ತೋರಿಸಲ್ಲ, ತೋರಿಸಲ್ಲ ಎನ್ನುತ್ತಲೇ ಎಡವಟ್ಟು ಮಾಡಿಕೊಂಡ ನಟಿ ಶ್ರದ್ಧಾ ಕಪೂರ್: ಫೋಟೋ ವೈರಲ್‌

By Suchethana D  |  First Published Dec 6, 2024, 4:30 PM IST

ಕೆಲ ದಿನಗಳ ಹಿಂದಷ್ಟೇ ಆಧಾರ್ ಕಾರ್ಡ್ ನಲ್ಲಿ ಇರುವ ಫೋಟೋ ತೋರಿಸಲ್ಲ ಎಂದಿದ್ದ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮಾಡಿಕೊಂಡ ಎಡವಟ್ಟೇನು? 
 


ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅಭಿನಯದ ‘ಸ್ತ್ರೀ 2’ ಬಾಲಿವುಡ್​ನ ಎಲ್ಲಾ ದಾಖಲೆಗಳನ್ನು ಉಡೀಸ್​ ಮಾಡಿದೆ. ಕಳೆದ ಆಗಸ್ಟ್​ 15ರಂದು ಬಿಡುಗಡೆಯಾಗಿರುವ ಈ ಚಿತ್ರವು, ಇಲ್ಲಿಯವರೆಗೆ ಶಾರುಖ್​  ಖಾನ್​ ಅಭಿನಯದ ಜವಾನ್​ ಚಿತ್ರದಲ್ಲಿದ್ದ ದಾಖಲೆಯನ್ನು ಸ್ತ್ರೀ ಅಳಿಸಿ ಹಾಕಿದೆ. ಸ್ತ್ರೀ  2 ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿ ರೂಪಾಯಿ ದಾಟಿದ ಮೊದಲ ಹಿಂದಿ ಚಿತ್ರವಾಗಿದೆ. ವಿಶ್ವದಾದ್ಯಂತ 700 ಕೋಟಿ ರೂ.ಗಳನ್ನು ದಾಟಿದೆ ಎಂದು ವರದಿಯಾಗಿದೆ.  ‘ಸ್ತ್ರೀ’ ಪಾರ್ಟ್​-1 ಸಿನಿಮಾ ಭಾರಿ ಯಶಸ್ಸು ಕಂಡ ಬೆನ್ನಲ್ಲೇ ಪಾರ್ಟ್​-2 ಮಾಡಲಾಗಿತ್ತು.  ಆಶಿಕಿ 2 (2013), ಓಕೆ ಜಾನು (2017) ಮತ್ತು ಚಿಚೋರೆ (2019) ಅಂತಹ ಯಶಸ್ವಿ ಚಿತ್ರಗಳೊಂದಿಗೆ ಶ್ರದ್ಧಾ ಅವರು ಭಾರತದ ಅಗ್ರ ತಾರೆಗಳಲ್ಲಿ ಪರಿಗಣಿಸಲ್ಪಟ್ಟಿದ್ದರೂ, ಇದೀಗ ಸ್ತ್ರೀ-2 ಅವರನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಿಸಿದೆ. 

ಇವೆಲ್ಲವುಗಳ ನಡುವೆಯೇ ನಟಿಯ ಸೆಲ್ಫಿ ಒಂದು ಸಕತ್‌ ವೈರಲ್‌ ಆಗುತ್ತಿದೆ. ಇದಕ್ಕೆ ಕಾರಣ, ಕನ್ನಡಿ ಮುಂದೆ ನಿಂತು ನಟಿ ಸೆಲ್ಫಿ ಕ್ಲಿಕ್ಕಿಸಿಕೊಂಡರೆ, ಅವರ ಅಭಿಮಾನಿಗಳಿಗೆ ಮಾತ್ರ ಕಂಡದ್ದು ಅವರ ಆಧಾರ್ ಕಾರ್ಡ್! ಹಿಂದೊಮ್ಮೆ ಸುದ್ದಿಗೋಷ್ಠಿ ಒಂದರಲ್ಲಿ ಶ್ರದ್ಧಾ ಕಪೂರ್ ಬಳಿ ಕೆಲವರು ‘ಆಧಾರ್ ಕಾರ್ಡ್’ ಫೋಟೋನ ರಿವೀಲ್ ಮಾಡಲು ಕೇಳಿದ್ದರು. ಆದರೆ, ಶ್ರದ್ಧಾ ಕಪೂರ್ ಇದಕ್ಕೆ ಸಮ್ಮತಿ ಸೂಚಿಸಿದೇ  ‘ನಾನು ನನ್ನ ಆಧಾರ್ ಕಾರ್ಡ್ ಫೋಟೋನ ಯಾರಿಗೂ ತೋರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಈಗ ಉದ್ದೇಶಪೂರ್ವಕವಾಗಿ ನಟಿ ಇದನ್ನು ತೋರಿಸಿದ್ದಾರೋ, ಅಥವಾ ಕಾಕತಾಳಿಯವೋ ಗೊತ್ತಿಲ್ಲ. ಒಟ್ಟಿನಲ್ಲಿ ಆಧಾರ್‍‌  ಕಾರ್ಡ್ ಫೋಟೋ ರಿವೀಲ್‌ ಆಗಿದೆ.

