'ಸಾಮಿ ಸಾಮಿ..' ಎಂದು ಕುಣಿದ ನಟಿ ಜಾನ್ವಿ ಹಿಗ್ಗಾಮುಗ್ಗಾ ಟ್ರೋಲ್; ಕಾರಣವೇನು?

Published : Nov 22, 2022, 01:42 PM ISTUpdated : Nov 22, 2022, 02:10 PM IST
'ಸಾಮಿ ಸಾಮಿ..' ಎಂದು ಕುಣಿದ ನಟಿ ಜಾನ್ವಿ ಹಿಗ್ಗಾಮುಗ್ಗಾ ಟ್ರೋಲ್; ಕಾರಣವೇನು?

ಸಾರಾಂಶ

ಬಾಲಿವುಡ್ ನಟಿ ಜಾನ್ವಿ ಕಪೂರ್  ಸಾಮಿ ಸಾಮಿ ಹಾಡಿಗೆ ಡಾನ್ಸ್ ಮಾಡಿ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ.

ಸ್ಟೈಲಿಶ್ ಸ್ಟಾರ್ ಅರ್ಜುನ್ ನಟನೆಯ ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿತ್ತು. ಈ ಸಿನಿಮಾದ ಹಾಡುಗಳು ಸಹ ಅಭಿಮಾನಿಗಳ ಹೃದಯ ಗೆದ್ದಿತ್ತು. ಸಮಂತಾ ಅವರ ಐಟಂ ಸಾಂಗ್ ಹಿಟ್ ಆದ ಹಾಗೆ ರಶ್ಮಿಕಾ ಹೆಜ್ಜೆ ಹಾಕಿದ್ದ ಸಾಮಿ ಸಾಮಿ ಹಾಡು ಕೂಡ ಸಿಕ್ಕಾಪಟ್ಟೆ ವರೈಲ್ ಆಗಿತ್ತು. ಅದರಲ್ಲೂ ಸಾಮಿ ಸಾಮಿ ಬಾಲಿವುಡ್ ಮಂದಿಗೆ ತುಂಬಾ ಇಷ್ಟವಾಗಿತ್ತು. ರಶ್ಮಿಕಾ ಡಿ ಗ್ಲಾಮ್ ಲುಕ್ ನಲ್ಲಿ ಸಖತ್ ಆಗಿ ಹೆಜ್ಜೆ ಹಾಕಿದ್ದರು. ಇದೀಗ ಅದೇ ಹಾಡಿಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ಕುಣಿದಿದ್ದಾರೆ. ಜಾನ್ವಿ ಸ್ಟೆಪ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇತ್ತೀಚಿಗೆ ದುಬೈನಲ್ಲಿ ನಡೆದ ಫಿಲ್ಮ್‌ಫೇರ್ ಅವಾರ್ಡ್ ಶೋನಲ್ಲಿ ಜಾನ್ವಿ ಕಪೂರ್ ಸಾಮಿ ಸಾಮಿ ಹಾಡಿಗೆ ಡಾನ್ಸ್ ಮಾಡಿದ್ದಾರೆ. 

ಜಾನ್ವಿ ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಾನ್ವಿ ಹಸಿರು ಬಣ್ಣದ ಲೆಹಂಗಾ ಧರಿಸಿದ್ದರು. ಜಾನ್ವಿ ಡಾನ್ಸ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಜಾನ್ವಿನ ಟ್ರೋಲ್ ಮಾಡಿ ಕಾಲೆಳೆಯುತ್ತಿದ್ದಾರೆ. ನಿಮಗಿಂತ ರಶ್ಮಿಕಾನೇ ಉತ್ತಮ ಎಂದು ಕಾಮೆಂಟ್ ಮಾಡಿ ಜಾನ್ವಿಯನ್ನು ಜರಿಯುತ್ತಿದ್ದಾರೆ. ನೆಟ್ಟಿಗರೊಬ್ಬರು 'ನಿಮಗಿಂತ ರಶ್ಮಿಕಾ ಅವರೇ ತುಂಬಾ ಚೆನ್ನಾಗಿ ಮಾಡಿದ್ದಾರೆ' ಎಂದು ಹೇಳಿದ್ದಾರೆ. ಮತ್ತೋರ್ವ  ಕಾಮೆಂಟ್ ಮಾಡಿ 'ರಶ್ಮಿಕಾಗಿಂತ ಅತ್ಯುತ್ತಮವಾಗಿ ಮಾಡಲು ಯಾರು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. 'ಸೌತ್ ನಟಿಯರನ್ನು ಅನುಸರಿಸಿ ಸೋತರು' ಎಂದು ಹೇಳಿದ್ದಾರೆ. 'ರಶ್ಮಿಕಾ ಬೀಟ್ ಮಾಡಲು ಸಾದ್ಯವೇ ಇಲ್ಲ' ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಜಾನ್ವಿ ಕಾಲೆಳೆಯುತ್ತಿದ್ದಾರೆ. 

ಕ್ಯಾಮರಾ ಮುಂದೆ ಮತ್ತೆ ಬೋಲ್ಡ್ ಆದ ಜಾನ್ವಿ ಕಪೂರ್; ಹಾಟ್ ಫೋಟೋ ವೈರಲ್

ಜಾನ್ವಿ ಸಿನಿಮಾಗಳ ವಿಚಾರಕ್ಕೆ ಬರುವುದಾದರೇ ಇತ್ತೀಚೆಗಷ್ಟೆ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಮಲಯಾಳಂನ ಹೆಲನ್ ಸಿನಿಮಾದ ರಿಮೇಕ್ ಆಗಿದೆ. ಮಲಯಾಳಂನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಆಗಿತ್ತು. ಆದರೆ ಮಿಲಿ ಚಿತ್ರಕ್ಕೆ ಹೇಳಿಕೊಳ್ಳುವಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈ ಸಿನಿಮಾಗೆ ಜಾನ್ವಿ ಕಪೂರ್ ತಂದೆ ಬೋನಿ ಕಪೂರ್ ಅವರೇ ಬಂಡವಾಳ ಹೂಡಿದ್ದರು. 

  
ಜಾನ್ವಿ ಕಪೂರ್ ಸದ್ಯ ಬವಾಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ನಿತೀಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಏಪ್ರಿಲ್ 7 ಮುಂದಿನ ವರ್ಷ ಈ ಸಿನಿಮಾಗೆ ರಿಲೀಸ್ ಆಗುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?