ಮತ್ತೆ ಶುರುವಾಯ್ತು ಕಾವೇರಿ ಕದನ.. ಕರ್ನಾಟಕಕ್ಕೆ ವಿಲನ್ ಆಗ್ತಾರಾ ತಮಿಳುನಾಡು ಸಿಎಂ ವಿಜಯ್?

Published : Jun 06, 2026, 01:28 PM IST
Thalapathy Vijay DK Shivakumar

ಸಾರಾಂಶ

ಸಿಎಂ ಪಟ್ಟವೇರಿರೋ ಡಿಕೆ, ದಳಪತಿ ಜೊತೆ ಫೈಟ್ ಮಾಡಬೇಕಾದ ಸನ್ನಿವೇಶ ನಿರ್ಮಾಣ ಆಗಿದೆ. ಈಗಷ್ಟೇ ಸಿಎಂ ಕುರ್ಚಿ ಏರಿರೋ ಇಬ್ಬರ ನಡುವೆ ಮೇಕೆದಾಟು ಮಹಾಸಮರ ನಡೆಯೋದು ಫಿಕ್ಸ್ ಅಗಿದೆ. ಒಟ್ನಲ್ಲಿ ಮೇಕೆದಾಟು ಯೋಜನೆ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ಕಿಡಿ ಹಚ್ಚೋ ರೀತಿ ಕಾಣ್ತಾ ಇದೆ.

ಮತ್ತೆ ಶುರು ಕರ್ನಾಟಕ Vs ತಮಿಳುನಾಡು ಕಾವೇರಿ ಕದನ..? ಮೇಕೆದಾಟು ಯೋಜನೆಗೆ ದಳಪತಿ ವಿಜಯ್ ಅಡ್ಡಗಾಲು..!

ಮೋದಿ ಎದುರು ವಿಜಯ್ ಮನವಿ.. ಮೇಕೆದಾಟುಗೆ ಅಡ್ಡಿ..! ಕಾವೇರಿ ವಿಚಾರ.. ಕರ್ನಾಟಕಕ್ಕೆ ವಿಲನ್ ಆಗ್ತಾರಾ ವಿಜಯ್..?

ತಮಿಳುನಾಡಿನಲ್ಲಿ ಕಳೆದ ತಿಂಗಳು ನಟ ದಳಪತಿ ವಿಜಯ್ ವಿಜಯ ಸಾಧಿಸಿ ಸಿಎಂ ಆದ್ರು. ಈ ತಿಂಗಳು ಕರ್ನಾಟಕಕ್ಕೂ ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅಲ್ಲಿ ದಳಪತಿ ಇಲ್ಲಿ ಡಿ.ಕೆ... ಈ ಇಬ್ಬರೂ ನೆರೆರಾಜ್ಯಗಳ ಸಿಎಂಗಳ ನಡುವೆ ಸದ್ಯದಲ್ಲೇ ಮಹಾಯುದ್ಧ ನಡೆಯಲಿದೆಯಾ..? ಹೌದು ಅಂಥದ್ದೊಂದು ಯುದ್ಧಕ್ಕೆ ಇತ್ತೀಚಿಗಷ್ಟೇ ದಳಪತಿ ವಿಜಯ್ ದಿಲ್ಲಿಯಲ್ಲಿ ಮುನ್ನುಡಿ ಬರೆದಿದ್ದಾರೆ.

ಮತ್ತೆ ಶುರು ಕರ್ನಾಟಕ Vs ತಮಿಳುನಾಡು ಕಾವೇರಿ ಕದನ..?

ಮೇಕೆದಾಟು ಯೋಜನೆಗೆ ದಳಪತಿ ವಿಜಯ್ ಅಡ್ಡಗಾಲು..!

ಯೆಸ್ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಕದನ ಹೊಸತಲ್ಲ. ತಾಯಿ ಕಾವೇರಿ ಎರಡೂ ರಾಜ್ಯಗಳ ಜೀವನದಿ.. ಆದ್ರೆ ಕರ್ನಾಟಕದಲ್ಲೇ ಉದಯಿಸುವ ಕಾವೇರಿ ನದಿ ಹೆಚ್ಚು ಹರಿಯೋದು ತಮಿಳುನಾಡಿನಲ್ಲಿ. ಕರ್ನಾಟಕದ ಆಣೆಕಟ್ಟಿನಿಂದ ಹೆಚ್ಚು ನೀರು ಬಿಡಬೇಕು ಅನ್ನೋದು ಪ್ರತಿಸಾರಿ ತಮಿಳರು ತೆಗೆಯೋ ಕ್ಯಾತೆ.

