Entertainment 2023: ಈ ವರ್ಷ ಗೂಗಲ್​ನಲ್ಲಿ ಹುಡುಕಾಟ ನಡೆಸಿದ ಟಾಪ್​-10 ಚಿತ್ರಗಳ ಡಿಟೇಲ್ಸ್​ ಇಲ್ಲಿದೆ...

By Suvarna News  |  First Published Dec 12, 2023, 4:50 PM IST

2023ರಲ್ಲಿ ಗೂಗಲ್​ನಲ್ಲಿ  ಹುಡುಕಾಟ ನಡೆಸಿದ ಟಾಪ್​-10 ಚಿತ್ರಗಳು ಯಾವುವು? ಓಟಿಟಿಯಲ್ಲಿ ಅತ್ಯಧಿಕ ಹುಡುಕಾಟ ನಡೆಸಿದ ಚಿತ್ರ ಹಾಗೂ ರಿಯಾಲಿಟಿ ಷೋಗಳು ಯಾವುವು? 
 


2023 ಮುಗಿಯಲು ಇನ್ನೇನು ಕೆಲವೇ ದಿನಗಳ ಬಾಕಿ ಇವೆ. ಇದೀಗ ಇಡೀ ವರ್ಷದಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕುವ ಸಮಯ. ಬಾಲಿವುಡ್​ ಮಟ್ಟಿಗೆ ಹೇಳುವುದಾದರೆ ಹಲವಾರು ಬ್ಲಾಕ್​ಬಸ್ಟರ್​ ಚಿತ್ರಗಳನ್ನು ಕೊಟ್ಟ ವರ್ಷವಿದು. ಈ ಸಮಯದಲ್ಲಿ ಗೂಗಲ್​ನಲ್ಲಿ ಜನರು ಅತಿ ಹೆಚ್ಚು ಹುಡುಕಾಟ ಮಾಡಿರುವ ಚಲನಚಿತ್ರಗಳಾವುವು ಎಂಬ ಬಗ್ಗೆ ದೃಷ್ಟಿ ಹಾಯಿಸೋಣ. ಇದೇ ವೇಳೆ ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೇ, ಓಟಿಟಿಯಲ್ಲಿ ಬಿಡುಗಡೆಯಾಗಿರುವ ಚಿತ್ರಗಳ ಪೈಕಿ ಗೂಗಲ್​ನಲ್ಲಿ ಹುಡುಕಾಟ ನಡೆಸಿದ ಟಾಪ್​-10 ಚಿತ್ರಗಳ ವಿವರಗಳೂ ಇಲ್ಲಿವೆ. ಭಾರತದಲ್ಲಿ ಈ ವರ್ಷ ಅತ್ಯಧಿಕ ಜನರು ಹುಡುಕಾಟ ನಡೆಸಿದ ಅಗ್ರ ಹತ್ತು ಸಿನಿಮಾಗಳ ಪಟ್ಟಿಯನ್ನು ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌ ಬಿಡುಗಡೆ ಮಾಡಿದ್ದು ಅದರ ಡಿಟೇಲ್ಸ್​ ಇಲ್ಲಿದೆ. 

