ಪದೇ ಪದೇ 'ಸೂರ್ಯವಂಶ' ಸಿನಿಮಾ ಪ್ರಸಾರ ಮಾಡಿದ ವಾಹಿನಿ; ರೊಚ್ಚಿಗೆದ್ದ ವ್ಯಕ್ತಿ ಮಾಡಿದ್ದೇನು?

By Shruthi KrishnaFirst Published Jan 19, 2023, 12:06 PM IST
Highlights

ಅಮಿತಾಬ್ ಬಚ್ಚನ್ ನಟನೆಯ 'ಸೂರ್ಯವಂಶಂ’ ಚಿತ್ರವನ್ನು ಪದೇ ಪದೇ ಹಾಕಲಾಗುತ್ತಿದೆ ಎಂದು ಪ್ರೇಕ್ಷಕನೊಬ್ಬ ಸಿಡಿದೆದಿದ್ದಾನೆ. 

ಖಾಸಗಿ ಮನರಂಜನೆ ವಾಹಿನಗಳಲ್ಲಿ ಆಗಾಗ ಸಿನಿಮಾಗಳು ಪ್ರಸಾರವಾಗುತ್ತಿರುತ್ತವೆ. ಈಗಂತು ಸಿನಿಮಾಗಳಿಗಾಗಿಯೇ ವಿಶೇಷ ವಾಹಿನಿಗಳು ಸಹ ಇವೆ. ಕೆಲವೊಮ್ಮೆ ಕೆಲವು ಸಿನಿಮಾಗಳನ್ನು ಪದೇ ಪದೇ ಪ್ರಸಾರ ಮಾಡಲಾಗುತ್ತದೆ. ಆದರೆ ಅದು ಪ್ರೇಕ್ಷಕರಿಗೆ ಕಿರಿಕಿರಿ ಉಂಟುಮಾಡುತ್ತದೆ. ಇತ್ತೀಚಿಗಷ್ಟೆ ವಾಹಿನಿಯೊಂದು ಹಾಕಿದ್ದೆ ಸಿನಿಮಾ ಮತ್ತೆ ಮತ್ತೆ ಹಾಕ್ತಾ ಇದಾರೆ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ರೊಚ್ಚಿಗೆದ್ದು ವಾಹಿನಿಯನ್ನು ತರಾಟೆ ತೆದುಕೊಂಡಿದ್ದಾನೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಟನೆಯ  ‘ಸೂರ್ಯವಂಶಂ’ ಚಿತ್ರವನ್ನು ಪದೇ ಪದೇ ಹಾಕಲಾಗುತ್ತಿದೆ ಎಂದು ಪ್ರೇಕ್ಷಕನೊಬ್ಬ ಸಿಡಿದೆದಿದ್ದಾನೆ. ಸೋನಿ ಮ್ಯಾಕ್ಸ್ ನಲ್ಲಿ ಈ ಸಿನಿಮಾವನ್ನು ಹಲವು ಬಾರಿ ಪ್ರಸಾರ ಮಾಡಲಾಗಿದೆ. ಇದರಿಂದ ಕಿರಿಕಿರಿ ಅನುಭವಿಸಿದ ವ್ಯಕ್ತಿ ವಾಹಿನಿಗೆ ಪ್ರಶ್ನೆ ಮಾಡಿದ್ದಾನೆ. 

ಅಮಿತಾಬ್ ಬಚ್ಚನ್ ಅವರ ಸೂಪರ್ ಹಿಟ್ ಸಿನಿಮಾಗಳಲ್ಲಿ ‘ಸೂರ್ಯವಂಶಂ’ ಸಿನಿಮಾ ಕೂಡ ಒಂದು. ಎಷ್ಟೇ ಬಾರಿ ಟಿವಿಯಲ್ಲಿ ಪ್ರಸಾರ ಮಾಡಿದರೂ ಅಭಿಮಾನಿಗಳು ನೋಡುತ್ತಾರೆ. ಆದರೆ ಇನ್ನು ಕಲವರಿಗೆ ಇದು ಹಿಂಸೆಯಾಗುತ್ತಿದೆ. ‘ಸೂರ್ಯವಂಶಂ’ಸಿನಿಮಾದ ಪ್ರಸಾರದ ಹಕ್ಕು ಹೊಂದಿರುವ ಸೋನಿ ಅನೇಕ ಬಾರಿ ಈ ಸಿನಿಮಾವನ್ನು ಟೆಲಿಕಾಸ್ಟ್ ಮಾಡಿದೆ. ಈ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ, ಬೇರ ಸಿನಿಮಾ ಪ್ರಸಾರ ಮಾಡಿ ಎಂದು ನೆಟ್ಟಿಗರು ಹೇಳಿದ್ದಾರೆ. ಇದೀಗ ವ್ಯಕ್ತಿಯೊಬ್ಬ ಸೋನಿ ಮ್ಯಾಕ್ಸ್ ನಿರ್ಧಾರವನ್ನು ಪ್ರಶ್ನಿಸಿದ್ದಾನೆ. 

