ಹುಡುಗ - ಹುಡುಗ ಕಿಸ್ ಮಾಡೋದರಲ್ಲಿ ತಪ್ಪೇನಿದೆ? ಆಯುಷ್ಮಾನಾ ಖುರಾನಾ

By Mahmad Rafik  |  First Published Aug 12, 2024, 6:11 PM IST

ಹುಡುಗ - ಹುಡುಗ ಕಿಸ್ ಮಾಡೋದರಲ್ಲಿ ತಪ್ಪೇನಿದೆ?  ಜನರು  ಈ ರೀತಿ ವಿಚಿತ್ರವಾಗಿ ಮಾತನಾಡೋದನ್ನು ನಿಲ್ಲಿಸಬೇಕು ಎಂದು ಬಾಲಿವುಡ್ ನಟ ಆಯುಷ್ಮಾನಾ ಖುರಾನಾ ಹೇಳಿದ್ದಾರೆ.


ಮುಂಬೈ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ  ಎಂತಹುವುದೇ ಪಾತ್ರಗಳಿದ್ದರೂ ಲೀಲಾಜಾಲವಾಗಿ ನಟಿಸುತ್ತಾರೆ ಎಂದು ಸಿನಿ ಪಂಡಿತರು  ಹೇಳುತ್ತಾರೆ. ಅದೇ ರೀತಿ ಆಯುಷ್ಮಾನಾ ಖುರಾನಾ ಸಹ ಆಯ್ಕೆ ಮಾಡಿಕೊಳ್ಳುವ ಕಥೆಗಳು ಸಹ ವಿಭಿನ್ನವಾಗಿರುತ್ತವೆ. ನಿರ್ದೇಶಕರ ನಟರಾಗಿರುವ ಆಯುಷ್ಮಾನಾ ಖುರಾನಾ, ಶುಭ  ಮಂಗಲ್, ಜ್ಯಾದ ಸಾವಧಾನ್ ಚಿತ್ರದಲ್ಲಿ ಸಲಿಂಗಿಯ ಪಾತ್ರದಲ್ಲಿ ನಟಿಸಿದ್ದರು. ಆಯುಷ್ಮಾನ್ ಖುರಾನಾ ಮತ್ತು ಜಿತೇಂದ್ರ ಕುಮಾರ್ ಸಲಿಂಗಿ ಜೋಡಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಆಯುಷ್ಮಾನ್ ಮತ್ತು ಜಿತೇಂದ್ರ  ಕಿಸ್ ಮಾಡಿದ್ದರು. 2020ರಲ್ಲಿ ಬಿಡುಗಡೆಗೊಂಡಿದ್ದ 'ಶುಭ  ಮಂಗಲ್, ಜ್ಯಾದ ಸಾವಧಾನ್' ಕಾಮಿಡಿ ಜೊತೆಯಲ್ಲಿ ಸಲಿಂಗಿಗಳ ಭಾವನೆಯನ್ನು ತೋರಿಸುವ ಕಥಾಹಂದರವನ್ನು ಒಳಗೊಂಡಿತ್ತು. ಇಂದಿಗೂ ಸಿನಿಮಾದ ಕಾಮಿಡಿ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಟ್ರೋಲಿಗರು ಈ ಚಿತ್ರದ ಫೋಟೋ, ಡೈಲಾಗ್‌ಗಳನ್ನು ಟ್ರೋಲ್ ಮಾಡಲು ಬಳಸಲಾಗುತ್ತದೆ. 

ಇದೇ ಚಿತ್ರಕ್ಕೆ ಸಂಬಂಧಿಸಿದಂತೆ ಆಯುಷ್ಮಾನ್ ಖುರಾನ್ ಮಾತನಾಡಿರುವ ವಿಡಿಯೋ ಕ್ಲಿಪ್ ವೈರಲ್ ಆಗ್ತಿದೆ. ಸಂದರ್ಶನದಲ್ಲಿ ನಿರೂಪಕಿ, ಜಿತೇಂದ್ರ ಕುಮಾರ್ ಜೊತೆ ಕಿಸ್ ಮಾಡಿದ ಸೀನ್ ಬಗ್ಗೆ ಪ್ರಶ್ನೆ ಮಾಡ್ತಾರೆ. ಈ ಪ್ರಶ್ನೆಗೆ ಸಿಡಿಮಿಡಿಗೊಂಡ ಆಯುಷ್ಮಾನ್ ಖುರಾನ್, ಈ ಪ್ರಶ್ನೆ  ಯಾಕೆ ಅಂತ ನನಗೆ ಗೊತ್ತಾಗುತ್ತಿಲ್ಲ. ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳೋದು ಅವರವರ ಆಯ್ಕೆ. ಅದೇ ನಾನು ಹಲವು ಸಿನಿಮಾಗಳಲ್ಲಿ ನಟಿಯರ ಜೊತೆ ಕಿಸ್ ಮಾಡಿದ್ದೇನೆ. ಆ ಬಗ್ಗೆ ಯಾಕೆ ನೀವೂ ನನ್ನನ್ನು ಪ್ರಶ್ನೆ ಮಾಡಲ್ಲ ಎಂದು ಗರಂ ಆಗಿದ್ದರು.

