NANI: 20 ವರ್ಷ ಹಿರಿಯವರಾದ್ರೂ ನಟಿ ಶ್ರೀದೇವಿ ಜೊತೆ ಡೇಟಿಂಗ್​ ಆಸೆಯಿತ್ತು ಎಂದ ನಟ

By Suvarna News  |  First Published Mar 29, 2023, 12:47 PM IST

ತಮಿಳು ನಟ ನಾನಿ ಅವರು ನಟಿ ಶ್ರೀದೇವಿಯವರ ಜೊತೆ ತಾವು ಕಂಡ ಕನಸಿನ ಬಗ್ಗೆ ಶೇರ್​ ಮಾಡಿಕೊಂಡಿದ್ದಾರೆ. ಅವರು ಹೇಳಿದ್ದೇನು? 
 


ಭಾರತೀಯ ಚಿತ್ರರಂಗದ ಲೆಜೆಂಡರಿ ನಟಿ ಎಂದು ಕರೆಸಿಕೊಂಡಿರೋ ಶ್ರೀದೇವಿ (Sridevi) ನಿಗೂಢವಾಗಿ ಸಾವನ್ನಪ್ಪಿ  ಐದು ವರ್ಷಗಳೇ ಕಳೆದಿವೆ. ಸೌಂದರ್ಯದ ಘನಿಯಂತಿದ್ದ ಶ್ರೀದೇವಿ ದುರಂತ ಅಂತ್ಯ (sad end) ಕಂಡವರು. ಈಕೆಯದ್ದು ಸಾಮಾನ್ಯ ಸಾವು ಎಂದು ಹೇಳಲಾಗುತ್ತಿದ್ದರೂ, ಈಕೆಯ ಸಾವಿನ ರಹಸ್ಯ  (Secret) ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು.  ನಿಜ ಏನು ಎಂಬ ರಹಸ್ಯ ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ.  1963ರಲ್ಲಿ ಹುಟ್ಟಿದ್ದ ಈ ತಾರೆ  ಬದುಕಿರುತ್ತಿದ್ದರೆ, 60 ವರ್ಷ ವಯಸ್ಸಾಗಿರುತ್ತಿತ್ತು. ಆದರೆ 2018ರಲ್ಲಿ ಈಕೆ ದುರಂತ ಅಂತ್ಯ ಕಂಡರು. ಆದರೂ  ಹಿಂದಿ ಚಿತ್ರರಂಗದ ಕಂಡ ಅಪರೂಪದ ಸ್ಟಾರ್​ಗಳಲ್ಲಿ ಒಬ್ಬರಾಗಿರುವ ಶ್ರೀದೇವಿ ಅವರ ಅಭಿಮಾನಿಗಳು ದೇಶ ಮತ್ತು ವಿದೇಶಗಳಲ್ಲಿದ್ದಾರೆ. ನಟಿ ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವರ ಜನಪ್ರಿಯತೆ ಇಂದಿಗೂ ಕಡಿಮೆಯಾಗಿಲ್ಲ. ಅಭಿಮಾನಿಗಳು ಇನ್ನೂ ಅವರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅವರ ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಇತ್ತೀಚೆಗಷ್ಟೇ ಸೌತ್ ಸ್ಟಾರ್ ಒಬ್ಬರು ತನಗೆ ಶ್ರೀದೇವಿ ಮೇಲೆ ಕ್ರಶ್ ಇತ್ತು ಮತ್ತು ಅವರೊಂದಿಗೆ ಡೇಟಿಂಗ್ ಮಾಡಲು ಬಯಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ಈ ರೀತಿ ಹೇಳಿರುವುದು 39 ವರ್ಷದ ಟಾಲಿವುಡ್‌ನ ಖ್ಯಾತ ನಟ ನಾನಿ (Nani). ತಮಗಿಂತ ಸುಮಾರು 20 ವರ್ಷ ದೊಡ್ಡವರಾಗಿರುವ ಶ್ರೀದೇವಿಯವರ ಜೊತೆ ನಾನು ಡೇಟಿಂಗ್​  ಮಾಡಲು ಬಯಸಿದ್ದೆ. ಅವರೆಂದರೆ ನನಗೆ ಪಂಚಪ್ರಾಣವಾಗಿತ್ತು. ಅವರ ಜೊತೆ ಡೇಟಿಂಗ್​ ಮಾಡುವುದು ನನ್ನ ಆಸೆಯಾಗಿತ್ತು, ನಾನು ಅವರ ದೊಡ್ಡ ಅಭಿಮಾನಿ. ಆದರೆ ದುರದೃಷ್ಟವಶಾತ್​ ಅವರು ನಮ್ಮ ನಡುವೆ ಇಲ್ಲ. ನನ್ನ ಕನಸು ಕನಸಾಗಿಯೇ  ಉಳಿಯಿತು ಎಂದು ಮಾಧ್ಯಮವೊಂದಕ್ಕೆ  ನೀಡಿರುವ ಸಂದರ್ಶನದಲ್ಲಿ ನಟ ನಾನಿ ಹೇಳಿಕೊಂಡಿದ್ದಾರೆ.  ನಾನಿ ಅವರ ಅಸಲಿ ಹೆಸರು ಘಂಡ ನವೀನ್​ ಬಾಬು (Ghanta Naveen Babu).

