ಆನೇ ನಾಡಿಗೆ ಪ್ರವೇಶಿಸುತ್ತಿದ್ದಂತೆ ಪಟಾಕಿ, ಬೆಂಕಿ, ಕಲ್ಲುಗಳ ಮೂಲಕ ಆನೆಯನ್ನು ಓಡಿಸುವ ಬೆದರಿಸುವ ಪ್ರಯತ್ನ ನಡೆಸಲಾಗುತ್ತದೆ. ಆದರೆ ಆನೆ ಅತ್ಯಂತ ಪ್ರೀತಿಯ ಪ್ರಾಣಿ, ತಾನಾಗಿ ಯಾರನ್ನೂ ನೋಯಿಸಲು ಮುಂದಾಗುವುದಿಲ್ಲ. ಆನೆಯ ಪ್ರೀತಿ ದಿ ಎಲಿಫೆಂಟ್ ವಿಸ್ಫರ್ಸ್ ಸಾಕ್ಷ್ಯಚಿತ್ರದ ಮೂಲಕ ಅನಾವರಣಗೊಂಡಿದೆ. ಇದು ಮದುಮಲೈ ಅರಣ್ಯಾಧಿಕಾರಿಯ ಮಾತು. ಏಷ್ಯಾನೆಟ್ ನ್ಯೂಸ್ ಜೊತೆ ಆಸ್ಕರ್ ಗೆದ್ದ ಸಾಕ್ಷ್ಯಚಿತ್ರ, ಆನೆ, ಬೊಮ್ಮನ್, ಬೆಳ್ಳಿ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಮದುಮಲೈ(ಮಾ.13): ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯ ಚಿತ್ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆನೆ, ಆನೆ ಮರಿಗಳನ್ನು ಆರೈಕೆ ಮಾಡುವು, ಮಾವುತರ ಜೀವನ, ಆನೆ ಹಾಗೂ ಮಾನವನ ನಡುವಿನ ಪ್ರೀತಿ ಸೇರಿದಂತೆ ಹಲವು ವಿಚಾರಗಳು ಈ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯ ಚಿತ್ರದಲ್ಲಿ ಅನಾವರಣಗೊಂಡಿದೆ. ಕಾಡು ಪ್ರಾಣಿ ಆನೆಯನ್ನು ಸಂರಕ್ಷಿಸಬೇಕಾದ ಅಗತ್ಯತೆಯನ್ನೂ ಈ ಸಾಕ್ಷ್ಯಚಿತ್ರ ಒತ್ತಿ ಹೇಳಿದೆ. ಮದುಮೈಲೇ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಈ ಚಿತ್ರ ಚಿತ್ರೀಕರಿಸಲಾಗಿದೆ. ಮದುಮಲೈಯ ಎಲ್ಲಾ ಅರಣ್ಯ ಸಿಬ್ಬಂದಿಗಳ ಕೊಡುಗೆ ಈ ಚಿತ್ರಕ್ಕಿದೆ. ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ಚಿತ್ರದ ಕುರಿತು ಮದುಮಲೈ ಅರಣ್ಯಾಧಿಕಾರಿ ವೆಂಕಟೇಶ್ ಏಷ್ಯಾನೆಟ್ ನ್ಯೂಸ್ ಜೊತೆ ಮಾತನಾಡಿದ್ದಾರೆ. ಹಲವು ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ಈ ಸಾಕ್ಷ್ಯಚಿತ್ರದ ನಿರ್ದೇಶಕಿ ಕಾರ್ತಿಕಿ ಗೋನ್ಸಾಲ್ವೇಸ್ ಮದುಮಲೈ ಕೇಂದ್ರಕ್ಕೆ ಹೆಚ್ಚಿನ ಸಮಯ ಭೇಟಿ ನೀಡುತ್ತಿದ್ದರು. ಹೀಗಾಗಿ ಮದುಮಲೈ ಶಿಬಿರದಲ್ಲಿನ ಎಲ್ಲಾ ಚುಟುವಟಿಕೆ, ಆನೆಗಳ ಆರೈಕೆ ಕುರಿತ ಸಂಪೂರ್ಣ ಮಾಹಿತಿ ಅವರಿಗಿತ್ತು. ಅರಣ್ಯದಲ್ಲಿ ಅನಾಥವಾದ ಆನೆ ಮನೆ ಶಿಬಿರಕ್ಕೆ ಬಂದಿರುವ ಮಾಹಿತಿ ಪಡೆದ ಕಾರ್ತಿಕಿ, ಸರ್ಕಾರದಿಂದ ಎಲ್ಲಾ ಅನುಮತಿ ಪಡೆದು ಚಿತ್ರ ನಿರ್ದೇಶಕ್ಕೆ ಮುಂದಾದರು. ಕಾರ್ತಿಕ್ ಗೋನ್ಸಾಲ್ವೇಸ್ ಊಟಿ ಮೂಲದವರಾಗಿರುವ ಕಾರಣ ಆನೆ ಹಾಗೂ ಆನೆ ಮರಿ ಕುರಿತು ತಿಳಿದುಕೊಂಡಿದ್ದಾರೆ ಎಂದು ಡಿಎಫ್ಒ ವೆಂಕಟೇಶ್ ಹೇಳಿದ್ದಾರೆ.