ಇತ್ತೀಚಿಗೆ ಕಾವೇರಿ ನೀರಿನ ವಿಷ್ಯ ದೊಡ್ಡ ಕಿರಿಕ್ ಆಗಿರಲಿಲ್ಲ. ಆದ್ರೆ ನಿಮಗೆ ಗೊತ್ತಿರಲಿ ಕಳೆದ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ, ವಿಶೇಷವಾಗಿ ಸದ್ಯ ಸಿಎಂ ಆಗಿರೋ ಡಿ.ಕೆ. ಶಿವಕುಮಾರ್ ಮೇಕೆದಾಟು ಯೋಜನೆಯನ್ನ ಜಾರಿಗೆ ತರ್ತಿವಿ ಅನ್ನೋ ವಾಗ್ದಾನ ಮಾಡಿದ್ರು. ಅಷ್ಟೇ ಅಲ್ಲ ಮೇಕೆದಾಟುವರೆಗೂ ಪಾದಯಾತ್ರೆ ಕೂಡ ಮಾಡಿದ್ರು.

ಸುಮಾರು 9,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಅನುಷ್ಠಾನಕ್ಕೆ ತಂದು ಸುಮಾರು 67 ಟಿಎಂಸಿ ನೀರನ್ನ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುವುದು ಈ ಯೋಜನೆ ಮುಖ್ಯ ಉದ್ದೇಶ. ಜೊತೆಗೆ ಸುಮಾರು 400 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ಗುರಿಯನ್ನ ಕೂಡ ಈ ಯೋಜನೆ ಹೊಂದಿದೆ.

ಹೌದು ಇತ್ತೀಚಿಗೆ ದಳಪತಿ ವಿಜಯ್ ಪ್ರಧಾನಿ ನರೇಂದ್ರ ಮೋದಿಯನ್ನ ಭೇಟಿ ಮಾಡಿದ್ರು. ತಮಿಳುನಾಡಿನ ತಮ್ಮ ಸರ್ಕಾರಕ್ಕೆ ಕೇಂದ್ರದಿಂದ ನೆರವು, ಸಹಕಾರ ಕೋರಿದ್ರು. ಅದರ ಜೊತೆಗೆ ಕರ್ನಾಟಕದವರಿಗೆ ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮಾಡಲು ಅನುಮತಿ ಕೊಡಬೇಡಿ ಅಂತ ಮನವಿ ಸಲ್ಲಿಸಿದ್ದಾರೆ ವಿಜಯ್.

ಅಷ್ಟಕ್ಕೂ ತಮಿಳುನಾಡು ಈ ಯೋಜನೆ ವಿರೋಧ ಮಾಡ್ತಾ ಇರೋದೇಕೆ ಅಂದ್ರೆ ಕರ್ನಾಟಕವು ಈ ಜಲಾಶಯವನ್ನ ನಿರ್ಮಿಸಿದರೆ, ಮಳೆಗಾಲದಲ್ಲಿ ಮತ್ತು ಸಾಮಾನ್ಯ ದಿನಗಳಲ್ಲಿ ತಮಿಳುನಾಡಿಗೆ ಹರಿದುಬರುವ ಕಾವೇರಿ ನೀರಿನ ಪ್ರಮಾಣ ಕಡಿಮೆಯಾಗುತ್ತೆ. ಇದು ಕಾವೇರಿ ಜಲವಿವಾದ ನ್ಯಾಯಾಧೀಕರಣಮತ್ತು ಸುಪ್ರೀಂ ಕೋರ್ಟ್‌ನ ತೀರ್ಪುಗಳ ಸ್ಪಷ್ಟ ಉಲ್ಲಂಘನೆ ಅನ್ನೋದು ಅವರ ಆರೋಪ.

