
ಭಾರತದ ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಸಿನಿಮಾದಲ್ಲಿ ನಾಯಕ, ಹಾಡು, ಹಿನ್ನೆಲೆ ಸಂಗೀತ ಇವುಗಳ ಜೊತೆಗೆ ಸಿನಿಮಾದಲ್ಲಿದ್ದ ಅತಿಥಿ ಪಾತ್ರಗಳು ಪ್ರೇಕ್ಷಕರನ್ನು ಸೆಳೆದಿದ್ದವು. ವಿಶೇಷವಾಗಿ ಕನ್ನಡದ ನಟ ಶಿವರಾಜ್‌ಕುಮಾರ್ ಅವರ ನಟನೆಯ ದೃಶ್ಯಗಳಂತೂ ಸೂಪರ್-ಡೂಪರ್ ಹಿಟ್ ಆಗಿದ್ದವು. ಸಿನಿಮಾದ ನಾಯಕ ರಜನೀಕಾಂತ್ ಗಿಂತಲೂ ಹೆಚ್ಚಿನ ಶಿಳ್ಳೆ-ಚಪ್ಪಾಳೆ ಶಿವಣ್ಣನ ಎಂಟ್ರಿಗೆ ಬಿದ್ದಿತ್ತು. ಶಿವಣ್ಣ ಮಾತ್ರವೇ ಅಲ್ಲದೆ ಮೋಹನ್ಲಾಲ್, ಜಾಕಿ ಶ್ರಾಫ್ ಇನ್ನೂ ಕೆಲವರು ಸಿನಿಮಾನಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು.
ಇದೀಗ ‘ಜೈಲರ್ 2’ ಸಿನಿಮಾ ಬರುತ್ತಿದ್ದು, ಈ ಸಿನಿಮಾನಲ್ಲಿ ಅತಿಥಿ ಪಾತ್ರಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ‘ಜೈಲರ್’ ಸಿನಿಮಾನಲ್ಲಿ ಶಿವರಾಜ್ ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್, ಸುನಿಲ್ ಅವರುಗಳು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ನಟಿ ತಮನ್ನಾ ಭಾಟಿಯಾ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದರು, ರಮ್ಯಾ ಕೃಷ್ಣ ಅವರು ಸಹ ಇದ್ದರು. ‘ಜೈಲರ್’ ಸಿನಿಮಾನಲ್ಲಿದ್ದ ಅತಿಥಿ ಪಾತ್ರಗಳ ಜೊತೆಗೆ ಇನ್ನಷ್ಟು ಹೊಸ ಪಾತ್ರಗಳು ಈ ಬಾರಿ 'ಜೈಲರ್ 2'ನಲ್ಲಿ ಸೇರಿಕೊಳ್ಳಲಿವೆ. ಶಿವಣ್ಣ ಸಿನಿಮಾದಲ್ಲಿ ಇರುವುದು ಬಹುತೇಕ ಖಾತ್ರಿ ಆಗಿದೆ. ಮೋಹನ್ಲಾಲ್, ಜಾಕಿ ಶ್ರಾಫ್ ಅವರೂ ಸಹ ಇರಲಿದ್ದಾರೆ. ಇವರುಗಳ ಜೊತೆಗೆ ತೆಲುಗು ಚಿತ್ರರಂಗದ ಸ್ಟಾರ್ ಹೀರೋ ನಂದಮೂರಿ ಬಾಲಕೃಷ್ಣ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಮೋದಿ ಜೊತೆ ಯಶ್, ಅಂದಿನ ಮಾತುಕತೆ ಈಗ್ಯಾಕೆ ಮತ್ತೆ ವೈರಲ್ ಆಗ್ತಿದೆ?.. ಏನ್ ಮ್ಯಾಟರ್..?
ನಿಜ ವಿಷಯ ಏನಂದ್ರೆ, 2023 ರ ‘ಜೈಲರ್’ ಸಿನಿಮಾನಲ್ಲಿಯೇ ಬಾಲಕೃಷ್ಣ ಅತಿಥಿ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ, ಅವರ ಪಾತ್ರ ಯಾಕೋ ಪರಿಪೂರ್ಣ ಅನಿಸುತ್ತಿಲ್ಲ ಎಂಬ ಕಾರಣಕ್ಕೆ ನಿರ್ದೇಶಕ ನೆಲ್ಸನ್ ಅವರ ಪಾತ್ರವನ್ನು ಕೈಬಿಟ್ಟಿದ್ದರಂತೆ. ಈ ಬಾರಿ ಬಾಲಕೃಷ್ಣ ಅವರನ್ನು ಚಿತ್ರದಲ್ಲಿ ಸೇರಿಸಿಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ. ಪ್ರತಿಯೊಬ್ಬ ಅತಿಥಿ ಪಾತ್ರಧಾರಿಗಳಿಗೂ ಭರ್ಜರಿ ಎಂಟ್ರಿ ಸೀನ್ಗಳನ್ನು ಇರಿಸಿದ್ದಾರಂತೆ ನಿರ್ದೇಶಕ ನೆಲ್ಸನ್. ಈ ಸಂಗತಿಯೀಗ ನಿರೀಕ್ಷೆ ಹೆಚ್ಚಿಸಿದೆ.
