ಇಳಯರಾಜ ಅವರಿಗೆ 60 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚನೆ ನೀಡಿದೆ. ಇಳಯರಾಜ ಅವರು 2 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು.
ಬೆಂಗಳೂರು: ಮಲಯಾಳಂ ಸಿನಿ ಇಂಡಸ್ಟ್ರಿಯ ಸೂಪರ್ ಹಿಟ್ ಸಿನಿಮಾ ಮಂಜುಮ್ಮೇಲ್ ಬಾಯ್ಸ್ ವಿರುದ್ಧ ಕೇಸ್ ದಾಖಲಿಸಿದ್ದ ಖ್ಯಾತ ನಿರ್ದೇಶಕ ಇಳಯರಾಜ ಅವರಿಗೆ ಗೆಲುವು ಸಿಕ್ಕಿದೆ. ಮಂಜುಮ್ಮೇಲ್ ಬಾಯ್ಸ್ ಸಿನಿಮಾದಲ್ಲಿ ಇಳಯರಾಜ ಸಂಗೀತವುಳ್ಳ ಗುಣ ಚಿತ್ರದ ಕಣ್ಮಣಿ ಹಾಡನ್ನು ಬಳಕೆ ಮಾಡಲಾಗಿತ್ತು. ಮಂಜುಮ್ಮೇಲ್ ಸಿನಿಮಾದಲ್ಲಿ ಹಲವು ಭಾಗಗಳಲ್ಲಿ ಕಣ್ಮಣಿ ಹಾಡು ಬಳಸಲಾಗಿದೆ. ಒಪ್ಪಿಗೆ ಪಡೆಯದೇ ಹಾಡು ಬಳಕೆ ಮಾಡಿದ್ದರಿಂದ ಇಳಯರಾಜ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದ್ದು, ಇಳಯರಾಜ ಅವರಿಗೆ 60 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚನೆ ನೀಡಿದೆ. ಇಳಯರಾಜ ಅವರು 2 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು.
1991ರಲ್ಲಿ ಬಿಡುಗಡೆಯಾಗಿದ್ದ ತಮಿಳಿನ ಗುಣ ಚಿತ್ರದಲ್ಲಿ ಕಮಲ್ ಹಾಸನ್ ನಟಿಸಿದ್ದರು. ಈ ಚಿತ್ರದ ಹಾಡುಗಳು ಇಳಯರಾಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದವು. ಈ ಚಿತ್ರದ 'ಕಣ್ಮಣಿ ಇ ಪ್ರೇಮಲೇ' ಹಾಡು ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ. ಇದೇ ಹಾಡನ್ನು ಮಂಜುಮ್ಮೇಲ್ ಬಾಯ್ಸ್ ತಂಡ ಬಳಸಿತ್ತು. ಈ ಚಿತ್ರ ಬಿಡುಗಡೆಯಾದ ಬಳಿಕ ಹಾಡಿನ ಕ್ರೇಜ್ ಮತ್ತಷ್ಟು ಹೆಚ್ಚಾಗಿತ್ತು.
ಇದೇ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾದ ಮಲಯಾಳಿ ಚಿತ್ರ 'ಮಂಜುಮ್ಮೇಲ್ ಬಾಯ್ಸ್'. ಈ ಚಿತ್ರ ಹಿಂದಿ, ತಮಿಳು, ತೆಲಗು ಮತ್ತು ಕನ್ನಡ ಸೇರಿದಂತೆ ಬಹುತೇಕ ಎಲ್ಲಾ ಭಾಷೆಗಳಿಗೆ ಡಬ್ ಆಗಿದ್ದರಿಂದ ಭಾರತದ ಎಲ್ಲಾ ಪ್ರದೇಶದ ಜನರನ್ನು ತಲುಪಿತ್ತು. ಬಿಡುಗಡೆ ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ಕ್ರೇಜ್‌ನಲ್ಲಿ ವೀಕ್ಷಕರನ್ನು ಚಿತ್ರಮಂದಿರದತ್ತ ಕರೆತರುವಲ್ಲಿ ಯಶಸ್ವಿಯಾಗಿತ್ತು. ಕೊಚ್ಚಿಯ ಪುಟ್ಟ ಗ್ರಾಮದ ಯುವಕರು ಗುಂಪು ಪ್ರವಾಸಕ್ಕಾಗಿ ತಮಿಳುನಾಡಿನ ಕೊಡೈಕೆನಾಲಗೆ ತೆರಳುತ್ತಾರೆ. ಕೊಡೈಕೆನಾಲದ ಗುನಾದ ಗುಹೆ ಮತ್ತು ಪ್ರಪಾತಗಳನ್ನು ನೋಡಲು ತೆರಳುತ್ತಾರೆ.
