ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದೆ ಎಂದು ಒಪ್ಪಿಕೊಂಡ ನಿರ್ದೇಶಕ..!

By Suvarna News  |  First Published Sep 24, 2020, 10:46 AM IST

ಮಾಜಿ ಪತ್ನಿಯೂ ಅನುರಾಗ್ ಕಷ್ಯಪ್‌ನನ್ನು ವಹಿಸಿಕೊಂಡು ಅನುರಾಗ್ ಹೆಣ್ಮಕ್ಕಳನ್ನು ಗೌರವಿಸುತ್ತಾನೆ ಎಂದ ಬೆನ್ನಲ್ಲೇ ತಾನು ಮಗುವಿಗೆ ಲೈಂಗಿಕವಾಗಿ ಬಳಸಿದ್ದೆ ಎಂದ ನಿರ್ದೇಶಕನ ಮಾತುಗಳು ವೈರಲ್ ಆಗುತ್ತಿದೆ.


ನಿರ್ದೇಶಕ, ನಿರ್ಮಾಪಕ ಅನುರಾಗ್ ಕಷ್ಯಪ್‌ನ ಮಾಜಿ ಪತ್ನಿಯರು ನಟನ ನಮ್ರತೆ, ಪ್ರಾಮಾಣಿಕತೆ ಮತ್ತು ಸತ್ಯವನ್ನು ಬೆಂಬಲಿಸಿ ಮಾತನಾಡಿದ ಬೆನ್ನಲ್ಲೇ ನಟನ ಹಳೆಯದೊಂದು ಇಂಟರ್‌ವ್ಯೂ ವೈರಲ್ ಆಗಿದೆ.

ಮಾಜಿ ಪತ್ನಿಯೂ ಅನುರಾಗ್ ಕಷ್ಯಪ್‌ನನ್ನು ವಹಿಸಿಕೊಂಡು ಅನುರಾಗ್ ಹೆಣ್ಮಕ್ಕಳನ್ನು ಗೌರವಿಸುತ್ತಾನೆ ಎಂದ ಬೆನ್ನಲ್ಲೇ ತಾನು ಮಗುವನ್ನು ಲೈಂಗಿಕವಾಗಿ ಬಳಸಿದ್ದೆ ಎಂದ ನಿರ್ದೇಶಕನ ಮಾತುಗಳು ವೈರಲ್ ಆಗುತ್ತಿದೆ.

Tap to resize

Latest Videos

ಲೈಂಗಿಕ ಕಿರುಕುಳ ಅರೋಪ ಎದುರಿಸಿದ ಬಾಲಿವುಡ್‌ನ ಸೆಲೆಬ್ರೆಟಿಗಳು!

ಮಗುವಿಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ಅನುರಾಗ್ ಕಷ್ಯಪ್ ಒಪ್ಪಿಕೊಂಡ ಹಳೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹರೆಯದಲ್ಲಿದ್ದಾಗ ಮಗುವಿನ ಮೇಲೆ ಲೈಂಗಿಕ ಕಿರುಕುಳ ಮಾಡಿದ್ದಾಗಿ ನಟ ಈ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ.

In this video he himself speaking about when he molested & abused a boy in the past during high school & caught just check out his thoughts 😳😱 Disgusting 😡 pic.twitter.com/20xz6GZRhE

— Rajeev Singh Rathore (@TheHinduYoddha)

undefined

ಮಗುವಿಗೆ ಕಿರುಕುಳ ನೀಡುವಾಗ ಅದು ಸಹಜ ಅದನ್ನು ಮಾಡಬಹುದು ಎನಿಸಿತ್ತು. ನನಗೂ ಅದೇ ಅನುಭವವಾಗಿತ್ತು ಎಂದು ನಿರ್ದೇಶಕ ಕಷ್ಯಪ್ ಹೇಳಿಕೊಂಡಿದ್ದರು. ಟ್ವಿಟರ್ ಬಳಕೆದಾರ ರಾಜೀವ್ ಸಿಂಗ್ ರಾಥೋರ್ ಎಂಬಾತ ಅನುರಾಗ್ ಕಷ್ಯಪ್‌ನ ಹಳೆಯ ಇಂಟರ್‌ವ್ಯೂ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಫೇಕ್ ಸ್ಕ್ರೀನ್ ಶಾಟ್ ತೋರಿಸಿ ನಿರ್ದೇಶಕನ ವಿರುದ್ಧ ಆರೋಪಿಸಿದ ನಟಿ ಈಕೆಯೇ..!

