ಆಟೋ ಡ್ರೈವರ್ ಅಂತಿದ್ರು, ಬಾಡಿ ಶೇಮಿಂಗ್ ಮಾಡ್ತಿದ್ರು, ಜೋರಾಗಿ ಅಳುತ್ತಿದ್ದೆ; ಕಷ್ಟದ ದಿನ ನೆನೆದು ಧನುಷ್ ಭಾವುಕ

Published : Feb 25, 2023, 12:02 PM IST
ಆಟೋ ಡ್ರೈವರ್ ಅಂತಿದ್ರು, ಬಾಡಿ ಶೇಮಿಂಗ್ ಮಾಡ್ತಿದ್ರು, ಜೋರಾಗಿ ಅಳುತ್ತಿದ್ದೆ; ಕಷ್ಟದ ದಿನ ನೆನೆದು ಧನುಷ್ ಭಾವುಕ

ಸಾರಾಂಶ

ತಮಿಳಿನ ಸ್ಟಾರ್ ನಟ ಧನುಷ್ ಪ್ರಾರಂಭದ ದಿನಗಳಲ್ಲಿ ಎದುರಿಸಿದ್ದ ಅವಮಾನಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಆಟೋ ಡ್ರೈವರ್ ಎನ್ನುತ್ತಿದ್ದರು, ಬಾಡಿ ಶೇಮಿಂಗ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ. 

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟರಲ್ಲಿ ನಟ ಧನುಷ್ ಕೂಡ ಒಬ್ಬರು. ತಮಿಳು ಸ್ಟಾರ್ ಧನುಷ್ ಇಂದು ವಿಶ್ವವೇ ಮೆಚ್ಚುವ ನಟವನಾಗಿ  ಬೆಳೆದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಧನುಷ್ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ, ರಂಜಿಸುತ್ತಿದ್ದಾರೆ.  ನಟ ಧನುಷ್ ಚಿಕ್ಕ ವಯಸ್ಸಿನಲ್ಲೇ ಹೀರೋ ಆಗಿ ಸಿನಿಮಾರಂಗಕ್ಕೆ ಪ್ರವೇಶಿಸಿದರು. ಇಂದು ಸ್ಟಾರ್ ನಟನಾಗಿ ಹೊರಹೊಮ್ಮಿರುವ ಧನುಷ್ ಪ್ರಾರಂಭದ ದಿನಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರು. ಧನುಷ್ ಕೂಡ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದರು. ಈ ಬಗ್ಗೆ ಧನುಷ್ ಬಹಿರಂಗ ಪಡಿಸಿದ್ದಾರೆ. ಈ ಹಿಂದಿನ ಸಂದರ್ಶನವೊಂದರಲ್ಲಿ ಪ್ರಾರಂಭದ ದಿನಗಳಲ್ಲಿ ಅನುಭವಿಸಿದ ಅವಮಾನಗಳ ಬಗ್ಗೆ ತೆರೆದಿಟ್ಟಿದ್ದರು. 

2003ರಲ್ಲಿ ಬಿಡುಗಡೆಯಾದ 'ಕಾದಲ್ ಕೊಂಡೇನ್' ಚಿತ್ರೀಕರಣ ವೇಳೆ ನಡೆದ ಘಟನೆಯನ್ನು ಧನುಷ್ ಬಹಿರಂಗ ಪಡಿಸಿದ್ದರು. 2015ರ ಸಂದರ್ಶನದಲ್ಲಿ ತನ್ನನ್ನು ಹೇಗೆ ಆಡಿಕೊಳ್ಳುತ್ತಿದ್ದರು, ಬಾಡಿಶೇಮಿಂಗ್ ಮಾಡುತ್ತಿದ್ದರು ಎಂದು ಧನುಷ್ ವಿವರಿಸಿದ್ದರು. ಕಾದಲ್ ಕೊಂಡೇನ್ ಸಿನಿಮಾಗೆ ನಾಯಕನಾಗಿ ಧನುಷ್ ಆಯ್ಕೆಯಾಗಿದ್ದರು. ಆದರೆ ನಾಯಕ ಯಾರು ಎಂದು ಸೆಟ್‌ನಲ್ಲಿ ಎಲ್ಲರೂ ಕೇಳುತ್ತಿದ್ದರು. ಆಗಲೇ ಸಾಕಷ್ಟು ಅವಮಾನ ಎದುರಿಸಿದ್ದ ಧನುಷ್ ತಾನೆ ನಾಯಕ ಎಂದು ಹೇಳದೆ ಬೇರೆಯವರ ಕಡೆ ಕೈ ತೋರಿದ ಘಟನೆಯನ್ನು ವಿವರಿಸಿ ಭಾವುಕರಾಗಿದ್ದರು.  