Tap to resize

Latest Videos

13 ಇಸ್ಲಾಂ ರಾಷ್ಟ್ರಗಳಿಂದ ಆಗುವುದೇನು? 'ಭವಿಷ್ಯ ಮಾಲಿಕಾ'ದಲ್ಲಿ 2030 ವರೆಗಿನ ಘನಘೋರ ಸತ್ಯಗಳು!

ಸೆಲೆಬ್ರಿಟಿಯಾದರೇನು, ಸಾಮಾನ್ಯ ಜನರಾದರೇನು? ಆಧಾರ್‍‌ ಕಾರ್ಡ್, ರೇಷನ್ ಕಾರ್ಡ್ , ವೋಟರ್‍‌ ಐಡಿ ಇಂಥ ಕಾರ್ಡ್ ಗಳಲ್ಲಿ ಇರುವ   ಫೋಟೋ ಮಾತ್ರ ಯಾರೂ ನೋಡಲು ಆಗದೇ ಇರುವಂಥದ್ದು. ಅದರಲ್ಲಿಯೂ ಆಧಾರ್‍‌ ಒಂದು ಹೆಜ್ಜೆ ಮುಂದಕ್ಕೆ ಹೋಗಿರುತ್ತದೆ. ಅದೇ ರೀತಿ ಈ ಫೋನ್‌ ಹಿಂದುಗಡೆ ಇರುವ ಶ್ರದ್ಧಾ ಅವರ ಫೋಟೋ ಮಾತ್ರ ಕೆಟ್ಟದ್ದಾಗಿ ಬಂದಿರುವುದನ್ನು ನೋಡಬಹುದಾಗಿದೆ. ಇನ್ನು ಶ್ರದ್ಧಾ ಕಪೂರ್ ಸ್ತ್ರೀ ಸಕ್ಸಸ್‌ ಖುಷಿಯ ಬೆನ್ನಲ್ಲೇ  ಈಚೆಗೆ,  ತಿಂಗಳಿಗೆ 6 ಲಕ್ಷ ರೂ. ಬಾಡಿಗೆಗೆ ಐಷಾರಾಮಿ ಬಂಗಲೆ ಪಡೆದುಕೊಂಡಿದ್ದಾರೆ. ಆಸ್ತಿ ದಾಖಲಾತಿ ಸಂಸ್ಥೆ ಝಪ್ಕಿ ಪ್ರಕಾರ, ಶ್ರದ್ಧಾ ಕಪೂರ್ ಮುಂಬೈನ ಜುಹುದಲ್ಲಿ ಈ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ಒಂದು ವರ್ಷಕ್ಕೆ ಈ ಅಪಾರ್ಟ್‌ಮೆಂಟ್ ತೆಗೆದುಕೊಂಡಿದ್ದು, ಮುಂಗಡವಾಗಿ 72 ಲಕ್ಷ ರೂ. ಕೊಟ್ಟಿದ್ದಾರೆ.

ಇನ್ನು ನಟಿಯ ಚಿತ್ರದ ಬಗ್ಗೆ ಬರುವುದಾದರೆ, ಸದ್ಯ ಸಿನಿಮಾವೊಂದರಲ್ಲಿ ನಟಿಸಲು ಶ್ರದ್ಧಾ ಕಪೂರ್ 5-7 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಮಾತ್ರವಲ್ಲದೇ ಮಾಡೆಲಿಂಗ್ ಮತ್ತು ಜಾಹೀರಾತುಗಳ ಮೂಲಕವೂ  ಆದಾಯ ಮಾಡುತ್ತಿದ್ದಾರೆ. ಇಷ್ಟಿದ್ದರೂ ನಟಿ ಇಲ್ಲಿಯವರೆಗೆ ಟೊಯೊಟಾ ಫಾರ್ಚೂನರ್‌ನಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಕೆಲ ದಿನಗಳ ಹಿಂದೆ  ಸಾಧಾರಣ ಮಾರುತಿ ಸುಜುಕಿ ಸ್ವಿಫ್ಟ್  ಚಾಲನೆ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿತ್ತು.  ಇದು ನಟಿಯ ಸಿಂಪ್ಲಿಸಿಟಿ ಎಂದು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. 

ಸಾವೇ ಅಂತಿಮ ಆಯ್ಕೆಯಾಗಿತ್ತು, ಕುಡಿತ ಕಲಿತೆ... ಉಮಾಶ್ರಿ ಜೀವನದ ಮುಳ್ಳಿನ ಹಾದಿ ಅವರ ಮಾತಲ್ಲೇ ಕೇಳಿ...

 
 
 
 
 
 
 
 
 
 
 
 
 
 
 

A post shared by S♡. (@shraddha___shruti)

click me!