ಲೈವ್ ಆಗಿ ಕ್ಯಾಮೆರಾ ಮುಂದೆಯೇ ಅನುರಾಗ್ ಕಷ್ಯಪ್ ಡ್ರಗ್ಸ್ ತೆಗೆದುಕೊಳ್ಳೋದನ್ನು ಇಲ್ಲಿ ನೋಡಬಹುದು. ಡ್ರಗ್ಸ್ ಕಾನೂನುಬದ್ಧವಲ್ಲ ಎಂಬುದು ಗೊತ್ತಿದ್ದರೂ ಕಷ್ಯಪ್‌ನಂತವರು ಕಾನೂನು ಬಗ್ಗೆ ತಲೆ ಕಡಿಸಿಕೊಳ್ಳಲ್ಲ ಎಂದಿದ್ದಾರೆ.

Here is Anurag Kashyap is taking drugs live on camera without any fear of law as drugs are illegal but then Anurag Kashyap like people do not care about any law. pic.twitter.com/1LVN1v8Mzl

— Rajeev Singh Rathore (@TheHinduYoddha)

ಇನ್ನೊಂದು ವಿಡಿಯೋ ಶೇರ್ ಮಾಡಿ ತಾನು ಮಗುವಿಗೆ ಲೈಂಗಿಕ ಕಿರುಕುಳ ನೀಡುವಾಗ ಸಿಕ್ಕಿಬಿದ್ದಿದ್ದನ್ನು ಹೇಳಿದ್ದಾರೆ. ಅವರ ಯೋಚನೆಗಳನ್ನು ನೋಡಿ ಎಂದು ಕ್ಯಾಪ್ಶನ್ ಕೊಟ್ಟು ವಿಡಿಯೋ ಶೇರ್ ಮಾಡಲಾಗಿದೆ.

'ಜಿಪ್ ತೆಗೆದು ಸಲ್ವಾರ್ ಕಮೀಜ್ ಒಳಗೆ ಬಂದಿದ್ದ ಅನುರಾಗ್'

6 ವರ್ಷದವನಿದ್ದಾಗ ನನ್ನ ಊರಿನ ಯಾರೋ ಲೈಂಗಿಕ ಕಿರುಕುಳ ನೀಡಿದ್ದರು. ಆ ಸಮಯದಲ್ಲಿ ಸೆಕ್ಸ್ ಬಗ್ಗೆ ಗೊತ್ತೇ ಇರಲಿಲ್ಲ. ನಂತರ ತಾನು ಇಂಗ್ಲಿಷ್ ಮೀಡಿಯಂ ಬೋರ್ಡಿಂಗ್ ಸ್ಕೂಲ್‌ನಲ್ಲಿ ಕಲಿಯುತ್ತಿದ್ದಾಗ ಹಸ್ತಮೈಥುನದ ಬಗ್ಗೆ ಗೆಳೆಯರಿಂದ ತಿಳಿಯಿತು. ಜೂನಿಯರ್ ಆಗಿದ್ದಾಗ ಸೀನಿಯರ್‌ಗಳು ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅದು ನಾರ್ಮಲ್ ಎಂದೇ ತಿಳಿದುಕೊಂಡಿದ್ದೆ. ತಾನೂ ಸೀನಿಯರ್ ಆದಾಗ ಹಾಗೆ ಮಾಡಬಹುದು ಎಂದುಕೊಂಡಿದ್ದೆ. ತಾನು ಸೀನಿಯರ್ ಆದಾಗ ಜೂನಿಯರನ್ನು ಹರಾಸ್ ಮಾಡಿದ್ದೆ. ನಂತರ ಅದು ಅವರ ಪೋಷಕರಿಗೆ ತಿಳಿದು ತಮ್ಮ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದರು ಎಂದಿದ್ದಾರೆ.

ಹೆಚ್ಚು ಒತ್ತಡದಿಂದಾಗಿ ಮದ್ಯ ವ್ಯಸನಿಯಾಗಿ ಡ್ರಗ್ಸ್ ತೆಗೆದುಕೊಳ್ಳೋಕೆ ಆರಂಭಿಸಿದ್ರು ಎಂದು ಹೇಳುತ್ತಲೇ ಅನುರಾಗ್ ಡ್ರಗ್ಸ್ ತೆಗೆದುಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.

"

click me!