
2022ರ ಮಿಸ್ ಯೂನಿವರ್ಸ್ ಫೈನಲಿಸ್ಟ್ ಮತ್ತು ಆಸ್ಟ್ರೇಲಿಯನ್ ಫ್ಯಾಷನ್ ಲೋಕದ ಐಕಾನ್ ಪ್ರಸಿದ್ಧ ಮಾಡೆಲ್ ಸಿಯೆನ್ನಾ ವೀರ್ ದುರಂತ ಸಾವನ್ನಪ್ಪಿದ್ದಾರೆ. ಕುದುರೆ ಸವಾರಿ ಮಾಡುವ ವೇಳೆ ಕುಸಿದು ಬಿದ್ದು 23ವರ್ಷದ ಮಾಡೆಲ್ ಸಿಯೆನ್ನಾ ವೀರ್ ಜೀವ ಕಳೆದು ಕೊಂಡಿದ್ದಾರೆ. ಕಳೆದ ತಿಂಗಳು ಆಸ್ಟ್ರೇಲಿಯಾದಲ್ಲಿ ಕುದುರೆ ಸವಾರಿ ಮಾಡುವಾಗ ಈ ಘಟನೆ ಸಂಭವಿಸಿದೆ. ಏಪ್ರಿಲ್ 2ರಂದು ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಮೈದಾನದಲ್ಲಿ ಕುದುರೆ ಸವಾರಿ ಮಾಡುತ್ತಿದ್ದಾಗ ಕೆಳಗೆ ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಇರಿಸಲಾಗಿತ್ತು. ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕಿಚಿತ್ಸೆ ಫಲಕಾರಿಯಾಗದೆ ಸಿಯೆನ್ನಾ ನಿಧನರಾಗಿದ್ದಾರೆ.
ಸಿಯೆನ್ನಾ ವೀರ್ ನಿಧನದ ಸುದ್ದಿಯನ್ನು ಅವರ ಕುಟುಂಬಸ್ಥರು ಖಚಿತಪಡಿಸಿದ್ದಾರೆ. ಸಿಯೆನ್ನಾ ವೀರ್‌ಗೆ ಅಳವಡಿಸಿದ್ದ ಜೀವ ರಕ್ಷಕವನ್ನು ತೆಗೆದುಹಾಕಲು ನಿರ್ಧರಿಸಿದ್ದ ಬಗ್ಗೇ ಹೇಳಿದ್ದರು. ಇನ್ನು ಸಿಯೆನ್ನಾ ಮಾಡೆಲಿಂಗ್ ಏಜೆನ್ಸಿ ಸ್ಕೂಪ್ ಮ್ಯಾನೇಜ್‌ಮೆಂಟ್ ಕೂಡ ಅವರ ಸಾವನ್ನು ದೃಢಪಡಿಸಿದೆ ಮತ್ತು Instagram ನಲ್ಲಿ ಅವರ ಹಲವಾರು ಫೋಟೋಗಳನ್ನು ಹಂಚಿಕೊಂಡಿದೆ. 'ನಮ್ಮ ಹೃದಯದಲ್ಲಿ ಎಂದೆಂದಿಗೂ' ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ.
ಫುಟ್‌ಬಾಲ್ ಫೀಲ್ಡ್‌ನಲ್ಲೇ ಕುಸಿದು ಬಿದ್ದು ಮಲಯಾಳಂ ಖ್ಯಾತ ನಟ ಮಾಮುಕ್ಕೋಯ ನಿಧನ
2022 ರ ಆಸ್ಟ್ರೇಲಿಯನ್ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 27 ಫೈನಲಿಸ್ಟ್‌ಗಳಲ್ಲಿ ಸಿಯೆನ್ನಾ ವೀರ್ ಒಬ್ಬರಾಗಿದ್ದರು. ಅವರು ಸಿಡ್ನಿ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯ ಮತ್ತು ಮನೋವಿಜ್ಞಾನದಲ್ಲಿ ಡಬಲ್ ಪದವಿ ಪಡೆದಿದ್ದರು. ತನ್ನ ವೃತ್ತಿಜೀವನವನ್ನು ಮುಂದುವರಿಸಲು ಯುಕೆಗೆ ತೆರಳಬೇಕೆಂದು ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದರು. ಹಾಗಾಗಿ 'ನನ್ನ ಸಹೋದರಿ, ಸೊಸೆ ಮತ್ತು ಸೋದರಳಿಯರೊಂದಿಗೆ ಹೆಚ್ಚು ಸಮಯ ಕಳೆಯಲು ಮತ್ತು ನನ್ನ ವೃತ್ತಿಪರ ಮತ್ತು ಸಾಮಾಜಿಕ ನೆಟ್‌ವರ್ಕ್ ಎರಡನ್ನೂ ವಿಸ್ತರಿಸಬೇಕೆಂದು ಹೇಳಿದ್ದರು. ಆದರೀಗ ದುರಂತ ಅಂತ್ಯ ಕಂಡಿರುವುದು ಕುಟುಂಬಕ್ಕೆ ಹಾಗೂ ಆಕೆಯ ಅಭಿಮಾನಿಗಳಿಗೆ ನೋವಿನ ಸಂಗತಿಯಾಗಿದೆ.
ಸಿಯೆನ್ನಾ ವೀರ್ ಅವರಿಗೆ ಕುದುರೆ ಸವಾರಿ ಎಂದರೆ ತುಂಬಾ ಇಷ್ಟ. ಸದಾ ಕುದುರೆ ಸವಾರಿ ಮಾಡುತ್ತಿದ್ದರು. ಈ ಬಗ್ಗೆ ಅಲ್ಲಿನ ಮ್ಯಾಗಜಿನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು.
Innocent Passes Away: ಮಲಯಾಳಂ ನಟ, ಮಾಜಿ ಸಂಸದ ಇನ್ನೋಸೆಂಟ್ ನಿಧನ
ಆಸ್ಟ್ರೇಲಿಯನ್ ಫಿಟ್‌ನೆಸ್ ಮಾಡೆಲ್ ಕುದುರೆ ಸವಾರಿಗಾಗಿ ಜೀವಮಾನದ ಉತ್ಸಾಹವನ್ನು ಹೊಂದಿದ್ದರು. ಅವರು ಗೋಲ್ಡ್ ಕೋಸ್ಟ್ ಮ್ಯಾಗಜೀನ್‌ಗೆ ಹೀಗೆ ಹೇಳಿದರು, 'ನಾನು 3 ವರ್ಷದವಳಾಗಿದ್ದಾಗಿನಿಂದಲೂ ಕುದುರೆ ಸವಾರಿ ಮಾಡುತ್ತಿದ್ದೇನೆ ಮತ್ತು ಅದು ಇಲ್ಲದೆ ನನ್ನ ಜೀವನವನ್ನು ಊಹಿಸಲು ಸಾಧ್ಯವಿಲ್ಲ. ಪ್ರತಿ ವಾರಾಂತ್ಯದಲ್ಲಿ ನ್ಯೂ ಸೌತ್ ವೇಲ್ಸ್ ಅಥವಾ ವಿಶಾಲವಾದ ಆಸ್ಟ್ರೇಲಿಯಾದಲ್ಲಿ ತರಬೇತಿ ನೀಡಲು ಮತ್ತು ಸ್ಪರ್ಧಿಸಲು ನಾನು ವಾರಕ್ಕೆ 2-3 ಬಾರಿ ಗ್ರಾಮೀಣ ಸಿಡ್ನಿಗೆ ಪ್ರಯಾಣಿಸುತ್ತೇನೆ' ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.