3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಕನ್ನಡದ ನಟಿ!

Suvarna News   | Asianet News
Published : Jan 06, 2020, 10:11 AM IST
3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಕನ್ನಡದ ನಟಿ!

ಸಾರಾಂಶ

ಸ್ಯಾಂಡಲ್‌ವುಡ್ ಹಾಗೂ ಮಾಲಿವುಡ್‌ನಲ್ಲಿ ತನ್ನ ನಟಿನೆಯ ಮೂಲಕ ಇತಿಹಾಸ ಸೃಷ್ಟಿಸಿದ ಮುದ್ದು ಮುಖ ಚೆಲುವೆ ದಿವ್ಯಾ ಉನ್ನಿ ಈಗ ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ.  

ಇವರನ್ನು ಒಮ್ಮೆ ನೋಡಿದರೆ ಎಲ್ಲೋ ನೋಡಿದಂತೆ ಭಾಸವಾಗುತ್ತದೆ, ಇವರ ನಟನೆಗೆ ಫಿದಾ ಆದವರು ಒಬ್ರಾ ಇಬ್ರಾ? 

ಹೌದು ಅವರೇ 'ಬಾನಲ್ಲೂ ನೀನೇ ಭುವಿಯಲ್ಲೂ ನೀನೇ' ಚಿತ್ರದಲ್ಲಿ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಮಿಂಚಿದ ನಟಿ ದಿವ್ಯಾ ಉನ್ನಿ. ಮುಸಾಫರ್, ಮರ್ಕ್‌ ಆಂಟೋನಿ ಹಾಗೂ ಆಯುಷ್ಮಾನ್ ಭವ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದಿವ್ಯಾ ಮೂಲತಃ ನೃತ್ಯಗಾರತಿ. 

ತಪ್ಪು ಸಲಹೆಗಳಿಗೆ ಕಿವಿ ಕೊಡಬೇಡಿ; ಗರ್ಭಿಣಿ ಹೀಗಿದ್ರೆ ಚಂದ!

2002ರಲ್ಲಿ ಸುಧೀರ್ ಶೇಖರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿವ್ಯಾರಿಗೆ ಇಬ್ಬರು ಮಕ್ಕಳಿದ್ದಾರೆ ಕಾರಣಾಂತರಗಳಿಂದ 2016ರಲ್ಲಿ ವಿಚ್ಛೇದನ ಪಡೆದುಕೊಂಡು 2018ರಲ್ಲಿ ವಿದೇಶಕ್ಕೆ ತೆರಳಿ ಉದ್ಯಮಿ ಅರುಣ ಕುಮಾರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ಕೆಲ ದಿನಗಳ ಹಿಂದೆ ದಿವ್ಯಾ ಉನ್ನಿ ಗರ್ಭಿಣಿಯಾಗಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

ಅಮ್ಮನ ಪಾಸಿಟಿವ್ ಯೋಚನೆಯಿಂದ ಮಗುವಿನ ಹೃದಯ ಸಮಸ್ಯೆ ದೂರವಾಯ್ತು!

ಖ್ಯಾತ ಬರಹಗಾರತಿ ಹೆಲೆನ್ ಕೆಲ್ಲರ್ ಸಾಲು ' ವಿಶ್ವದ ಬೆಸ್ಟ್‌ ಮತ್ತು ಸುಂದರವಾದದ್ದನ್ನು ನೋಡಲು ಅಥವಾ ಮುಟ್ಟಲು ಸಾಧ್ಯವಿಲ್ಲ - ಅವುಗಳನ್ನು ಹೃದಯದಿಂದ ಅನುಭವಿಸಬೇಕು' ಎಂದು ಸೀಮಂತದ ಫೋಟೋ ರಿವೀಲ್ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?