ಅಣ್ಣಾವ್ರ ಅಭಿಮಾನಿಗಳಿಗೆ ಹಬ್ಬ, ರಾಜ್ ಕುಮಾರ್ ಅಪರೂಪದ ಫೋಟೋ ನೋಡಿ ಕೈಮುಗಿದ ಫ್ಯಾನ್ಸ್

Published : Apr 16, 2025, 12:10 PM ISTUpdated : Apr 16, 2025, 12:26 PM IST
ಅಣ್ಣಾವ್ರ ಅಭಿಮಾನಿಗಳಿಗೆ ಹಬ್ಬ, ರಾಜ್ ಕುಮಾರ್ ಅಪರೂಪದ ಫೋಟೋ ನೋಡಿ ಕೈಮುಗಿದ ಫ್ಯಾನ್ಸ್

ಸಾರಾಂಶ

ಡಾ. ರಾಜ್‍ಕುಮಾರ್ 96ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಮೊಮ್ಮಗ ಧೀರೆನ್ ರಾಜ್‍ಕುಮಾರ್ ಅವರ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 2006ರಲ್ಲಿ 'ಅಜಯ್' ಚಿತ್ರದ ವೇಷಭೂಷಣ ತಯಾರಿ ವೇಳೆ ತೆಗೆದ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಭಾವುಕರಾಗಿ, ಅಣ್ಣಾವ್ರನ್ನು ಸ್ಮರಿಸುತ್ತಿದ್ದಾರೆ.

ನಟಸಾರ್ವಭೌಮ (Natasarvabhouma), ಅಭಿಮಾನಿ ದೇವರು ಡಾ. ರಾಜ್ ಕುಮಾರ್ (Dr. Rajkumar) ಹುಟ್ಟುಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಅಣ್ಣಾವ್ರು (Annavru) ಬದುಕಿದ್ರೆ 96ನೇ ವರ್ಷಕ್ಕೆ ಕಾಲಿಡ್ತಿದ್ರು. ಏಪ್ರಿಲ್ 24 ರಂದು ಗಾನ ಗಂಧರ್ವ (Ganagandharva ) ನ ಹುಟ್ಟುಹಬ್ಬ. ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿರುವ ಅಣ್ಣಾವ್ರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡಲು ತಯಾರಿ ನಡೆಸಿದ್ದಾರೆ. ಏಪ್ರಿಲ್ ಬಂದ್ರೆ ಅಭಿಮಾನಿಗಳ ಬಾಯಲ್ಲಿ ಅಣ್ಣಾವ್ರ ಸಿನಿಮಾ, ಹಾಡಿನದ್ದೇ ಸುದ್ದಿ. ಏಪ್ರಿಲ್ 12ರಂದು ಡಾ. ರಾಜ್ ಕುಮಾರ್ ನಮ್ಮನ್ನಗಲಿ 19 ವರ್ಷ ಕಳೆದಿದೆ. ಆದ್ರೂ ಅಭಿಮಾನಿಗಳ ಮನಸ್ಸಿನಲ್ಲಿ ಡಾ. ರಾಜ್ ಕುಮಾರ್ ಅಚ್ಚಳಿಯದೆ ಉಳಿದಿದ್ದಾರೆ.  ಕನ್ನಡ ಚಿತ್ರ ರಂಗದ ಧ್ರುವತಾರೆ ಅಣ್ಣಾವ್ರ ಸಿನಿಮಾಗಳನ್ನು ಈಗ್ಲೂ ಭಕ್ತಿಯಿಂದ ನೋಡುವ ಅಭಿಮಾನಿಗಳು, ಅವರ ಹಾಡಿಗೆ ಕಳೆದು ಹೋಗ್ತಾರೆ. ಆದರ್ಶವಾಗಿ ಬದುಕಿದ್ದ, ಕನ್ನಡಕ್ಕಾಗಿ ಜೀವ ನೀಡಲು ಸಿದ್ಧವಿದ್ದ, ನಟನೆಯಲ್ಲಿ ಸಾರ್ವಭೌಮನಾಗಿದ್ದ ಅಣ್ಣಾವ್ರಿಗೆ ಸರಿಸಾಟಿ ಯಾರಿಲ್ಲ. ಅಭಿಮಾನಿಗಳನ್ನು ದೇವರಿಗೆ ಹೋಲಿಸಿದ್ದ ಡಾ. ರಾಜ್ ಕುಮಾರ್, ಅಭಿಮಾನಿಗಳ ದೇವರ ಮನೆಯಲ್ಲಿ ಸ್ಥಾನ ಪಡೆದಿದ್ದಾರೆ.  ಈಗ್ಲೂ ಡಾ. ರಾಜ್ ಕುಮಾರ್ ನಟನೆ, ಅವರ ಜೀವನದ ಬಗ್ಗೆ ತಿಳಿಯಲು ಅಭಿಮಾನಿಗಳು ಕಾತುರರಾಗಿರ್ತಾರೆ.  ಅಣ್ಣಾವ್ರ ಅಪರೂಪದ ವಿಡಿಯೋ ಅಥವಾ ಫೋಟೋ ಸಿಕ್ಕಿದ್ರೆ ಅಭಿಮಾನಿಗಳು ಹಬ್ಬ ಆಚರಿಸ್ತಾರೆ. 