ಗುನಾದಲ್ಲಿ ದುರ್ಗಮವಾದ ಗುಹೆ ರೀತಿಯ ಪ್ರತಾಪಗಳಿವೆ. ಕೆಲ ಗುಹೆಗಳು ನೆಲಮಟ್ಟಕ್ಕೆ ಸಮಾನವಾಗಿದ್ದು, ಅದರ ಮೇಲೆ ಕಬ್ಬಿಣದ ಜಾಲಿಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ ಬೆಟ್ಟದ ಸೂಕ್ಷ್ಮ ಪ್ರದೇಶಗಳಿಗೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಆದ್ರೆ ಕೊಚ್ಚಿಯಿಂದ ಬಂದ ಮಂಜುಮ್ಮೇಲಲ್ ಬಾಯ್ಸ್ ಪ್ರದೇಶದೊಳಗೆ ಹೋಗುತ್ತಾರೆ. ಈ ವೇಳೆ ಗೆಳೆಯರ ಗುಂಪಿನಲ್ಲಿದ್ದ ಓರ್ವ ಪ್ರಪಾತಕ್ಕೆ ಬೀಳುತ್ತಾನೆ. ಪ್ರಪಾತಕ್ಕೆ ಬಿದ್ದ ಗೆಳೆಯನನ್ನು ಮೇಲೆ ಕರೆದುಕೊಂಡು ಬರೋದು ಸಿನಿಮಾದ ಒಂದು ಸಾಲಿನ ಕಥೆ.
ಎಲ್ಲಾ ಎಲ್ಲೆಗಳನ್ನು ಮೀರಿದ ಸಿನಿಮಾಗಳು... ಮನೆಯವರೊಂದಿಗೆ ಅಲ್ಲ ಸಂಗಾತಿ ಜೊತೆ ಏಕಾಂತದಲ್ಲಿ ನೋಡಿ!
ಭಾಷೆ ಬರದ ಸ್ಥಳದಲ್ಲಿ ಯುವಕರೆಲ್ಲರೂ ಹೇಗೆ ಪೊಲೀಸರ ಸಹಾಯ ಕೇಳ್ತಾರೆ? ಪೊಲೀಸರು ಕೈ ಚೆಲ್ಲಿ ಕುಳಿತಾಗ ಮಂಜುಮ್ಮೇಲ್ ಬಾಯ್ಸ್ ಗುಂಪಿನಲ್ಲಿದ್ದ ಒಬ್ಬ ಪ್ರಪಾತಕ್ಕೆ ಇಳಿದು ಗೆಳೆಯನನ್ನು ರಕ್ಷಿಸಿ ಹಗ್ಗದ ಸಹಾಯದಿಂದ ಮೇಲಕ್ಕೆ ಕರೆದುಕೊಂಡು ಬರುತ್ತಾರೆ. ಹಗ್ಗ-ಜಗ್ಗಾಟದಲ್ಲಿ ನಿಪುಣರಾಗಿದ್ದ ಗೆಳೆಯರೇ ಎಲ್ಲರನ್ನು ಮೇಲೆಳೆಯಲು ಸಕ್ಸಸ್ ಆಗುತ್ತಾರೆ. ಪ್ರಪಾತದಿಂದ ಗೆಳೆಯನನ್ನು ಕರೆದುಕೊಂಡು ಮೇಲೆ ಬರುವ ಸನ್ನಿವೇಶ ನೋಡುಗರ ರೋಮ ರೋಮಗಳಲ್ಲಿ ರೋಮಾಂಚನ ಉಂಟು ಮಾಡುತ್ತದೆ. ಈ ದೃಶ್ಯದ ಸಂದರ್ಭದಲ್ಲಿಯೂ ಕಣ್ಮಣಿ ಹಾಡು ಬರುತ್ತದೆ.
ಜಸ್ಟ್ 20 ಕೋಟಿ ರೂಪಾಯಿಯಲ್ಲಿ ಮೂಡಿ ಬಂದಿದ್ದ ಮಂಜುಮ್ಮೇಲ್ ಬಾಯ್ಸ್ ಸಿನಿಮಾ 230 ಕೋಟಿ ರೂ.ಗೂ ಅಧಿಕ ಗಳಿಸಿತ್ತು. ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್ ಪೊದುವಾಳ್, ಲಾಲ್ ಜೂ, ದೀಪಕ್ ಪರಂಬೋಳ್, ಅಭಿರಾಮ್ ರಾಧಾಕೃಷ್ಣನ್, ಅರುಣ್ ಕುರಿಯನ್, ಖಾಲಿದ್ ರೆಹಮಾನ್, ಚಂದು ಸಲೀಂಕುಮಾರ್, ಶೆಬಿನ್ ಬೆನ್ಸನ್ ಮತ್ತು ವಿಷ್ಣು ರೇಘು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Ilayaraja: ರಜನಿಯ 'ಕೂಲಿ'ಗೆ ಇಳಯರಾಜ ಕೃತಿಚೌರ್ಯ ನೋಟಿಸ್ ಕಳುಹಿಸಿದ್ದೇಕೆ..?