
ನಟ ರಾಹುಲ್ ದೇವ್ ಹೆಂಡತಿ ಸಾವಿನ ನಂತರ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ. ನಟಿ ಮುಗ್ಧ ಗೋಡ್ಸೆ ಜೊತೆಗಿನ ಸಂಬಂಧ, ಪತ್ನಿ ಸಾವಿನ ನಂತರ ಎರಡನೇ ಬಾರಿ ಪ್ರೀತಿಯಾಗಿದ್ದರ ಬಗ್ಗೆ ಮನಸು ಬಿಚ್ಚಿ ಮಾತನಾಡಿದ್ದಾರೆ. ನಟ 2009ರಲ್ಲಿ ಪತ್ನಿ ರೀನಾರನ್ನು ಕಳೆದುಕೊಂಡಿದ್ದರು. ಆದರೆ ಮತ್ತೊಮ್ಮೆ ಪ್ರೀತಿಯಾಗುವುದು ತುಂಬಾ ಕಷ್ಟ ಎಂದಿದ್ದಾರೆ ನಟ.
ಆ ವರ್ಷ ನಾನು 13 ಪ್ರಾಜೆಕ್ಟ್ ಭಾಗವಾಗಿದ್ದೆ. ಇಂಡಸ್ಟ್ರಿಯಲ್ಲಿ ನಾನೇನು ಮಾಡುತ್ತಿದ್ದೇನೆ ಎಂದನಿಸಿತ್ತು. ಬ್ಲೂ ಗಾಗಿ ನಾನು ಬಹಾಮಸ್‌ನಲ್ಲಿ ಶೂಟಿಂಗ್ ನಡೆಯಬೇಕಾದರೆ ನಾನೆಲ್ಲಿದ್ದೆ ಎಂಬುದೂ ನನಗೆ ಗೊತ್ತಿರಲಿಲ್ಲ. ನಾನೆಲ್ಲೋ ಹೋಗಿದ್ದೆ, ಆದರೆ ಆ ಚಾಪ್ಟರ್ ನನಗೆ ನೆನಪಿಲ್ಲ ಎಂದಿದ್ದಾರೆ ನಟ.
ಗೆಳತಿ ಮುಗ್ಧಾ ಗೋಡ್ಸೆ ಜೊತೆ ರಿಲೇಷನ್‌ಶಿಪ್ ಕಂಟಿನ್ಯೂ ಮಾಡಿದ ಬಗ್ಗೆ ಮಾತನಾಡಿದ ನಟ, ಈ ದಿನಗಳಲ್ಲಿ ಒಮ್ಮೆ ಸುಂದರವಾದ ಸಂಬಂಧದಲ್ಲಿದ್ದವರು ಅದು ಸರಿ ಎಂದೇ ಭಾವಿಸುತ್ತಾರೆ. ವರ್ಷಗಳ ವಿಚಾರದಲ್ಲಿ ಅಂತರವಿರುತ್ತದೆ. ನಿಮ್ಮ ಸುತ್ತ ಬಹಳಷ್ಟು ಜನರಿರುತ್ತಾರೆ. ನೀವು ಮೂವ್ ಆನ್ ಆಗುವ ಮೂಲಕ ನಿಮ್ಮ ಸುತ್ತಮುತ್ತಲಿನ ಜನರನ್ನು ನೋಯಿಸುತ್ತೀರಿ ಎಂಬ ಭಾವನೆ ಬರುತ್ತದೆ ಎಂದಿದ್ದಾರೆ ನಟ.
ಹನಿ ಸಿಂಗ್‌ಗೆ ಹಲವು ಯುವತಿಯರ ಜೊತೆ ದೈಹಿಕ ಸಂಬಂಧ; ಪತ್ನಿ ದೂರಿನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!
ಅಶೋಕ, ಇಂಡಿಯನ್, ಓಂಕಾರ, ಬ್ಲೂ ಫೈಟ್ ಕ್ಲಬ್ ಮೆಂಬರ್ಸ್ ಓನ್ಲೀ, ಡಿಶೂಂ, ಪಾಗಲ್‌ಪಂತಿ, ಓಪರೇಷನ್ ಪರಿಂದೆಯಂತಹ ಹಲವು ಸಿನಿಮಾಗಳಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಫ್ಯಾಷನ್ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟ ಮುಗ್ಧಾ ಗೋಡ್ಸೆ ನಂತರ ಗಲಿ ಗಲಿ ಚೋರ್ ಹೈ, ವಿಲ್ ಯು ಮ್ಯಾರಿ ಮೀ, ಭೇಝುಬಾನ್ ಇಶ್ಕ್ ಹಾಗೂ ಹಿರೋಯಿನ್‌ನಲ್ಲಿ ಕಾಣಿಸಿಕೊಂಡಿದ್ದರು.
ರಾಹುಲ್ ದೇವ್ ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ನಟನಾಗಿದ್ದು ಮಾಜಿ ಮಾಡೆಲ್ ಕೂಡಾ ಹೌದು. ಅವರು ಮುಖ್ಯವಾಗಿ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಯಾಗಿದ್ದರು.
52 ವರ್ಷದ ನಟ 1998ರಲ್ಲಿ ರೀನಾ ಅವರನ್ನು ಮದುವೆಯಾಗಿದ್ದರು. 2009ರಲ್ಲಿ ಅವರ ಪತ್ನಿ ಸಾವನ್ನಪ್ಪಿದ ನಂತರ ಅವರು ನಟಿ ಮುಗ್ಧಾ ಜೊತೆ ಪ್ರೀತಿಯಾಗಿತ್ತು. ಮೊದಲ ಪತ್ನಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.