ಹೆಚ್ಚಾಗಿ ಆನೆಮರಿಗಳು ಧರ್ಮಪುರಿ ಹಾಗೂ ಸತ್ಯಮಂಗಲ ಸಂರಕ್ಷಿತ ಅರಣ್ಯಪ್ರದೇಶದಲ್ಲಿರುತ್ತದೆ. ಆದರೆ ರಘು ಹಾಗೂ ಬೊಮ್ಮಿ ಹೆಸರಿನ ಆನೆಮರಿಗಳು ಮದುಮಲೈ ಭಾಗದಲ್ಲಿತ್ತು. ಈ ಸಾಕ್ಷ್ಯಚಿತ್ರದಲ್ಲಿರುವ ರಘು ಆನೆ ಮನೆ ಇದೀಗ ದೊಡ್ಡದಾಗಿದೆ ಎಂದು ವೆಂಕಟೇಶ್ ಹೇಳಿದ್ದಾರೆ.
ಕಾರ್ತಿಕ್ ಗೋನ್ಸಾಲ್ವೇಸ್ ಈ ಸಾಕ್ಷ್ಯಚಿತ್ರದ ಬಹುತೇಕ ಭಾಗಗಳನ್ನು ಇದೇ ಶಿಬಿರದಲ್ಲಿ ಚಿತ್ರೀಕರಿಸಿದ್ದಾರೆ. ಅರಣ್ಯ ಇಲಾಖೆ ಹಲವು ಸಿಬ್ಬಂದಿಗಳು ಆಕೆಗೆ ಸಾಕ್ಷ್ಯಚಿತ್ರ ಚಿತ್ರೀಕರಿಸಿಲು ನೆರವಾಗಿದ್ದಾರೆ. ಇದರ ಜೊತೆಗೆ ಆನೆಯ ಆರೈಕೆ, ಸೇರಿದಂತೆ ಕಾಡು ಪ್ರಾಣಿಗಳ ಸಂರಕ್ಷಣೆ ಕುರಿತ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಈ ಚಿತ್ರದ ಮೂಲಕ ಮದುಮಲೈ ಶಿಬಿರದಲ್ಲಿ ಆನೆಯ ಆರೈಕೆ ಹೇಗೆ ಮಾಡಲಾಗುತ್ತದೆ. ಯಾವ ರೀತಿ ಕಾಳಜಿವಹಿಸಲಾಗುತ್ತದೆ ಅನ್ನೋದು ಇದೀಗ ಜನರಿಗೆ ತಿಳಿಯುವಂತಾಯಿತು ಎಂದು ವೆಂಕಟೇಶ್ ಹೇಳಿದ್ದಾರೆ.