Tap to resize

Latest Videos

Sridevi Biopic: ಶ್ರೀದೇವಿ ಜೀವನ ಚರಿತ್ರೆ ಶೀಘ್ರ ಬಿಡುಗಡೆ: ನಿಗೂಢ ಸಾವಿನ ರಹಸ್ಯ ಬಯಲಾಗುತ್ತಾ?

 ನಾನಿ ತಮ್ಮ ಬಹುನಿರೀಕ್ಷಿತ 'ದಸರಾ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಈ ಸಮಯದಲ್ಲಿ ತಮ್ಮ ಕನಸಿನ ವಿಷಯವನ್ನು ಬಹಿರಂಗಪಡಿಸಿದ್ದಾರೆ.  ದಸರಾ  ಸಿನಿಮಾವು ಮಾರ್ಚ್‌ 30ಕ್ಕೆ ಬಿಡುಗಡೆಯಾಗಲಿದೆ. ಶ್ರೀದೇವಿ ಅವರನ್ನು ತಾವು ಇಷ್ಟಪಡಲು ಶುರು ಮಾಡಿದ್ದು  ಯಾವಾಗ ಎಂಬ ಬಗ್ಗೆಯೂ ನಾನಿ ಉಲ್ಲೇಖಿಸಿದ್ದಾರೆ. 'ಶ್ರೀದೇವಿಯವರ ಚಲನಚಿತ್ರ ಕ್ಷಣ ಕ್ಷಣಂ (Kshanam Kshanam) 1991ರಲ್ಲಿ ಬಿಡುಗಡೆಯಾಗಿತ್ತು.  ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ಈ ಚಿತ್ರ ನೋಡಿದಾಗಿನಿಂದಲೂ ನಾನು ಶ್ರೀದೇವಿ ಅವರ ಅಭಿಮಾನಿಯಾದೆ' ಎಂದಿದ್ದಾರೆ ನಾನಿ. ಅಸಲಿಗೆ ಈ ಚಿತ್ರ ಬಿಡುಗಡೆಯಾದಾಗ ಏಳು ವರ್ಷಗಳು. ಆಗ ಶ್ರೀದೇವಿಯವರಿಗೆ 38 ವರ್ಷ ವಯಸ್ಸಾಗಿತ್ತು. ಇಷ್ಟು ದೊಡ್ಡವರಾದರೂ ಶ್ರೀದೇವಿಯವರ ಮೇಲೆ ತಮಗೆ ಕ್ರಷ್​ ಆಗಿತ್ತು ಎಂದಿದ್ದಾರೆ ನಾನಿ.  ಕ್ಷಣ ಕ್ಷಣಂ ಸಿನಿಮಾದಲ್ಲಿನ ಅವರ ನಟನೆ ನೋಡಿದ ಮೇಲೆ ನನಗೆ ಅವರು ಎಷ್ಟು ಸಹಜವಾಗಿ ಅಭಿನಯಿಸುತ್ತಾರೆ ಎನ್ನಿಸಿತ್ತು, ಇಂದಿಗೂ ಅದು ನಟನೆಯಲ್ಲ, ನಿಜ ಅನ್ನಿಸುತ್ತದೆ ಎಂದಿದ್ದಾರೆ ನಾನಿ. 