Tap to resize

Latest Videos

ನಟಿಯರನ್ನು ಕಂಡು ಹುಣಸೆ ಮರ ಮುಪ್ಪಾದ್ರೆ, ಹುಳಿ ಮುಪ್ಪೆ ಎಂದ  ಹಿರಿಯ ನಟ ಶಂಕರ್ ಅಶ್ವಥ್

ಮುಂದಿನ ದಿನಗಳಲ್ಲಿ ಹೇಗಿತ್ತು ಎಂಬ ಪ್ರಶ್ನೆ ಉಂಟಾಗಬಾರದು ಎಂದು ಈ ಚಿತ್ರವನ್ನು ಮಾಡಲಾಗಿದೆ. ಹುಡುಗ-ಹುಡುಗ, ಹುಡುಗಿ-ಹುಡುಗಿ, ಹುಡುಗ-ಹುಡುಗಿ ಕಿಸ್ ಮಾಡೋದು ಒಂದು ಆಕರ್ಷಣೆ. ಭವಿಷ್ಯದಲ್ಲಿ ಈ ಬಗ್ಗೆ ಯಾರೂ ವಿಚಿತ್ರವಾಗಿ ಮಾತನಾಡಬಾರದು ಎಂಬ ಕಾರಣವನ್ನಿಟ್ಟುಕೊಂಡು ಶುಭ ಮಂಗಲ್ ಸಿನಿಮಾ ಮಾಡಿದ್ದೇವೆ ಎಂದು ಆಯುಷ್ಮಾನ್ ಖುರಾನ್ ಹೇಳಿಕೊಂಡಿದ್ದಾರೆ. 

ಜಿತೇಂದ್ರ ಕುಮಾರ್ ಸೋದರಿಯ ಮದುವೆಗೆ ಹೋಗುತ್ತಿರುವ ಸಂದರ್ಭದಲ್ಲಿ ಗೆಳೆಯ ಆಯುಷ್ಮಾನ್ ಖುರಾನಾನನ್ನು ಸಹ ಕರೆದುಕೊಂಡು ಹೋಗುತ್ತಾನೆ. ಚಿತ್ರದಲ್ಲಿಯೂ ಸಲಿಂಗಿ ಸಂಗಾತಿ ಆಗಿರುತ್ತಾರೆ. ಆದ್ರೆ ಮನೆಗೆ ಹೋಗುತ್ತಿದ್ದಂತೆ ಜಿತೇಂದ್ರನಿಗೆ ಆತನ ಪೋಷಕರು ಹುಡುಗಿಯನ್ನು ಹುಡುಕಿ ಮದುವೆ ಫಿಕ್ಸ್ ಮಾಡ್ತಾರೆ. ಈ ವೇಳೆ ಆಯುಷ್ಮಾನ್ ಮತ್ತು ಜಿತೇಂದ್ರ ನಡುವಿನ ಸಂಬಂಧದ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತೆ ಎಂಬುವುದು ಚಿತ್ರದ ಕತೆಯಾಗಿದೆ. ಈ ಚಿತ್ರದಲ್ಲಿಯೇ ಇಬ್ಬರು ಕಿಸ್ ಮಾಡ್ತಾರೆ. ಈ ಕಿಸ್ಸಿಂಗ್ ಸೀನ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.

ಬರೀ ಸಲ್ಮಾನ್ ಖಾನ್ ಮಾತ್ರವಲ್ಲ, ಈ ಬಾಲಿವುಡ್ ನಟರೂ ಫ್ಲರ್ಟ್ ಮಾಡೋದ್ರಲ್ಲಿ ಎತ್ತಿದ ಕೈ!

click me!