ಹೀರೋ ಜೊತೆ ಲಿಪ್​ಲಾಕ್ ದೃಶ್ಯದಲ್ಲಿ ಬೆವರಿ ಹೋಗಿದ್ದೆ​, ಭಯದಿಂದ ನಡುಗುತ್ತಿದ್ದೆ ಎಂದ ಮೀನಾಕ್ಷಿ ಶೇಷಾದ್ರಿ

By Suchethana D  |  First Published Aug 12, 2024, 6:25 PM IST

80-90ರ ದಶಕದಲ್ಲಿ ಕಿಸ್​ ಸೀನ್​ ಮಾಡುವಾಗಲೂ ಕೆಲವೊಂದು ನಟಿಯರು ಹೇಗೆಲ್ಲಾ ಹೆದರುತ್ತಿದ್ದರು ಎಂಬ ಬಗ್ಗೆ ಹಿರಿಯ ನಟಿ ಮೀನಾಕ್ಷಿ ಶೇಷಾದ್ರಿ ಮಾತನಾಡಿದ್ದಾರೆ. 
 


ಮೀನಾಕ್ಷಿ ಶೇಷಾದ್ರಿ ಅವರಿಗೆ ಈಗ 60 ವರ್ಷ ವಯಸ್ಸು. ಆದರೆ 80-90ರ ದಶಕದಲ್ಲಿ ಬಾಲಿವುಡ್​ನಲ್ಲಿ ಅವರು ತಮ್ಮ ಅಭಿನಯದ ಮೂಲಕ ಸಂಚಲನ ಮೂಡಿಸಿದ್ದರು. 'ದಾಮಿನಿ', 'ಘಾಯಲ್', 'ಘರ್ ಹೋ ತೋ ಐಸಾ', 'ಡಕಾಯತ್​, 'ಶಹಶಾನ್' ನಿಂದ 'ಗಂಗಾ ಜಮುನಾ ಸರಸ್ವತಿ' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು.  ಆದರೆ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಅವರು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದರು. 1995 ರಲ್ಲಿ, ಮೀನಾಕ್ಷಿ ಶೇಷಾದ್ರಿ ಅವರು ಬ್ಯಾಂಕರ್ ಹರೀಶ್ ಮೈಸೂರು ಅವರನ್ನು ವಿವಾಹವಾದರು ಮತ್ತು ಇದರೊಂದಿಗೆ ಅವರು ತಮ್ಮ ನಟನಾ ವೃತ್ತಿಯನ್ನು ತೊರೆದರು. ಅಷ್ಟೇ ಅಲ್ಲ, ಮದುವೆಯ ನಂತರ   ಅಮೆರಿಕಕ್ಕೆ ಶಿಫ್ಟ್ ಆದರು.  ಅಮೆರಿಕಕ್ಕೆ ಹೋದ ಮೇಲೂ  ಸನ್ನಿ ಡಿಯೋಲ್ ಅವರೊಂದಿಗೆ ಸಂಪರ್ಕದಲ್ಲಿದ್ದೆ. ತುಂಬಾ ತಮಾಷೆಯಾಗಿ ಮಾತನಾಡುತ್ತಿದ್ದರು ಎಂದಿದ್ದಾರೆ ನಟಿ. ಅಂದಹಾಗೆ ಮೀನಾಕ್ಷಿ ಅವರು,  ಝಲಕ್ ದಿಖ್ಲಾಜಾ 11 ರಲ್ಲಿ ವಿಶೇಷ ಅತಿಥಿಯಾಗಿ ಕಳೆದ ತಿಂಗಳು ಕಾಣಿಸಿಕೊಂಡಿದ್ದರು. ಬಹಳ ವರ್ಷಗಳ ಬಳಿಕ ಅವರು ಈಗ ತಮ್ಮ ಚಿತ್ರದ  ದಿನಗಳನ್ನು ನೆನಪಿಸಿಕೊಂಡಿದ್ದಾರೆ. 

