ಸೋಷಿಯಲ್ ಮೀಡಿಯಾದಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಿದ ಅಜ್ಜಿ. 15 ಪುಷಪ್ಸ್ ನೋಡಿ ನೆಟ್ಟಿಗರು ಶಾಕ್...
ಬಾಲಿವುಡ್ ನಟ ಕಮ್ ಮಾಡಲ್ ಮಿಲಿಂದ್ ಸೋಮನ್ ಫಿಟ್ನೆಸ್ ಫ್ರಿಕ್ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೆ ಅವರ ತಾಯಿ ಕೂಡ ಫಿಟ್ನೆಸ್ ಫ್ರಿಕ್ ಎಂಬುದು ಈ ವಿಡಿಯೋ ನೋಡಿದ ಪರ್ತಿಯೊಬ್ಬರೂ ಹೇಳುತ್ತಿದ್ದಾರೆ.
300 ಮಹಡಿ ಏರಿ ಆ್ಯನಿವರ್ಸರಿ ಸೆಲೆಬ್ರೆಟ್ ಮಾಡಿಕೊಂಡ ಕಪಲ್ಇತ್ತೀಚಿಗೆ 81 ವರ್ಷಕ್ಕೆ ಕಾಲಿಟ್ಟ ಉಷಾ ಸೋಮನ್ ಅವರಿಗೆ ಶುಭಾಶಯ ಕೋರಲು ಅವರ ಸೊಸೆ ಅಂಕಿತಾ ಮನೆಯಲ್ಲಿಯೇ ಕೇಕ್ ತಯಾರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಿಲಿಂದ್ ತಮ್ಮ ತಾಯಿ ಸೀರೆ ಧರಿಸಿ ಪುಷಪ್ ಮಾಡಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
'ಜುಲೈ 3ರಂದು ನನ್ನ ತಾಯಿಯ ಲಾಕ್‌ಡೌನ್ ಬರ್ತಡೇ ಆಚರಿಸಿದೆವು. ಸೀರೆ ಧರಸಿ ಆಕೆ ಮಾಡಿದ ಪುಷಪ್ ನೋಡಿ ಹಾಗೂ ಅಂಕಿತಾ ಮನೆಯಲ್ಲಿಯೇ ಬೆಲ್ಲ, ವೆನಿಲಾ ಮತ್ತು ಬಾದಾಮಿ ಬಳಸಿ ಕೇಕ್ ತಯಾರಿಸಿದ್ದೇವೆ. ಹ್ಯಾಪಿ ಬರ್ತಡೇ Aai' ಎಂದು ಮಿಲಿಂದ್ ಬರೆದುಕೊಂಡಿದ್ದಾರೆ.
ಮಿಲಿಂದ್ ಮತ್ತು ಪತ್ನಿ ಅಂಕಿತಾ ಫಿಟ್ನೆಸ್ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುತ್ತಾರೆ. 52 ವರ್ಷ ಮಿಲಿಂದ್ ತನಗಿಂತ 25 ವರ್ಷದ ಚಿಕ್ಕವಯಸ್ಸಿನ ಹುಡುಗಿಯನ್ನು ಮದುವೆಯಾದ ಕಾರಣ ಅನೇಕರು ಟ್ರೋಲ್ ಮಾಡಿದರು. ಏಪ್ರಿಲ್ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಅನೇಕರಿಗೆ ಸ್ಫೂರ್ತಿಯಾದರು. ಎರಡನೇ ವಿವಾಹ ವಾರ್ಷಿಕೋತ್ಸವವನ್ನು ಇಬ್ಬರು ವಿಭಿನ್ನವಾಗಿ ಆಚರಿಸಿಕೊಂಡಿದ್ದರು. 132 ನಿಮಿಷಗಳಲ್ಲಿ 300 ಮಹಡಿಗಳನ್ನು ಹತ್ತಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಟೋ ಶೇರ್ ಮಾಡಿಕೊಂಡು ಬರೆದುಕೊಂಡಿದ್ದಾರೆ.
52 ಆದರೂ ತಮ್ಮ ಫಿಟ್ನೆಸ್ ಕಾಳಜಿಯಿಂದ ಈಗಲೂ ಮಿಲಿಂದ್ ಹುಡುಗಿಯರ ಫಾರ್‌ಎವರ್ ಕ್ರಷ್ ಆಗಿದ್ದಾರೆ.