ಜನ ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಮಾಡಿರೋ ಪೋರ್ನ್ ತಾರೆ ಯಾರು ಗೊತ್ತಾ?

Suvarna News   | Asianet News
Published : Jan 17, 2021, 03:05 PM IST
ಜನ ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಮಾಡಿರೋ ಪೋರ್ನ್ ತಾರೆ ಯಾರು ಗೊತ್ತಾ?

ಸಾರಾಂಶ

ಜನ ಗೂಗಲ್‌ನಲ್ಲಿ ಇಂದಿಗೂ ಹೆಚ್ಚು ಸರ್ಚ್ ಮಾಡೋ ಪೋರ್ನ್ ತಾರೆ ಮಿಯಾ ಖಲೀಫಾ. ಆದರೆ ಆಕೆ ಪೋರ್ನ್ ಇಂಡಸ್ಟ್ರಿ ಬಿಟ್ಟೇ ಐದು ವರ್ಷಗಳಾಗಿವೆ. 

ಪೋರ್ನ್ ವೆಬ್‌ಸೈಟ್‌ಗಳಲ್ಲಿ ಕಾಮಾಸಕ್ತ ಗಂಡಸರು ತಮಗೆ ಇಷ್ಟವಾದ ತಾರೆಯರಿಗಾಗಿ ಹುಡುಕುವುದು ಸಹಜ ತಾನೆ. ಹಾಗೆ ಜಗತ್ತನಾದ್ಯಂತ ಈ ಜನ ಹೆಚ್ಚಾಗಿ ಸರ್ಚ್ ಮಾಡಿದ ಪೋರ್ನ್ ತಾರೆ ಯಾರು ಎಂಬ ಲೆಕ್ಕವನ್ನು ಖ್ಯಾತ ಪೋರ್ನ್ ವೆಬ್‌ಸೈಟ್‌ ಪೋರ್ನ್‌ಹಬ್‌ ಕೊಟ್ಟಿದೆ. ಅದರ ಪ್ರಕಾರ ಮೊದಲನೇ ಸ್ಥಾನದಲ್ಲಿ ಮಿಯಾ ಖಲೀಫಾ ಎಂಬಾಕೆ ಇದ್ದಾಳೆ. ಇದು ಕಳೆದ ವರ್ಷದ ನಂಬರ್ ವನ್ ತಾರೆ ಯಾರು ಎಂಬ ಲೆಕ್ಕ.

ಅಂದ ಹಾಗೆ ಈ ಮಿಯಾ ಖಲೀಫಾ ಎಂಬ ತಾರೆಯದ್ದೇ ಒಂದು ಇಂಟರೆಸ್ಟಿಂಗ್ ಕತೆ. ಈಕೆ ಲೆಬನಾನ್‌ನಲ್ಲಿ ಹುಟ್ಟಿ ಅಮೆರಿಕದಲ್ಲಿ ನೆಲೆಸಿರುವ ತಾರೆ. ಈಕೆಯೇನೂ ವರ್ಷಾಂತರಗಳಿಂದ ಪೋರ್ನ್ ಇಂಡಸ್ಟ್ರಿಯಲ್ಲಿ ನಟಿಸುತ್ತಿಲ್ಲ. ಬದಲಾಗಿ ಈಕೆ ಅಲ್ಲಿ ಪೋರ್ನ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಕೇವಲ ಮೂರೇ ತಿಂಗಳು. ಆ ಮೂರು ತಿಂಗಳಲ್ಲೇ ಸಾಕಷ್ಟು ಫಿಲಂಗಳಲ್ಲಿ ನಟಿಸಿಬಿಟ್ಟಳು. ನಂತರ ಈಕೆಗೆ ಈ ಫೀಲ್ಡೇ ಸಾಕು ಎನಿಸಿಬಿಟ್ಟಿತು. ಯಾಕೆಂದರೆ ಪೋರ್ನ್ ಇಂಡಸ್ಟ್ರಿಯಲ್ಲಿ ತಾರೆಯರನ್ನು ನೋಡಿಕೊಳ್ಳುವ ರೀತಿಯೇ ಹಾಗಿದೆ.