ಮಾತು ಮುಂದುವರೆಸಿದ ಧನುಷ್ 'ನಾನೇ ನಾಯಕ ಎಂದು ಗೊತ್ತಾದಾಗ ಸೆಟ್‌ನಲ್ಲಿದ್ದವರೆಲ್ಲಾ ನನ್ನನ್ನು ನೋಡಿ ಜೋರಾಗಿ ನಕ್ಕರು. ಏಯ್ ನೋಡು ಆಟೋ ಡ್ರೈವರ್, ಅವನೇ ಹೀರೋ ಅಂದರು. ಆಗ ನಾನು ಚಿಕ್ಕ ಹುಡುಗನಾಗಿದ್ದೆ. ನಾನು ಕಾರಿನ ಬಳಿ ಹೋಗಿ ಜೋರಾಗಿ ಅಳುತ್ತಿದ್ದೆ. ನನ್ನನ್ನು ಟ್ರೋಲ್ ಮಾಡಿದ ಮತ್ತು ಬಾಡಿ ಶೇಮಿಂಗ್ ಮಾಡಿದವರು ಇವತ್ತು ಯಾರು ಇಲ್ಲಿ ಇಲ್ಲ' ಎಂದು ಧನುಷ್ ಹೇಳಿದ್ದರು.

150 ಕೋಟಿ ರೂ. ಹೊಸ ಮನೆಗೆ ಕಾಲಿಟ್ಟ ನಟ ಧನುಷ್: ಗೃಹ ಪ್ರವೇಶದ ಫೋಟೋಗಳು ವೈರಲ್

 ಆ ಘಟನೆ ಬಳಿಕ ಆಟೋ ಡ್ರೈವರ್ ಯಾಕೆ ಹೀರೋ ಆಗಬಾದರು ಎಂದು ಅನಿಸಿತು ಎಂದು ಧನುಷ್ ಹೇಳಿದರು. ಪ್ರತಿಭೆ ಮುಖ್ಯ ದೈಹಿಕ ನೋಟವಲ್ಲ ಎಂದು ಧನುಷ್ ಹೇಳಿದರು. ಕಾಲಿವುಡ್ ಸ್ಟಾರ್ ಧನುಷ್ 2002ರಿಂದ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಆಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಧನುಷ್ ನಟನೆಗೆ ಫಿದಾ ಆಗದವರಿಲ್ಲ. ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರದ ಮೂಲಕ ತೆರೆಮೇಲೆ ಬರುತ್ತಾರೆ ಧನುಷ್.  ತಮಿಳು ಮಾತ್ರವಲ್ಲದೇ ಧನುಷ್ ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲೂ ಮಿಂಚಿದ್ದಾರೆ. 

ರಿಷಬ್ ನೀವು ತುಂಬಾ ಹೆಮ್ಮೆ ಪಡಬೇಕು; 'ಕಾಂತಾರ' ನೋಡಿ ಹೊಗಳಿದ ನಟ ಧನುಷ್

ಧನುಷ್ ಕೊನೆಯದಾಗಿ ವಾತಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಕೂಡ ಪ್ರತಿಕ್ರಿಯೆ ಪಡೆದುಕೊಂಡಿದೆ. ಸದ್ಯ ಸರ್ ಮತ್ತು ಕ್ಯಾಪ್ಟನ್ ಮಿಲ್ಲರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಕ್ಯಾಪ್ಟನ್ ಮಿಲ್ಲರ್ ನಲ್ಲಿ ಧನುಷ್ ಜೊತೆ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಕೂಡ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ತೆರೆಮೇಲೆ ಬರುತ್ತಿರುವ ಧನುಷ್ ಮತ್ತು ಶಿವಣ್ಣನನ್ನು ನೋಡಲು ಕನ್ನಡ ಅಭಿಮಾನಿಗಳು ಕಾತರರಾಗಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?