ಹಸ್ತಮೈಥುನದಿಂದ (masturbation) ಆನಂದ ಹೊಂದಲು ಯಾವುದೇ ನಾಚಿಕೆ ಪಟ್ಟುಕೊಳ್ಳಬೇಕಿಲ್ಲ. ಇದು ಯಾವುದೇ ಲೈಂಗಿಕ ತಜ್ಞರ ಮಾತಲ್ಲ. ಬಾಲಿವುಡ್‌ನ ಕೆಲ ನಟಿಯರ ಪ್ರತಿಪಾದನೆ. ಯಾರು, ಯಾವಾಗ ಏನು ಹೇಳಿದರು ಇಲ್ಲಿ ನೋಡಿ.
ಒಬ್ಬನೇ/ಳೇ ಇರುವಾಗ ದೇಹದ ಲೈಂಗಿಕ ಆಸೆ, ಬಯಕೆ ತೀರಿಸಿಕೊಳ್ಳುವ ಒಂದು ವಿಧಾನ ಹಸ್ತಮೈಥುನ (Masturbation). ಅದೊಂದು ಸಂತೋಷದ ಬುಗ್ಗೆ. ಆದರೆ ಎಷ್ಟೋ ಮಂದಿ ತುಂಬಾ ವಿದ್ಯಾವಂತರಿಗೇ ಆ ಬಗ್ಗೆ ಅರಿವು ಇಲ್ಲ. ಬಾಲಿವುಡ್‌ನ ನಟ- ನಟಿಯರಿಗೆ ಈ ಬಗ್ಗೆ ಎಷ್ಟು ಅರಿವು ಇರಬಹುದು ಎಂದು ಪರೀಕ್ಷಿಸಲು ಹೆಚ್ಚು ಹುಡುಕಾಡಬೇಕಿಲ್ಲ. ಈ ಹಿಂದಿನ ಹಲವು ಘಟನೆಗಳಲ್ಲಿ ಕೆಲವು ನಟಿಯರು ನಡೆದುಕೊಂಡ ರೀತಿಯನ್ನು ನೋಡಿದರೆ ಹಸ್ತಮೈಥುನದ ಬಗ್ಗೆ ಇವರೇನು ಹೇಳಿದ್ದಾರೆ, ಇದರ ಬಗ್ಗೆ ಇವರ ಜ್ಞಾನ ಎಷ್ಟಿದೆ ಎಂದು ಕಾಣುತ್ತದೆ.
ಕಂಗನಾ ರನಾವತ್
ಏಕ್ತಾ ಕಪೂರ್ ನಡೆಸಿಕೊಡುವ 'ಲಾಕ್ ಅಪ್' ಎಂಬ ಕಾರ್ಯಕ್ರಮದಲ್ಲಿ ಒಮ್ಮೆ ಕಂಗನಾ ಕಾಣಿಸಿಕೊಂಡಿದ್ದಳು. ಆಗ ಅಲ್ಲಿಯೇ ಇದ್ದ ಇನ್ನೊಬ್ಬ ನಟಿ ಮಂದನಾ ಕರೀಮಿ, ಹಸ್ತಮೈಥುನದ ಬಗ್ಗೆ ತಪ್ಪು ಕಲ್ಪನೆ ಹಂಚಿಕೊಳ್ಳುವಂಥ ಮಾತು ಆಡಿದ್ದಳು. ಆಗ ಅವಳನ್ನು ಸರಿಪಡಿಸಿದ ಕಂಗನಾ, ಹಸ್ತಮೈಥುನದ ಬಗ್ಗೆ ಸರಿಯಾದ ಮಾಹಿತಿ ನೀಡಿ, ಆ ಬಗ್ಗೆ ತನ್ನ ಜ್ಞಾನವನ್ನೆಲ್ಲ ಪ್ರದರ್ಶಿಸಿದ್ದಳು! ಹಸ್ತಮೈಥುನ ಮಾಡಿಕೊಳ್ಳುವುದರಲ್ಲಿ ಯಾವ ನಾಚಿಕೆ, ಪಾಪಪ್ರಜ್ಞೆ ಇರಬಾರದು ಎಂದು ತಿಳಿವಳಿಕೆ ನೀಡಿದ್ದಳು.
