ಸ್ಯಾಂಡಲ್ವುಡ್ ನಟಿ ಮಿಲನಾ ನಾಗರಾಜ್ ಅಮ್ಮನಾಗಿ ಬಡ್ತಿ ಪಡೆದಿದ್ದಾರೆ. ಹೆರಿಗೆಯಾಗಿ ತಿಂಗಳಾಗಿಲ್ಲ ಆಗ್ಲೇ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇರುವ ಅವರು, ಎಷ್ಟು ಗಂಟೆ ನಿದ್ರೆ ಮಾಡ್ತೇನೆ, ಅಮ್ಮನ ಪಾತ್ರ ಹೇಗಿದೆ ಎಂಬುದನ್ನು ಹೇಳಿದ್ದಾರೆ.
ಮೊನ್ನೆಯಷ್ಟೇ ಹೆರಿಗೆ ಆಗಿದೆ, ಈಗ್ಲೇ ಮೀಡಿಯಾ ಮುಂದೆ ಕಾಣಿಸಿಕೊಳ್ತಿದ್ದಾರೆ ಅಂತ ಸ್ಯಾಂಡಲ್ವುಡ್ ನಟಿ ಮಿಲನಾ ನಾಗರಾಜ್ (Sandalwood actress Milana Nagaraj) ನೋಡಿದಾಗ ಎಲ್ಲರೂ ಅಂದ್ಕೊಂಡಿದ್ದು ಸುಳ್ಳಲ್ಲ. ಕೆಲವೇ ಕೆಲವು ದಿನ ವಿಶ್ರಾಂತಿ ಪಡೆದಿದ್ದ ಮಿಲನಾ ನಾಗರಾಜ್ ಮತ್ತೆ ಫೀಲ್ಡ್ ಗೆ ಇಳಿದಿದ್ದಾರೆ. ಬಾಲಿವುಡ್ ಹಿರೋಯಿನ್ ಕರಿಷ್ಮಾ ಕಪೂರ್ (Bollywood heroine Karisma Kapoor) ಮಾತ್ರವಲ್ಲ ಸ್ಯಾಂಡಲ್ವುಡ್ ನಟಿ ಕೂಡ ಈ ವಿಷ್ಯದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಹೆರಿಗೆಯಾದ ಮೂರು ತಿಂಗಳು, ಅಮ್ಮನಾದವಳು ವಿಶ್ರಾಂತಿ ಮಾಡ್ಬೇಕು, ಮನೆಯಿಂದ ಹೊರಗೆ ಹೋಗ್ಬಾರದು ಅಂತ ಹಿರಿಯರು ಹೇಳ್ತಾರೆ. ಆದ್ರೆ ಈಗಿನ ಪರಿಸ್ಥಿತಿ ಭಿನ್ನವಾಗಿದೆ. ವೈಯಕ್ತಿಕ ಬದುಕಿನ ಜೊತೆ ವೃತ್ತಿ ಜೀವನಕ್ಕೂ ಮಹಿಳೆಯರು ಆದ್ಯತೆ ನೀಡ್ಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದು ಮುಖ್ಯ ಎಂಬುದನ್ನು ನೋಡಿ ಕೆಲಸ ಮಾಡ್ಬೇಕಿದೆ. ಅದಕ್ಕೆ ಮಿಲನಾ ನಾಗರಾಜ್ ಉತ್ತಮ ನಿದರ್ಶನ.
ಇನ್ ರಿಲೇಷನ್ ಶಿಪ್ ಎಂದ ವಿಜಯ್ ದೇವರಕೊಂಡ, ಕನ್ನಡ ನಟಿಯೊಂದಿಗೆ ನಂಟಾ?
ಇನ್ನೇನು ಹೆರಿಗೆ ಆಗುತ್ತೆ ಎನ್ನುವ ಸಂದರ್ಭದಲ್ಲೂ ಮಿಲನಾ ನಾಗರಾಜ್ ಕೆಲಸ ಮಾಡಿದ್ದರು. ಹೆರಿಗೆಗೆ ಮೂರು ದಿನವಿದೆ ಎನ್ನುವ ಸಮಯದಲ್ಲಿ ಆರಾಮ ಅರವಿಂದ ಸ್ವಾಮಿ (Aaram Aravind Swamy) ಸಿನಿಮಾ ಡಬ್ಬಿಂಗ್ ಮಾಡಿದ್ರು ಮಿಲನಾ. ಪೋಸ್ಟ್ ಪ್ರೊಡಕ್ಷನ್ಗೆ ತಮ್ಮಿಂದ ತೊಂದರೆ ಆಗದಿರಲಿ ಎನ್ನುವ ಕಾರಣಕ್ಕೆ ಮಿಲನಾ ತಮ್ಮ ಕೆಲಸ ಮಾಡಿ ಮುಗಿಸಿದ್ರು. ಈಗ್ಲೂ ಕರ್ತವ್ಯವನ್ನು ಅವರು ಮರೆತಿಲ್ಲ.