ಒಪ್ಪಿಕೊಂಡ ಮೇಲೆ ಆ ಸೀನುಗಳಲ್ಲಿ ಇಷ್ಟವಿಲ್ಲದಿದ್ದರೂ ಬಲವಂತವಾಗಿ ನಟಿಸಲೇಬೇಕು. ಪುರುಷರಿಗೆ ಪುರುಷತ್ವ ಗಂಟೆಗಟ್ಟಲೆ ಸೆಟೆದು ನಿಲ್ಲುವಂತೆ ಚುಚ್ಚುಮದ್ದು ಕೊಡುತ್ತಾರೆ. ಹಾಗೇ ಹೆಣ್ಣುಮಕ್ಕಳಿಗೂ ನಾನಾ ಬಗೆಯ ಮದ್ದುಗಳಿವೆ. ಅವುಗಳನ್ನು ತೆಗೆದುಕೊಳ್ಳುತ್ತಾರೆ. ಪುರುಷರು ಕೊಡುವ ಹಿಂಸೆಗಳನ್ನು ತಾಳಿಕೊಳ್ಳಬೇಕು. ಕೆಲವೊಮ್ಮೆ ತೀರಾ ಅಸಹ್ಯಕರ ದೃಶ್ಯಗಳಲ್ಲಿ ನಟಿಸಬೇಕು. ಪೋರ್ನ್ ಇಂಡಸ್ಟ್ರಿಯಲ್ಲಿ ನಟಿ ಒಂದು ವಸ್ತು ಅಷ್ಟೇ. ಇದು ಮಿಯಾ ಖಲೀಫಾಗೆ ಬಹುಬೇಗ ಅರ್ಥವಾಗಿಬಿಟ್ಟಿತು. ನಂತರ ಆಕೆ ಅಲ್ಲಿಂದ ಹೊರಬಂದುಬಿಟ್ಟಳು. 2004ರಲ್ಲಿ ಆಕೆಗೆ 21 ವರ್ಷವಾಗಿದ್ದಾಗ ಆಕೆ ಇಂಡಸ್ಟ್ರಿಯ ಒಳಹೊಕ್ಕವಳು. ಮೂರು ತಿಂಗಳು ಅಲ್ಲಿ ದುಡಿದು ಹೊರಬಂದಳು.

75 ಲಕ್ಷಕ್ಕೆ ಸೇಲಾಯ್ತು ಮಾಜಿ ಪೋರ್ನ್‌ ಸ್ಟಾರ್ ಮಿಯಾ ಖಲೀಫಾಳ ಈ 'ವಸ್ತು'! ...

ಅಲ್ಲಿದ್ದಾಗ ಆಕೆ ಮುಸ್ಲಿಮರ ಹಿಜಾಬ್ ಧರಿಸಿಕೊಂಡು ಒಂದು ಸೀನ್‌ನಲ್ಲಿ ಕಾಣಿಸಿಕೊಂಡಿದ್ದಳು. ಇದು ಇಸ್ಲಾಮಿಕ್ ಉಗ್ರರನ್ನು ಕೆರಳಿಸಿತು. ಅವರು ಆಕೆಗೆ ಕೊಲೆ ಬೆದರಿಕೆ ಹಾಕಿದರು. ಮಿಯಾ ಖಲೀಫಾ ತಲೆಯನ್ನು ಕತ್ತರಿಸಿದವರಿಗೆ ಬಹುಮಾನ ಘೋಷಿಸಿದರು. ಇದರಿಂದ ಮಿಯಾ ಈಗ ಪಬ್ಲಿಕ್ಕಾಗಿ ಕಾಣಿಸಿಕೊಳ್ಳುವುದನ್ನೇ ಅವಾಯ್ಡ್ ಮಾಡಿದ್ದಾಳೆ. ಅಫಘಾನಿಸ್ತಾನ ಮುಂತಾದ ಕೆಲವು ದೇಶಗಳಿಗೆ ಈಕೆ ಪ್ರಯಾಣಿಸುವಂತೆಯೇ ಇಲ್ಲ.

ಮಿಯಾ ಪೋರ್ನ್ ಇಂಡಸ್ಟ್ರಿ ಬಿಟ್ಟರೂ ಅದು ಆಕೆಯನ್ನು ಬಿಡಲೊಲ್ಲದು. ಆಕೆಯ ವಿಡಿಯೋಗಳು ಮತ್ತೆ ಮತ್ತೆ ಶೇರ್ ಆಗುತ್ತಲೇ ಇವೆ. ಲಕ್ಷಾಂತರ, ಕೋಟ್ಯಂತರ ಜನ ಅದನ್ನು ನೋಡುತ್ತಾರೆ. ಆದರೆ ಈ ವಿಡಿಯೋಗಳಿಂದ ತನಗೆ ಆಗುತ್ತಿರುವ ತೊಂದರೆಯನ್ನು ಪರಿಗಣಿಸಿ ಮಿಯಾ, ಅವುಗಳನ್ನು ಡಿಲೀಟ್ ಮಾಡುವಂತೆ ಪೋರ್ನ್‌ಹಬ್ ವೆಬ್‌ಸೈಟನ್ನು ಕೇಳಿಕೊಂಡಳು. ಆದರೆ ಅದು ಆಕೆಯ ಮನವಿಯನ್ನು ಪರಿಗಣಿಸಲೇ ಇಲ್ಲ. ಈಗಲೂ ಅವುಗಳನ್ನು ಡಿಲೀಟ್‌ ಮಾಡಲು ಕೋರಿ ಆಕೆಯ ಹೋರಾಟ ಮುಂದುವರಿದೇ ಇದೆ.

