ಸಮಂತಾ ದೇಗುಲದಲ್ಲಿ ನಟಿಯೇ ಮಿಸ್ಸಿಂಗು? ಟ್ರೋಲಿಗರಿಗೆ ಆಹಾರವಾದ ಅಭಿಮಾನಿ!

Published : Apr 30, 2023, 05:47 PM IST
ಸಮಂತಾ ದೇಗುಲದಲ್ಲಿ ನಟಿಯೇ ಮಿಸ್ಸಿಂಗು? ಟ್ರೋಲಿಗರಿಗೆ ಆಹಾರವಾದ ಅಭಿಮಾನಿ!

ಸಾರಾಂಶ

ಆಂಧ್ರ ಪ್ರದೇಶದಲ್ಲಿ ನಟಿ ಸಮಂತಾ ಅವರ ಅಭಿಮಾನಿಯೊಬ್ಬ ದೇವಾಲಯ ನಿರ್ಮಿಸಿದ್ದು ಇದು ಟ್ರೋಲಿಗರಿಗೆ ಆಹಾರವಾಗಿದೆ. ಕಾರಣವೇನು?  

ತಮ್ಮ ನೆಚ್ಚಿನ ನಾಯಕ, ನಾಯಕಿಯರಿಗಾಗಿ ದೇವಸ್ಥಾನ (Temple) ಕಟ್ಟುವ ಟ್ರೆಂಡ್​ ಈಗ ಹಳೆಯದ್ದಾಗಿದೆ. ಕೆಲವರು ಮೇಣದ ಪ್ರತಿಮೆಯನ್ನು ಮಾಡಿ ಇಟ್ಟರೆ, ಇನ್ನು ಕೆಲವರು ದೇವಸ್ಥಾನವನ್ನೇ ಕಟ್ಟಿಸಿ ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ. ಕೆಲವು ಅಭಿಮಾನಿಗಳಿಗೆ ಅಭಿಮಾನ ಎನ್ನುವುದು ಅತಿರೇಕಕ್ಕೆ ಹೋಗುತ್ತದೆ. ಚಿತ್ರ ತಾರೆಯರನ್ನೇ ದೇವರು ಎಂದು ನಂಬುವ ಮಂದಿ ಇವರು. ಚಿತ್ರನಟರನ್ನು ನೋಡಿದರೆ ದೇವರು ಪ್ರತ್ಯಕ್ಷವಾದಂತೆ ಅನುಭೂತಿ ಪಡೆಯುವ ಹಲವು ಫ್ಯಾನ್ಸ್​ ಇದ್ದಾರೆ. ಅಂಥ ಸಂದರ್ಭಗಳಲ್ಲಿ ಹೀಗೆ ದೇವಾಲಯ ನಿರ್ಮಾಣ ಆಗುವುದು ಉಂಟು. ಕೆಲವರು ತಮ್ಮನ್ನು ಸಾಕಿ ಸಲುಹಿ ತಮ್ಮ ಕಷ್ಟಗಳ ನಡುವೆಯೂ ಸುಖವನ್ನೇ ನೀಡಿದ  ತಂದೆ-ತಾಯಿಗಳ ಮೂರ್ತಿಯನ್ನು ಪ್ರತಿಷ್ಠಾಪಿಸಿ, ದೇಗುಲ ನಿರ್ಮಿಸಿ ಪೂಜಿಸಿದರೆ ಅಭಿಮಾನಿಗಳು ಹೀಗೆಲ್ಲಾ ಚಿತ್ರ ತಾರೆಯರ ಮೂರ್ತಿಯನ್ನು ಪ್ರತಿಷ್ಠಾಪಿಸುವುದು ಉಂಟು. ಇದಾಗಲೇ ತಮಿಳುನಾಡಿನಲ್ಲಿ ಅಭಿಮಾನಿಗಳು ಈಗಾಗಲೇ ಖುಷ್ಬೂಗೆ ದೇವಸ್ಥಾನ ಕಟ್ಟಿದ್ದಾರೆ. ಇತ್ತೀಚೆಗೆ ನಿಧಿ ಅಗರ್ವಾಲ್‌ಗೂ ದೇವಸ್ಥಾನ ನಿರ್ಮಿಸಿದ್ದರು. ನಯನತಾರಾ ಹಾಗೂ ನಮಿತಾಗೂ ದೇವಸ್ಥಾನ ಕಟ್ಟಿ ಅಭಿಮಾನ ಮೆರೆದಿದ್ದಾರೆ. 

