ಹನಿ ಸಿಂಗ್‌ಗೆ ಹಲವು ಯುವತಿಯರ ಜೊತೆ ದೈಹಿಕ ಸಂಬಂಧ; ಪತ್ನಿ ದೂರಿನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

By Suvarna NewsFirst Published Aug 4, 2021, 7:36 PM IST
Highlights
  • ಸಿಂಗರ್ ಯೋ ಯೋ ಹನಿ ಸಿಂಗ್ ವಿರುದ್ಧ ದೂರು ದಾಖಲಿಸಿದ ಪತ್ನಿ
  • 120 ಪುಟಗಳ ಅರ್ಜಿಯಲ್ಲಿ ಹನಿ ಸಿಂಗ್ ವಿರುದ್ಧ ಗಂಭೀರ ಆರೋಪ
  • ಹಲವು ಯುವತಿಯರ ಜೊತೆ ದೈಹಿಕ ಸಂಬಂಧ ಹಾಗೂ ಸ್ಫೋಟಕ ಮಾಹಿತಿ

ನವದೆಹಲಿ(ಆ.04): ಬಾಲಿವುಡ್ ಸಿಂಗ್ ಯೋ ಯೋ ಹನಿ ಸಿಂಗ್(ಹಿರ್ದೇಶ್ ಸಿಂಗ್) ವಿರುದ್ಧ ಪತ್ನಿ ಶಾಲಿನಿ ತಲ್ವಾರ್ ದೂರು ದಾಖಲಿಸಿದ ಘಟನೆ ಭಾರಿ ಸದ್ದು ಮಾಡಿದೆ. ಇದೀಗ ಪತ್ನಿ ದೆಹಲಿ ಕೋರ್ಟ್‌ಗೆ ನೀಡಿದ 120 ಪುಟಗಳ ಅರ್ಜಿಯಲ್ಲಿ ಹನಿ ಸಿಂಗ್ ನಡೆಸಿದ ದೌರ್ಜನ್ಯಗಳ ಪಟ್ಟಿಯನ್ನೇ ತೆರೆದಿಟ್ಟಿದ್ದಾರೆ. ಇದರಲ್ಲಿ ಹನಿ ಸಿಂಗ್‌ ಹಲವು ಯುವತಿಯರ ಜೊತೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದರು ಎಂದು ಆರೋಪಿಸಿದ್ದಾರೆ.

ಯೋ ಯೋ ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ ಪತ್ನಿ!

ಕೌಟುಂಬಿದ ದೌರ್ಜನ್ಯ ಅಡಿಯಲ್ಲಿ ಕೇಸ್ ದಾಖಲಾಗಿದೆ. ಆದರೆ ಹನಿ ಸಿಂಗ್ ಪ್ರಕರಣ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಹೆಚ್ಚಿದೆ. ಕಾರಣ ಪತ್ನಿ ದೂರಿನಲ್ಲಿ ತನ್ನನ್ನು ಪ್ರಾಣಿಗಳ ರೀತಿ ನೋಡಲಾಗಿದೆ. ಹಲ್ಲೆ, ಮಾನಸಿಕ ಹಿಂಸೆ, ಕಿರುಕುಳ ನೀಡಿರುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಹನಿ ಸಿಂಗ್ ಹಾಗೂ ಶಾಲಿನಿ ತಲ್ವಾರ್ ಮದುವೆ ಸೀಕ್ರೆಟ್ ಆಗಿ ನಡೆದಿತ್ತು. 2011ರಲ್ಲಿ ಮದುವೆ ನಡೆದಿದ್ದರೆ, 2014ರ ವರೆಗೆ ಹನಿ ಸಿಂಗ್‌ ಮದುವೆ ವಿಚಾರ ಗೌಪ್ಯವಾಗಿಟ್ಟಿದ್ದರು. ಇದಕ್ಕೆ ಕಾರಣ ಹನಿ ಸಿಂಗ್‌ಗೆ ಬ್ಯಾಚ್ಯುಲರ್ ಎಂದೇ ಗುರಿತಿಸಿಕೊಳ್ಳಲು ಇಷ್ಟಪಡುತ್ತಿದ್ದರು. ಈ ಮೂಲಕ ಮತ್ತಷ್ಟು ಯುವತಿಯರನ್ನು ಪಟಾಯಿಸುತ್ತಿದ್ದರು ಎಂದು ಪತ್ನಿ ಹೇಳಿದ್ದಾರೆ.

ಲುಂಗಿ ಡ್ಯಾನ್ಸ್ ಮೀಟಿಂಗ್: ಎಮಿರೇಟ್ಸ್ ವಿಮಾನವನ್ನೇ ಲೇಟ್ ಮಾಡಿಸಿದ್ದ ಶಾರೂಖ್

ಮದುವೆ ರಿಂಗ್ ಹಾಗೂ ಮದುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ತನ್ನ ಮೇಲೆ ಹಲ್ಲೆ ಮಾಡಲಾಗಿತ್ತು. ಕಳೆದ 10 ವರ್ಷ ಸತತವಾಗಿ ಹಲ್ಲೆ ಮಾಡಿದ್ದಾರೆ. ಪತಿಯ ಕಿರುಕುಳದಿಂದ ಡಿಪ್ರೆಶನ್‌ಗೆ ಒಳಗಾಗಿದ್ದೆ. ಹನಿ ಕುಟುಂಬಸ್ಥರಿಂದಲೂ ಕಿರುಕುಳ ಅನುಭವಿಸಿದ್ದೇನೆ  ಎಂದು ಶಾಲಿನಿ ತಲ್ವಾರ್ ಹೇಳಿದ್ದಾರೆ.

ಹನಿ ಸಿಂಗ್ ತನಗೆ ಮದುವೆಯಾಗಿದೆ ಅನ್ನೋದನ್ನು ಗೌಪ್ಯವಾಗಿಡುತ್ತಿದ್ದರು. ಇನ್ನು ಹಲವರಿಗೆ ಡಿವೋರ್ಸ್ ಆಗಿದೆ. ತಾನು ಸಿಂಗಲ್ ಎಂದೇ ಹೇಳುತ್ತಿದ್ದರು. ಈ ಮೂಲಕ ಹಲವು ಯುವತಿಯರ ಜೊತೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದರು. ಕಳೆದ 10 ವರ್ಷಗಳ ದಾಂಪತ್ಯ ಜೀವನದಲ್ಲಿ ಸಂತೋಷವೇ ಇಲ್ಲದಾಗಿದೆ. ನಾವು ಪ್ರೀತಿಸಿ ಮದುವೆಯಾಗಿದ್ದೇವೆ. ಆದರೆ ಹನಿ ಸಿಂಗ್ ತೋರಿದ ಪ್ರೀತಿ ಫ್ಲರ್ಟ್ ಆಗಿತ್ತು ಎಂದು ಪತ್ನಿ ದೂರಿನಲ್ಲಿ ಹೇಳಿದ್ದಾರೆ.

ಮದುವೆಯಾದ ಬಳಿಕ ಹಲವು ಬಾರಿ ತಾನು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಹೀಗಾಗಿ ಹನಿ ಸಿಂಗ್ ಪತ್ನಿ ಎಂದು ಎಲ್ಲೂ ಹೇಳಬಾರದು, ಸಾಮಾಜಿಕ ಜಾಲತಾಣದಲ್ಲಿ ಯಾವ ಫೋಟೋ ಹಾಕಬಾರದು ಎಂದು ತಾಕೀತು ಮಾಡಿದ್ದರು ಎಂದಿದ್ದಾರೆ. ತನಗೆ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. 

click me!