ಈಗ ಅಣ್ಣಾವ್ರ ಅಪರೂಪದಲ್ಲಿ ಅಪರೂಪದ ಫೋಟೋ  ವೈರಲ್ ಆಗಿದೆ. ಅದನ್ನು ಡಾ. ರಾಜ್ ಕುಮಾರ್ ಮೊಮ್ಮಗ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಪೋಸ್ಟ್ ಆದ ಕೆಲವೇ ಕ್ಷಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಫೋಟೋ ಹರಿದಾಡ್ತಿದೆ. ರಾಜ್ ಕುಮಾರ್ ಮೊಮ್ಮಗ, ರಾಮ್ ಕುಮಾರ್ ಪುತ್ರ ಧೀರೆನ್ ರಾಜ್ ಕುಮಾರ್ (dheeren Raj Kumar), ಅಜ್ಜನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾ ಖಾತೆಯಲ್ಲಿ ರಾಜ್ ಕುಮಾರ್ ಎರಡು ಫೋಟೋಗಳನ್ನು ಹಂಚಿಕೊಂಡಿರುವ ಧೀರೆನ್, ಯಾವಾಗ ಈ ಫೋಟೋ ತೆಗೆದಿದ್ದು ಎಂಬ ಮಾಹಿತಿಯನ್ನೂ ನೀಡಿದ್ದಾರೆ.

ಚಂದನ್‌ ಶೆಟ್ಟಿ ರೊಮಾನ್ಸ್‌ಗೆ ಸೆನ್ಸರ್‌ ಒಪ್ಪಿಗೆ ಕೂಡ ಸಿಕ್ತು ಗುರೂ.. ಇನ್ನೇನಿದೆ ಪ್ರಾಬ್ಲಂ..?!

ರಾಜ್ ಕುಮಾರ್ ಅಪರೂಪದ ಫೋಟೋ : ಧೀರೆನ್ ಪೋಸ್ಟ್ ನಲ್ಲಿ ರಾಜ್ ಕುಮಾರ್ ಕಣ್ಣಿಗೆ ಕನ್ನಡಕ ಹಾಕಿರುವ ಎರಡು ಫೋಟೋಗಳನ್ನು ಕಾಣ್ಬಹುದು. ಈ ಫೋಟೋವನ್ನು ಅಜಯ್ ಸಿನಿಮಾದ ಕಾಸ್ಟ್ಯೂಮ್ ಟ್ರಯಲ್ ವೇಳೆ ತೆಗೆಯಲಾಗಿದೆ. ನೋಕಿಯಾ ಫೋನ್ ನಲ್ಲಿ ಈ ಫೋಟೋವನ್ನು ಸೆರೆ ಹಿಡಿಯಲಾಗಿದೆ. 2006ರಲ್ಲಿ ಅಜ್ಜಿಯ ನೋಕಿಯಾ ಫೋನ್ ನಲ್ಲಿ ಚಿಕ್ಕಮಾಮಾನ ಅಜಯ್ ಸಿನಿಮಾ ಕಾಸ್ಟ್ಯೂಮ್ ಟ್ರಯಲ್ ವೇಳೆ ನನ್ನ ಅಜ್ಜನ ಫೋಟೋ ಸೆರೆ ಹಿಡಿಯಲಾಗಿದೆ ಎಂದು ಧೀರೆನ್ ಶೀರ್ಷಿಕೆ ಹಾಕಿದ್ದಾರೆ.

ಡಾ. ರಾಜ್ ಕುಮಾರ್ ಈ ಅಪರೂಪದ ಫೋಟೋಕ್ಕೆ ಸಾವಿರಾರು ಕಮೆಂಟ್ ಬಂದಿದೆ. ಫೋಟೋವನ್ನು ಈಗ ತೆಗೆದಂತಿದೆ, ದೇವರನ್ನು ನೋಡಿ ಸಂತೋಷವಾಯ್ತು ನಮ್ಮ ದೇವರು ಡಾ. ರಾಜ್ ಕುಮಾರ್, ಕನ್ನಡದ ನಿಜವಾದ ಅಭಿಮಾನಿ ಎಂದು ಫ್ಯಾನ್ಸ್ ಕಮೆಂಟ್ ಹಾಕಿದ್ದಾರೆ.

80 ದಿನಗಳಿಂದ ಒಂದೇ ಸೀರೆ; ಪ್ರೇಕ್ಷಕರ ಒತ್ತಾಯಕ್ಕೆ ಕೊನೆಗೂ ಮಣಿದ ʼನಾ

ಧೀರೆನ್ ಇದೇ ಮೊದಲ್ಲಲ್ಲ, ಎರಡು ದಿನಗಳ ಹಿಂದೂ ಡಾ. ರಾಜ್ ಕುಮಾರ್ ಅಪರೂಪದ ಫೋಟೋ ಸೇರಿಸಿ ವಿಡಿಯೋ ಒಂದನ್ನು ಮಾಡಿ ತಮ್ಮ ಇನ್ಸ್ಟಾಖಾತೆಯಲ್ಲಿ ಹಂಚಿಕೊಂಡಿದ್ದರು. ಅದ್ರಲ್ಲಿ ರಾಜ್ ಕುಮಾರ್ ಸಾಕು ಪ್ರಾಣಿ ಜೊತೆ ಕುಳಿತಿರೋದನ್ನು ನೋಡ್ಬಹುದು. ಅಲ್ಲದೆ ಕಚೇರಿಯಲ್ಲಿ ಕುಳಿತಿರುವ ಹಾಗೂ ರೂಮಿನಲ್ಲಿ ಕುಳಿತಿರುವ ಡಾ. ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದರು.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?