
ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ 104 ನೇ ಜನ್ಮ ದಿನಾಚರಣೆಯಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಕ್ಷಿಣ ನಟ ಎಂ.ಜಿ.ರಾಮಚಂದ್ರನ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ, ತನು ವೆಡ್ಸ್ ಮನು ನಟಿ ತನ್ನ ಮುಂಬರುವ ಸಿನಿಮಾ ತಲೈವಿಯ ಟೀಸರ್ ಶೇರ್ ಮಾಡಿದ್ದಾರೆ.
ಇದು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತಾ ಅವರ ಜೀವನಾಧರಿತ ಬಯೋಪಿಕ್. ಟೀಸರ್‌ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫ್ಯಾನ್ಸ್ ಕಂಗನಾ ಅವರ ಪೋಸ್ಟ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ತಲೈವಿ ಸಿನಿಮಾ: ಅರವಿಂದ್ ಸ್ವಾಮಿ MGR ಲುಕ್ ರಿವೀಲ್..!
ಎಂಜಿಆರ್ 104ನೇ ಜನ್ಮದಿನದ ಪುಣ್ಯಸ್ಮರಣೆಯಂದು ಇಲ್ಲೊಂದು ಟ್ರಿಬ್ಯೂಟ್ ಇದೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ. ತಲೈವಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬರಲಿದೆ.
ಎಐಎಡಿಎಂಕೆ ಸಂಸ್ಥಾಪಕ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರ ಜನ್ಮ ದಿನದ ಸ್ಮರಣೆಯಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಗೌರವ ಸಲ್ಲಿಸಿದ್ದಾರೆ. ಬಡತನ ನಿವಾರಣೆ ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿರುವುದನ್ನು ಪ್ರಧಾನಿ ಈ ಸಂದರ್ಭ ಶ್ಲಾಘಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.