ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆಗೆ ಯಾವ ಮಗು ಹುಟ್ಬಹುದು ಎಂಬ ಚರ್ಚೆಯಲ್ಲಿರುವ ಅಭಿಮಾನಿಗಳಿಗೆ ಮತ್ತೊಂದು ಸಂತೋಷದ ಸುದ್ದಿ ಇದೆ. ಫೋರ್ಸ್ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ನಂಬರ್ ಒನ್ ಸ್ಥಾನ ಪಡೆದಿದ್ದಾರೆ. ದೊಡ್ಡ ಚಿತ್ರದಲ್ಲಿ ನಟಿಸ್ತಿರುವ ದೀಪಿಕಾ ಸಂಪಾದನೆ ಕೂಡ ದೊಡ್ಡದಾಗೇ ಇದೆ.
ಬಾಲಿವುಡ್ ನಲ್ಲಿ ಸದ್ಯ ಅತಿ ಹೆಚ್ಚು ಸಂಪಾದನೆ ಪಡೆಯುತ್ತಿರೋ (Bollywood HIghest Paid Actress) ನಟಿ ಯಾರು ಎನ್ನುವ ಪ್ರಶ್ನೆ ಬಂದಾಗ, ಆಲಿಯಾ ಭಟ್, ಕಂಗನಾ ಹಾಗೂ ದೀಪಿಕಾ ಪಡುಕೋಣೆ ಹೆಸರು ಕೇಳಿ ಬರುತ್ತೆ. ಈ ಬಾರಿ ಬೆಂಗಳೂರು ಬೆಡಗಿ, ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಈ ಸ್ಪರ್ಧೆಯಲ್ಲಿ ಮುಂದಿದ್ದಾರೆ. ಒಂದು ಚಿತ್ರಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ದೀಪಿಕಾ ಹೊರಹೊಮ್ಮಿದ್ದಾರೆ. ಶೀಘ್ರವೇ ತಾಯಿಯಾಗಲಿರುವ ದೀಪಿಕಾ, ಅನೇಕ ಟಾಪ್ ನಟಿಯರನ್ನು ಹಿಂದಿಕ್ಕಿ, ಫೋರ್ಬ್ಸ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ದೀಪಿಕಾ ಪಡುಕೋಣೆ ಒಂದು ಚಿತ್ರಕ್ಕೆ 15 ರಿಂದ 30 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ದೀಪಿಕಾ (Deepika) ನಂತರ ಪ್ರತಿ ಚಿತ್ರಕ್ಕೆ 15 ರಿಂದ 27 ಕೋಟಿ ರೂಪಾಯಿಗಳನ್ನು ಪಡೆಯುವ ಕಂಗನಾ (Kangana) ರನೌತ್ ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಮೂರನೇ ಸ್ಥಾನದಲ್ಲಿದ್ದಾರೆ. ಅವರು ಪ್ರತಿ ಚಿತ್ರಕ್ಕೆ 15 ರಿಂದ 25 ಕೋಟಿ ರೂಪಾಯಿ ಪಡೆಯುತ್ತಾರೆ. ಟೈಗರ್ 3ನಲ್ಲಿ ಕಾಣಿಸಿಕೊಳ್ತಿರುವ ನಟಿ ಕತ್ರಿನಾ ಕೈಫ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 15 ರಿಂದ 25 ಕೋಟಿ ರೂಪಾಯಿವರೆಗೆ ಚಾರ್ಜ್ ಮಾಡುತ್ತಾರೆ.
ಸೀರೆಯಲ್ಲಿ ಅಪ್ಸರೆಯಂತೆ ಕಂಗೊಳಿಸಿ ರಾಮ್ ಗೋಪಾಲ್ ವರ್ಮಾ ಕೈಗೆ ಸಿಕ್ಕ ಸುಂದರಿಯ ಅವತಾರ ನೋಡಿ!
