ಆಕ್ಷನ್ ಹೀರೋ ಆಗ್ತಾರಂತೆ ಎಂಎಸ್ ಧೋನಿ: ಯಾವ ಸಿನಿಮಾ? ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಪತ್ನಿ ಸಾಕ್ಷಿ

Published : Jul 26, 2023, 12:41 PM IST
ಆಕ್ಷನ್ ಹೀರೋ ಆಗ್ತಾರಂತೆ ಎಂಎಸ್ ಧೋನಿ: ಯಾವ ಸಿನಿಮಾ? ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಪತ್ನಿ ಸಾಕ್ಷಿ

ಸಾರಾಂಶ

ಕ್ರೆಕೆಟರ್ ಎಂಎಸ್ ಧೋನಿ ಸದ್ಯ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ನಡುವೆ ಧೋನಿ ಹೀರೋ ಆಗಿ ನಟಿಸುವ ಬಗ್ಗೆ ಪತ್ನಿ ಸಾಕ್ಷಿ ಬಹಿರಂಗ ಪಡಿಸಿದ್ದಾರೆ.  

ಖ್ಯಾತ ಕ್ರಿಕೆಟಿಗ ಎಂಎಸ್ ಧೋನಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಧೋನಿ ನಿರ್ಮಾಪಕರಾಗಿ ಹೊಸ ಜರ್ನಿ ಪ್ರಾರಂಭಿಸಿದ್ದಾರೆ. ಧೋನಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾಗೆ 'ಎಲ್‌ಜಿಎಂ' ( ಲೆಟ್ಸ್ ಗೆಟ್ ಮ್ಯಾರೀಡ್) ಎಂದು ಟೈಟಲ್ ಇಡಲಾಗಿದ್ದು ಈಗಾಗಲೇ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಈ ಚಿತ್ರಕ್ಕೆ ರಮೇಶ್ ತಮಿಳ್ಮಣಿ ನಿರ್ದೇಶನ ಮಾಡಿದ್ದಾರೆ. ನದಿಯಾ, ಹರೀಶ್ ಕಲ್ಯಾಣ್​, ಆರ್​ಜೆ ವಿಜಯ್, ಯೋಗಿ ಬಾಬು ಸೇರಿ ಅನೇಕರು ನಟಿಸಿದ್ದಾರೆ. ಸದ್ಯ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿರುವ ಧೋನಿ ಹೀರೋ ಆಗುವ ಕನಸು ಕಂಡಿದ್ದಾರಂತೆ. ಈ ಬಗ್ಗೆ ಧೋನಿ ಪತ್ನಿ ಸಾಕ್ಷಿ ಬಹಿರಂಗ ಪಡಿಸಿದ್ದಾರೆ. 

ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಧೋನಿ ಪತ್ನಿ ಸಾಕ್ಷಿ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಈ ಸಿನಿಮಾದಲ್ಲಿ ಧೋನಿ ಕೂಡ ನಟಿಸಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಾಕ್ಷಿ ಅವರಿಗೆ ಕ್ಯಾಮರಾ ಮುಂದೆ ಯಾವುದೇ ಭಯವಿಲ್ಲ ಎಂದು ಹೇಳಿದ್ದಾರೆ. 'ಎಲ್ಲವೂ ಒಳ್ಳೆಯದಾದರೆ ಅವರು ಖಂಡಿತ ಸಿನಿಮಾದಲ್ಲಿ ನಟಿಸುತ್ತಾರೆ. ಅವರಿಗೆ ಕ್ಯಾಮರಾ ಅಂದರೆ ಯಾವುದೇ ಭಯವಿಲ್ಲ. 2006ರಿಂದ  ಜಾಹಿರಾತುಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಕ್ಯಾಮರಾ ಎಂದರೆ ಹೆದರಲ್ಲ. ಎಲ್ಲಾ ಚೆನ್ನಾಗಾದರೆ ಅದನ್ನು ಮಾಡಬಹುದು' ಎಂದು ಹೇಳಿದ್ದಾರೆ. 

