
ನ್ಯೂಯಾರ್ಕ್(ಮೇ.21) ಜುರಾಸಿಕ್ ಪಾರ್ಕ್ ಸಿನಿಮಾ ಬಹುತೇಕರು ನೋಡಿದ್ದಾರೆ. 90ರ ದಶಕದಲ್ಲಿ ಅಚ್ಚರಿ ಜೊತೆಗೆ ಹೊಸ ಜಗತ್ತನ್ನೇ ಅನಾವರಣ ಮಾಡಿದ ಸಿನಿಮಾ ಇದು. ಬಳಿಕ ಮತ್ತೆರೆಡು ಭಾಗ ಬಿಡುಗಡೆಯಾಗಿ ಅದೇ ಕುತೂಹಲ ಹಾಗೂ ಅಚ್ಚರಿಯನ್ನು ಹುಟ್ಟು ಹಾಕಿತ್ತು. 2001ರಲ್ಲಿ ಜುರಾಸಿಕ್ ಪಾರ್ಕ್ ಪಾರ್ಟ್ 3 ಬಿಡುಗಡೆಯಾಗಿತ್ತು. ಅಲ್ಲಿಂದ ಇಲ್ಲೀವೆರಗೂ ಜುರಾಸಿಕ್ ಪಾರ್ಕ್ ಸಿನಿಮಾ ಜನರ ನೆಚ್ಚಿನ ಸಿನಿಮಾ ಆಗಿದೆ. ಇದೀಗ ಮತ್ತಷ್ಟು ವೈಮನವಿರೇಳಿಸುವ ಕತೆ, ರೋಚಕ ಪಯಣದ ಜುರಾಸಿಕ್ ವರ್ಲ್ಡ್ ರಿಬರ್ತ್ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಇದೀಗ ಸಿನಿಮಾದ 2ನೇ ಟ್ರೇಲರ್ ಲಾಂಚ್ ಆಗಿದೆ.
ಜುಲೈ 2ಕ್ಕೆ ಜುರಾಸಿಕ್ ವರ್ಲ್ಡ್ ರಿಬರ್ತ್ ಸಿನಿಮಾ ಬಿಡುಗಡೆ
ವಿಶ್ವ ಸಿನಿಮಾದಲ್ಲಿ ಹೋಲಿಕೆಗಳಿಲ್ಲದ ಕೆಲವು ಚಿತ್ರಗಳಿವೆ. ಅವುಗಳಲ್ಲಿ ಒಂದು ಸ್ಟೀವನ್ ಸ್ಪೀಲ್ಬರ್ಗ್ ಅವರ ಜುರಾಸಿಕ್ ಪಾರ್ಕ್. ಜುರಾಸಿಕ್ ಪಾರ್ಕ್, ಜುರಾಸಿಕ್ ವರ್ಲ್ಡ್ ಫ್ರಾಂಚೈಸಿಗಳಲ್ಲಿ ತಲಾ ಮೂರು ಚಿತ್ರಗಳು ಬೇರೆ ಬೇರೆ ಸಮಯದಲ್ಲಿ ಪ್ರೇಕ್ಷಕರ ಮುಂದೆ ಬಂದಿವೆ. ಈಗ ಜುರಾಸಿಕ್ ವರ್ಲ್ಡ್ ಫ್ರಾಂಚೈಸಿಯ ಹೊಸ ಚಿತ್ರ ಜುರಾಸಿಕ್ ವರ್ಲ್ಡ್ ರಿಬರ್ತ್ ಪ್ರೇಕ್ಷಕರಿಗೆ ಬರಲು ಸಿದ್ಧವಾಗಿದೆ. ಈ ವರ್ಷ ಜುಲೈ 2 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಇದೀಗ ಚಿತ್ರದ 2ನೇ ಟ್ರೇಲರ್ ಬಿಡುಗಡೆಯಾಗಿದೆ.