ಅಚ್ಚರಿ ಅಂದ್ರೆ ಆಲಿಯಾ ಭಟ್ ಸಂಭಾವನೆ ಈ ಎಲ್ಲ ನಟಿಯರಿಗಿಂತ ಕಡಿಮೆ ಇದೆ. ಆಲಿಯಾ ಭಟ್ ಒಂದು ಚಿತ್ರಕ್ಕೆ 10ರಿಂದ 20 ಕೋಟಿ ಚಾರ್ಜ್ ಮಾಡ್ತಾರೆ. ಇದಾದ ನಂತ್ರ ಬರೋದು ಕರೀನಾ ಕಪೂರ್. ಅವರು ಒಂದು ಚಿತ್ರಕ್ಕೆ 8 ರಿಂದ 18 ಕೋಟಿ ಸಂಭಾವನೆ ಪಡೆಯುತ್ತಾರೆ. ಶ್ರದ್ಧಾ ಕಪೂರ್, ಏಳರಿಂದ 15 ಕೋಟಿ ರೂಪಾಯಿಯನ್ನು ಒಂದು ಚಿತ್ರಕ್ಕೆ ಪಡೆಯುತ್ತಾರೆ. ನಟನೆ ಮೂಲಕ ಅಭಿಮಾನಿಗಳ ಮನಸ್ಸು ಕದ್ದಿರುವ, ವರ್ಷ, ಎರಡು ವರ್ಷಕ್ಕೊಮ್ಮೆ ಸಿನಿಮಾ ಮಾಡುವ ವಿದ್ಯಾ ಬಾಲನ್, ಒಂದು ಚಿತ್ರಕ್ಕೆ 8ರಿಂದ 14 ಕೋಟಿ ಸಂಭಾವನೆ ಪಡೆಯುತ್ತಾರೆ.
ಮಾಹಿತಿ ಪ್ರಕಾರ, ಟಾಪ್ 10 ಪಟ್ಟಿಯ ಕೊನೆಯಲ್ಲಿ ಕ್ರಿಕೆಟರ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಬರ್ತಾರೆ. ಅನುಷ್ಕಾ ಶರ್ಮಾ ಒಂದು ಚಿತ್ರಕ್ಕೆ 8 ರಿಂದ 12 ಕೋಟಿ ಚಾರ್ಜ್ ಮಾಡಿದ್ರೆ, ಐಶ್ವರ್ಯ ರೈ ಬಚ್ಚನ್ 10 ಕೋಟಿ ಚಾರ್ಜ್ ಮಾಡ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬಿಗ್ ಬಜೆಟ್ ಚಿತ್ರಗಳಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ : ಅತಿ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ರಾರಾಜಿಸ್ತಿರೋ ದೀಪಿಕಾ ಪಡುಕೋಣೆ, ಬಿಗ್ ಬಜೆಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಪಠಾಣ್, ಜವಾನ್ ಸೇರಿದಂತೆ ದೊಡ್ಡ ಬಜೆಟ್ ಚಿತ್ರಗಳಲ್ಲಿ ದೀಪಿಕಾ ನಟಿಸಿದ್ದಾರೆ. ಸದ್ಯ ದೀಪಿಕಾ ಪಡುಕೋಣೆಯ ಬಹುನಿರೀಕ್ಷಿತ ಚಿತ್ರವೆಂದ್ರೆ ಕಲ್ಕಿ 2898 AD. ಪ್ರಭಾಸ್, ಅಮಿತಾಬ್ ಬಚ್ಚನ್ ಅಭಿನಯದ ಈ ಚಿತ್ರವನ್ನು 600 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದೀಪಿಕಾ ಪಡುಕೋಣೆ ಸಿಂಗಮ್ ಎಗೇನ್ ಚಿತ್ರದಲ್ಲೂ ನಟಿಸಿದ್ದು, ಈ ಎರಡೂ ಚಿತ್ರಗಳು ಜೂನ್ 27 ಮತ್ತು ಆಗಸ್ಟ್ 15ರಂದು ತೆರೆಗೆ ಬರಲಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾಗೆ ಹೊಸ ಹೆಸರು ಕೊಟ್ಟ ಅಭಿಮಾನಿ; ಏನಿರಬಹುದು ಊಹಿಸಿ..!
ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ರೂ ಆಲಿಯಾ ಬಾಲಿವುಡ್ ನ ಬ್ಯುಸಿ ನಟಿಯರಲ್ಲಿ ಒಬ್ಬರು. ಈ ವರ್ಷ ಜಿಗ್ರಾ ಬಿಡುಗಡೆಯಾಗಿದ್ದು, ಆಲಿಯಾ, ಸಂಜಯ್ ಲೀಲಾ ಬನ್ಸಾಲಿ ಜೊತೆ ಇನ್ನೊಂದು ಬಿಗ್ ಬಜೆಟ್ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅಷ್ಟೇ ಅಲ್ಲದೆ ಲವ್ ಆಂಡ್ ವಾರ್ ಚಿತ್ರದಲ್ಲೂ ಆಲಿಯಾ ನಟಿಸಲಿದ್ದಾರೆ.