ಸ್ವಿಜರ್ಲೆಂಡ್ನಲ್ಲಿ ನಡೆದ ಪರ್ಡೋ ಅಲ್ಲಾ ಕ್ಯಾರೆರಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾರುಖ್ ಖಾನ್ ಮರ್ಯಾದೆ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
ಶಾರುಖ್ ಖಾನ್ ಎಂದರೆ ಅವರಿಗೆ ಅವರದ್ದೇ ಆದ ಘನತೆ, ಗೌರವ ಇದೆ. ಸಿನಿ ಇಂಡಸ್ಟ್ರಿಯಲ್ಲಿ ಒಂದಿಷ್ಟು ಮರ್ಯಾದೆ ಉಳಿಸಿಕೊಂಡಿದ್ದಾರೆ ನಟ. ಪರೋಪಕಾರಿ, ಏಕಪತ್ನಿ ವ್ರತಸ್ಥ ಹೀಗೆ ಹಲವು ಬಿರುದುಗಳು ಸಂದಿವೆ. ಆದರೆ ಯಾವುದೇ ವ್ಯಕ್ತಿ ಮಾಡುವ ಒಂದೇ ಒಂದು ಎಡವಟ್ಟು ಅಥವಾ ಕೆಟ್ಟಕೆಲಸ ಅವರ ಎಲ್ಲಾ ಸಾಧನೆ, ಒಳ್ಳೆತನಗಳನ್ನು ಧೂಳಿಪಟ ಮಾಡುತ್ತವೆ. ಅದೇ ರೀತಿ ಇದೀಗ ಶಾರುಖ್ ಖಾನ್ರಿಗೂ ಆಗಿದೆ. ಅದೂ ಭಾರತದಲ್ಲಲ್ಲ. ಬದಲಿಗೆ ಸ್ವಿಜರ್ಲೆಂಡ್ ನೆಲದಲ್ಲಿ! ಶಾರುಖ್ ಅವರಿಗೆ ವಿದೇಶಗಳಲ್ಲಿಯೂ ಅಭಿಮಾನಿಗಳು ಇದ್ದಾರೆ. ಆದರೆ ನಟ ಮಾಡಿದ ಒಂದು ಎಡವಟ್ಟಿನಿಂದಾಗಿ ಈಗ ಸೋಷಿಯಲ್ ಮೀಡಿಯಾದಲ್ಲಿ ಮಾನ ಕಳೆದುಕೊಂಡಿದ್ದಾರೆ!
ಹೌದು. ಸ್ವಿಜರ್ಲೆಂಡ್ನಲ್ಲಿ ನಡೆದ ಪರ್ಡೋ ಅಲ್ಲಾ ಕ್ಯಾರೆರಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾರುಖ್ ಖಾನ್ ಮರ್ಯಾದೆ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಜೀವಮಾನ ಸಾಧನೆಗಾಗಿ ಶಾರುಖ್ಗೆ ಪರ್ಡೋ ಅಲ್ಲಾ ಕ್ಯಾರೆರಾ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ರೆಡ್ ಕಾರ್ಪೆಟ್ ಮೇಲೆ ಪಾಪರಾಜಿಗಳಿಗೆ ಶಾರುಖ್ ಪೋಸ್ ನೀಡುತ್ತಿದ್ದರು. ಆಗ ವೃದ್ಧರೊಬ್ಬರು ವೇದಿಕೆಯ ಮೇಲೆ ಬಂದಿದ್ದಾರೆ. ಆಗ ಶಾರುಖ್, ತಮ್ಮ ಕೈಗಳಿಂದ ಆ ವೃದ್ಧರನ್ನು ತಳ್ಳಿದ್ದಾರೆ. ತಮ್ಮ ಮೇಲೆ ಕ್ಯಾಮೆರಾ ಕಣ್ಣು ನೆಟ್ಟಿದೆ ಅನ್ನೋದನ್ನೂ ಮರೆತು ಶಾರುಖ್ ಈ ರೀತಿ ಮಾಡಿ ಈಗ ಅಭಿಮಾನಿಗಳಿಂದಲೇ ವಿರೋಧ ಅನುಭವಿಸುತ್ತಿದ್ದಾರೆ. ಅನೇಕರು ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ಥೂ ನಾಚಿಕೆ ಆಗಲ್ವಾ? ನಿಮ್ಮಂಥವರನ್ನು ಹಿಡಿದು ಥಳಿಸಬೇಕು... ಶಾರುಖ್,ಅಜಯ್ ವಿರುದ್ಧ ಗುಡುಗಿದ 'ಶಕ್ತಿಮಾನ್'
