
ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ 25 ನೇ ಕಲ್ಕತ್ತಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅನ್ನು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಹಿರಿಯ ನಟಿ ರಾಖೀ ಗುಲ್ಜಾರ್ ಜೊತೆಗೆ ಉದ್ಘಾಟಿಸಿ ಮಾತನಾಡಿದರು.
ಸಿಎಂ ಮಮತಾ ಬ್ಯಾನರ್ಜಿ ಉದ್ಘಾಟನಾ ಭಾಷಣ ಮಾಡುತ್ತಾ, ಶಾರೂಕ್‌ರನ್ನು 'ನನ್ನ ಪ್ರೀತಿಯ ತಮ್ಮ' ಎಂದು ಪರಿಚಯಿಸಿದರು. 'ನನ್ನ ಪ್ರೀತಿಯ ತಮ್ಮ ಶಾರೂಕ್ ಹೆಸರು ಇಡೀ ಜಗತ್ತಿಗೆ ಗೊತ್ತಿದೆ. ಆದರೂ ಅವರಿಗೆ ಸ್ವಲ್ಪವೂ ಗರ್ವವಿಲ್ಲ. ಮನುಷ್ಯರನ್ನು, ಮನುಷ್ಯತ್ವವನ್ನು ತುಂಬಾ ಇಷ್ಟಪಡುವ ವ್ಯಕ್ತಿ ಅವರು' ಎಂದು ಶ್ಲಾಘಿಸುತ್ತಾರೆ. ಹೀಗೆ ಮಾತನಾಡುವಾಗ ಇಬ್ಬರ ನಡುವೆ ತಮಾಷೆಯ ಮಾತುಕತೆ ನಡೆಯುತ್ತದೆ.
ಮಮತಾ ಬ್ಯಾನರ್ಜಿಗೆ ಶಾರೂಕ್, ' ಸಿನಿಮಾಗಳಿಂದ ನನಗೆ ರಜೆ ಕೊಡಿ' ಎಂದು ಕೇಳುತ್ತಾರೆ. ಆಗ ಮಮತಾ, ನೀನು, ರಜೆ ತೆಗೆದುಕೊಳ್ಳಲು ಯೋಚಿಸಿದರೆ ನಾನು ನಿನ್ನ ಜೊತೆ ಮಾತನಾಡುವುದನ್ನೇ ನಿಲ್ಲಿಸಿ ಬಿಡುತ್ತೇನೆ' ಎಂದು ಪ್ರೀತಿಯಿಂದ ಗದರಿದರು.
ಈ ವೇದಿಕೆಯಲ್ಲಿದ್ದ 'ಬಾಜಿಗರ್' ನಟಿ ರಾಖಿ ಗುಲ್ಜಾರ್ ಜೊತೆ ಒಂದಷ್ಟು ತಮಾಷೆ ಮಾಡಿದರು. ರವೀಂದ್ರ ನಾಥ್ ಟ್ಯಾಗೋರರ 'ಓ ಅಮರ್ ದೇಶರ್ ಮತಿ' ಯನ್ನು ರಾಖಿ, ಶಾರೂಕ್‌ಗೆ ಹೇಳಿಕೊಟ್ಟರು. ಕೆಲವೊಂದು ಪದಗಳು ಅರ್ಥವಾಗದೇ ಇದ್ದರೂ ಸುಮ್ಮನೇ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.