ನಾಯಕಿ ಬಿಡ್ರಿ, ಚಿತ್ರಕ್ಕೆ ಪ್ರಮುಖ ವಿಲನೇ ನಮ್ಮ ಕನ್ನಡಿಗ; ಸಲಾರ್‌ ತಂಡಕ್ಕೆ ಗುರುಸ್ವಾಮಿ ಎಂಟ್ರಿ!

Published : Feb 07, 2021, 11:20 AM ISTUpdated : Feb 07, 2021, 11:26 AM IST
ನಾಯಕಿ ಬಿಡ್ರಿ, ಚಿತ್ರಕ್ಕೆ ಪ್ರಮುಖ ವಿಲನೇ ನಮ್ಮ ಕನ್ನಡಿಗ; ಸಲಾರ್‌ ತಂಡಕ್ಕೆ ಗುರುಸ್ವಾಮಿ ಎಂಟ್ರಿ!

ಸಾರಾಂಶ

ಸಲಾರ್ ಚಿತ್ರ ಮುಹೂರ್ತದ ನಂತರ ಪಾತ್ರಧಾರಿಗಳ ಬಗ್ಗೆ ತಂಡ ಒಂದೊಂದೇ ಸುಳಿವು ನೀಡುತ್ತಿದೆ. ಇದೀಗ ವಿಲನ್ ಪಾತ್ರಕ್ಕೆ ಗುರುಸ್ವಾಮಿ ಎಂಟ್ರಿ ಕೊಡುವುದು ಖಚಿತವಾಗಿದೆ.

ಕೆಜಿಎಫ್‌ ಚಿತ್ರದ ನಂತರ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ದಾಖಲೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ಟಾಲಿವುಡ್‌ ಹ್ಯಾಂಡ್ಸಮ್ ಪ್ರಭಾಸ್‌ಗೆ ಆಕ್ಷನ್‌ ಕಟ್ ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಚಿತ್ರ ಮುಹೂರ್ತ ನಡೆದಿದ್ದು ಇದೀಗ ಚಿತ್ರೀಕರಣಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.

ಸಲಾರ್‌ಗೆ ಶ್ರುತಿ ಹಾಸನ್‌ ಬರ ಮಾಡಿಕೊಂಡ ಪ್ರಭಾಸ್, ಪ್ರಶಾಂತ ನೀಲ್! 

ಕನ್ನಡದ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿರುವ ಕಾರಣ ನಾಯಕಿ ಹಾಗೂ ವಿಲನ್ ಪಾತ್ರಧಾರಿಗಳ ಬಗ್ಗೆ ಹೆಚ್ಚಿನ ಕುತೂಹಲವಿತ್ತು. ಕಮಲ್ ಹಾಸನ್ ಪುತ್ರಿ ಶ್ರುತಿ ನಾಯಕಿ ಎಂದು ತಿಳಿದ ತಕ್ಷಣ ಕನ್ನಡಿಗರ ಕೊಂಚ ಬೇಸರ ವ್ಯಕ್ತಪಡಿಸಿದರು. ಆದರೆ ವಿಲನ್ ಯಾರೆಂದು ತಿಳಿಯುತ್ತಿದ್ದಂತೆ ಸಂತಸ ಮನೆ ಮಾಡಿದೆ. 

ಹೌದು! ಇದೀಗ ಪ್ರಭಾಸ್ ಎದುರು ಅಬ್ಬರಿಸಲು ಮಧು ಗುರುಸ್ವಾಮಿ  ಎಂಟ್ರಿ ಕೊಟ್ಟಿದ್ದಾರೆ. ಭಜರಂಗಿ, ವಜ್ರಕಾಯ, ಮಫ್ತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಧು ಅಭಿನಯಿಸಿದ್ದಾರೆ.  ಮೊದಲ ಬಾರಿ ಫ್ಯಾನ್ ಇಂಡಿಯಾ ಚಿತ್ರದಲ್ಲಿ ಅಭಿನಯಿಸುತ್ತಿರುವುದ ಬಗ್ಗೆ ಮಧು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  'ಹಾಯ್ ಸ್ನೇಹಿತರೆ. ನನ್ನ ಮುಂದಿನ ಸಿನಿಮಾ ಸಲಾರ್ ಎಂದು ಘೋಷಿಸಲು ತುಂಬಾ ಸಂತೋಷವಾಗುತ್ತಿದೆ. ಪ್ರಶಾಂತ್ ನೀಲ್ ಸರ್ ಹಾಗೂ ಹೊಂಬಾಲೆ ಫಿಲ್ಮ್ಸ್‌ಗೆ ಧನ್ಯವಾದಗಳು. ಹೀಗೆ ಪ್ರೋತ್ಸಾಹ ನೀಡಿ' ಎಂದು ಮಧು ಬರೆದುಕೊಂಡಿದ್ದಾರೆ.

ಪ್ರಭಾಸ್‌ ಹಾಕಿದ್ದ ಈ ಎರಡು ಫೋಟೋದಲ್ಲಿ ನಟ ಯಶ್‌ ಇಲ್ಲ; ಅಭಿಮಾನಿಗಳ ಆಕ್ರೋಶ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಮದುವೆ ಯಾವಾಗ?' ಪ್ರಶ್ನೆಗೆ ಅಂಜಲಿ 'ಹತ್ತಿ' ಚಾಟಿ ಏಟು.. ಸ್ನೇಹಿತರ ಅಂತರಂಗದ ಆಸೆಯ ಅಸಲೀಯತ್ತು ಬಟಾಬಯಲು
ಮೂಕಜೀವಿಗಳಿಗಾಗಿ ಖ್ಯಾತ ಆ್ಯಂಕರ್ ರಶ್ಮಿ ಗೌತಮ್ ಧ್ವನಿ: ಟ್ರೋಲರ್ಸ್‌ಗೆ ಕೊಟ್ಟ ಸಂದೇಶ ವೈರಲ್!