 ಅನಿಲ್ ಕಪೂರ್ ಮತ್ತು ಸನ್ನಿ ಡಿಯೋಲ್ ಅವರಂತಹ ಸ್ಟಾರ್​ ನಟರ ಜೊತೆ ಕೆಲಸ ಮಾಡುವುದನ್ನು ನೆನಪಿಸಿಕೊಂಡಿರೋ ನಟಿ ಚಿತ್ರವೊಂದರಲ್ಲಿ ಲಿಪ್​ಲಾಕ್​ ಕುರಿತು ಹೇಳಿಕೊಂಡಿದ್ದಾರೆ.  ಲೆಹ್ರೆನ್ ರೆಟ್ರೊ ಅವರೊಂದಿಗಿನ ಸಂದರ್ಶನದಲ್ಲಿ ನಟಿ ತಾವು ಬೇರೆ ನಟರಿಗಿಂತಲೂ ಹೆಚ್ಚಾಗಿ ಅನಿಲ್​  ಕಪೂರ್ ಜೊತೆಗೆ ನಟಿಸಿರುವುದಾಗಿ ತಿಳಿಸಿದರು. ಆದರೆ,  1988ರಲ್ಲಿ ಬಿಡುಗಡೆಯಾದ ನಿರ್ದೇಶಕ ಯಶ್ ಚೋಪ್ರಾ ಅವರ ವಿಜಯ್ ಚಿತ್ರದಲ್ಲಿನ ಇಂಟಿಮೇಟ್​ ಸೀನ್​ ಅಂದ್ರೆ ಲಿಪ್​ಲಾಕ್​ ಕುರಿತು ಆದ ವಿವಾದದ ಬಗ್ಗೆ ನಟಿ ಹೇಳಿದ್ದಾರೆ. ಅಷ್ಟಕ್ಕೂ ಆಗ ನಟಿಯರು, ಈಗಿನ ನಟಿಯರಂತೆ ಮರ್ಯಾದೆ ಕಳೆದುಕೊಂಡಿರಲಿಲ್ಲ. ಕಿಸ್​ ಸೀನ್​ ಮಾಡುವಾಗಲೂ ಸಾಕಷ್ಟು ಯೋಚನೆ ಮಾಡುತ್ತಿದ್ದರು. ಅದೇ ಕಾರಣಕ್ಕೆ ವಿಜಯ್​ ಚಿತ್ರದಲ್ಲಿ ಲಿಪ್​ಲಾಕ್​ಗೆ ಅವರು ಒಪ್ಪಿಕೊಂಡಿರಲಿಲ್ಲವಂತೆ. ಕೊನೆಗೆ ಯಶ್​ ಚೋಪ್ರಾ ಮತ್ತು ಅನಿಲ್​  ಕಪೂರ್​ ತುಂಬಾ ಒತ್ತಾಯ ಮಾಡಿದ ಕಾರಣ ತಾವು ಇದಕ್ಕೆ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಕಿಸ್​ ಸೀನ್​ ಮಾಡುವಾಗ ಬೆವರಿ ಹೋಗಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. 

Tap to resize

Latest Videos

ಜೇನ ದನಿಯೋಳೆ, ಮೀನ ಕಣ್ಣೋಳೆ... 'ದ್ವಾಪರ' ಹಾಡಿನ ಮ್ಯಾಜಿಕ್​ ಮಾಡಿದ್ದು ಕನ್ನಡವೇ ಬಾರದ ಈ ಗಾಯಕ!
 
