ಅಬ್ಬಬ್ಬಾ...! ಈ ನಟನ ಲವ್​ ಬ್ರೇಕಪ್​ ಪತ್ರ 13 ಲಕ್ಷ ರೂ.ಗೆ ಮಾರಾಟ...

By Suvarna News  |  First Published Feb 4, 2023, 5:09 PM IST

ಹಲವು ದಶಕಗಳವರೆಗೆ ಹಾಲಿವುಡ್​ ಚಿತ್ರರಂಗವನ್ನು ಆಳಿದ ನಟ  ಮರ್ಲಾನ್ ಬ್ರಾಂಡೊ ಅವರು 1940ರ ದಶಕದಲ್ಲಿ ಗೆಳತಿಗೆ ಬರೆದಿದ್ದ ಬ್ರೇಕಪ್​ ಪತ್ರ ಹರಾಜು ಮಾಡಲಾಗುತ್ತಿದೆ. ಏನಿದರ ವಿಶೇಷತೆ?
 


ಚಿತ್ರರಂಗವೇ ಹಾಗೆ. ಇಲ್ಲಿ ಎಲ್ಲವೂ ವಿಚಿತ್ರವೇ. ಈ ಬಣ್ಣದ ಲೋಕದೊಳಗೆ ಕಾಲಿಟ್ಟು ಒಂದಿಷ್ಟು ಖ್ಯಾತಿ ಗಳಿಸಿದರೆ ಸಾಕು... ಅಭಿಮಾನಿಗಳ (Fans) ಹಿಂಡು ಹಿಂದೆ ಬರುತ್ತದೆ. ಯಾವುದೋ ಒಬ್ಬ ನಟನೋ, ನಟಿಯೋ ಅಚ್ಚುಮೆಚ್ಚು ಆಗಿಬಿಡುತ್ತಾರೆ. ಕೆಲವರ ಅಭಿಮಾನ ಅತಿರೇಕಕ್ಕೆ ಹೋಗುವುದೂ ಇದೆ. ಆ ನಟನನ್ನೇ ತಮ್ಮ ಆರಾಧ್ಯ ದೈವದಂತೆ ಕಾಣುತ್ತಾರೆ. ಆತ/ಆಕೆ ಏನು ಮಾಡಿದರೂ ಚೆನ್ನ, ಅವರು ಮಾಡುವ ಕಾರ್ಯಗಳನ್ನೇ ತಾವು ಅನುಸರಿಸುವುದು, ಅವರನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿಯಾಗಲು ಬೇಕಿದ್ದರೆ ಪ್ರಾಣವನ್ನೇ ಮುಡುಪಾಗಿಡುವುದು... ಹೀಗೆ ಅಭಿಮಾನದ ಹುಚ್ಚು ಅತಿರೇಕಕ್ಕೂ (extra ordinary) ಹೋಗುವುದು ಉಂಟು.   ಅದು ಎಷ್ಟರಮಟ್ಟಿಗೆ ಎಂದರೆ ಈಗಿನ ಕೆಲ ಚಿತ್ರಗಳ ನಾಯಕರು ಚಿತ್ರಗಳಲ್ಲಿ ನಟಿಸಿರುವ ಅಪರಾಧದ ಚಟುವಟಿಕೆಗಳನ್ನೇ ಅನುಸರಿಸಿ ಜೈಲುಪಾಲಾದವರೂ ಇದ್ದಾರೆ. ಏಕೆಂದರೆ ನಾಯಕರೇ ಅವರಿಗೆ ಆದರ್ಶ. ಅದೇ ಇನ್ನೊಂದೆಡೆ, ನಾಯಕನನ್ನು ಖಳನಾಯಕನಂತೆ ತೋರಿಸಿ ಆತನ ಕೈಯಲ್ಲಿ ಲಾಂಗು, ಮಚ್ಚು ಹಿಡಿಸಿ ಒಂದಿಷ್ಟು ಕೊಲೆ  ಮಾಡಿಸಿದರೆ, ಅಂಥ ಚಿತ್ರಗಳೇ ಹೆಚ್ಚು ಖ್ಯಾತಿಗಳಿಸುತ್ತದೆ ಎಂಬ ಭ್ರಮೆಯಲ್ಲಿರುತ್ತಾರೆ  ನಿರ್ಮಾಪಕರು, ನಿರ್ದೇಶಕರು! 

