ನಟ ಧನುಷ್ ಜೊತೆ ಮದುವೆ ವಂದತಿ; ಕೊನೆಗೂ ಮೌನ ಮುರಿದ ನಟಿ ಮೀನಾ

Published : Mar 29, 2023, 01:53 PM IST
ನಟ ಧನುಷ್ ಜೊತೆ ಮದುವೆ ವಂದತಿ; ಕೊನೆಗೂ ಮೌನ ಮುರಿದ ನಟಿ ಮೀನಾ

ಸಾರಾಂಶ

ನಟ ಧನುಷ್ ಜೊತೆ ಮದುವೆ ವಂದತಿ ಬಗ್ಗೆ ನಟಿ ಮೀನಾ ಕೊನೆಗೂ ಕೊನೆಗೂ ಮೌನ ಮುರಿದಿದ್ದಾರೆ. 

ಕಾಲಿವುಡ್ ಸ್ಟಾರ್ ಧನುಷ್ ಮತ್ತು ನಟಿ ಮೀನಾ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳ ಹಿಂದೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸೌಂದರ್ಯ ಅವರಿಂದ ವಿಚ್ಛೇದನ ಪಡೆದಿರುವ ನಟ ಧನುಷ್ ಪತಿಯನ್ನು ಕಳೆದುಕೊಂಡಿರುವ ಮೀನಾ ಅವರನ್ನು ವರಿಸಲಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೂ ಅಚ್ಚರಿ ಮೂಡಿಸಿತ್ತು. ಅಷ್ಟಕ್ಕೂ ವದಂತಿ ವೈರಲ್ ಆಗಲು ಕಾರಣ ಕಾಲಿವುಡ್ ನಟ ಬೈಲ್ವಾನ್ ರಂಗನಾಥನ್ ಹೇಳಿಕೆ. ಮೀನಾ ಮತ್ತು ಧನುಷ್ ಬಗ್ಗೆ ಗಾಳಿಸುದ್ದಿ ಹಬ್ಬಿಸಿ ಸೈಲೆಂಟ್ ಆಗಿದ್ದರು ನಟ ಬೈಲ್ವಾನ್ ರಂಗನಾಥನ್. ಈ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. 

ಮದುವೆ ವದಂತಿ ಬಗ್ಗೆ ನಟಿ ಮೀನಾ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕ ದಿನಗಳ ಬಳಿಕ ಮೀನಾ ಕೊನೆಗೂ ಮೌನ ಮುರಿದಿದ್ದಾರೆ. ಈ ಬಗ್ಗೆ ತಮಿಳಿನ ಕೆಲವು ಮಾಧ್ಯಮಗಳು ವರದಿ ಮಾಡಿದೆ. ವರದಿ ಪ್ರಕಾರ ಮೀನಾ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ. 'ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ಪತಿಯನ್ನು ಕಳೆದುಕೊಂಡ ಘಟನೆಯಿಂದನೇ ಇನ್ನೂ ಮೀನಾ ಹೊರ ಬಂದಿಲ್ಲ. ಹೇಗೆ ಇಂಥ ವಿಚಾರಗಳ ಬಗ್ಗೆ ಹೀಗೆಲ್ಲ ಸುದ್ದಿ ಹಬ್ಬಿಸುತ್ತಾರೆ. ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಉತ್ತಮ ಪಾತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಮಗಳ ನೋಡಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ' ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ. 

ಬೈಲ್ವಾನ್ ರಂಗನಾಥನ್ ಹೇಳಿದ್ದೇನು?