 ಈ ಪಟ್ಟಿಯಲ್ಲಿ ಶಾರುಖ್‌ ಖಾನ್‌ ಅವರ ಬ್ಲಾಕ್‌ಬಸ್ಟರ್‌ ಸಿನಿಮಾ ಜವಾನ್‌ ಮತ್ತು ಪಠಾಣ್​ ಹಾಗೂ  ಸನ್ನಿ ಡಿಯೋಲ್‌ ಅವರ ಗದರ್‌ 2 ಅಗ್ರ ಸ್ಥಾನದಲ್ಲಿವೆ.  ಜೊತೆಗೆ  ಪ್ರಭಾಸ್‌ ನಟನೆಯ ಆದಿಪುರುಷ್‌, ಸಲ್ಮಾನ್‌ ಖಾನ್‌ ಅವರ ಟೈಗರ್‌ 3, ರಜನಿಕಾಂತ್‌ ನಟನೆಯ ಮೆಗಾ ಬ್ಲಾಕ್‌ಬಸ್ಟರ್‌  ಜೈಲರ್‌ ಚಿತ್ರವನ್ನೂ ಜನರು ಅತಿ ಹೆಚ್ಚು ಹುಡುಕಾಟ ಮಾಡಿದ್ದಾರೆ. ಕುತೂಹಲ ಸಂಗತಿಯೆಂದರೆ ಆದಿಪುರುಷ್​ ಚಿತ್ರಕ್ಕೆ ಇನ್ನಿಲ್ಲದ ಕೆಟ್ಟ ಕಮೆಂಟ್​ಗಳೇ ಬಂದಿದ್ದವು. ಇದರ ಹೊರತಾಗಿಯೂ ಟಾಪ್​-10 ಸ್ಥಾನ ಕಳಿಸಿದೆ. ಇಷ್ಟೇ ಅಲ್ಲದೇ  ದಳಪತಿ ವಿಜಯ್‌ ನಟನೆಯ ಲಿಯೊ ಮತ್ತು ವಾರೀಸು ಕೂಡ ಟಾಪ್​ 10 ಸ್ಥಾನ ಪಡೆದುಕೊಂಡಿವೆ. ಸ್ಯಾಂಡಲ್​ವುಡ್​​ನ ಯಾವುದೇ ಚಿತ್ರ ಟಾಪ್​-10ನಲ್ಲಿ ಕಾಣಿಸಿಕೊಂಡಿಲ್ಲ. 2022ರಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಇತಿಹಾಸ ಸೃಷ್ಟಿಸಿರೋದು ಗೊತ್ತೇ ಇದೆ. ಆದರೆ 2023ರಲ್ಲಿ ಗೂಗಲ್​ನಲ್ಲಿ ಅದನ್ನು ಸರ್ಚ್​ ಮಾಡಿದವರ ಸಂಖ್ಯೆ ಟಾಪ್​ 10 ಸ್ಥಾನದಲ್ಲಿ ಇಲ್ಲ. ಇನ್ನು  ಹಾಲಿವುಡ್‌ ಸಿನಿಮಾ ಬಗ್ಗೆ ಹೇಳುವುದಾದರೆ,  ಭಾರತದಲ್ಲಿ ಹೆಚ್ಚು ಸರ್ಚ್‌ ಆದ ಸಿನಿಮಾಗಳಲ್ಲಿ ಕ್ರಿಸ್ಟ್ರೋಪರ್‌ ನೊಲನ್‌ ನಿರ್ದೇಶನದ ಒಪ್ಪೆನ್‌ಹೆಮಿಯರ್‌ ಮತ್ತು ಮಾರ್ಗೊಟ್‌ ರೋಬಿಯ ಬಾರ್ಬಿ ಸಿನಿಮಾ ಅಗ್ರ ಸ್ಥಾನದಲ್ಲಿವೆ.

Tap to resize

Latest Videos

ರಣವೀರ್​ ಸಿಂಗ್​ ಅಂಡರ್​ವೇರ್​ ಹಾಕಲ್ವಂತೆ, ಆಲಿಯಾ ಪತಿಗೆ ದೀಪಿಕಾ ಕಾಂಡೋಮ್​ ಕೊಡ್ತಾರಂತೆ! ಏನಿದು?