ಇಷ್ಟು ದಿನ ಹೊಗಳುತ್ತಿದ್ದವರೇ ಹಲವರು ನಟನ ವಿರುದ್ಧ ಮಾತನಾಡಿದರೆ, ಆತ ಗೋಮುಖ ವ್ಯಾಘ್ರ, ಒಳ್ಳೆಯ ವ್ಯಕ್ತಿ ಅಲ್ಲ ಎನ್ನೋದು ಯಾವಾಗಲೋ ತಿಳಿದಿತ್ತು ಎಂದೂ ಹೇಳುತ್ತಿದ್ದಾರೆ ಕೆಲವರು! ಇಂಥ ನಟರಿಗೆ ನಾಚಿಕೆಯಾಗಬೇಕು, ವಿದೇಶದ ನೆಲದಲ್ಲಿ ಭಾರತದ ಮರ್ಯಾದೆ ಕಳೆಯುತ್ತಾರೆ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಶಾರುಖ್ ತಂಡದವರು, ಆ ವೃದ್ಧ ತಮ್ಮ ತಂಡದವರೇ ಎಂದಿದ್ದಾರೆ. ಶಾರುಖ್ ಖಾನ್ ಆ ವ್ಯಕ್ತಿಯನ್ನು ದೂರ ತಳ್ಳಿದ್ದು ಕೋಪದಲ್ಲಿ ಅಲ್ಲ ತಮಾಷೆಗಾಗಿ ಎಂದು ಕೆಲವು ಅಭಿಮಾನಿಗಳು ನಟನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ನೆಟ್ಟಿಗರು ಬಿಡಬೇಕಲ್ಲಾ!
ಅಂದಹಾಗೆ, ಶಾರುಖ್ ಖಾನ್ ಆಗಸ್ಟ್ 10 ರಂದು ಸ್ವಿಟ್ಜರ್ಲೆಂಡ್‌ನ ಲೊಕಾರ್ನೊ ನಗರವನ್ನು ತಲುಪಿದ್ದರು. ಇಲ್ಲಿ ಅವರು 77 ನೇ ಲೊಕಾರ್ನೊ ಚಲನಚಿತ್ರೋತ್ಸವದ ಭಾಗವಾದರು, ಅಲ್ಲಿ ಅವರಿಗೆ ಪಾರ್ಡೊ ಅಲ್ಲಾ ಕ್ಯಾರಿಯರಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸುವಾಗ, ಶಾರುಖ್ ಖಾನ್ ಇಟಾಲಿಯನ್ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸಿದರು ಮತ್ತು ಇಟಾಲಿಯನ್ ಆಹಾರ, ನಗರ ಮತ್ತು ಅದರ ಸೌಂದರ್ಯದ ಬಗ್ಗೆ ಮಾತನಾಡಿದರು. ಸುಮಾರು ಎಂಟು ಸಾವಿರ ಜನರ ಸಮ್ಮುಖದಲ್ಲಿ ಮಾತನಾಡಿದ ಶಾರುಖ್ ಅವರನ್ನು ಎಲ್ಲರೂ ಶ್ಲಾಘಿಸಿದ್ದರು. ಆದರೆ ಈ ಒಂದು ವಿಡಿಯೋದಿಂದ ನಟ ಸಕತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ.
ಫ್ಲ್ಯಾಟ್ ಚೆಸ್ಟ್ ಎನ್ನುವುದನ್ನು ಹೀಗೆ ಬಿಂಬಿಸೋದಾ ಉರ್ಫಿ? ಎದೆಯ ಮೇಲೆಯೇ ಡಿಜಿಟಲ್ ಬೋರ್ಡ್!