ಸ್ವರಾ ಭಾಸ್ಕರ್
ನಟಿ ಸ್ವರಾ ಭಾಸ್ಕರ್ ವೀರ್ ದಿ ವೆಡ್ಡಿಂಗ್ ಎಂಬ ಫಿಲಂನಲ್ಲಿ ಬೋಲ್ಡ್ ಆಗಿ ಹಸ್ತಮೈಥುನದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾಳೆ. ಇದನ್ನು ಆಕೆ ಹಲವು ಸಲ ಸಮರ್ಥಿಸಿಕೊಂಡಿದ್ದಾಳೆ ಕೂಡ. ಇದನ್ನು ಟ್ರೋಲ್ ಮಾಡಿದವರಿಗೆ ಸಕತ್ತಾಗಿಯೇ ತಿರುಗೇಟ ಕೊಟ್ಟಿದ್ದಾಳೆ. ಹಸ್ತಮೈಥುನ ಅಪರಾಧವಲ್ಲ. ಅದನ್ನು ವ್ಯಕ್ತಿಯ ಖಾಸಗಿ ಕ್ರಿಯೆ, ಅದರ ಬಗ್ಗೆ ನಿಮ್ಮ ಸಂಗಾತಿಗೆ, ನಿಮ್ಮ ಅಪ್ಪ ಅಮ್ಮನಿಗೆ ನೀವು ಹೇಳಬೇಕಾಗಿಲ್ಲ. ನೀವು ದಿನಾ ಟಾಯ್ಲೆಟ್‌ಗೆ ಹೋಗಿ ಬಂದುದನ್ನು ಅವರಿಗೆ ಹೇಳ್ತೀರಾ? ಇಲ್ಲ ತಾನೆ? ಹಾಗೆಯೇ ಇದು ಕೂಡ'' ಎಂದಿದ್ದಾಳೆ. ಹಾಗೆ ಹೇಳುವ ಮೂಲಕ ಗಂಡ- ಹೆಂಡತಿ ಕೂಡ ಪ್ರತ್ಯೇಕವಾಗಿ ಹಸ್ತಮೈಥುನ ಮಾಡಿಕೊಳ್ಳಬಹುದು ಎಂದು ಸಮರ್ಥಿಸಿದ್ದಾಳೆ.
ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ; ರಾಜಕಾರಣಿ ಮಗನೊಂದಿಗಿನ ಸಂಬಂಧದ ಗುಟ್ಟು ಬಿಚ್ಚಿಟ್ಟ ಶೆರ್ಲಿನ್ ಚೋಪ್ರಾ
ಕಿಯಾರಾ ಅಡ್ವಾಣಿ
ನೆಟ್‌ಪ್ಲಿಕ್ಸ್‌ನ 'ಲಸ್ಟ್ ಸ್ಟೋರೀಸ್'ನ ಮೊದಲ ಫಿಲಂನಲ್ಲಿ ಕಿಯಾರಾ ಆಡ್ವಾಣಿ ಒಂದು ಹಸ್ತಮೈಥುನದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾಳೆ. ಅದು ನಿಜಕ್ಕೂ ಹಸ್ತಮೈಥುನ ಅಲ್ಲ, ಬದಲಾಗಿ ವೈಬ್ರೇಟರ್‌ನಿಂದ ಪಡೆಯುವ ಆನಂದದ ದೃಶ್ಯ. ಇಲ್ಲಿ ಕಾಮಡಿ ಕೂಡ ಇದೆ. ಆದರೆ ಕಿಯಾರಾ ಅದನ್ನು ಸ್ವತಃ ಅನುಭವಿಸುತ್ತಿರುವಂತೆ ಚೆನ್ನಾಗಿ ಅನುಭವಿಸಿದ್ದಾಳೆ. ಇದರ ನಿರ್ದೇಶಕ ಕರಣ್ ಜೋಹರ್, ನಿನ್ನಷ್ಟಕ್ಕೇ ಹೋಂವರ್ಕ್ ಮಾಡಿಕೊಂಡು ಬಂದು ಅಭಿನಯಿಸು ಎಂದು ಹೇಳಿದ್ದನಂತೆ. ಅಂದರೆ ಈಕೆ ಸಾಕಷ್ಟು ಹೋಂವರ್ಕ್ ಮಾಡಿರಬಹುದು ಎಂದು ನಾವು ಊಹಿಸಲು ಅಡ್ಡಿಯಿಲ್ಲ!