'ಅವರ ಮೇಲಿನ ಅಭಿಮಾನ ನಾನು ಬೆಳೆಯುತ್ತಾ ಹೋದಂತೆ ಹೆಚ್ಚಾಯಿತು. ನನ್ನ  ಯೌವನದ ದಿನಗಳಲ್ಲಿ ಶ್ರೀದೇವಿ ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದರು. ಅವರ ಜೊತೆ ಡೇಟಿಂಗ್‌ (Dating) ಮಾಡುವ ಕನಸು ಕಂಡಿದ್ದೆ. ಆದರೆ ದುರಾದೃಷ್ಟವಶಾತ್‌ ಅವರು ಇಂದು ಬದುಕಿಲ್ಲ.  ಇಂದಿಗೂ ನಾನು ಅವರ ಬಹುದೊಡ್ಡ ಅಭಿಮಾನಿ' ಎಂದಿದ್ದಾರೆ.  ಇದೇ ವೇಳೆ ದಸರಾ ಚಿತ್ರದ ಬಗ್ಗೆ ಬಹು ನಿರೀಕ್ಷೆ ಇಟ್ಟುಕೊಂಡಿರುವ ನಾನಿ ಅವರು, 'ಕಳೆದ ವರ್ಷ ತೆಲುಗು ಚಿತ್ರರಂಗದಿಂದ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆಯಾಗಿ ಸೂಪರ್‌ ಹಿಟ್‌ ಆಗಿತ್ತು. ಕನ್ನಡ ಚಿತ್ರರಂಗದಿಂದ ಕೆಜಿಎಫ್ ಮತ್ತು ಕಾಂತಾರ ಚಿತ್ರಗಳು ಬಿಡುಗಡೆಯಾಗಿ ಹೆಸರು ಗಳಿಸಿದ್ದವು. 2023ರಲ್ಲಿ ತೆಲುಗು ಚಿತ್ರರಂಗದಿಂದ ದಸರಾ ಬರಲಿದೆ ಎಂದು ನಾನು ಆತ್ಮವಿಶ್ವಾಸದಿಂದ ಮತ್ತು ಹೆಮ್ಮೆಯಿಂದ ಹೇಳಬಲ್ಲ' ಎಂದಿದ್ದಾರೆ.  

Actress Sridevi ಸಾವಿಗೆ 5 ವರ್ಷ: ಭಾವುಕ ನುಡಿನಮನ ಸಲ್ಲಿಸಿದ ಮಗಳು ಜಾಹ್ನವಿ ಕಪೂರ್​

ಇನ್ನು ತೆಲುಗಿನ ದಸರಾ ಚಿತ್ರದ ಬಗ್ಗೆ ಹೇಳುವುದಾದರೆ, ಇದು  ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಇದು ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು  ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿಯೂ  ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ನಾನಿಯೊಂದಿಗೆ ಕೀರ್ತಿ ಸುರೇಶ್‌, ದಿಯಾ ಖ್ಯಾತಿಯ ದೀಕ್ಷಿತ್‌ ಶೆಟ್ಟಿ, ಸಾಯಿಕುಮಾರ್‌ ಮೊದಲಾದವರು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾಕ್ಕೆ ಒಡೆಲ್ಲಾ ಶ್ರೀಕಾಂತ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಚಿತ್ರದಲ್ಲಿ ನಾನಿ ಧರಣಿ (Dharani) ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಧರಣಿ ಪಾತ್ರ ತಮ್ಮ ಸಿನಿ ಬದುಕಿನ ಚಾಲೆಂಜಿಂಗ್‌ ಪಾತ್ರ ಎಂದಿದ್ದಾರೆ ನಾನಿ.

click me!