RIP Nedumudi Venu: 500ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ ಹಿರಿಯ ನಟ ನೆಡುಮುಡಿ ವೇಣು ಇನ್ನಿಲ್ಲ

By Suvarna NewsFirst Published Oct 11, 2021, 2:17 PM IST
Highlights
  • ಮಾಲಿವುಡ್ ಹಿರಿಯ ನಟ ಇನ್ನಿಲ್ಲ
  • ಪತ್ರಕರ್ತನಾಗಿ ಔದ್ಯೋಗಿಕ ಜೀವನ ಆರಂಭಿಸಿ ನಟನಾದ ವೇಣು

ತಿರುವನಂತಪುರಂ(ಅ.11): ಮಾಲಿವುಡ್ ಹಿರಿಯ ನಟ ನೆಡುಮುಡಿ ವೇಣು(Nedumudi Venu) ಸೋಮವಾರ ಮೃತಪಟ್ಟಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಟನನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

73 ವರ್ಷದ ನಟ 500ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಇತ್ತೀಚೆಗಷ್ಟೇ ಕೊರೋನಾದಿಂದ ಗುಣಮುಖರಾಗಿದ್ದ ನಟ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಭಾನುವಾರ ವೇಣು ಅವರಿಗೆ ಅಸ್ವಸ್ಥತೆ ಉಂಟಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.

'ಅರಸು' ನಟಿ ಮೀರಾ ಜಾಸ್ಮಿನ್ ಕಮ್‌ಬ್ಯಾಕ್; ನಟಿ ಕೈಯಲ್ಲಿದೆ ಗೋಲ್ಡನ್ ವೀಸಾ!

ಪತ್ರಕರ್ತನಾಗಿ ವೃತ್ತಿ ಆರಂಭಿಸಿದ ವೇಣು ಅವರ ಹೆಸರಲ್ಲಿ ಬರುವ ನೆಡುಮುಡಿಯು ಅವರ ಹೆತ್ತವರು ವಾಸಿಸುವ ಮತ್ತು ಅವರು ಬೆಳೆದ ಸ್ಥಳವಾಗಿದೆ. ಕೇಶವನ್ ವೇಣುಗೋಪಾಲ್ ಎಂಬ ಹೆಸರಿದ್ದ ಅವರು ಸಿನಿಮಾಗಳಲ್ಲಿ ನಟಿಸುವ ಮೊದಲು ರಂಗಭೂಮಿಯಲ್ಲಿ ಅವರ ನಟನಾ ವೃತ್ತಿಜೀವನ ಆರಂಭಿಸಿದ್ದರು. ಅವರು ಜಿ ಅರವಿಂದನ್ ಅವರ ತಂಬು (1978) ಸಿನಿಮಾ ಮೂಲಕ ಮಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಆರು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದ ವೇಣು ಹಲವಾರು ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಠಾಕರದಲ್ಲಿರುವ ಚೆಲ್ಲಪ್ಪನಸಾರಿ ಪಾತ್ರ, ಚಾಮರಂನಲ್ಲಿ ಕ್ರಿಶ್ಚಿಯನ್ ಪಾದ್ರಿ, ಯವನಿಕಾದಲ್ಲಿ ಬಾಲಗೋಪಾಲನ್, ಆರೋಮರಿಯಥೆಯಲ್ಲಿ ಗೋವಿಂದನಕುಟ್ಟಿ ಮತ್ತು ಓರು ಮಿನ್ನಮಿಂಗುಂಟಿ ನೂರುಂಗುವೆಟ್ಟಂನಲ್ಲಿ ರಾವುಣ್ಣಿ ನಾಯರ್ ನಟರಾಗಿ ಅವರ ಬಹುಮುಖತೆಯನ್ನು ಪ್ರದರ್ಶಿಸುವ ಅನೇಕ ಸ್ಮರಣೀಯ ಪಾತ್ರಗಳಲ್ಲಿ ಒಂದಾಗಿದೆ.

ಇತ್ತೀಚೆಗಷ್ಟೆ ಆತಂ ಪೆನ್ನುಂ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಅವರು ಮೋಹನ್ ಲಾಲ್ ಮತ್ತು ಪ್ರಿಯದರ್ಶನ್ ಅವರ ಬಿಗ್‌ ಬಜೆಟ್ ಸಿನಿಮಾ ಮರಕ್ಕರ್: ಅರಬಿಕದಳಿಂತೆ ಸಿಂಹಮ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Farewell Venu uncle! Your body of work and your expertise over the craft will forever be research material for generations to come! Rest in peace legend! pic.twitter.com/VzZ4LF49Nq

— Prithviraj Sukumaran (@PrithviOfficial)

Legendary Malayalam/Tamil Actor passed away earlier today..

A great loss to the movie industry..

May his soul RIP! pic.twitter.com/m6ibXXKRJ5

— Ramesh Bala (@rameshlaus)
click me!