ಪೋರ್ನ್ ಇಂಡಸ್ತ್ರಿಯ ಅಸಲಿ ಪರಿಣಾಮ, ಸಂದರ್ಶನದಲ್ಲಿ ಮಿಯಾ ಮನದಾಳ ...

ತಾನು ನಟಿಸಿದ ಸೆಕ್ಸ್ ಫಿಲಂಗಳಿಗೆ ತನಗೆ ಸಿಕ್ಕಿದ್ದು 12,000 ಡಾಲರ್ ಮಾತ್ರ ಎಂದು ಮಿಯಾ ಒಂದು ಕಡೆ ಹೇಳಿಕೊಂಡಿದ್ದಾಳೆ. ಇದು ನಿಜ ಅಲ್ಲ, ಆಕೆ ಸಾಕಷ್ಟು ಗಳಿಸಿಕೊಂಡಿದ್ದಾಳೆ ಎಂದು ಪೋರ್ನ್ ಇಂಡಸ್ಟ್ರಿಯ ಹಲವರು ಟೀಕಿಸಿದ್ದೂ ಉಂಟು.

ಪ್ರಸ್ತುತ ಮಿಯಾ ಖಲೀಫಾ ಹಲವು ವೃತ್ತಿಗಳನ್ನು ಮಾಡಿಕೊಂಡು ಬದುಕಿದ್ದಾಳೆ. ಸ್ವಂತ ಯೂಟ್ಯೂಬ್ ಚಾನೆಲ್, ಟಿಕ್‌ಟಾಕ್ ಶೋ, ಮಾಡೆಲಿಂಗ್, ಫೋಟೋಗ್ರಾಫಿ ಇತ್ಯಾದಿ ಮಾಡುತ್ತಾಳೆ. ಪೋರ್ನ್ ಇಂಡಸ್ಟ್ರಿಯಲ್ಲಿದ್ದಾಗ 'ಇತರ' ವೃತ್ತಿಗಳನ್ನು ಮಾಡಿದ್ದೂ ಉಂಟು. ಇತರ ಎಂದರೆ ಏನೆಂದು ಯಾರಿಗೂ ಗೊತ್ತಿಲ್ಲ. ಈಗ ಆಕೆ ಸಂಸಾರಿಯೂ ಹೌದು. ತನ್ನ ಹೈಸ್ಕೂಲ್ ಗೆಳೆಯನನ್ನು ಮದುವೆಯಾಗಿದ್ದಳು.

ಅಯ್ಯೋ, ಪಾಪ....ಮಿಯಾ ಖಲಿಫಾ.... ಅಡಲ್ಟ್ ಚಿತ್ರದಲ್ಲಿ ಅಭಿನಯಿಸಿದ್ರೂ ದುಡಿದಿದ್ದಿಷ್ಟೆ! ...

ಈಕೆ ಪೋರ್ನ್ ಇಂಡಸ್ಟ್ರಿ ಸೇರಿದ ನಂತರ ಅವರ ನಡುವೆ ಬೀನ್ನಾಭಿಪ್ರಾಯ ಮೂಡಿ ಡೈವೋರ್ಸ್ ಆಯ್ತು. ಇತ್ತೀಚೆಗೆ ರಾಬರ್ಟ್ ಸ್ಯಾಂಡ್ಬರ್ಗ್ ಎಂಬ ಸ್ವೀಡನ್‌ನ ಶೆಫ್ ಅನ್ನು ಮದುವೆಯಾಗಿದ್ದಾಳೆ. ಇಂಟರ್‌ನೆಟ್‌ನಲ್ಲಿರುವ ತನ್ನ ಎಲ್ಲ ಪೋರ್ನ್ ಕಂಟೆಂಟ್ ಅನ್ನೂ ಡಿಲೀಟ್ ಮಾಡಬೇಕು ಎಂಬುದು ಆಕೆಯ ಹೋರಾಟ. ಹೋರಾಟದ ಉದ್ದೇಶ ಈಡೇರುತ್ತದಾ ಇಲ್ಲವಾ ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್