ಅನಾಥ ಆನೆ ಮರಿಗಳನ್ನು ಮಕ್ಕಳಂತೆ ಸಾಕಿದ ಬೊಮ್ಮನ್-ಬೆಳ್ಳಿ ದಂಪತಿಯ ಸ್ಫೂರ್ತಿದಾಯಕ ಜೀವನಕ್ಕೆ 'ಆಸ್ಕರ್' ಗರಿ
ಈ ಚಿತ್ರದಲ್ಲಿರುವ ಬೊಮ್ಮನ್ ನಮ್ಮ ಉದ್ಯೋಗಿ. ಆನೆ, ಆನೆಮರಿಗಳನ್ನು ಆರೈಕೆ ಮಾಡುವ, ಕಾಡಿನಲ್ಲಿ ಅನಾಥವಾಗುವ ಆನೆ ಮರಿಗಳನ್ನು ಮತ್ತೆ ತಾಯಿ ಬಳಿ ಸೇರಿಸುವ ವಿಶೇಷ ಕಲೆ ಬೊಮ್ಮನ್‌ಗೆ ಕರಗತವಾಗಿದೆ. ಇತ್ತೀಚೆಗೆ ಬೊಮ್ಮನ್ ಹಾಗೂ ನಾನು ಧರ್ಮಪುರಿಯಲ್ಲಿ ಜನಿಸಿದ ಆನೆ ಮರಿಯೊಂದನ್ನು ಅನಾಥವಾಗಿರುವುದು ಪತ್ತೆ ಹಚ್ಚಿದ್ದೆವು. ಬೊಮ್ಮನ್ ಆನೆ ಮರಿಯ ತಾಯಿ ಹುಡುಕಾಟ ಆರಂಭಿಸಿದ್ದರು. ಕೊನೆಗೂ ತಾಯಿಯನ್ನು ಹುಡುಕುವಲ್ಲಿ ಬೊಮ್ಮನ್ ಯಶಸ್ವಿಯಾದರು. ಸಾಮಾನ್ಯವಾಗಿ ತಾಯಿ ಆನೆ ಮನೆ ಮನುಷ್ಯರನ್ನು ಹತ್ತಿರಕ್ಕೆ ಬಿಡುವುದಿಲ್ಲ. ಕಾರಣ ಆನೆ ಮರಿ ಮೇಲೆ ದಾಳಿಯಾಗುವ ಭೀತಿ. ಆದರೆ ಬೊಮ್ಮನ್ ಈ ಆನೆ ಮರಿಯ ಜೊತೆ ಧೈರ್ಯವಾಗಿ ಸಾಗಿ ತಾಯಿ ಆನೆ ಜೊತೆ ಸೇರಿಸಿಬಿಟ್ಟಿದ್ದರು. ಇಂತಹ ಹಲವು ಘಟನೆಗಳಿವೆ ಎಂದು ವೆಂಕಟೇಶ್ ಹೇಳಿದ್ದಾರೆ.
ಈ ಸಾಕ್ಷ್ಯಚಿತ್ರದಿಂದ ಮದುಮೈಲೇ ಶಿಬಿರ 115 ವರ್ಷ ಹಳೇಯ ಕೇಂದ್ರವಾಗಿದೆ. ಈ ಚಿತ್ರದಿಂದ ಅರಣ್ಯ ಸಿಬ್ಬಂದಿ,ಮಾವುತರ ಕಷ್ಟ ಏನೂ ಅನ್ನೋದು ಜನರಿಗೆ ಅರ್ಥವಾಗಿದೆ ಎಂದರು.
ಬೆಳ್ಳಿ ನಮ್ಮ ಶಿಬಿರದಲ್ಲಿರುವ ಅರೆಕಾಲಿಕ ಉದ್ಯೋಗಿಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಬೆಳ್ಳಿ ಪತಿ ಹುಲಿ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇದೀಗ ಬೊಮ್ಮನ್ ಜೊತೆಗೂಡಿ ಆನೆಯ ಆರೈಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಆನೆ ಡೇಂಜರಸ್ ಪ್ರಾಣಿ ಎಂದೇ ಜನರು ಭಾವಿಸಿದ್ದಾರೆ. ಆದರೆ ಈ ಸಾಕ್ಷ್ಯಚಿತ್ರದ ಮೂಲಕ ಆನೆಯ ಪ್ರೀತಿ ಆಳ ಆರ್ಥವಾಗಿದೆ. ಕಾಡು ಪ್ರಾಣಿ ಆನೆಯನ್ನು ಸಂರಕ್ಷಿಸುವ ಅಗತ್ಯತೆ ಇದೆ. ಈ ಕಾರಿನ ಸಂಪತ್ತು ಎಂದು ವೆಂಕಟೇಶ್ ಹೇಳಿದ್ದಾರೆ.