ಈಗ ನಟಿ ಸಮಂತಾ ಸರದಿ. ಕಳೆದೊಂದು ವರ್ಷಗಳಿಂದ ಮದುವೆ, ವಿಚ್ಛೇದನ (Divroce), ಸಂಬಂಧ, ಅನಾರೋಗ್ಯ ಹೀಗೆ ವಿಭಿನ್ನ ಕಾರಣಗಳಿಂದ ಸುದ್ದಿಯಲ್ಲಿರುವ ನಟಿ ಸಮಂತಾ ಅವರ ಅಭಿಮಾನಿಯೊಬ್ಬರು ಆಂಧ್ರ ಪ್ರದೇಶದಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. ಇದೇ 28ರಂದು ಸಮಂತಾ ಅವರ ಹುಟ್ಟುಹಬ್ಬದಂದು ಅದು ಅನಾವರಣಗೊಂಡಿರುವುದು ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಸಮಂತಾ ಅಭಿಮಾನಿ ಗ್ರಾಮದ ಜನರನ್ನೆಲ್ಲಾ ಕರೆದು, ಅಭಿಮಾನಿಗಳನ್ನೂ ಆಹ್ವಾನ ಮಾಡಿ ಅದ್ಧೂರಿ ಕಾರ್ಯಕ್ರಮವನ್ನು ಮಾಡಿದ್ದರು. ಆದರೆ ಅದಕ್ಕಿಂತ ಹೆಚ್ಚಿಗೆ ಈಗ ದೇವಾಲಯ ಟ್ರೋಲ್​ಗೆ ಒಳಗಾಗಿದೆ. ತನ್ನ ನೆಚ್ಚಿನ ತಾರೆಯರ ದೇವಾಲಯ ನಿರ್ಮಿಸಿರುವುದಕ್ಕೆ ಈ ಟ್ರೋಲ್​ ಅಲ್ಲ, ಬದಲಿಗೆ ಅಲ್ಲಿ ನಡೆದಿರುವ ಎಡವಟ್ಟಿನಿಂದ ಈಗ ಟ್ರೋಲ್​ ಆಗುತ್ತಿದೆ.

