ನಾನೇನು ಕಿವುಡಿ ಅಲ್ಲ...: ಪಾಪರಾಜಿಗಳನ್ನು ನೋಡಿ ಸಿಡುಕಿದ ಜಯಾ ಬಚ್ಚನ್, ವಿಡಿಯೋ ವೈರಲ್

Published : Jul 26, 2023, 10:59 AM IST
ನಾನೇನು ಕಿವುಡಿ ಅಲ್ಲ...: ಪಾಪರಾಜಿಗಳನ್ನು ನೋಡಿ ಸಿಡುಕಿದ ಜಯಾ ಬಚ್ಚನ್, ವಿಡಿಯೋ ವೈರಲ್

ಸಾರಾಂಶ

ನಾನೇನು ಕಿವುಡಿ ಅಲ್ಲ...: ಪಾಪರಾಜಿಗಳನ್ನು ನೋಡಿ ಹಿರಿಯ ನಟಿ ಜಯಾ ಬಚ್ಚನ್ ಗರಂ ಆಗಿದ್ದಾರೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.  

ಬಹುನಿರೀಕ್ಷೆಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಗ್ರ್ಯಾಂಡ್ ರಿಲೀಸ್‌ಗೂ ಮುಂಚಿತವಾಗಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾತಂಡ ವಿಶೇಷ  ಪ್ರದರ್ಶನ ಹಮ್ಮಿಕೊಂಡಿತ್ತು. ಜುಲೈ 25ರಂದು ಮುಂಬೈನಲ್ಲಿ ವಿಶೇಷ ಪ್ರದರ್ಶನ ನಡೆದಿದ್ದು ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು. ಹಿರಿಯ ನಟಿ ಜಯಾಬಚ್ಚನ್ ಕೂಡ ಭಾಗಿಯಾಗಿದ್ದರು. ಜಯಾ ಬಚ್ಚನ್ ಜೊತೆ ಪುತ್ರಿ ಶ್ವೇತಾ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್ ಜೊತೆ ವಿಶೇಷ ಪ್ರದರ್ಶನಕ್ಕೆ ಹಾಜರಾಗಿದ್ದರು. ಈ ವೇಳೆ ಪಾಪರಾಜಿಗಳು ಜಯಾಬಚ್ಚನ್ ಅವರನ್ನು ಮುತ್ತಿಕೊಂಡರು. ಪೋಸ್ ನೀಡುವಂತೆ ಕೇಳಿಕೊಂಡರು. ಆಗ ಜಯಬಚ್ಚನ್ ಸಿಡಿಮಿಡಿಗೊಂಡಿದ್ದಾರೆ.    

ಪಾಪರಾಜಿಗಳು ಹಂಚಿಕೊಂಡ ವಿಡಿಯೋದಲ್ಲಿ ಜಯಾ ಬಚ್ಚನ್ ಕೆಂಪು ಬಣ್ಣದ ಡ್ರೆಸ್ ಧರಿಸಿ ಆಗಮಿಸಿದ್ದರು. ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ಜಯಾ ಬಚ್ಚನ್ ವಿಡಿಯೋ ವೈರಲ್ ಆಗಿದೆ. ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪಾಪರಾಜಿಗಳು ಪೋಸ್ ನೀಡುವಂತೆ ಕರೆದರು. ಪಾಪರಾಜಿಗಳು ಕರೆದನ್ನು ಕೇಳಿ 'ನಾನೇನು ಕಿವುಡಿ....' ಅಲ್ಲ ಎಂದು ಕಿವಿ ಮುಚ್ಚಿ ಹೇಳಿ ಸಿಡುಕುತ್ತಾ ಹೋದರು. ಜಯಾ ಬಚ್ಚನ್ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಅಮಿತಾಭ್ ಪತ್ನಿ ಜಯಾ ಬಚ್ಚನ್​ಗೆ ಧರ್ಮೇಂದ್ರ ಮೇಲೆ ಕ್ರಷ್​ ಇತ್ತಂತೆ! ಗುಟ್ಟು ಈಗಾಯ್ತು ರಟ್ಟು

ಜಯಾ ಬಚ್ಚನ್ ಮೊದಲು ಸಹಾ ಕ್ಯಾಮರಾ ಮುಂದೆ ಸಿಡುಕುತ್ತಾ ಹೋಗಿದ್ದ ವಿಡಿಯೋ ವೈರಲ್ ಆಗಿತ್ತು. ಕಂಗನಾ ರಣಾವತ್ ಅವರನ್ನು ಮಾತನಾಡಿಸಲು ಅನುಪಮ್ ಖೇರ್ ಹೇಳಿದರು. ಆಗ ಜಯಾ ಬಚ್ಚನ್ ಬೇಡ ಎನ್ನುತ್ತಾ ಅಲ್ಲಿಂದ ಹೊರಟು ಹೋಗಿದ್ದರು. ಆ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ನಾನು ಮಾತ್ರವಲ್ಲ, ಕೋಪ ಬಂದ್ರೆ ಐಶ್ವರ್ಯಾ ರೈ ಕೂಡ ರಿಯಾಕ್ಟ್‌ ಮಾಡ್ತಾಳೆ: ಅತ್ತೆ ಜಯಾ ಬಚ್ಚನ್

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಬಗ್ಗೆ 

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಮತ್ತು ಅಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಟೀಸರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕರಣ್ ಜೋಹರ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅನೇಕ ವರ್ಷಗಳ ಬಳಿಕ ಕರಣ್ ಜೋಹರ್ ಆಕ್ಷನ್ ಕಟ್ ಹೇಳಿದ್ದು ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಇನ್ನೂ ಗಲ್ಲಿ ಬಾಯ್ ಸಿನಿಮಾ ಬಳಿಕ ಅಲಿಯಾ ಮತ್ತು ರಣ್ವೀರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ  ಕಾಯುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?