ಆರಾಮಾ ಅರವಿಂದ ಸ್ವಾಮಿ ಸಿನಿಮಾ ಪ್ರಮೋಷನ್ನಲ್ಲಿ ಬ್ಯೂಸಿಯಾಗಿರುವ ಮಿಲನಾ ನಾಗರಾಜ್ ಡೆಲಿವರಿಯಾಗಿ ಎರಡು ತಿಂಗಳಾಗಿಲ್ಲ. ಸೆಪ್ಟೆಂಬರ್ 5ರಂದು ಮಗುವಿಗೆ ಜನ್ಮ ನೀಡಿರುವ ಮಿಲನಾ ನಾಗರಾಜ್, ತಿಂಗಳೊಳಗೆ ಪ್ರಚಾರ ಶುರು ಮಾಡಿದ್ದರು. ಪ್ರಚಾರ, ಇಂಟರ್ವ್ಯೂ ಅಂತ ಒಂದಾದ್ಮೇಲೆ ಒಂದು ಕಡೆ ಮಿಲನಾ ಓಡಾಟ ನಡೆಸುತ್ತಿದ್ದಾರೆ. ನಟಿಗೆ ವೃತ್ತಿಯ ಮೇಲಿರುವ ಪ್ರೀತಿ, ಫ್ಯಾಷನ್ ಮತ್ತು ಆಸಕ್ತಿಯನ್ನು ಇದು ತೋರಿಸುತ್ತದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಮಿಲನಾ ನಾಗರಾಜ್, ಅಮ್ಮನಾದ್ಮೇಲೆ ಕೆಲಸವನ್ನು ಹೇಗೆ ಸಂಭಾಳಿಸ್ತಿದ್ದಾರೆ ಎಂಬ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಮಿಲನಾ ನಾಗರಾಜ್ ಮಗುವಾದ್ಮೇಲೆ ಪ್ರತಿ ದಿನ ಮಲಗಿದ್ದು ಎರಡರಿಂದ ಮೂರು ಗಂಟೆ ಮಾತ್ರವಂತೆ. ನವಜಾತ ಶಿಶುಗಳು ರಾತ್ರಿ ಅಮ್ಮಂದಿರಿಗೆ ನಿದ್ರೆ ನೀಡೋದಿಲ್ಲ. ಆಗಾಗ ಏಳೋದು ಅನಿವಾರ್ಯ. ಈ ಮಧ್ಯೆ ಆರಾಮ ಅರವಿಂದ ಸ್ವಾಮಿ ಸಿನಿಮಾ ಪ್ರಚಾರದ ಭಾರ ಕೂಡ ಮಿಲನಾ ನಾಗರಾಜ್ ಮೇಲಿತ್ತು. ಎರಡನ್ನೂ ನೋಡಿಕೊಳ್ತಿರುವ ಮಿಲನಾ ನಾಗರಾಜ್ ಪ್ರತಿ ದಿನ ಅತಿ ಕಡಿಮೆ ಸಮಯ ನಿದ್ರೆ ಮಾಡ್ತಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅಮ್ಮನಾದ್ಮೇಲೆ ಹೊಂದಾಣಿಕೆ ಅನಿವಾರ್ಯ ಎಂದು ಮಿಲನಾ ಹೇಳಿದ್ದಾರೆ. ಮಗು ಹಾಗೂ ಸಿನಿಮಾ ಎರಡಕ್ಕೂ ನಿದ್ರೆ ಬಿಟ್ಟಿದ್ದೇನೆ. ಹೆಚ್ಚು ಓಡಾಟ ಮಾಡಿದ್ದೇನೆ ಎಂದಿದ್ದಾರೆ. ಆದ್ರೆ ಎಲ್ಲಿಯೂ ಮಿಲನಾ ಅದನ್ನು ಸಮಸ್ಯೆಯಾಗಿ ನೋಡಿಲ್ಲ. ಇದು ಸದ್ಯದ ಪರಿಸ್ಥಿತಿ. ಹಾಗಾಗಿ ಇದಕ್ಕೆ ಹೊಂದಿಕೊಳ್ಳಲೇಬೇಕು ಎಂದು ಮಿಲನಾ ಹೇಳಿದ್ದಾರೆ. ಸಿನಿಮಾ ರಿಲೀಸ್ ಮೊದಲು ನಟರಾಗಿ ನಮ್ಮ ಜವಾಬ್ದಾರಿ ಪ್ರಮೋಷನ್. ಅದನ್ನು ಮಾಡ್ಲೇಬೇಕು ಎನ್ನುವ ಮಿಲನಾ, ಅದಕ್ಕೆ ನಾನು ಹೆಚ್ಚು ಆಲೋಚನೆ ಮಾಡಿಲ್ಲ ಎಂದಿದ್ದಾರೆ.
ಪಡ್ಡೆ ಮಂದಿ ಕಣ್ಣಿಗೆ ಹಬ್ಬ, ಮಾರುತಿ ಜಿಮ್ನಿ ಖರೀದಿಸಿ ವಿಡಿಯೋ ಹರಿಬಿಟ್ಟ ನೀಲಿ ಚಿತ್ರ ತಾರೆ ಸಶಾ!
ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಹೆಣ್ಣು ಮಗುವಿಗೆ ಪಾಲಕರಾಗಿದ್ದಾರೆ. ಮಗುವನ್ನು ಮನೆಗೆ ವೆಲ್ ಕಂ ಮಾಡಿಕೊಂಡ ವಿಡಿಯೋವನ್ನು ಇಬ್ಬರೂ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಈ ಜೋಡಿ, ಆಗಾಗ ಮಗುವಿನ ವಿಡಿಯೋ, ಫೋಟೋಗಳನ್ನು ಪೋಸ್ಟ್ ಮಾಡ್ತಿರುತ್ತಾರೆ.
ಸ್ಯಾಂಡಲ್ವುಡ್ ಬಹು ನಿರೀಕ್ಷಿತ ಚಿತ್ರ ಆರಾಮ್ ಅರವಿಂದ್ ಸ್ವಾಮಿ ಇಂದು ತೆರೆಗೆ ಬಂದಿದೆ. ಸಿನಿಮಾದಲ್ಲಿ ಮಿಲನಾ ನಾಗರಾಜ್ ಹಾಗೂ ಅನೀಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೋಮ್ಯಾಂಟಿಕ್ ಹಾಸ್ಯ ಸಿನಿಮಾವನ್ನು ಅಭಿಷೇಕ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.