ಕಿರಿ ಮಗಳನ್ನು ಮುದ್ದಾಡಿದ ನಟ ಕೃಷ್ಣ ಕುಮಾರ್; ರಾಸಲೀಲೆ ಎಂದವರಿಗೆ ಕ್ಲಾಸ್ ತೆಗೆದುಕೊಂಡ ಪತ್ನಿ

By Vaishnavi Chandrashekar  |  First Published Oct 18, 2023, 4:41 PM IST

ಹುಟ್ಟುಹಬ್ಬದ ದಿನ ಮಗಳನ್ನು ಮುದ್ದಾಡಿದ ನಟ ಕೃಷ್ಣ ಕುಮಾರ್. ಅಪಾರ್ಥ ಮಾಡಿಕೊಂಡ ಜನರಿಗೆ ಫ್ಯಾಮಿಲಿಯಿಂದ ಸ್ಪಷ್ಟನೆ...


ಮಲಯಾಳಂ ಜನಪ್ರಿಯ ನಟ ಕೃಷ್ಣ ಕುಮಾರ್ ಮುದ್ದಾದ ಫ್ಯಾಮಿಲಿ ಮತ್ತೊಮ್ಮೆ ಸುದ್ದಿಯಲ್ಲಿದೆ. ನಟ ಕೃಷ್ಣ ಕುಮಾರ್ ಮತ್ತು ಸಿಂಧು ದಂಪತಿಗಳಿಗೆ ನಾಲ್ಕು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಅಹಾನ ಕೃಷ್ಣ, ಹೋಜಿ, ಇಶಾನಿ ಮತ್ತು ಹನ್ಸಿಕಾ ಎಂದು. ಕಿರಿ ಮಗಳು ಹನ್ಸಿಕಾ ಕೆಲವು ದಿನಗಳ ಹಿಂದೆ 18ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು.ಈ ವೇಳೆ ಕೃಷ್ಣ ಕುಮಾರ್ ತಮ್ಮ ಮಗಳನ್ನು ಹಿಂದಿನಿಂದ ತಬ್ಬಿಕೊಂಡು ಮುದ್ದಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಗೆಟಿವ್ ಕಾಮೆಂಟ್ ಹರಿದಾಡುತ್ತಿದೆ. ಹೀಗಾಗಿ ಕೃಷ್ಣ ಕುಮಾರ್ ಫ್ಯಾಮಿಲಿ ಸ್ಪಷ್ಟನೆ ನೀಡಿದ್ದಾರೆ.

'ದಯವಿಟ್ಟು ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ. ವೈರಲ್ ವಿಡಿಯೋಗೆ ಬಂದಿರುವ ಕಾಮೆಂಟ್ ಮತ್ತು ಮೆಸೇಜ್‌ನ ನಾನು ಡಿಲೀಟ್ ಮಾಡುವುದಿಲ್ಲ. ಮಲಯಾಳಿಗಳಲ್ಲಿ ಎಷ್ಟು ಸಣ್ಣ ಮನಸ್ಥಿತಿ ಇರುವ ಜನರಿದ್ದಾರೆ ಎಂದು ಎಲ್ಲರಿಗೂ ತಿಳಿಯಬೇಕು. ಅಪ್ಪ ಮಗಳು ತಬ್ಬಿಕೊಳ್ಳುವುದರಲ್ಲಿ ತಪ್ಪಿಲ್ಲ...ಕೆಟ್ಟ ರೀತಿಯಲ್ಲಿ ಯೋಚನೆ ಮಾಡಿ ನನ್ನ ಮಗಳ ಮನಸ್ಥಿತಿ ಮೇಲೆ ಪ್ರಭಾವ ಬೀರಬೇಡಿ. ದಯವಿಟ್ಟು ಮನೋ ವೈದ್ಯರ ಸಹಾಯ ಕೇಳಿ ಚಿಕಿತ್ಸೆ ಪಡೆಯಿರಿ. ಮೊದಲು ನೀವು ಯೋಚನೆ ಮಾಡುವ ರೀತಿ ಬದಲಾಯಿಸಿಕೊಳ್ಳಿ. ನಿಮ್ಮ ಮನಸ್ಸಿನಲ್ಲಿ ಕೆಟ್ಟದ್ದಿದ್ದರೆ ನೋಡುವುದರಲ್ಲಿ ಕೆಟ್ಟತನ ಕಾಣಿಸುತ್ತದೆ' ಎಂದು ಕೃಷ್ಣ ಕುಮಾರ್ ಪತ್ನಿ ಸಿಂಧು ಸ್ಪಷ್ಟನೆ ಕೊಟ್ಟಿದ್ದಾರೆ.

Tap to resize

Latest Videos

undefined

9 ಸಾವಿರ ರೂ. ಬೆಲೆಯ ಸ್ಕಾರ್ಫ್‌ನ ಲಂಗದ ರೀತಿ ಕಟ್ಟಿಕೊಂಡ ನಟಿ ಆಹಾನ ಕೃಷ್ಣ!

'ಜನರಿಗೆ ಇರುವ ಕೆಟ್ಟ ಯೋಚನೆಗಳಿಂದ ಅಪಾರ್ಥವಾಗುತ್ತದೆ. 'One man's meat is another man's poison' ಎಂದು ಇಂಗ್ಲಿಷ್‌ನಲ್ಲಿ ಹೇಳುತ್ತಾರೆ. ನಮಗೆ ಇಷ್ಟ ಆಗುವುದಕ್ಕೆ ಮತ್ತೊಬ್ಬರು ಕಸದ ರೀತಿ ನೋಡುತ್ತಾರೆ. ಒಂದು ಸೈಡ್ ಮಾತ್ರ ತಿಳಿದುಕೊಂಡು ಮಾತನಾಡಬಾರದು. ಕೆಲವರಿಗೆ ನನ್ನ ರಾಜಕೀಯ ಕೆಲಸಗಳಿಂದ ಸಿಟ್ಟು ದ್ವೇಷ ಇರಬಹುದು ಅದರಿಂದ ನನ್ನ ಮತ್ತು ನನ್ನ ಫ್ಯಾಮಿಲಿಗೆ ನೋವು ಮಾಡುತ್ತಿದ್ದಾರೆ. ಕೆಟ್ಟ ಅರ್ಥ ಕೊಟ್ಟು ವಿಡಯೋ ಅಥವ ಸುದ್ದಿ ಮಾಡಿದರೆ ಜನರು ನೋಡುತ್ತಾರೆ ಅಂದುಕೊಂಡಿದ್ದಾರೆ. ಅಪ್ಪ ಮಗಳ ಸಂಬಂಧ ಅರ್ಥ ಮಾಡಿಕೊಳ್ಳದೆ ವರ್ತಿಸುತ್ತಿದ್ದಾರೆ. ನನ್ನ ಕುಟುಂಬಕ್ಕೆ ಎಷ್ಟು ನೋವಾಗಿರುತ್ತದೆ ನಮ್ಮ ಮಗಳಿಗೆ ಎಷ್ಟು ಬೇಸರವಾಗಿರುತ್ತದೆ ಎಂದು ಅರ್ಥ ಮಾಡಿಕೊಳ್ಳಿ' ಎಂದು ಕೃಷ್ಣ ಕುಮಾರ್ ಖಾಸಗಿ ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದಾರೆ. 

 

click me!