ಯಾವ ಯಾವ ಚಿತ್ರ ಕ್ರಮವಾಗಿ 1ರಿಂದ 10ನೇ ಸ್ಥಾನ ಗಳಿಸಿದೆ ಎಂದು ನೋಡುವುದಾದರೆ: 
ಜವಾನ್‌ (ಭಾರತದಲ್ಲಿ ಬಾಕ್ಸ್‌ ಆಫೀಸ್‌ ಕಲೆಕ್ಷನ್​  640.25 ಕೋಟಿ ರೂ)
ಗದರ್‌ 2 (ಬಾಕ್ಸ್‌ ಆಫೀಸ್‌ನಲ್ಲಿ 525.70 ಕೋಟಿ ರೂ.)
ಒಪ್ಪೆನ್‌ಹೆಮಿಯರ್‌ (95.33 ಕೋಟಿ ಡಾಲರ್​)
ಆದಿಪುರುಷ್‌ (288.15 ಕೋಟಿ ರೂ.)
ಪಠಾಣ್‌ (543.09 ಕೋಟಿ ರೂ.)
ದಿ ಕೇರಳ ಸ್ಟೋರಿ (303.97 ಕೋಟಿ ರೂ)
ಜೈಲರ್‌ (343.47 ಕೋಟಿ ರೂ. )
ಲಿಯೋ
ಟೈಗರ್‌ 3 ( 282.61 ಕೋಟಿ ರೂ.)
ವಾರೀಸು

 
ಒಟಿಟಿಯಲ್ಲಿ ಹೆಚ್ಚು ಹುಡುಕಾಟ ನಡಿಸಿದ ಸಿನಿಮಾಗಳು ಹಾಗೂ ರಿಯಾಲಿಟಿ ಷೋಗಳು: 
ಒಟಿಟಿ ಶೋಗಳಲ್ಲಿ ಶಾಹಿದ್‌ ಕಪೂರ್‌ ಮತ್ತು ವಿಜಯ್​ ಸೇತುಪತಿಯವರ ಬಹು ವಿವಾದಿತ  ಒಟಿಟಿ ಸಿನಿಮಾ ಫಾರ್ಜಿ ಬಹಳ ಮಂದಿ ಹುಡುಕಾಟ ನಡೆಸಿದ್ದು ಅದು ಟಾಪ್​-1ನೇ ಸ್ಥಾನದಲ್ಲಿದೆ.   ಹನ್ಸಲ್‌ ಮೆಹ್ತಾರ ಸ್ಕ್ಯಾಮ್‌ 2003, ರಿಯಾಲ್ಟಿ ಶೋ ಬಿಗ್‌ಬಾಸ್‌ 17, ಗುನ್ಸ್‌ ಆಂಡ್‌ ಗುಲಾಬ್ಸ್‌, ಸೆಕ್ಸ್‌ ಲೈಫ್‌, ತಾಝಾ ಖಬರ್‌ ಮುಂತಾದ ಸಿನಿಮಾ/ಶೋಗಳ ಹುಡುಕಾಟ ಹೆಚ್ಚಾಗಿತ್ತು. ಗೂಗಲ್‌ನಲ್ಲಿ ಅತ್ಯಧಿಕ ಹುಡುಕಾಟ ಕಂಡ ಒಟಿಟಿ ಶೋಗಳು, ಸಿನಿಮಾಗಳ ವಿವರ ಇಲ್ಲಿದೆ.
ಕ್ರಮವಾಗಿ ಟಾಪ್​-10 ಹುಡುಕಾಟ ನಡೆಸಿದ ಓಟಿಟಿ ಚಿತ್ರ ಹಾಗೂ ಷೋಗಳು: 
ಫಾರ್ಜಿ
ವೆಡ್ನೆಸ್‌ಡೇ
ಅಸುರ್‌
ರಾಣಾ ನಾಯ್ಡು
ದಿ ಲಾಸ್ಟ್‌ ಆಫ್‌ ಅಸ್‌
ಸ್ಕ್ಯಾಮ್‌ 2003
ಬಿಗ್‌ಬಾಸ್‌ 17
ಗನ್ಸ್‌ ಆಂಡ್‌ ಗುಲಾಬ್ಸ್‌
ಸೆಕ್ಸ್‌/ಲೈಫ್‌
ತಾಝಾ ಖಬರ್‌

ಕಬಡ್ಡಿ ಪಂದ್ಯದಿಂದ ಶುರುವಾಗಿ ಮದುವೆ ಉಂಗುರ ತೆಗೆಯುವವರೆಗೆ: ಐಶ್​-ಅಭಿ ಡಿವೋರ್ಸ್​ ನಿಜವಾಯ್ತಾ?

click me!