ದುಲ್ಕರ್ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ಹೊಸ ಕಾರು. ಮಾರುಕಟ್ಟೆಗೆ ಬರುತ್ತಿದ್ದಂತೆ ದುಬಾರಿಯ ಹೊಸ ಕಾರು ಖರೀದಿಸುವ ಕ್ರೇಜ್ ಈ ನಟನಿಗೆ ಕಡಿಮೆ ಆಗಿಲ್ಲ..
ಮಾಲಿವುಡ್ ಹ್ಯಾಂಡ್ಸಮ್ ನಟ ದುಲ್ಕರ್ ಸಲ್ಮಾನ್‌ಗಿರುವ ಕಾರ್ ಕ್ರೇಜ್ ಬಗ್ಗೆ ಕುಟುಂಬದವರಿಗೆ ಮಾತ್ರವಲ್ಲ ಅಭಿಮಾನಿಗಳಿಗೂ ಗೊತ್ತುಂಟು. ಯಾವುದೇ ಹೊಸ ಕಾರು ಭಾರತಕ್ಕೆ ಬಂದರೆ ದುಲ್ಕರ್ ಮೊದಲು ಖರೀದಿಸುತ್ತಾರೆ. ಎಷ್ಟೇ ಕೋಟಿ ಆದರೂ ಚಿಂತಿಸದೆ ಮೊದಲು ಬುಕ್ ಮಾಡಿಕೊಳ್ಳುತ್ತಾರೆ. ಇದೀಗ ಆದೇ ರೀತಿಯ ಹೊಸ ಐಷಾರಾಮಿ ಕಾರನ್ನು ಬರ ಮಾಡಿಕೊಂಡಿದ್ದಾರೆ.
ಮಾಲಿವುಡ್ ಸ್ಟಾರ್ ದುಲ್ಕರ್ ಸಲ್ಮಾನ್ ಬೇಗ ಮದ್ವೆಯಾಗಿದ್ದು ಏಕಂತೆ ಗೊತ್ತಾ?ಹೊಸ ಮರ್ಸಿಡಿಸ್ - ಎಎಂಜಿ ಜಿ63 ಎಸ್‌ಯುವಿ ಕಾರು ಖರೀದಿಸಿದ್ದಾರೆ ದುಲ್ಕರ್. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ದುಬಾರಿ ಎಸ್‌ಯುವಿಗಳಲ್ಲಿ ಇದು ಒಂದಾಗಿದೆ. ಇದರ ಎಕ್ಸ್ ಶೋರೂಂ ಬೆಲೆ ಬರೋಬ್ಬರಿ 2.45 ಕೋಟಿ ರೂ. ಬೆಲೆ. ಈ ಕಾರು ಸೈನೊ ಆಲಿವ್ ಗ್ರೀನ್ ಶೇಡ್ ಆಗಿದ್ದು, ಕ್ಯಾಬಿನ್ ನೀಲಿ ಮತ್ತು ಕಪ್ಪು ಡ್ಯುಯಲ್-ಟೋನ್ ಹೊಂದಿದೆ. 4 ಲೀಟರ್ ವಿ8 ಬಿಟುರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಕಾರಿನ ಎಂಜಿನ್‌ಗೆ 577 ಬಿಎಚ್‌ಪಿ ಪವರ್ ಮತ್ತು 850 ಎನ್‌ಎಂ ಟಾರ್ಕ್ ಉತ್ಸಾದಿಸುವ ಸಾಮರ್ಥ್ಯವೂ ಇದೆ. ಇದೊಂದು ಆಫ್ ರೋಡ್ ಎಸ್‌ಯುವಿಯಾಗಿದ್ದು, 9 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. 4 ಮ್ಯಾಟಿಕ್ ಆಪ್ ವಿಲ್ ಡ್ರೈವ್ ಸಿಸ್ಟಂ ಹೊಂದಿದೆ.
undefined
ಈ ಐಷಾರಾಮಿ ಕಾರನ್ನು ಈಗಾಗಲೇ ಅಖಿಲ್ ಅಕ್ಕಿನೇನಿ, ರಾಮ್ ಕಪೂರ್, ಜಿಮ್ಮಿ ಶೀರ್‌ಗಿಲ್ ಹಾಗೂ ಅಸಿಫ್ ಅಲಿ ಹೊಂದಿದ್ದಾರೆ. ದುಲ್ಕರ್ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿದ್ದು, ಇದೀಗ ಮತ್ತೊಂದು ಸೇರ್ಪಡೆಯಾಗಿದೆ. ಮಮ್ಮೊಟ್ಟಿಯಿಂದ ಪುತ್ರನಿಗೆ ಈ ಕ್ರೇಜ್ ಕ್ಯಾರಿ ಓವರ್ ಆಗಿದೆ. ದುಲ್ಕರ್ 369 ಕಾರುಗಳನ್ನು ತಮ್ಮ ಗ್ಯಾರೇಜ್‌ನಲ್ಲಿ ಹೊಂದಿದ್ದಾರೆ. ಟಾಪ್ ಬ್ರ್ಯಾಂಡ್ ಕಾರುಗಳನ್ನು ಇಲ್ಲಿಯೇ ಪಾರ್ಕ್ ಮಾಡಿರುತ್ತಾರೆ.