ವಿಶ್ವ ಸುಂದರಿ, ನಟಿ ಮಾನುಷಿ ಚಿಲ್ಲರ್ ಡೇಟಿಂಗ್ ವಿಚಾರ ವೈರಲ್ ಆಗಿದೆ. ವಿಶ್ವ ಸುಂದರಿ ಇನ್ ಲವ್ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ.
ವಿಶ್ವ ಸುಂದರಿ, ನಟಿ ಮಾನುಷಿ ಚಿಲ್ಲರ್ ಡೇಟಿಂಗ್ ವಿಚಾರ ವೈರಲ್ ಆಗಿದೆ. ವಿಶ್ವ ಸುಂದರಿ ಇನ್ ಲವ್ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. ರ್ಯಂಪ್ ವಾಕ್, ಫೋಟೋ, ಪ್ರವಾಸ ಎಂದು ಸುದ್ದಿಯಲ್ಲಿರುತ್ತಿದ್ದ ವಿಶ್ವ ಸುಂದರಿ ಮಾನುಷಿ ಇದೀಗ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪ್ರತಿಷ್ಠಿತ ಝೆರೋಧಾ ಮುಖ್ಯಸ್ಥ ನಿಖಿಲ್ ಕಾಮತ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 2017ರಲ್ಲಿ ವಿಶ್ವಸುಂದರಿ ಪಟ್ಟ ಮುಡಿಗೇರಿಸಿಕೊಳ್ಳುವ ವಿಶ್ವವೇ ಬೆರಗಾಗಿಸಿದ್ದ ಮಾನುಷಿ ಚಿಲ್ಲರ್ ಇದೀಗ ಪ್ರೀತಿ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
25 ವರ್ಷದ ನಟಿ ಮಾನುಷಿ 35 ವರ್ಷದ ಉದ್ಯಮಿ ಮತ್ತು ಝೆರೋಧಾ ಸಂಸ್ಥಾಪಕ ನಿಖಿಲ್ ಕಾಮತ್ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಇಬ್ಬರ ತುಂಬಾ ಆಪ್ತರಾಗಿದ್ದು ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಆಂಗ್ಲ ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿ ಮಾಡಿವೆ. ಮಾನುಷಿ ಸದ್ಯ ತನ್ನ ಬಾಲಿವುಡ್ ವೃತ್ತಿಜೀವನದ ಮೇಲೆ ಕಡೆ ಹೆಚ್ಚು ಒತ್ತು ನೀಡಿದ್ದಾರೆ. ಹಾಗಾಗಿ ತಮ್ಮ ಪ್ರೀತಿ ಮತ್ತು ಡೇಟಿಂಗ್ ಜೀವನದ ಬಗ್ಗೆ ಮಾತನಾಡಲು ಇಷ್ಟಪಡುತ್ತಿಲ್ಲ. ಆದರೆ ಅವರ ಸ್ನೇಹಿತರು ಮತ್ತು ಕುಟುಂಬದವರಿಗೆ ಚೆನ್ನಾಗಿ ಗೊತ್ತಿದ್ದು ಇಬ್ಬರೂ ಸೀಕ್ರೆಟ್ ಆಗಿ ಇಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬ್ಲ್ಯಾಕ್ ಬಾಡಿಕಾನ್ ಡ್ರೆಸ್‌ನಲ್ಲಿ ಮಾನುಷಿ ಚಿಲ್ಲರ್ ಮಿಂಚಿಂಗ್; ಈಗೇನು ಮಾಡ್ತಿದ್ದಾರೆ ಮಾಜಿ ವಿಶ್ವ ಸುಂದರಿ?
ಅಂದಹಾಗೆ ಇಬ್ಬರೂ 2021ರಿಂದ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇಬ್ಬರೂ ಕ್ಯಾಮರಾ ಮುಂದೆ ಕಾಣಿಸಿಕೊಳ್ಳದ ಹಾಗೆ ಒಡಾಡುತ್ತಿದ್ದಾರೆ. ಆದರೆ ಇತ್ತೀಚಿಗಷ್ಟೆ ಇಬ್ಬರೂ ರಿಷಿಕೇಶ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ರಿಷಿಕೇಶ್ ಭೇಟಿಯ ಇಬ್ಬರ ಫೋಟೋಗಳು ವೈರಲ್ ಆಗಿವೆ.
ಮದುವೆಯಾಗಿ ವಿಚ್ಛೇದನ ಪಡೆದಿರುವ ನಿಖಿಲ್
ಅಂದಹಾಗೆ ನಿಖಿಲ್ ಕಾಮತ್ ಅವರಿಗೆ ಈಗಾಗಲೇ ಮದುವೆಯಾಗಿದ್ದು ವಿಚ್ಛೇದನ ಕೂಡ ನೀಡಿದ್ದಾರೆ. 2021ರಲ್ಲಿ ನಿಖಿಲ್ ಪತ್ನಿ ಅಮಂಡಾ ಪುರವಂಕರ ಅವರಿಂದ ದೂರ ಆದರು. 2019ರಲ್ಲಿ ಇಬ್ಬರೂ ಇಟಲಿಯಲ್ಲಿ ಮದುವೆಯಾಗಿದ್ದು. ವಿಚ್ಛೇದನ ಬಳಿಕ ನಿಖಿಲ್ ವಿಶ್ವ ಸುಂದರಿ ಮಾನುಶಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಡಾಕ್ಟರ್ ಅಥವಾ ಲಾಯರ್ ಆಗಬೇಕು, ಆಕ್ಟಿಂಗ್ ಕಲ್ಪನೆ ಕೂಡ ಇರಲಿಲ್ಲ: ಮಾನುಷಿ ಚಿಲ್ಲರ್
ಮಾನಿಶಿ ಚಿಲ್ಲರ್ ಸಿನಿಮಾ ವಿಚಾರಗಳ ಬಗ್ಗೆ ಹೇಳುವುದಾದರೆ ಪೃಥ್ವಿರಾಜ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಅಕ್ಷಯ್ ಕುಮಾರ್‌ಗೆ ನಾಯಕಿಯಾಗಿ ಮಿಂಚಿದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಈ ಸಿನಿಮಾ ಬಳಿಕ ಟೆಹ್ರಾನ್ ಸಿನಿಮಾಗೆ ಸಹಿ ಮಾಡಿದರು. ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಈ ಸಿನಿಮಾದ ಲುಕ್ ಶೇರ್ ಮಾಡಿದ್ದರು ಮಾನುಷಿ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.