ (ಅಂದಾಜು ರೂ 500 ಕೋಟಿ) ಗಿಂತ ಹೆಚ್ಚಿನ ಮೊತ್ತಕ್ಕೆ ಮನೆಯನ್ನು ಖರೀದಿಸಿದರು. ಈ ಖರೀದಿಗೆ ಮೊದಲು ಬೆನ್ ತನ್ನ ಪೆಸಿಫಿಕ್ ಪಾಲಿಸೇಡ್ಸ್ ಮನೆಯನ್ನು 2022ರಲ್ಲಿ $ 28.5 ಮಿಲಿಯನ್ (ರೂ 237 ಕೋಟಿ) ಗೆ ಮಾರಾಟ ಮಾಡಿದ್ದ. ಜೆನ್ನಿಫರ್ ತನ್ನ ಬೆಲ್-ಏರ್ ಆಸ್ತಿಯನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿ $ 34 ಮಿಲಿಯನ್ (ರೂ 283 ಕೋಟಿ) ಗೆ ಮಾರಾಟ ಮಾಡಿದ್ದಳು.

ಸಲೂನ್‌ನಿಂದ ಹೊರಬರುವಾಗ ಶರ್ಟ್ ಬಟನ್ ಬಿಚ್ಚಿ ಬಂದ ಮಲೈಕಾ ಪುಲ್ ಟ್ರೋಲ್!

ಈ ನಿವಾಸವನ್ನು ಖರೀದಿಸುವ ಮೂಲಕ ಹಾಲಿವುಡ್ ದಂಪತಿಗಳ ಒಡೆತನದ ಭಾರಿ ಆಸ್ತಿಗಳ ಪಟ್ಟಿಗೆ ಇದೂ ಸೇರಿದೆ. ಇವರ ಅಭಿಮಾನಿಗಳು ಇಬ್ಬರನ್ನೂ ಸೇರಿಸಿ "ಬೆನ್ನಿಫರ್" ಎಂದು ಕರೆಯುತ್ತಾರೆ. ಲೋಪೆಜ್‌ಗೆ ಈ ಹಿಂದಿನ ಗಂಡ ಮಾರ್ಕ್ ಆಂಥೋನಿಯೊಂದಿಗೆ ಅವಳಿ ಮಕ್ಕಳಾದ ಮ್ಯಾಕ್ಸ್ ಮತ್ತು ಎಮ್ಮೀ ಇದ್ದಾರೆ. ಅಫ್ಲೆಕ್‌ಗೆ ಆತನ ಹಿಂದಿನ ಹೆಂಡತಿ ಜೆನ್ನಿಫರ್ ಗಾರ್ನರ್‌ ಜೊತೆಗೆ ಹುಟ್ಟಿದ ವೈಲೆಟ್ ಅನ್ನಿ, ಸೆರಾಫಿನಾ ರೋಸ್ ಮತ್ತು ಸ್ಯಾಮ್ಯುಯೆಲ್ ಜೊತೆಗಿದ್ದಾರೆ. ಎಲ್ಲರೂ ಈ ಮಹಲಿನಲ್ಲಿ ಇರುತ್ತಾರಂತೆ.

ಇಶಾ ಅಂಬಾನಿ ಮತ್ತು ಅವರ ಪತಿ ಆನಂದ್ ಪಿರಮಾಲ್ ಅವರಿಗೆ ಮುಂಬೈನಲ್ಲಿ ಆನಂದ್ ಅವರ ಹೆತ್ತವರಾದ ಅಜಯ್ ಮತ್ತು ಡಾ. ಸ್ವಾತಿ ಪಿರಾಮಲ್ ಅವರು "ಗುಲಿತಾ" ಎಂದು ಕರೆಯಲ್ಪಡುವ ಐಷಾರಾಮಿ ಮನೆಯನ್ನು 2018ರಲ್ಲಿ ವಿವಾಹದ ಉಡುಗೊರೆಯಾಗಿ ನೀಡಿದ್ದಾರೆ. ಸಮುದ್ರಕ್ಕೆ ಮುಖಮಾಡಿರುವ ಈ ಭಾರಿ ವಿಲಾಸಿ ಬಂಗಲೆಯು ಕೂಡ ಸಾಕಷ್ಟು ರಿಚ್‌ ಆಗಿದೆ.

2024 ರಲ್ಲಿ ಪೋಷಕರಾಗಿ ಬಡ್ತಿ ಪಡೆದ ಸಂಭ್ರಮದಲ್ಲಿರುವ ಜನಪ್ರಿಯ ಸೆಲೆಬ್ರಿಟಿಗಳಿವರು…
 

click me!