ಅದೇನೇ ಇರಲಿ... ಇಲ್ಲಿ ಹೇಳಹೊರಟಿರುವುದು ಚಿತ್ರ ನಟನೊಬ್ಬನ ಬ್ರೇಕಪ್​ ಲೆಟರ್ (Breakup letter)​ ಕುರಿತು. ತಮ್ಮ ನೆಚ್ಚಿನ ನಾಯಕನ ವಸ್ತುಗಳು ಹರಾಜಿಗೆ ಇಟ್ಟರೆ ಅಭಿಮಾನಿಗಳು ಮುಗಿಬಿದ್ದು ಕೊಂಡುಕೊಳ್ಳುವುದು ಉಂಟು. ಅದೇ ರೀತಿ ನಾಯಕನೊಬ್ಬ ತನ್ನ ಗೆಳತಿಯಿಂದ ಬ್ರೇಕ್​ ಅಪ್​ ಮಾಡಿಕೊಂಡ ಬಳಿಕ ಬರೆದಿರುವ ಪತ್ರವೊಂದು ಈಗ ಭಾರಿ ಸದ್ದು ಮಾಡುತ್ತಿದೆ. ಈ ಬ್ರೇಕ್​ ಅಪ್​ ಲೆಟರ್​ ಹರಾಜಿಗೆ ಇಡಲಾಗಿದ್ದು, ಇದು  15 ಸಾವಿರ ಡಾಲರ್​ ಅಂದರೆ ಸುಮಾರು 13 ಲಕ್ಷ ರೂಪಾಯಿಗೂ ಅಧಿಕ ಮೊತ್ತಕ್ಕೆ ಹರಾಜು ಆಗಲಿದೆ ಎನ್ನಲಾಗಿದೆ!

Tap to resize

Latest Videos

ಡಿವೋರ್ಸ್ ಆಗಿಲ್ಲ, ಮತ್ತೊಂದು ಮಗದೊಂದು ಮದುವೆಯಾದ ಬಾಲಿವುಡ್ ಸ್ಟಾರ್ಸ್

ಅಷ್ಟಕ್ಕೂ ಈ ನಟನಾರು ಎಂಬ ಕುತೂಹಲವೆ? ಸುಮಾರು ಅರ್ಧಶತಮಾನಗಳ ಕಾಲ ನಿರಂತರವಾಗಿ ಸಿನೆಮಾ (Cinema) ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದಂತ ಅಮೆರಿಕದ ನಟ, ಯುವಜನಾಂಗದ ಸೆಕ್ಸ್‌ ಸಿಂಬಾಲ್ (Sex Symbol) ಎಂದೇ ಬಿಂಬಿತನಾಗಿದ್ದ ನಟ ಮರ್ಲಾನ್ ಬ್ರಾಂಡೊ (Marlon Brando).  ಎ ಸ್ಟ್ರೀಟ್‌‌ ಕಾರ್ ನೇಮ್ಡ್ ಡಿಸೈರ್ ಚಿತ್ರದಲ್ಲಿನ ಸ್ಟಾನ್ಲೆ ಕೊವಲಾಸ್ಕಿ ಪಾತ್ರ ಮತ್ತು ಅತ್ಯುತ್ತಮ ನಟ ಅಕಾಡೆಮಿ ಪ್ರಶಸ್ತಿ  ಗಳಿಸಿ ವಿಶ್ವಖ್ಯಾತಿ ಗಳಿಸಿರುವ ಈ ನಟ, ಆನ್ ದಿ ವಾಟರ್‌ಫ್ರಂಟ್‌  ಚಿತ್ರದಲ್ಲಿ ತನ್ನ ಟೆರಿ ಮಲಾಯ್ ಪಾತ್ರಕ್ಕೆ ಆಸ್ಕರ್ ಪ್ರಶಸ್ತಿಯನ್ನು ಪಡೆದಂಥವರು.  ಸಿನಿಮಾ ಕ್ಷೇತ್ರದಲ್ಲಿರುವ ಬಹುತೇಕ ಎಲ್ಲಾ ಪ್ರಶಸ್ತಿಗಳನ್ನೂ ಬಾಚಿಕೊಂಡು ಹಲವಾರು ದಶಕಗಳವರೆಗೆ ಚಿತ್ರರಂಗವನ್ನು ಆಳಿರುವ ಈ ನಟನಿಗೆ 2004ರಲ್ಲಿ 80ನೇ ವರ್ಷಕ್ಕೆ ಮೃತಪಟ್ಟಿದ್ದಾರೆ.  2004 ರಲ್ಲಿ ನಿಧನರಾದ ಬ್ರಾಂಡೊ ಅವರನ್ನು 20 ನೇ ಶತಮಾನದ ಅತ್ಯಂತ ಪ್ರಭಾವಶಾಲಿ ತಾರೆಗಳಲ್ಲಿ ಪರಿಗಣಿಸಲಾಗಿದೆ. ಆರು ದಶಕಗಳ ವೃತ್ತಿಜೀವನದಲ್ಲಿ, ಅವರು ಎರಡು ಆಸ್ಕರ್‌ಗಳು, ಎರಡು ಗೋಲ್ಡನ್ ಗ್ಲೋಬ್‌ಗಳು ಮತ್ತು ಮೂರು ಬ್ರಿಟಿಷ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದರು.