ರಣಬೀರ್ ಕಪೂರ್
ಇವನು ಹಿಂದೊಮ್ಮೆ ತನ್ನ ಲೈಂಗಿಕ ಅಭ್ಯಾಸಗಳ ಬಗ್ಗೆ ಹೇಳಿಕೊಂಡಿದ್ದ. ತಾನು ತನ್ನ ಹದಿನೈದನೇ ವರ್ಷದಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದೆ. ಆದರೆ ಪ್ರೀತಿ ಇಲ್ಲದೆ ಮಾಡುವ ಸೆಕ್ಸು ಅದು ಹಸ್ತಮೈಥುನ ಇದ್ದ ಹಾಗೆ. ಅದಕ್ಕೂ ಹಸ್ತಮೈಥುನಕ್ಕೂ ವ್ಯತ್ಯಾಸವಿಲ್ಲ. ಆಗ ಪ್ರೀತಿ ಪ್ರೇಮ ಗೊತ್ತಿರಲಿಲ್ಲ. ಬರೀ ದೇಹದ ಮಾತು ಕೇಳುತ್ತಿದ್ದೆ ಎಂದು ಹೇಳುವ ಮೂಲಕ ಸೆಕ್ಸು ಹಾಗೂ ಹಸ್ತಮೈಥುನ ಎರಡನ್ನೂ ಯಥೇಚ್ಛವಾಗಿ ಮಾಡಿದ್ದನ್ನು ಒಪ್ಪಿಕೊಂಡಿದ್ದ.
ಸುಷ್ಮಿತಾ ಸೇನ್
ಮಹಿಳೆ ಒಬ್ಬಂಟಿಯಾಗಿರಬಹುದು, ಸಿಂಗಲ್ ಪೇರೆಂಟ್ ಆಗಿರಬಹುದು, ಲಿವ್ ಇನ್ ಸಂಬಂಧದಲ್ಲಿ ಇರಬಹುದು ಎಂದು ಈಕೆ ಪ್ರತಿಪಾದಿಸುತ್ತಾಳೆ. ಮಹಿಳೆ ಲೈಂಗಿಕ ಆನಂದ ಹೊಂದಲು ಸ್ವತಂತ್ರಳು, ಅದಕ್ಕೆ ಆಕೆ ಸಂಗಾತಿಯನ್ನು ಅವಲಂಬಿಸಬೇಕಾಗಿಲ್ಲ ಎಂದು ಈಕೆ ಹೇಳುವ ಮೂಲಕ ಹಸ್ತಮೈಥುನ ಮಹಿಳೆಯ ಜೀವನದ ಅನಿವಾರ್ಯ ಅಂಗ ಆಗಬಹುದು ಎಂದು ಪ್ರತಿಪಾದಿಸಿದ್ದಾಳೆ.
ಇಂಟರ್‌ನೆಟ್‌ಗೆ ಬೆಂಕಿ ಹಂಚಿದ ಇಶಾ ಗುಪ್ತಾ ಲುಕ್: ಇದು ಹಾಟ್‌ನೆಸ್ ಅಲ್ಲ, ಶೇಮ್‌ಲೆಸ್ ಎಂದ ನೆಟ್ಟಿಗರು!