
ನಟ ಸೋನು ಸೂದ್ ಅಸಹಾಯಕರಿಗೆ ನೆರವಾಗ್ತಿರೋದು ಎಲ್ಲರಿಗೂ ಗೊತ್ತು. ಅವರು ನೆರವಾಗ್ತಿರೋದು ಬಡವರು, ಮನೆ, ಆಹಾರ, ಬಟ್ಟೆ, ಶಿಕ್ಷಣದಂತಹ ಮೂಲಭೂತ ಅಗತ್ಯಗಳಿಗಾಗಿ ಪರದಾಡುವವರಿಗೆ. ಆದ್ರೆ ಇಲ್ಲೊಬ್ಬ ಸೋನು ಹತ್ರ ಕೇಳಿರೋ ನೆರವು ನೋಡಿದ್ರೆ ಹೀಗೂ ಇದ್ದಾರಾ ಅನಿಸೋದು ಸುಳ್ಳಲ್ಲ.
ತಮಗೆ ಟ್ವಿಟರ್, ಫೇಸ್‌ಬುಕ್ ಇತರ ಸೋಷಿಯಲ್ ಫ್ಲಾಟ್‌ಫಾರ್ಮ್ ಮೂಲಕ ನೆರವಿಗಾಗಿ ಪ್ರತಿದಿನ ಸಾವಿರಾರು ಕರೆ ಬರುತ್ತಿರುವುದಾಗಿ ಸೋನು ಹೇಳಿದ್ದಾರೆ. ಇದೀಗ ಇದೇ ರೀತಿ ಟ್ವಿಟರ್‌ನಲ್ಲಿ ಬಂದ ಒಂದು ಪೋಸ್ಟ್ ಹೀಗಿದೆ ನೋಡಿ.
ಒಲಿಂಪಿಕ್ಸ್‌ಗೆ ತಯಾರಾಗಲು ಆಥ್ಲೀಟ್‌ಗೆ ಶೂ ಕೊಡಿಸಿದ ಸೋನು ಸೂದ್
ಸರ್ ಆಪಲ್ ಐಫೋನ್ ಬೇಕಾಗಿದೆ. ನಾನು ಈಗಾಗಲೇ 20 ಸಲ ಟ್ವೀಟ್ ಮಾಡಿದ್ದೇನೆ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸೋನು, ನನಗೂ ಒಂದು ಫೋನ್ ಬೇಕು. ನಾನೂ 20 ಸಲ ಟ್ವೀಟ್ ಮಾಡ್ತೀನಿ ಎಂದಿದ್ದಾರೆ.
ಎತ್ತುಗಳಿಂದ ಹಿಡಿದು ಕೆಲಸ ಕೊಡಿಸುವ ತನಕ ಸೋನು ದೇಶಾದ್ಯಂತ ಜನರಿಗೆ ನೆರವಾಗುತ್ತಿದ್ದಾರೆ. ಈಗಾಗಲೇ ನಟ ಕ್ರೀಡಾ ಆಸಕ್ತರೊಬ್ಬರಿಗೆ ಶೂ ಕಳಿಸಿದ್ದಾರೆ. ಇತ್ತೀಚೆಗೆ ಗೆಳೆಯರಿಂದ ಶೂ ಪಡೆದು ಆಡಿದ ಮನೋಜ್ ಎಂಬಾತ ಆ ಕುರಿತ ಆರ್ಟಿಕಲ್ ಶೇರ್ ಮಾಡಿ ಸೋನು ಸರ್ ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ನನ್ನನ್ನು ಸಪೋರ್ಟ್ ಮಾಡಿ ಎಂದು ಕೇಳಿಕೊಂಡಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಸೋನು ಇಟ್ಸ್ ಡನ್, ಇವತ್ತೇ ಶೂ ಡೆಲಿವರಿಯಾಗುತ್ತೆ ಎಂದಿದ್ದರು.
ಮಾತು ತಪ್ಪದೆ ತ್ರಿವಳಿಗೆ ಜನ್ಮ ನೀಡಿದಾಕೆ ಕುಟುಂಬಕ್ಕೆ ನಟ ಸೋನು ಸೂದ್ ನೆರವು
ಶೂ ಪಡೆದ ಯುವಕ ವಿಡಿಯೋ ಶೇರ್ ಮಾಡಿ ಥ್ಯಾಂಕ್ಸ್ ಹೇಳಿದ್ದ. ಇನ್ನೊಬ್ಬ ಯುಪಿಎಸ್ಸಿಗಾಗಿ ತಯಾರಿ ನಡೆಸುವ ತಂಗಿಗಾಗಿ ಪುಸ್ತಕ ಕಳುಹಿಸುವಂತೆ ಕೇಳಿಕೊಂಡಿದ್ದ. ಪುಸ್ತಕ ಒದಗಿಸುವುದಾಗಿ ಸೋನು ಭರವಸೆ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.