ಇವರು ಮೃತಪಟ್ಟು 20 ವರ್ಷಗಳ ಬಳಿಕ ಇವರು 1940ರ ಸುಮಾರಿಗೆ ಗೆಳತಿಗೆ ಬರೆದಿದ್ದ ಬ್ರೇಕಪ್​ ಲೆಟರ್​ ಸದ್ದು ಮಾಡುತ್ತಿದೆ. ಮರ್ಲಾನ್ ಬ್ರಾಂಡೊ  ಅವರು ಬರೆದಿದ್ದ ಈ ಪತ್ರದಲ್ಲಿ ತನ್ನ ಗೆಳತಿಯ (Lover) ಜೊತೆ ಏಕೆ ಬ್ರೇಕಪ್​ ಮಾಡಿಕೊಳ್ಳುತ್ತಿದ್ದೇನೆ ಎಂಬುದಾಗಿ ಅವರು ವಿವರಿಸಿದ್ದಾರೆ. ಫ್ರೆಂಚ್ ನಟಿ ಸೊಲಾಂಜ್ ಪೊಡೆಲ್ ಅವರಿಗೆ ಬರೆದಿರುವ ಬ್ರೇಕಪ್ ಪತ್ರ ಇದಾಗಿದೆ. ನ್ಯೂಯಾರ್ಕ್‌ನಲ್ಲಿ ಎ ಸ್ಟ್ರೀಟ್‌ಕಾರ್ ನೇಮ್ಡ್ ಡಿಸೈರ್ ತಯಾರಿಕೆಯ ಸಮಯದಲ್ಲಿ ಇಬ್ಬರೂ ಭೇಟಿಯಾಗಿದ್ದರು. ನಂತರ ಅವರ ಪ್ರೀತಿ ನಿಧಾನವಾಗಿ ಅರಳಿತು. ಆದರೆ ಸ್ವಲ್ಪ ಸಮಯದ ನಂತರ ಇಬ್ಬರ ನಡುವಿನ ಸಂಬಂಧ ಹಾಳಾಗಿತ್ತು. ಆ ಸಮಯದಲ್ಲಿ ಪತ್ರವೊಂದನ್ನು ಬರೆದಿದ್ದು, ಅದೀಗ ಮತ್ತೆ ಮುನ್ನೆಲೆಗೆ ಬಂದಿದೆ. 

ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಕೇಸಲ್ಲಿ ನಟಿ ಸಪ್ನಾ ಜೌಧರಿ, ಜೈಲು ಪಕ್ಕಾ?

