ಹಿರಿಯ ನಟ ರಿಜಭಾವ ಇನ್ನಿಲ್ಲ

By Suvarna NewsFirst Published Sep 14, 2021, 10:28 AM IST
Highlights

ಕಿಡ್ನಿ ವೈಫಲ್ಯದಿಂದ ಮಲಯಾಳಂನ ಹಿರಿಯ ನಟ ರಿಜಭಾವ ನಿಧನರಾಗಿದ್ದಾರೆ. 

ಕಿಡ್ನಿ ವೈಫಲ್ಯ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂನ ಹಿರಿಯ ನಟ ರಿಜಭಾವನ (55) ನಿಧನರಾಗಿದ್ದಾರೆ. ರಿಜಭಾವ ಅವರಿಗೆ ಕೋವಿಡ್ ಪಾಸಿಟಿವ್‌ ಇದ್ದ ಕಾರಣ ಸಾರ್ವಜನಿಕ ಅಂತ್ಯಕ್ರಿಯೆ ರದ್ದುಗೊಳ್ಳಿಸಿದ್ದಾರೆ. ಆಪ್ತರು ಮಾತ್ರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ.  

1990ರಲ್ಲಿ ಮಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ನಟ ರಿಜಭಾವನ 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಗೂ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟನಾಗಿ ಮಾತ್ರವಲ್ಲದೆ ಡಬ್ಬಿಂಗ್ ಕಲಾವಿದರಾಗಿಯೂ ಜನಪ್ರಿಯತೆ ಪಡೆದುಕೊಂಡಿದ್ದಾರೆ. 

ಹಲವು ದಿನಗಳಿಂದ ರಿಜಭಾವ ಅವರಿಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತ್ತು. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟರ್ ಬಳಸುತ್ತಿದ್ದರು ಎಂಬ ಮಾಹಿತಿ ಬಂದಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಸೆಪ್ಟೆಂಬರ್13ರಂದು ಕೊನೆಯುಸಿರೆಳೆದಿದ್ದಾರೆ.

ಖ್ಯಾತ ನಿರ್ಮಾಪಕ ಸಿ. ಜಯರಾಮ್ ನಿಧನ

'ರಾಜಭವ ಒಬ್ಬರು ಬಹಳ ಸರಳ ವ್ಯಕ್ತಿ ಅವರೊಟ್ಟಿಗೆ ಕೆಲಸ ಮಾಡುವುದು ಬಹಳ ಸುಲಭವಾಗಿರುತ್ತಿತ್ತು.ಕೆಲವು ದಿನಗಳ ಹಿಂದೆಯಷ್ಟೇ ಅವರೊಟ್ಟಿಗೆ ದೂರವಾಣಿ ಮೂಲಕ ಮಾತನಾಡಿದ್ದೆ. ಅವರು ಸದಾ ಹೊಸ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ನಾನು ಒಬ್ಬ ಒಳ್ಳೆಯ ಗೆಳೆಯನನ್ನು ಕಳೆದುಕೊಂಡಿರುವೆ,' ಎಂದು ಹಿರಿಯ ನಿರ್ದೇಶಕ ಶಾಜಿ ಕೈಲಾಸ್ ಮಾತನಾಡಿದ್ದಾರೆ. 

ಇನ್ ಹರಿಹರ ನಗರ, ಮಲ್ಲಪುರಂ ಹಾಜಿ, ಮಹನಾಯ ಜೋಜಿ, ಡಾ. ಪಶುಪತಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಮಮ್ಮುಟಿ ಜೊತೆ ನಟಿಸಿದ 'ಒನ್' ಸಿನಿಮಾ ಬಿಡುಗಡೆಯಾಗಿತ್ತು. ಮಲಯಾಳಂ ಚಿತ್ರರಂಗದ ಆಪ್ತರು ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 

ರಜಭಾವ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

click me!