ಆದ್ರೆ ಮೇಕೆದಾಟು ಯೋಜನೆ ಕೇವಲ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಸೀಮಿತವಾದಂಥ ಯೋಜನೆ. ಮಳೆಗಾಲದಲ್ಲಿ ತಮಿಳುನಾಡಿಗೆ ಹರಿದುಹೋಗುವ ಹೆಚ್ಚುವರಿ ನೀರನ್ನ ಮಾತ್ರ ಇಲ್ಲಿ ಸಂಗ್ರಹಿಸಲಾಗುತ್ತೆ. ಇದರಿಂದ ತಮಿಳುನಾಡಿಗೆ ನ್ಯಾಯಯುತವಾಗಿ ಸಿಗಬೇಕಾದ ನೀರಿನ ಪಾಲಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಅಂತ ಕರ್ನಾಟಕ ಸ್ಪಷ್ಟಪಡಿಸಿದೆ.

ಆದ್ರೆ ತಮಿಳುನಾಡಿನ ಈ ಹಿಂದಿನ ಸರ್ಕಾರಗಳು ಈ ವಾದ ಒಪ್ಪಲಿಕ್ಕೆ ರೆಡಿ ಇಲ್ಲ. ಈಗಾಗ್ಲೇ ಯೋಜನೆ ವಿರುದ್ದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ನಡುವೆ ಹೊಸ ಸಿಎಂ ಆಗಿರೋ ವಿಜಯ್ ಬೇರೆ, ಕೇಂದ್ರಕ್ಕೆ ಈ ಯೋಜನೆಗೆ ಒಪ್ಪಿಗೆ ಕೊಡಬೇಡಿ ಅಂತ ಮನವಿ ಸಲ್ಲಿಸಿ ಯುದ್ಧಕ್ಕೆ ನಾಂದಿ ಹಾಡಿದ್ದಾರೆ.

ಕಾವೇರಿ ವಿಚಾರ.. ಕರ್ನಾಟಕಕ್ಕೆ ವಿಲನ್ ಆಗ್ತಾರಾ ವಿಜಯ್..?

ಹೌದು ದಳಪತಿ ವಿಜಯ್ ತಮಿಳುನಾಡಿನಲ್ಲಿ ಜನಪ್ರೀಯ ನಾಯಕ ನಟ ಆಗಿದ್ದವರು. ಕರ್ನಾಟಕದಲ್ಲೂ ವಿಜಯ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ವಿಜಯ್ ಗೆಲುವನ್ನ ಕನ್ನಡಿಗರು ಕೂಡ ಸಂಭ್ರಮಿಸಿದ್ರು.

ಆದ್ರೆ ಈ ಸಿನಿಮಾ ಹೀರೋ ಈಗ ಕಾವೇರಿ ವಿಷ್ಯದಲ್ಲಿ ಕರ್ನಾಟಕಕ್ಕೆ ವಿಲನ್ ಆಗ್ತಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ತಮಿಳುನಾಡಿನಲ್ಲಿ ಕಾವೇರಿ ವಿಷ್ಯ ಇಟ್ಟುಕೊಂಡು ರಾಜಕೀಯ ಮಾಡೋದು ಕಾಮನ್,. ಹಿಂದೆ ಜಯಲಲಿತಾ ಕೂಡ ಇದೇ ಫಾರ್ಮುಲಾ ಬಳಸ್ತಾ ಇದ್ರು. ವಿಜಯ್ ಕೂಡ ಅದನ್ನೇ ಅನುಸರಿಸ್ತಾ ಇರುವಂತೆ ಕಾಣ್ತಾ ಇದೆ.

ಡಿ.ಕೆ.ಶಿ ಪಾಲಿಗೆ ಪ್ರತಿಷ್ಠೆ.. ಮೇಕೆದಾಟಿಗೆ ಸಿಗುತ್ತಾ ಮುಕ್ತಿ..?