ಮರ್ಲಾನ್ ಬ್ರಾಂಡೊ  ಅವರ ಸ್ಟಾರ್‌ಡಮ್ ಹೆಚ್ಚುತ್ತಿರುವ ಸಮಯದಲ್ಲಿ ಈ ಪತ್ರವನ್ನು ಬೋಸ್ಟನ್ ಮೂಲದ ಆರ್​ಆರ್​ ಹರಾಜು ಕಂಪೆನಿಯ ಹರಾಜಿಗೆ ಮುಂದಾಗಿದೆ. ಇದನ್ನು ಪೆನ್ಸಿಲ್‌ನಲ್ಲಿ ಬರೆಯಲಾಗಿತ್ತು. ಹಾಗೂ ಇದು ಮೂರು ಪುಟಗಳ ಟಿಪ್ಪಣಿ ಹೊಂದಿದೆ. ಕುತೂಹಲದ ಸಂಗತಿಯೆಂದರೆ ಇದರಲ್ಲಿ ಹಲವಾರು ತಪ್ಪುಗಳನ್ನೂ ಕಂಡುಹಿಡಿಯಲಾಗಿದೆ.  ಮುಂದಿನ ವಾರ ಹರಾಜು ನಡೆಯಲಿದ್ದು,  ಈ ಪತ್ರವು 15 ಸಾವಿರ ಡಾಲರ್​ಗೂ ಅಧಿಕ ಮೊತ್ತದಲ್ಲಿ  ಮಾರಾಟ ಆಗಲಿದೆ ಎಂದು ಅಂದಾಜು ಮಾಡಲಾಗಿದೆ. 

ಬ್ರಾಂಡೊ ಹಾಲಿವುಡ್‌ನಲ್ಲಿ ಪ್ರಚಂಡ ಸ್ಟಾರ್‌ಡಮ್ (Stardum) ಗಳಿಸಿದ್ದರೆ,  ಪೊಡೆಲ್ ಛಾಯಾಗ್ರಾಹಕರಾಗಿದ್ದರು. ಇಬ್ಬರ ನಡುವಿನ ಸಂಬಂಧ ಹದಗೆಡುತ್ತಲೇ ಸ್ನೇಹಿತೆಯ ಜೊತೆ ಬ್ರೇಕಪ್​ ಮಾಡಿಕೊಳ್ಳಲು ಬ್ರಾಂಡೊ ನಿರ್ಧರಿಸಿದರು. ಬ್ರಾಂಡೊ ಈ  ಪತ್ರದಲ್ಲಿ, 'ದಯವಿಟ್ಟು ಈ ಪತ್ರವನ್ನು ಮುಕ್ತ ಹೃದಯದಿಂದ ಸ್ವೀಕರಿಸು. ಏಕೆಂದರೆ ಮೂರು ಬಾರಿ ಬರೆದಿರುವುದು ಸರಿಯಾಗದೇ, ಬಹಳ ಯೋಚನೆ ಮಾಡಿ  ನಾಲ್ಕನೇ ಬಾರಿಗೆ ಪ್ರಾಮಾಣಿಕವಾಗಿ ಬರೆದಿರುವೆ. ಆದ್ದರಿಂದ ನೀನು ನನ್ನನ್ನು ಸಂಪೂರ್ಣ ಬೋರ್ ಎಂದು ಪರಿಗಣಿಸುವುದಿಲ್ಲ ಎಂಬ ವಿಶ್ವಾಸ ನನಗೆ ಇದು. ನಾನು ನಿನಗೆ ನನ್ನ ಬಗ್ಗೆ ವಿವರಿಸಲು ಈ ಪತ್ರವನ್ನು (letter) ಬರೆಯುತ್ತಿದ್ದೇನೆ. ಅವಮಾನವನ್ನು ಬಯಸುವುದಿಲ್ಲ' ಎಂದು  ಪತ್ರದಲ್ಲಿ ಬ್ರಾಂಡೊ ತನ್ನ ಗೆಳತಿಗೆ ಕ್ಷಮೆಯಾಚಿಸುವ ಮೂಲಕ ಬ್ರೇಕಪ್​ ಮಾಡಿಕೊಂಡಿದ್ದರು. ನೀನು ಯಾವಾಗಲೂ ವಾತ್ಸಲ್ಯಪೂರ್ವಕವಾಗಿ ಇರುವಾಕೆ. ನಿನ್ನ ಬಗ್ಗೆ ಗೌರವ ಮತ್ತು ಮೆಚ್ಚುಗೆ ಇದೆ. ಅದು ನನ್ನ ಹೃದಯದಲ್ಲಿ ಶಾಶ್ವತವಾಗಿ ಇರಲಿದೆ ಎಂದೂ ಅದರಲ್ಲಿ ಬರೆಯಲಾಗಿದೆ.
 

click me!