ಖುಷ್ಬೂ ಆಯ್ತು ಈಗ ಸಮಂತಾಗೆ ದೇವಸ್ಥಾನ ಕಟ್ಟಿಸಿದ ಅಭಿಮಾನಿ; ವಿಶೇಷ ಪೂಜೆ ಮೂಲಕ ಉದ್ಘಾಟನೆ

ಹೌದು. ಆಂಧ್ರ ಪ್ರದೇಶದ ಗುಂಟೂರಿನ ಆಲಪಾಡು ಗ್ರಾಮದ ಸಂದೀಪ್ (Sandeep) ಎನ್ನುವವರು ಈ ದೇಗುಲ ನಿರ್ಮಾಣ ಮಾಡಿದ್ದಾರೆ. ನಟಿಯ ಮೇಲಿರುವ ತಮ್ಮ ಅಭಿಮಾನ  ವ್ಯಕ್ತಪಡಿಸಲು ದೇವಸ್ಥಾನವೇನೋ ಕಟ್ಟಿಸಿದ್ದಾರೆ. ಆದರೆ ಅಲ್ಲಿರುವ ಮೂರ್ತಿ ಮಾತ್ರ ಎಡವಟ್ಟು ಆಗಿದೆ. ಇದು ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಅಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂರ್ತಿಯನ್ನು ನೋಡಿದರೆ ಯಾವ ಆ್ಯಂಗಲ್​ನಿಂದಲೂ ಅದು ಸಮಂತಾ  ಕಂಡ ಹಾಗೆ ಕಾಣಿಸುತ್ತಿಲ್ಲ. ಇದನ್ನೇ ಟ್ರೋಲಿಗರು ಜೋಕ್​ ಆಗಿ ಮಾಡಿಕೊಂಡಿದ್ದಾರೆ. ಅಯ್ಯೋ ಶಿವನೆ ನಟಿ ಎಲ್ಲಿ? ಅವರಿಗೆ ಏನಾಯಿತು ಎಂದು ಒಂದೇ ಸಮನೆ ಕಮೆಂಟ್​ ಮೂಲಕ ಪ್ರಶ್ನಿಸುತ್ತಿದ್ದಾರೆ. ದೇವಸ್ಥಾನ ಓಕೆ ಸಮಂತಾ ಎಲ್ಲಿ? ಎಂದು  ಟ್ರೋಲ್ ಮಾಡುತ್ತಿದ್ದಾರೆ. ನಟಿಯ ಸೌಂದರ್ಯ ಆ ಮೂರ್ತಿಯಲ್ಲಿ ಇಲ್ಲದ ಕಾರಣ, ಅನಾರೋಗ್ಯದಿಂದ ಆಸ್ಪತ್ರೆ ಬೆಡ್‌ ಮೇಲೆ ಮಲಗಿದಂತೆ ಈ ಮೂರ್ತಿ ಕಾಣಿಸುತ್ತಿದೆ ಎಂದು ಕೆಲವರು ಅಭಿಮಾನಿಯ ಕಾಲೆಳೆದಿದ್ದಾರೆ. ನಟಿಯೇ ಇಲ್ಲದ ಮೇಲೆ ದೇವಸ್ಥಾನ ಯಾಕಪ್ಪಾ ಅಂತ ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ.

ಡಿಯರೆಸ್ಟ್ ಸಮಂತಾ... ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಿದೆ: ರಾಮ್ ಚರಣ್ ಪ್ರೀತಿಯ ವಿಶ್

  ಈ ಅಭಿಮಾನಿ ಸಂದೀಪ್​ ತರಾತುರಿಯಲ್ಲಿ ದೇವಸ್ಥಾನ ಕಟ್ಟಲು ಹೋಗಿದ್ದಾರೋ ಅಥವಾ ನುರಿತ  ಶಿಲ್ಪಿ ಸಿಗಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಮೂರ್ತಿ ಮಾತ್ರ ಸಮಂತಾ ಅವರನ್ನು ಹೋಲುತ್ತಿಲ್ಲ. ಅದು ಚೆನ್ನಾಗಿಲ್ಲದ ಕಾರಣ, ಸಮಂತಾ ಅವರ ಫ್ಯಾನ್ಸ್​ ಕೂಡ ಬೇಸರ ವ್ಯಕ್ತಪಡಿಸುತ್ತಿದ್ದಾರೆ.  

ಮಯೋಸಿಟಿಸ್‌ ನಿಂದ ಸಮಂತಾ ಬಳಲುತ್ತಿದ್ದಾರೆ ಎನ್ನುವ ವಿಚಾರ ತಿಳಿದ ಬಳಿಕ ಅಭಿಮಾನಿ ಸಂದೀಪ್, ತಿರುಪತಿ, ಚೆನ್ನೈ, ವೆಲಂಕಣಿ ಮತ್ತು ಕಡಪಾ ಸೇರಿದಂತೆ ಅನೇಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಸಮಂತಾ ಬೇಗ ಚೇತರಿಸಿಕೊಳ್ಳಲಿ ಎಂದು ವಿಶೇಷ ಪೂಜೆಗಳನ್ನು ಸಹ ಮಾಡಿಸಿದ್ದಾರೆ. ಇದೀಗ ದೇವಸ್ಥಾನ ನಿರ್ಮಿಸಿದ್ದಾರೆ. ತನಗಾಗಿ ನಿರ್ಮಾಣವಾಗಿರುವ ದೇವಸ್ಥಾನದ ಬಗ್ಗೆ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸ್ಯಾಮ್ ಸದ್ಯ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!