ಹಿಂದಿ ಚಿತ್ರರಂಗವನ್ನು ಆಳುತ್ತಿರುವ Non-Nepo ಸ್ಟಾರ್ಸ್‌!

'ನಿಮ್ಮ ಚಾನೆಲ್‌ನ ಕೃಪೆಯಿಂದ, ನನಗೆ ಮತ್ತು ನನ್ನ ಕುಟುಂಬಕ್ಕೆ ಈಗ ಹೀರಾ ಠಾಕೂರ್ (ಚಿತ್ರದಲ್ಲಿ ಬಿಗ್‌ಬಿ ಪಾತ್ರ) ಮತ್ತು ಅವರ ಕುಟುಂಬ (ರಾಧಾ, ಗೌರಿ) ನಮ್ಮ ಸ್ವಂತ ಸಂಬಂಧಿಕರಂತೆ ಆಗಿದ್ದಾರೆ.  ನಾವು ಎಲ್ಲಾ ಡೈಲಾಗ್‌ಗಳನ್ನು ಹೇಳಬಹುದು. ನೀವು (ಚಾನೆಲ್) ಇನ್ನೂ ಎಷ್ಟು ಬಾರಿ ಈ ಚಿತ್ರವನ್ನು ಪ್ರಸಾರ ಮಾಡುತ್ತೀರಿ ಎಂದು ನಾನು ಕೇಳುತ್ತಿದ್ದೀನಿ?  ಪದೇ ಪದೇ ಪ್ರಸಾರ ಮಾಡುತ್ತಿರುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿದರೆ ಇದಕ್ಕೆ ಯಾರು ಹೊಣೆ. ದಯವಿಟ್ಟು ತಿಳಿಸಿ' ಎಂದು ಹೇಳಿದ್ದಾರೆ. 

1640 ರೂ. ಸಂಬಳ ತಗೊಂಡು 7 ಮಂದಿ ಜೊತೆ ಚಿಕ್ಕ ರೂಮಿನಲ್ಲಿದ್ದೆ; ಕಷ್ಟದ ದಿನ ನೆನೆದ ಅಮಿತಾಭ್ ಬಚ್ಚನ್

ವ್ಯಕ್ತಿ ತನ್ನ ಹೆಸರು ಮತ್ತು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಈ ವ್ಯಕ್ತಿಯ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕರು ಸೂರ್ಯವಂಶಂ ಸಿನಿಮಾದ ಮೀಮಿಗಳನ್ನು ಮಾಡಿ ಶೇರ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ನಿಮ್ಮ ನೋವು ನಮಗೂ ಅರ್ಥವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಇದು ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ ಎಂದು ಹೇಳಿದ್ದಾರೆ. 

'ಸೂರ್ಯವಂಶಂ' ಅಮಿತಾಭ್ ಬಚ್ಚನ್ ಅಭಿನಯದ ಫ್ಯಾಮಿಲಿ ಡ್ರಾಮ ಸಿನಿಮಾ. 1999ರಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾವನ್ನು ಟಿವಿಯಲ್ಲಿ ಬಹುತೇಕ ಭಾನುವಾರ ಪ್ರಸಾರ ಮಾಡಲಾಗುತ್ತದೆ. ಹಾಗಾಗಿ ರೊಚ್ಚಿಗೆದ್ದ ವ್ಯಕ್ತಿ ಪತ್ರ ಬರೆದು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.  

click me!