ಇದೇ ವೇಳೆ, ನಟಿ  ಸನ್ನಿ ಡಿಯೋಲ್ ಜೊತೆಗಿನ ಮೊದಲ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಅವರು ನಟ ಸನ್ನಿ ಡಿಯೋಲ್ ಜೊತೆಗಿನ ಚುಂಬನದ ದೃಶ್ಯಕ್ಕೆ ಪ್ರತಿಕ್ರಿಯಿಸಿದ್ದಾರೆ.  'ಸನ್ನಿ ಡಿಯೋಲ್ ಜೊತೆಗಿನ ನನ್ನ ಮೊದಲ ಚಿತ್ರ 1987ರಲ್ಲಿ ಬಿಡುಗಡೆಯಾದ  ಡಕಾಯತ್​ ಚಿತ್ರ. ಅದರಲ್ಲಿ ನಾನು ಡಾರ್ಕ್ ಮೇಕಪ್ ಇರುವ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ನಾವಿಬ್ಬರೂ ದೋಣಿಯಲ್ಲಿ ಚುಂಬನದ ದೃಶ್ಯವನ್ನು ಮಾಡಬೇಕಿತ್ತು. ಇದು ಸಕತ್​  ರೊಮ್ಯಾಂಟಿಕ್ ಸೀನ್​. ಆದರೆ ಅದೇ ಮೊದಲಾಗಿದ್ದರಿಂದ ನಾನು ತುಂಬಾ  ಟೆನ್ಶನ್ ಆಗಿತ್ತು. ಫುಲ್​ ನರ್ವಸ್​ ಕೂಡ ಆಗಿ ಹೋಗಿದ್ದೆ. ಏಕೆಂದರೆ  ನಾನು ಸ್ವಲ್ಪ ಸಂಪ್ರದಾಯವಾದಿ. ನನ್ನ ಚೊಚ್ಚಲ ಚಿತ್ರ ಪಂಟರ್ ಬಾಬುದಲ್ಲಿ ನಾನು ಸಾಕಷ್ಟು ಬೋಲ್ಡ್​ ಆಗಿಯೇ  ಬಟ್ಟೆ ಧರಿಸಿದ್ದೆ. ಆದರೆ ಆಮೇಲೆ ಮುಜುಗರವಾಗಿ ಅದನ್ನು ಮತ್ತೆ ಪುನರಾವರ್ತಿಸಬಾರದು ಎಂದುಕೊಂಡಿದ್ದೆ. ಅದಕ್ಕಾಗಿ ಸನ್ನಿ ಡಿಯೋಲ್​ ಜೊತೆ ಕಿಸ್ಸಿಂಗ್​ ದೃಶ್ಯದಲ್ಲಿ ಕಾಣಿಸಿಕೊಳ್ಳುವುದು ನನಗೆ ತುಂಬಾನೆ ಭಯವಾಗಿತ್ತು ಎಂದಿದ್ದಾರೆ.

 ಆ ಚುಂಬನದ ದೃಶ್ಯವು ತುಂಬಾ ಕಷ್ಟವಾಗಿತ್ತು. ತುಂಬಾ ಭಯಪಟ್ಟುಕೊಂಡೇ ಈ ದೃಶ್ಯ ಮಾಡಿದೆ. ಸನ್ನಿ ಡಿಯೋಲ್ ಸಂಭಾವಿತ ವ್ಯಕ್ತಿಯಾಗಿರುವುದರಿಂದ ಆ ದೃಶ್ಯವನ್ನು ಮಾಡಲು ಸಾಧ್ಯವಾಯಿತು. ಅವರು ನಮ್ಮನ್ನು ತುಂಬಾ ನಿರಾಳವಾಗಿಸಿದರು ಮತ್ತು ಇಬ್ಬರೂ ದೃಶ್ಯವನ್ನು ಸಲೀಸಾಗಿ ನಿರ್ವಹಿಸಿದರು.   ಸನ್ನಿ ಡಿಯೋಲ್ ಅವರೊಂದಿಗೆ ಕೆಲಸ ಮಾಡಲು ತುಂಬಾ ಆರಾಮದಾಯಕವಾಗಿತ್ತು ಎಂದಿದ್ದಾರೆ. ಆದರೆ ಸೆನ್ಸಾರ್​ ಮಂಡಳಿ ಈಗಿನಂತೆ ಇರಲಿಲ್ಲವೇನೋ. ಅದಕ್ಕಾಗಿ  ಸೆನ್ಸಾರ್ ಮಂಡಳಿ ಆ ದೃಶ್ಯಕ್ಕೆ ಕತ್ತರಿ ಹಾಕಿತ್ತಂತೆ!  ಈ ಬಗ್ಗೆಯೂ ನಟಿ ಹೇಳಿದ್ದಾರೆ.  ನಂತರ ನಾವಿಬ್ಬರೂ  ಒಟ್ಟಿಗೆ ಘಾಯ್, ಘಾಟಕ್ ಮತ್ತು ದಾಮಿನಿಯಂತಹ ಚಿತ್ರಗಳು ಸೂಪರ್​ಹಿಟ್​ ಆದವು ಎಂದಿದ್ದಾರೆ. 
 

ಶಾರುಖ್ ಖಾನ್​ ಹೆಸರಿಗೆ ಕಪ್ಪುಚುಕ್ಕೆ: ವಿದೇಶದ ನೆಲದಲ್ಲಿ ಮರ್ಯಾದೆ ಕಳೆದುಕೊಂಡ ಬಾದ್​ಶಾಹ್​!

click me!