'ಟಕ್ಕರ್' ಟ್ರೇಲರ್ ಅನಾವರಣ...ಇದು ಸೈಬರ್ ಲೋಕದ ಥ್ರಿಲ್ಲರ್ ಹೂರಣ

Published : Apr 29, 2022, 04:29 PM ISTUpdated : Apr 29, 2022, 04:30 PM IST
'ಟಕ್ಕರ್' ಟ್ರೇಲರ್ ಅನಾವರಣ...ಇದು ಸೈಬರ್ ಲೋಕದ ಥ್ರಿಲ್ಲರ್ ಹೂರಣ

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ದಿನೇ ದಿನೇ ಹೆಚ್ಚುತ್ತಲೇಯಿದೆ. ಸಾಮಾಜಿಕ ಜಾಲತಾಣವನ್ನು ಎಲ್ಲರೂ ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಅದರಿಂದ ಆಗಬಹುದಾದ ಆಪತ್ತುಗಳ ಬಗ್ಗೆ ಟಕ್ಕರ್ ಸಿನಿಮಾ ಬೆಳಕು ಚೆಲ್ಲಿದೆ.

ತಂತ್ರಜ್ಞಾನಗಳಿಂದ ಎಷ್ಟು ಉಪಯೋಗವಿದೆಯೋ, ಅದಕ್ಕೂ ಹೆಚ್ಚು ದುರುಪಯೋಗಗಳಿವೆ. ಇಂತಹ ಅದೆಷ್ಟೋ ಘಟನೆಗಳು ಬೆಳಕಿಗೆ ಬರುವುದೇ ಇಲ್ಲ. ಅದರಲ್ಲಂತೂ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ದಿನೇ ದಿನೇ ಹೆಚ್ಚುತ್ತಲೇಯಿದೆ. ಸಾಮಾಜಿಕ ಜಾಲತಾಣವನ್ನು ಎಲ್ಲರೂ ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಅದರಿಂದ ಆಗಬಹುದಾದ ಆಪತ್ತುಗಳ ಬಗ್ಗೆ ಟಕ್ಕರ್ ಸಿನಿಮಾ ಬೆಳಕು ಚೆಲ್ಲಿದೆ.

ಟ್ರೇಲರ್ ಕಂಟೆಂಟ್ ಏನು?

ನಿರಂತರವಾಗಿ ನಡೆಯುವ ಹೆಣ್ಣು‌ಮಕ್ಕಳ ಕೊಲೆ..‌ಈ ಕೊಲೆ ಭೇದಿಸಲು ಪೊಲೀಸರಿಗೆ ಸಹಾಯ ಮಾಡಲು ಎಂಟ್ರಿ ಕೊಡುವ ಹೀರೋ. ಹೊಸ ಬಗೆಯ ಸೈಬರ್ ಕ್ರೈಮ್ ನಾಯಕ ಹೇಗೆ ಬೆನ್ನು ಹತ್ತುತ್ತಾನೆ? ವಿಲನ್ ಗೆ ಹೇಗೆ ಟಕ್ಕರ್ ಕೊಡ್ತಾನೆ? ಸೈಬರ್ ಕ್ರೈಮ್ ನಿಂದ ಏನೆಲ್ಲಾ ಅನಾಹುತ ಆಗುತ್ತದೆ ಅನ್ನೋದನ್ನು ಟ್ರೇಲರ್ ನಲ್ಲಿ ಎಳೆಎಳೆಯಾಗಿ ಕಟ್ಟಿಕೊಡಲಾಗಿದೆ.

ಮನೋಜ್ ಕುಮಾರ್ ಹೆಣ್ಣುಮಕ್ಕಳ ರಕ್ಷಣೆ‌ಗೆ ಹೋರಾಡುವ ಮೆಡಿಕಲ್ ವಿದ್ಯಾರ್ಥಿಯಾಗಿ ಮಿಂಚಿದ್ದು, ಭರ್ಜರಿ ಫೈಟ್, ಆಕ್ಷನ್ ಸೀನ್ಸ್ ಮೂಲಕ ಗಮನ ಸೆಳೆದಿದ್ದಾರೆ . ಭಜರಂಗಿ ಲೋಕಿ ಖಳನಾಯಕನಾಗಿ ಖದರ್ ತೋರಿಸಿದ್ದಾರೆ. ಜೈಜಗದೀಶ್, ಸುಮಿತ್ರಾ, ರಂಜನಿ ರಾಘವನ್, ಶಂಕರ್ ಅಶ್ವತ್ಥ್ ಮುಂತಾದ ಕಲಾವಿದರು ತಾರಾಬಳಗದಲ್ಲಿದ್ದಾರೆ. 

ಗಾಂಧಿ ನಗರಕ್ಕೆ 'ಟಕ್ಕರ್'ಕೊಟ್ಟ ಮನೋಜ್ !

ರೋಚಕ ಟ್ರೇಲರ್ ಕಟ್ಟಿ ಕೊಡುವುದರಲ್ಲಿ ನಿರ್ದೇಶಕ ರಘುಶಾಸ್ತ್ರಿ ಯಶಸ್ವಿಯಾಗಿದ್ದಾರೆ. ಎಸ್ ಎಲ್ ಎನ್ ಕ್ರಿಯೇಷನ್ ಬ್ಯಾನರ್ ನಡಿ ನಾಗೇಶ್ ಕೋಗಿಲು ನಿರ್ಮಾಣ ಮಾಡಿರುವ ಮಣಿಕಾಂತ್ ಕದ್ರಿ ಹಾಡುಗಳಿಗೆ ಸಂಗೀತ ನೀಡಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆಎಂ ಪ್ರಕಾಶ್ ಸಂಕಲನ ನೀಡಿದ್ದಾರೆ. ತಂತ್ರಜ್ಞಾನದ ಕರಾಳ ರೂಪ ತೆರೆದಿಡುವ ಟಕ್ಕರ್ ಮೇ6ಕ್ಕೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?