'ಇಬ್ಬರೂ ನಲವತ್ತರ ಆಸುಪಾಸಿನವರು. ಇಬ್ಬರಿಗೂ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಇಬ್ಬರೂ ಹೊಸ ಬದುಕು ಕಟ್ಟಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಈ ಜೂನ್ ನಲ್ಲಿ ಅವರು ಮದುವೆಯಾಗಬಹುದು. ಒಂದು ವೇಳೆ ಅವರು ಮದುವೆಯಾಗದಿದ್ದರೂ ಒಟ್ಟಿಗೆ ವಾಸಿಸಬಹುದು' ಎಂದು ಬೈಲ್ವಾನ್ ರಂಗನಾಥನ್ ಹೇಳಿಕೆ ನೀಡಿದ್ದಾರೆ. ರಂಗನಾಥ್ ಹೀಗೆ ಹೇಳುತ್ತಿದ್ದಂತೆ ಧನುಷ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.  

ನಟಿ ಮೀನಾ ಜೊತೆ ಧನುಷ್ ಮದುವೆ; ಸ್ಪೋಟಕ ಹೇಳಿಕೆ ನೀಡಿದ ಕಾಲಿವುಡ್ ನಟನಿಗೆ ಅಭಿಮಾನಿಗಳ ತರಾಟೆ

ಪತ್ನಿಗೆ ವಿಚ್ಛೇದನ ನೀಡಿರುವ ಧನುಷ್ 

ನಟ ಧನುಷ್ ಮತ್ತು ಐಶ್ವರ್ಯಾ ದಂಪತಿ ಬೇರೆ ಬೇರೆಯಾಗಿ ಅನೇಕ ತಿಂಗಳುಗಳೇ ಕಳೆದಿವೆ. ಕಳೆದ ವರ್ಷ ಇಬ್ಬರೂ ಬೇರೆ ಬೇರೆ ಆಗುತ್ತಿರುವ ಬಗ್ಗೆ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಈ ಮೂಲಕ ಇಬ್ಬರೂ ತಮ್ಮ 18 ವರ್ಷಗಳ ದಾಂಪತ್ಯ ಜೀವನ ಮುರಿದುಕೊಂಡು ದೂರ ದೂರ ಆದರು. ಸದ್ಯ ಇಬ್ಬರ ವಿಚ್ಛೇದನ ಪ್ರಕರಣ ಕೋರ್ಟ್‌ನಲ್ಲಿದೆ. 

Actress Meena: ಆ ನಟನ ಮದ್ವೆ ಸುದ್ದಿ ಕೇಳಿ ನನ್ನ ಹೃದಯನೇ ಒಡೆದು ಹೋಗಿತ್ತು ಎಂದ ನಟಿ

ಮೀನಾ ಪತಿ ನಿಧನ   

ನಟಿ ಮೀನಾ ಇತ್ತೀಚಿಗಷ್ಟೆ ಪತಿಯನ್ನು ಕಳೆದುಕೊಂಡರು. ಮೀನಾ ಪತಿ ಸಾಗರ್ ಕಳೆದ ಕೆಲವು ತಿಂಗಳ ಹಿಂದೆಯಷ್ಟೆ ನಿಧನ ಹೊಂದಿದರು. ಪತಿಯನ್ನು ಕಳೆದುಕೊಂಡು ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಮೀನಾ ಬಗ್ಗೆ ಇತ್ತೀಚಿಗಷ್ಟೆ 2ನೇ ಮದುವೆ ವದಂತಿ ವೈರಲ್ ಆಗಿತ್ತು. ಆದರೆ ಈ ಸುದ್ದಿಯನ್ನು ತಳ್ಳಿಹಾಕಿದ್ದರು. ಆದರೀಗ ಮೀನಾ ಮತ್ತು ಧನುಷ್ ಮದುವೆ ಆಗ್ತಾರೆ ಎಂದು ನಟ ಬೈಲ್ವಾನ್ ರಂಗನಾಥನ್ ಹೇಳಿದ್ದಾರೆ. ಈ ಬಗ್ಗೆ ಮೀನಾ  ಅಥವಾ ಧನುಷ್ ಪ್ರತಿಕ್ರಿಯೆ ನೀಡುತ್ತಾರಾ ಎಂದು ಕಾದುನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