ದೊಡ್ಡ ನಿರ್ದೇಶಕ ಹಾಗಂದಾಗ ಹೃದಯ ಛಿದ್ರವಾಗಿತ್ತು; ರಾಜಮೌಳಿ ಹೇಳಿದ್ದನ್ನು ಬಹಿರಂಗ ಪಡಿಸಿದ ನಟಿ ಮಮತಾ

By Shruthi Krishna  |  First Published Feb 25, 2023, 1:24 PM IST

ದಕ್ಷಿಣ ಭಾರತದ ಖ್ಯಾತ ನಟಿ ಮಮತಾ ಮೋಹನ್ ಖ್ಯಾತ ನಿರ್ದೇಶಕ ರಾಜಮೌಳಿ ಹೇಳಿದ್ದ ಮಾತು ಹೃದಯ ಛಿದ್ರವಾಗುವಂತೆ ಮಾಡಿತ್ತು ಎಂದು ಹೇಳಿದ್ದಾರೆ. 


ಸೌತ್ ಸಿನಿಮಾರಂಗದ ಖ್ಯಾತ ನಟಿಯರಲ್ಲಿ ಮಮತಾ ಮೋಹನ್ ಕೂಡ ಒಬ್ಬರು. ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಮಮತಾ ಮೋಹನ್ ಮಲಯಾಳಂ ಮೂಲದವರು. ಜನಗಣಮನ, ಫಾರೆನ್‌ಸಿಕ್ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ಮಮತಾ ಮೋಹನ್  ಇತ್ತೀಚಿಗಷ್ಟೆ ವಿಟಿಲಿಗೋ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಬಹಿರಂಗ ಪಡಿಸಿದ್ದರು. ಕ್ಯಾನ್ಸರ್ ರೋಗದಿಂದ ಗುಣಮುಖರಾಗಿರುವ ಮಮತಾ ಮೋಹನ್ ಇದೀಗ ವಿಟಿಲಿಗೋ ರೋಗದಿಂದ ಬಳಲುತ್ತಿದ್ದಾರೆ. ತನ್ನ ಅನಾರೋಗ್ಯದ ಬಗ್ಗೆ ಮಮತಾ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದೀಗ ಮಮತಾ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಬಗ್ಗೆ ಮಾತನಾಡಿದ್ದಾರೆ. ರಾಜಮೌಳಿ ಹೇಳಿದ್ದ ಆ ಒಂದು ಮಾತಿನಿಂದ ತನ್ನ ಹೃದಯ ಛಿದ್ರವಾಗಿತ್ತು ಎಂದು ಹೇಳಿದ್ದಾರೆ. 

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಮತಾ ಮೋಹನ್ ದಾಸ್ ತಮ್ಮ ಸಿನಿಮಾ ವೃತ್ತಿಜೀವನದ ಬಗ್ಗೆ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ನಟಿ ತೆಲುಗಿನ ಸೂಪರ್ ಹಿಟ್ ಅರುಂಧತಿ ಚಿತ್ರ ರಿಜೆಕ್ಟ್ ಮಾಡಿದ ಬಗ್ಗೆಯೂ ಬಹಿರಂಗ ಪಡಿಸಿದರು. ನಟಿ ಮಮತಾ ಮಲಯಾಳಂ ಸಿನಿಮಾರಂಗದಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದರು. ಬಹುಬೇಡಿಕೆಯ ನಟಿಯಾಗಿದ್ದ ಮಮತಾ ಬಳಿಕ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಿನಿಮಾ ಮೂಲಕ ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟರು. ರಾಜಮೌಳಿ ಅವರ ಯಮದೊಂಗ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಿತರಾದರು. ಆದರೆ ಯಮದೊಂಗ ಸಿನಿಮಾಗೂ ಮೊದಲು ಮಮತಾ ಅವರಿಗೆ ಅರುಂಧತಿ ಸಿನಿಮಾಗೆ ಆಫರ್ ಮಾಡಲಾಗಿತ್ತು ಎಂದು ಬಹಿರಂಗ ಪಡಿಸಿದರು. ಅರುಂಧನಿ ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ರಾಜಮೌಳಿ ದೊಡ್ಡ ತಪ್ಪು ಮಾಡಿದೆ ಎಂದು ಹೇಳಿದರು. ಆ ಮಾತು ನನ್ನ ಹೃದಯ ಛಿದ್ರವಾಗುವಂತೆ ಮಾಡಿತ್ತು ಎಂದು ಹೇಳಿದರು.    