ಹೌದು ಅತ್ತ ವಿಜಯ್ ದೆಹಲಿಯಲ್ಲಿ ಲಾಬಿ ಮಾಡುತ್ತಿದ್ದರೆ, ಇತ್ತ ಕರ್ನಾಟಕದಲ್ಲಿ 'ಕನಕಪುರ ಬಂಡೆ' ಸುಮ್ಮನೆ ಕೂರುತ್ತಾ? ಖಂಡಿತ ಇಲ್ಲ. ಮೇಕೆದಾಟು ಯೋಜನೆ ಡಿ.ಕೆ ಶಿವಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್. ವಿಪಕ್ಷದಲ್ಲಿದ್ದಾಗ "ನಮ್ಮ ನೀರು ನಮ್ಮ ಹಕ್ಕು" ಅಂತ ಪಾದಯಾತ್ರೆ ಮಾಡಿ, ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ನಾಯಕ. ಈಗ ಅವರೇ ರಾಜ್ಯದ ಮುಖ್ಯಮಂತ್ರಿ. ಅಧಿಕಾರದ ಚುಕ್ಕಾಣಿ ಹಿಡಿದಿರುವ ಡಿಕೆಶಿಗೆ, ಮೇಕೆದಾಟು ನಿರ್ಮಾಣ ಮಾಡೋದು ಕೇವಲ ಅಭಿವೃದ್ಧಿ ಕಾರ್ಯವಲ್ಲ, ಅದು ಅವರ ಪ್ರತಿಷ್ಠೆಯ ಪ್ರಶ್ನೆ ಕೂಡ ಹೌದು.

ಇಲ್ಲಿ ಮತ್ತೊಂದು ಇನ್​ಟ್ರೆಸ್ಟಿಂಗ್ ವಿಷ್ಯ ಅಂದ್ರೆ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ವಿಜಯ್ ಸರ್ಕಾರಕ್ಕೆ ಸಪೋರ್ಟ್ ಮಾಡಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೇಕೆದಾಟು ಯೋಜನೆಗೆ ವಿಜಯ್ ಅಡ್ಡಿ ಪಡಿಸಿದ್ರೆ, ಅಲ್ಲಿನ ಕಾಂಗ್ರೆಸ್ ಎಂ.ಎಲ್.ಎಗಳ ನಿಲುವು ಏನಾಗಿರುತ್ತೆ ಅನ್ನೋದು ಕೂಡ ಚರ್ಚೆ ಆಗ್ತಾ ಇರೋ ವಿಷ್ಯ.

ಈ ಹಿಂದೆ ಡಿ.ಕೆ ಶಿವಕುಮಾರ್, ತಮಿಳುನಾಡಿನಲ್ಲಿ ಕಾಂಗ್ರೆಸ್ - ಡಿಎಂಕೆ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತೆ ಅಂದಿದ್ರು. ವಿಜಯ್ ಬಗ್ಗೆ ಕೇವಲವಾಗಿ ಮಾತನಾಡಿದ್ರು. ಆದ್ರೆ ವಿಜಯ್ ಗೆದ್ದ ಮೇಲೆ ಖುದ್ದು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ರು.

ಆದ್ರೀಗ ಸಿಎಂ ಪಟ್ಟವೇರಿರೋ ಡಿಕೆ , ದಳಪತಿ ಜೊತೆ ಫೈಟ್ ಮಾಡಬೇಕಾದ ಸನ್ನಿವೇಶ ನಿರ್ಮಾಣ ಆಗಿದೆ. ಈಗಷ್ಟೇ ಸಿಎಂ ಕುರ್ಚಿ ಏರಿರೋ ಇಬ್ಬರ ನಡುವೆ ಮೇಕೆದಾಟು ಮಹಾಸಮರ ನಡೆಯೋದು ಫಿಕ್ಸ್ ಅಗಿದೆ. ಒಟ್ನಲ್ಲಿ ಮೇಕೆದಾಟು ಯೋಜನೆ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ಕಿಡಿ ಹಚ್ಚೋ ರೀತಿ ಕಾಣ್ತಾ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಿವೇದಿತಾ ಚಂದನ್ ಈಗ್ಲೂ ಸ್ನೇಹಿತರಾ? ಸ್ಪಷ್ಟನೆ ನೀಡಿದ ರ್ಯಾಪರ್
Ugly Story OTT :ತೆರೆ ಕಂಡ 14 ದಿನದಲ್ಲೇ OTTಗೆ ಎಂಟ್ರಿ ಕೊಟ್ಟ 'ಅಗ್ಲಿ' ಮೂವಿ.. ಇದೆಂಥಾ Shocking ಸ್ಟೋರಿ ನೋಡಿ!