2ನೇ ಟ್ರೇಲರ್ ಆರಂಭದಲ್ಲಿ ಕುತೂಹಲ ಹಾಗೂ ಮೈವನಿರೇಳಿಸುವ ಸನ್ನಿವೇಶ
ಚಿತ್ರದ 2ನೇ ಟೇಲರ್ ಬಿಡುಗಡೆಯಾಗಿದೆ. ಲ್ಯಾಬ್‌ನಿಂದ ಆರಂಭಗೊಳ್ಳುವ ಈ ಟ್ರೇಲರ್, ಎರಡೇ ಸೆಕೆಂಡ್‌ಗಳಲ್ಲಿ ಬಿಗ್ ಟ್ವಿಸ್ಟ್ ನೀಡುತ್ತಿದೆ. ಜುರಾಸಿಕ್ ಪಾರ್ಕ್ ಸೇರಿದಂತೆ ಅತ್ಯಂತ ರೋಚಕ ಕ್ಷಣಗಳನ್ನು ಈ ಟ್ರೇಲರ್‌ನಲ್ಲಿ ಹಿಡಿದಿಡಲಾಗಿದೆ.
ಮೊದಲ ಟ್ರೇಲರ್‌ನಲ್ಲೇ ಅಚ್ಚರಿ ಕೊಟ್ಟಿದ್ದ ಜುರಾಸಿಕ್
2.25 ನಿಮಿಷಗಳ ಟ್ರೈಲರ್ ಈ ಫ್ರಾಂಚೈಸಿಯಿಂದ ಪ್ರೇಕ್ಷಕರು ನಿರೀಕ್ಷಿಸುವ ಎಲ್ಲಾ ಅಂಶಗಳನ್ನು ಹೊಂದಿರುತ್ತದೆ ಎಂಬ ನಿರೀಕ್ಷೆಯನ್ನು ಹುಟ್ಟುಹಾಕುತ್ತದೆ. 2022 ರಲ್ಲಿ ಬಿಡುಗಡೆಯಾದ ಜುರಾಸಿಕ್ ವರ್ಲ್ಡ್ ಡೊಮಿನಿಯನ್‌ನ ಸ್ವತಂತ್ರ ಉತ್ತರಭಾಗವಾಗಿ ರಿಬರ್ತ್ ಬರುತ್ತಿದೆ. ಡೊಮಿನಿಯನ್‌ನ ಘಟನೆಗಳು ನಡೆದ ಐದು ವರ್ಷಗಳ ನಂತರದ ಸಮಯವನ್ನು ಹೊಸ ಚಿತ್ರ ಒಳಗೊಂಡಿದೆ. ವೈಜ್ಞಾನಿಕ ಕಾಲ್ಪನಿಕ ಆಕ್ಷನ್ ಚಿತ್ರದಲ್ಲಿ ಸ್ಕಾರ್ಲೆಟ್ ಜೋಹಾನ್ಸನ್, ಮೆಹರ್ಷಾಲಾ ಅಲಿ, ಜೋನಾಥನ್ ಬೈಲಿ, ರೂಪರ್ಟ್ ಫ್ರೆಂಡ್, ಮ್ಯಾನುಯೆಲ್ ಗಾರ್ಸಿಯಾ-ರುಲ್ಫೊ, ಲೂನಾ ಬ್ಲೇಸ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಗಾಡ್ಜಿಲ್ಲಾ (2014) ಸೇರಿದಂತೆ ಹಲವು ಚಿತ್ರಗಳ ಮೂಲಕ ಗಮನ ಸೆಳೆದ ಗ್ಯಾರೆತ್ ಎಡ್ವರ್ಡ್ಸ್ ಚಿತ್ರದ ನಿರ್ದೇಶಕ. ಗ್ಯಾರೆತ್ ಮೊದಲ ಬಾರಿಗೆ ಜುರಾಸಿಕ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆಂಬ್ಲಿನ್ ಎಂಟರ್‌ಟೈನ್‌ಮೆಂಟ್, ದಿ ಕೆನಡಿ/ಮಾರ್ಷಲ್ ಕಂಪನಿ ಬ್ಯಾನರ್‌ಗಳಲ್ಲಿ ಫ್ರಾಂಕ್ ಮಾರ್ಷಲ್, ಪ್ಯಾಟ್ರಿಕ್ ಕ್ರೌಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಯೂನಿವರ್ಸಲ್ ಪಿಕ್ಚರ್ಸ್ ವಿತರಣೆ ಮಾಡುತ್ತಿದೆ. ಜಾನ್ ಮ್ಯಾಥಿಸನ್ ಛಾಯಾಗ್ರಹಣ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.