Tap to resize

Latest Videos

'ಯಮದೊಂಗ ಚಿತ್ರದಲ್ಲಿ ನಟಿಸುವ ಮುನ್ನವೇ ಅರುಂಧತಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಚಿತ್ರದ ನಿರ್ಮಾಣ ಸಂಸ್ಥೆ ಚೆನ್ನಾಗಿಲ್ಲ ಎಂದು ಮ್ಯಾನೇಜರ್ ಹೇಳಿದ್ದರಿಂದ ಈ ಚಿತ್ರದಲ್ಲಿ ನಟಿಸಲು ಹಿಂದೇಟು ಹಾಕಿದೆ. ಆ ಸಮಯದಲ್ಲಿ ಶ್ಯಾಮಪ್ರಸಾದ್ ರೆಡ್ಡಿ ತೆಲುಗು ಚಿತ್ರರಂಗದ ಬಗ್ಗೆ ನನಗೆ ಗೊತ್ತಿಲ್ಲದ ಕಾರಣ ಸುಮಾರು ಎರಡು ಮೂರು ತಿಂಗಳು ಕಾಯುತ್ತಿದ್ದರು. ಆದರೆ ನಂತರ ಈ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ತಿಳಿಸಿದೆ' ಎಂದು ಹೇಳಿದರು. 

ಕ್ಯಾನ್ಸರ್‌ ಗೆದ್ದ ನಂತರ ಮತ್ತೊಂದು ರೋಗದಿಂದ ಬಳತ್ತಿರುವ 'ಜನ ಗಣ ಮನ' ನಟಿ ಮಮತಾ ಮೋಹನ್; ಭಾವುಕ ಪೋಸ್ಟ್

ಅರುಂಧತಿ ಸಿನಿಮಾದಿಂದ ಹೊರಬಂದ ಬಳಿಕ ರಾಜಮೌಳಿ ಅವರ ಯಮದೊಂಗ ಸಿನಿಮಾದಿಂದ ಆಫರ್ ಪಡೆದು ನಟಿಸಿದರು. ಆಗ ನಿರ್ದೇಶಕ ರಾಜಮೌಳಿ ಅರಿಂಧತಿ ಸಿನಿಮಾ ಬಿಟ್ಟುಕೊಟ್ಟು ದೊಡ್ಡ ತಪ್ಪು ಮಾಡಿದೆ ಎಂದು ಹೇಳಿದರು. ಅಷ್ಟು ದೊಡ್ಡ ನಿರ್ದೇಶಕ ಹಾಗೆ ಹೇಳಿದಾಗ ನನ್ನ ಹೃದಯ ಛಿದ್ರವಾಯಿತು ಎಂದು ಮಮತಾ ಹೇಳಿದರು. ಯಮದೊಂಗ ಬಳಿಕ ಮಮತಾ ತೆಲುಗಿನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಕೃಷ್ಣಾರ್ಜುನ, ಕೆಡಿ, ಕಿಂಗ್ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಕ್ಯಾನ್ಸರ್ ಗೆದ್ದು ಬಂದಿರುವ ನಟಿ 
  
ನಟಿ ಮಮತಾ ಮೋಹನ್ ದಾಸ್ ಕಳೆದ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ರೋಗಕ್ಕೆ ಗುರಿಯಾಗಿದ್ದರು. ಕ್ಯಾನ್ಸರ್ ವಿರುದ್ಧ ಹೋರಾಡಿ ಕ್ಯಾನ್ಸರ್ ಮುಕ್ತ ಆಗಿದ್ದರು. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉತ್ತಮ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಕೊನೆಯದಾಗಿ ಜನಗಣಮನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 

ಚರ್ಮ ರೋಗದಿಂದ ಬಳಲುತ್ತಿರುವ ನಟಿ 

ಕ್ಯಾನ್ಸರ್ ರೋಗದಿಂದ ಗುಣಮುಖರಾಗಿರುವ ಮಮತಾ ಮೋಹನ್ ಇದೀಗ ವಿಟಿಲಿಗೋ ರೋಗದಿಂದ ಬಳಲುತ್ತಿದ್ದಾರೆ. ವಿಟಿಲಿಗೋ ಎಂದರೆ ಚರ್ಮದ ಮೂಲ ಬಣ್ಣ ಕಳೆದುಕೊಳ್ಳುವುದು. ಇದನ್ನು ತೊನ್ನು ರೋಗ ಅಂತನೂ ಕರೆಯುತ್ತಾರೆ. ತೊನ್ನು ರೋಗದ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ನಟಿ ಮಮತಾ ಮೋಹನ್ ಬಹಿರಂಗ ಪಡಿಸಿದ್ದರು.

click me!