ಆಕ್ಷನ್ ಸಿನಿಮಾಗಳಿಗೆ ಸೂಕ್ತಾ ಆಗುತ್ತಾರೆ ಎಂದು ಸಾಕ್ಷಿ ಹೇಳಿದರು. 'ಯಾವಾಗಲೂ ಅವರು ಆಕ್ಷನ್‌ನಲ್ಲೇ ಇರುತ್ತಾರೆ. ನೀವು ಯಾವುದನ್ನು ಆಯ್ಕೆ ಮಾಡುತ್ತೀರಿ? ಎಂಎಸ್ ಧೋನಿಯನ್ನು ಹೀರೋ ಆಗಿಟ್ಟುಕೊಂಡು ಸಿನಿಮಾ ಮಾಡುವ ಪ್ಲಾನ್ ಮಾಡಿದರೆ ಅದು ಕೇವಲ ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಆಗಿರುತ್ತದೆ. ಒಳ್ಳೆಯ ಕಥೆ ಮತ್ತು ಉತ್ತಮ ಸಂದೇಶವುಳ್ಳ ಪಾತ್ರ ಬಂದರೆ ಎಂಎಸ್ ಧೋನಿ ಸಿನಿಮಾದಲ್ಲಿ ನಟಿಸುವ ಬಗ್ಗೆ ಯೋಚಿಸುತ್ತಾರೆ' ಎಂದಿದ್ದಾರೆ. 

ಧೋನಿ ಮನೆಯಲ್ಲಿನ ಬೈಕ್-ಕಾರು ಕಲೆಕ್ಷನ್‌ಗೆ ಮನಸೋತ ವೆಂಕಟೇಶ್ ಪ್ರಸಾದ್‌..!

ನಿರ್ದೇಶಕರು ಮಾತನಾಡಿ, 'ಅವರು ನಿಜ ಜೀವನದ ಸೂಪರ್ ಹೀರೋ, ಮತ್ತು ನಾನು ಅವರನ್ನು ಸೂಪರ್ ಹೀರೋ ಚಿತ್ರದಲ್ಲಿ ನೋಡಲು ಬಯಸುತ್ತೇನೆ' ಎಂದು ಹೇಳಿದರು.

ನಿರ್ದೇಶಕ ರಮೇಶ್ ಮಾತನಾಡಿ, 'ಸಾಕ್ಷಿ ಅವರು ನಾಯಕಿ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟಾಗಿದ್ದರು. ತಮಿಳು ಮಾತನಾಡುವ ನಾಯಕಿ ಇರಬೇಕು ಎಂದು ಬಯಸಿದ್ದರು. ಧೋನಿ ಅವರು ತುಂಬಾ ಬೆಂಬಲ ನೀಡಿದರು. ಎಲ್ಲಕ್ಕಿಂತ ಹೆಚ್ಚಾಗಿ, ನಾವು ಮಾಡಿದ್ದನ್ನು ನಾವು ಇಷ್ಟಪಡಬೇಕು ಎಂದು ಧೋನಿ ನನಗೆ ಹೇಳಿದರು. ಉಳಿದೆಲ್ಲವೂ ನಂತರ ಬರುತ್ತದೆ. ಆ ರೀತಿಯಲ್ಲಿ ಎಲ್‌ಜಿಎಮ್‌ನಲ್ಲಿ ಏನು ಮಾಡಿದ್ದೀವಿ ಎಂಬುದರ ಬಗ್ಗೆ ನನಗೆ ಹೆಮ್ಮೆ ಇದೆ. ಧೋನಿ ಇದುವರೆಗೆ ಚಿತ್ರವನ್ನು ಮೂರು ಬಾರಿ ವೀಕ್ಷಿಸಿದ್ದಾರೆ' ಎಂದು ಹೇಳಿದ್ದಾರೆ.

ಎಂ.ಎಸ್ ಧೋನಿ ಪತ್ನಿ ಸಾಕ್ಷಿ ಈ ಸೌತ್‌ ಸ್ಟಾರ್ ನಟನ ಬಿಗ್ ಫ್ಯಾನ್ ಅಂತೆ: ಯಾರದು?

ಮಹೇಂದ್ರ ಸಿಂಗ್ ಧೋನಿ ತಮಿಳುನಾಡಿನೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ, ಅಲ್ಲಿ ಅವರನ್ನು ಪ್ರೀತಿಯಿಂದ ಥಾಲಾ ಎಂದು ಕರೆಯಲಾಗುತ್ತದೆ. ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಒಡನಾಟದಿಂದ ಧೋನಿ ಅವರಿಗೆ ಈ ಹೆಸರು ಬಂದಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?