‘ಜೈಲರ್’ ಸಿನಿಮಾ ನಿರ್ಮಾಣ ಮಾಡಿದ್ದ ಕಲಾನಿಧಿ ಮಾರನ್ ಅವರೇ ‘ಜೈಲರ್ 2’ ಸಿನಿಮಾಕ್ಕೂ ಬಂಡವಾಳ ಹೂಡಿದ್ದಾರೆ. ಆ ಸಿನಿಮಾದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರ ತಂಡವೇ ‘ಜೈಲರ್ 2’ಗೆ ಸಹ ಕೆಲಸ ಮಾಡಲಿದೆ. ಸಿನಿಮಾವನ್ನು ತಮ್ಮ ಸಂಗೀತದಿಂದ ಮೇಲಕ್ಕೆತ್ತಿದ್ದ ಅನಿರುದ್ದ್ ರವಿಚಂದ್ರನ್ ಅವರು ‘ಜೈಲರ್ 2’ ಸಿನಿಮಾಕ್ಕೂ ಸಂಗೀತ ನೀಡಲಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಕೇರಳದಲ್ಲಿ ಆರಂಭವಾಗಿದೆ. ಚಿತ್ರೀಕರಣದಲ್ಲಿ ನಟಿ ರಮ್ಯಾ, ಯೋಗಿ ಬಾಬು ಹಾಗೂ ಇನ್ನೂ ಕೆಲವರು ಭಾಗವಹಿಸಿದ್ದಾರೆ.
ವಿಷ್ಣು- ಭಾರತಿ ಜೋಡಿ ನಟಿಸಿದ್ದ ಆ ಜಾಹೀರಾತು ಈಗ ಫುಲ್ ವೈರಲ್
ಶಿವರಾಜ್ ಕುಮಾರ್ ಪ್ರಸ್ತುತ ಬುಚ್ಚಿಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ನಟಿಸುತ್ತಿದ್ದಾರೆ. ಅದರ ಜೊತೆಗೆ ಅವರ 131ನೇ ಸಿನಿಮಾ ಶೂಟಿಂಗ್ ಕೂಡ ನಡೆಯುತ್ತಿದೆ. ಬಳಿಕ, ಹೇಮಂತ್ ರಾವ್ ಸಿನಿಮಾ, ಪವನ್ ಒಡೆಯರ್ ಅವರ ಸಿನಿಮಾಗಳಲ್ಲಿಯೂ ನಟಿಸಲಿದ್ದಾರೆ. ಇದೆಲ್ಲದರ ನಡುವೆ ಸಣ್ಣ ಬಿಡುವು ಪಡೆದುಕೊಂಡು ‘ಜೈಲರ್ 2’ ಸಿನಿಮಾನಲ್ಲಿಯೂ ನಟಿಸಿ ಬರಲಿದ್ದಾರೆ.
ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅದರಲ್ಲಿ ಕನ್ನಡದ ನಟ ಶಿವರಾಜ್‌ಕುಮಾರ್ ಸೇರಿದಂತೆ ಹಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಆ ಮೂಲಕ ಸಿನಿಮಾಕ್ಕೆ ಸಾಕಷ್ಟು ಬಲ ಬಂದಿತ್ತು. ಇದೀಗ ‘ಜೈಲರ್ 2’ ನಲ್ಲಿ ಇನ್ನೂ ಕೆಲವು ಸೂಪರ್ ಸ್ಟಾರ್ಗಳು ಗೆಸ್ಟ್ ರೋಲ್‌ನಲ್ಲಿ ಭಾಗಿ ಆಗಲಿದ್ದಾರೆ.
'ಯಾವನೋ ಇವ್ನು, ಹೆಲ್ಮೆಟ್ ಹಾಕ್ಕೊಂಡು ಸೈಕಲ್ ಓಡಿಸ್ತವ್ನೇ'..! ಈ ಮಾತಿಗೆ ಅಪ್ಪು ರಿಯಾಕ್ಷನ್ ನೋಡಿ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.