
ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ದಾಖಲೆ ಮಾಡಿದೆ ದೃಶ್ಯಂ ಚಿತ್ರದ ಎರಡನೇ ಭಾರ ಇದೇ ಫೆ.19 ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮೊದಲನೇ ಭಾಗದಲ್ಲಿ ಮೋಹನ್‌ಲಾಲ್ ಹಾಗೂ ಮೀನಾ ಅಭಿನಯಕ್ಕೆ ಫಿದಾ ಆಗಿರುವ ವೀಕ್ಷಕರು ಎರಡನೇ ಭಾಗವನ್ನು ಮಿಸ್ ಮಾಡಲು ಚಾನ್ಸೇ ಇಲ್ಲ ಎನ್ನಬಹುದು.
ಮಾಲಿವುಡ್‌ನಲ್ಲಿ KGFನ ಗರುಡ ರಾಮ್..! ಮೋಹನ್‌ಲಾಲ್ ಜೊತೆ ರಾಜು .
ಚಿತ್ರದ ಟ್ರೇಲರ್ ತುಂಬಾ ಡಿಫರೆಂಟ್ ಆಗಿದ್ದು ರಿಲೀಸ್ ಆದ ಒಂದೇ ದಿನದಲ್ಲಿ 10 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ತನ್ನ ಕುಟುಂಬವನ್ನು ಕಾಪಾಡಲು ಒಂದು ಕೊಲೆ ಪ್ರಕರಣವನ್ನು ಮುಚ್ಚುಹಾಕಲಾಗುತ್ತದೆ. ಅಂದು ಮಾಡಿದ ಕೊಲೆ ಮತ್ತೆ ಕುಟುಂಬದವರನ್ನು ಕಾಡಲು ಶುರುವಾಗಿದೆ. ಮೊದಲ ಭಾಗ ಮುಕ್ತಾಯಗೊಂಡ ದೃಶ್ಯದಿಂದಲೇ ಚಿತ್ರದ ಎರಡನೇ ಭಾಗ ಶುರುವಾಗುತ್ತದೆ.
ಕೇಬಲ್ ಟಿವಿ ಬ್ಯುಸಿನೆಸ್ ನಡೆಸುತ್ತಿದ್ದ ನಾಯಕ ಎರಡನೇ ಭಾಗದಲ್ಲಿ ಚಿತ್ರ ಮಂದಿರ ಮಾಲೀಕನಾಗಿರುತ್ತಾನೆ. ಈ ಬಾರಿಯೂ ಚಿತ್ರಕ್ಕೆ ಜೀತೂ ಜೋಸೆಫ್ ಆಕ್ಷನ್ ಕಟ್ ಹೇಳಿದ್ದಾರೆ. 10 ಲಕ್ಷ ವೀಕ್ಷಣೆ ಪಡೆದುಕೊಂಡು, 1 ಲಕ್ಷ ಲೈಕ್ಸ್ ಪಡೆದುಕೊಂಡಿರುವ ಈ ಚಿತ್ರ ಮತ್ತೊಮ್ಮೆ ಹಿಟ್ ಆಗುವುದರಲ್ಲಿ ಅನುಮಾವಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.